ನವದೆಹಲಿ(ಜೂ.01): ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(NEET-PG 2022) ಫಲಿತಾಂಶ ಪ್ರಕಟಗೊಂಡಿದೆ. NEET-PG 2022 ಪರೀಕ್ಷೆ ಮೇ 21 ರಂದದು 849 ಕೇಂದ್ರಗಳಲ್ಲಿ ನಡೆದಿತ್ತು. ಕೇವಲ 10 ದಿನಗಳಲ್ಲಿ ಫಲಿತಾಂಶ ಪ್ರಕಟಿಸಿದ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯನ್ನು (NBEMS) ಕೇಂದ್ರ ಆರೋಗ್ಯ ಇಲಾಖೆ ಸಚಿವ ಮನ್ಸುಕ್ ಮಾಂಡವಿಯಾ ಶ್ಲಾಘಿಸಿದ್ದಾರೆ.
NEET PG 2022 ಫಲಿತಾಂಶ ಪರಿಶೀಲಿಸುವುದು ಹೇಗೆ?
11 ಅಂಕದಿಂದ 10 ವರ್ಷದ ಶ್ರಮ ಬೂದಿಯಾಯ್ತು.. ವೈರಲ್ ಆದ ಐಎಎಸ್ ಆಕಾಂಕ್ಷಿಯ ಟ್ವೀಟ್ !
ಒಟ್ಟು 1,82,318 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
NEET PG 2022 ಪರೀಕ್ಷಾ ಫಲಿತಾಂಶದ ಕಟ್ ಆಫ್ ಮಾರ್ಕ್ಸ್
ಸಾಮಾನ್ಯ/EWS ವರ್ಗಕ್ಕೆ: 800 ರಲ್ಲಿ 275 ಅಂಕ
SC/ST/OBC (SC/ST/OBC ಹಾಗೂ PWD ಸೇರಿದಂತೆ) : 800 ರಲ್ಲಿ 245 ಅಂಕ
UR PWD: 800 ರಲ್ಲಿ 260 ಅಂಕ
NEET-PG ಫಲಿತಾಂಶ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ. NEET-PG ಫಲಿತಾಂಶ ಪ್ರಕಟಗೊಂಡಿದೆ. ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ದಾಖಲೆಯ 10 ದಿನದಲ್ಲಿ ಫಲಿತಾಂಶ ಪ್ರಕಟಿಸಿದ NBEMSಗೆ ಅಭಿನಂದನೆಗಳು ಎಂದು ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ಫಲಿತಾಂಶ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ:
ಮೇ.21ರಂದು ನಿಗದಿಯಾಗಿದ್ದ ನೀಟ್ ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದರು. ಸಮಯದ ಅಭಾವ ಎದುರಾಗಿದೆ ಎಂಬ ಕಾರಣಕ್ಕೆ ಪ್ರತಿಭಟನೆ ಮಾಡಲಾಗಿತ್ತು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು. ನೀಟ್ ಮುಂದೂಡಲು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿತ್ತು. ಪಿಜಿ ನೀಟ್‌ಗೆ ಸಿದ್ಧರಾಗಲು ಸಮಯದ ಅಭಾವ ಎದುರಾಗಿದೆ. ಕನಿಷ್ಠ ಇನ್ನೂ 8ರಿಂದ 10 ವಾರ ಕಾಲ ಪರೀಕ್ಷೆಯನ್ನು ಮುಂದೂಡಬೇಕು. ಇಲ್ಲದಿದ್ದರೆ ಸಮರ್ಥವಾಗಿ ಪರೀಕ್ಷೆ ಎದುರಿಸಲು ಸಾಧ್ಯವಾಗದೆ ಸ್ನಾತಕೋತ್ತರ ಪದವಿ ಪ್ರವೇಶದ ಆಕಾಂಕ್ಷೆ ನುಚ್ಚು ನೂರಾಗಲಿದೆ. ಪ್ರತಿ ವರ್ಷ ಪರೀಕ್ಷೆಗೆ ಸಾಕಷ್ಟುಸಮಯಾವಕಾಶ ಸಿಗುತ್ತಿತ್ತು. ಈ ಬಾರಿ ಏಕಾಏಕಿ ಪರೀಕ್ಷಾ ದಿನಾಂಕ ಘೋಷಿಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.
Udupi: ಯುಪಿಎಸ್‌ಸಿ ಪರೀಕ್ಷೆ: ಟ್ಯಾಕ್ಸಿ ಚಾಲಕನ ಪುತ್ರ ಸಾಧನೆ
ನೀಟ್ ಸ್ನಾತಕೋತ್ತರ ಪರೀಕ್ಷೆ ಮುಂದೂಡಲ್ಲ ಎಂದಿದ್ದ ಸುಪ್ರೀಂ
ಮೇ. 21 ರಂದು ನಡೆಯಲಿರುವ ಸ್ನಾತಕೋತ್ತರ ನೀಟ್ ಪರೀಕ್ಷೆಯನ್ನು ವೈದ್ಯರ ಮನವಿಯ ಮೇರೆಗೆ ಮುಂದೂಡಲು ಸುಪ್ರೀಂ ಕೋರ್ಚ್ ನಿರಾಕರಿಸಿತ್ತು. ನ್ಯಾಯಾಧೀಶರಾದ ಡಿ. ವೈ. ಚಂದ್ರಚೂಡ ಹಾಗೂ ಸೂರ್ಯಕಾಂತ ಅವರನ್ನೊಳಗೊಂಡ ನ್ಯಾಯಪೀಠವು ‘ಪರೀಕ್ಷೆಯನ್ನು ಮುಂದೂಡುವುದು ವಿದ್ಯಾರ್ಥಿಗಳಲ್ಲಿ ಅನಿಶ್ಚಿತತೆಯನ್ನು ಮೂಡಿಸುತ್ತದೆ. ಈಗಾಗಲೇ ಕೋವಿಡ್ ಕಾರಣದಿಂದಾಗಿ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಪರೀಕ್ಷೆಗಳನ್ನು ಹೀಗೆಯೇ ಮುಂದೂಡುತ್ತಿದ್ದರೆ ದೇಶದಲ್ಲಿ ವೈದ್ಯರ ಅಲಭ್ಯತೆಯುಂಟಾಗಿ ದೇಶದಲ್ಲಿನ ರೋಗಿಗಳ ಆರೈಕೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು’ ಎಂದು ಅಭಿಪ್ರಾಯ ಪಟ್ಟಿತ್ತು. ಹೀಗಾಗಿ ನಿಗದಿ ಪಡಿಸಿದ ವೇಳಾಪಟ್ಟಿಯಲ್ಲೇ ಸ್ನಾತಕೋತ್ತರ ನೀಟ್ ಪರೀಕ್ಷೆ ನಡೆಸಬೇಕು ಎಂದು ಸುಪ್ರೀಂ ಕೋರ್ಚ್ ಆದೇಶಿಸಿತ್ತು. ಇದರಂತೆ ಮೇ. 21 ರಂದು ಪರೀಕ್ಷೆ ನಡೆದಿತ್ತು.