ವಿಶ್ವವನ್ನೇ ಬೆರಗುಗೊಳಿಸಿದ ಕೈಬರಹ! ಮುತ್ತು ಪೋಣಿಸಿಟ್ಟಂತೆ ಬರೆದಾಕೆಗೆ ವಿಶ್ವ ದಾಖಲೆಯ ಮತ್ತೊಂದು ಕಿರೀಟ

Published : Aug 12, 2026, 06:37 PM IST
Prakruthi Malla

ಸಾರಾಂಶ

ಡಿಜಿಟಲ್ ಯುಗದಲ್ಲಿ ಕೈಬರಹ ಮರೆಯಾಗುತ್ತಿರುವಾಗ, ನೇಪಾಳ ಮೂಲದ ಪ್ರಕೃತಿ ಮಲ್ಲಾ ಎಂಬ ಯುವತಿ ತನ್ನ ಅತಿ ಸುಂದರ ಕೈಬರಹದಿಂದಲೇ ವಿಶ್ವಖ್ಯಾತಿ ಗಳಿಸಿದ್ದಾರೆ. 8ನೇ ತರಗತಿಯಲ್ಲಿದ್ದಾಗಲೇ ಸದ್ದು ಮಾಡಿದ್ದ ಅವರ ಕೈಬರಹಕ್ಕೆ 'ಪ್ರಪಂಚದ ಅತಿ ಸುಂದರ ಕೈಬರಹಗಾರ್ತಿ' ಎಂಬ ಬಿರುದು ಸಿಕ್ಕಿದ್ದು, ಹಲವು ಪ್ರಶಸ್ತಿಗಳು ಹಾಗೂ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಿಂದೆಲ್ಲಾ ಕೈಬರಹ ನೋಡಿ, ಒಬ್ಬರ ಗುಣ ಹೇಳುವವರು ಇದ್ದರು. ಕೈಬರಹದ ಜ್ಯೋತಿಷವದು. ಕೈಬರಹದಲ್ಲಿಯೇ ಅವರ ಸಂಪೂರ್ಣ ಭವಿಷ್ಯ, ಅವರ ಜಾತಕವನ್ನೇ ಬಿಚ್ಚಿಡುವವರಿದ್ದರು. ಈಗ ಅಂಥ ಮೇಧಾವಿಗಳು ಇದ್ದರೂ, ಕೈಬರಹ ಬರೆಯುವವರೇ ಕ್ರಮೇಣ ಮಾಯವಾಗುತ್ತಿದ್ದಾರೆ! ಮೊಬೈಲ್​, ಕಂಪ್ಯೂಟರ್​ನ ಈ ಜಮಾನಾದಲ್ಲಿ ಪೆನ್ನನ್ನು ಹಿಡಿಯುವವರೇ ಬಲು ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿಯೂ ಎಲ್ಲವೂ ಕಂಪ್ಯೂಟರ್​ನಲ್ಲಿಯೇ ಕಲಿಕೆ. ಪಟ್ಟಿ-ಪೆನ್ನು ಎನ್ನುವ ಕಲ್ಪನೆಯೇ ಹೋಗಿದ್ಯೋ ಎನ್ನುವಂಥ ಸ್ಥಿತಿ. ಇನ್ನು ಕಚೇರಿಗಳಲ್ಲಿ ಕೊನೆಯ ಪಕ್ಷ ಹಾಜರಾತಿ ಹಾಕಲು ಸಹಿ ಮಾಡಲು ಪೆನ್​ ಬಳಸಲಾಗುತ್ತಿತ್ತು. ಆದರೆ ಅಲ್ಲೂ ಈಗ ಡಿಜಿಟಲ್​ ವ್ಯವಸ್ಥೆ ಆವರಿಸಿಕೊಂಡಿದೆ. ಆದ್ದರಿಂದ ಕೈಬರಹ ಎನ್ನುವುದು ಇನ್ನು ಕೆಲವೇ ವರ್ಷಗಳಲ್ಲಿ ಕಣ್ಮರೆಯಾದರೂ ಅಚ್ಚರಿಯೇನಿಲ್ಲ.

ಆದರೆ ಇಂದಿಗೂ ಹಲವೆಡೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸದ್ಯಕ್ಕಂತೂ ಪೆನ್ನೇ ಅನಿವಾರ್ಯ ಆಗಿದೆ ಎನ್ನುವುದೇ ಸಮಾಧಾನಪಟ್ಟುಕೊಳ್ಳಬೇಕಾದ ಸಂಗತಿ. ಆದರೆ ಇದು ಎಷ್ಟು ವರ್ಷ ಎನ್ನುವುದು ಕೂಡ ಚರ್ಚೆಯನ್ನು ಹುಟ್ಟುಹಾಕಿದೆ. ಹೋಮ್​ವರ್ಕ್​ ಕೂಡ ಪಿಡಿಎಫ್​ ರೂಪದಲ್ಲಿ ವಾಟ್ಸ್​ಆ್ಯಪ್​ನಲ್ಲಿಯೇ ಕಳುಹಿಸುವ ಹಲವು ಶಾಲೆಗಳು ಇರುವುದರಿಂದ ಹೋಮ್​ವರ್ಕ್​ ಕೂಡ ಕೈಬರಹ ಬರೆಯದ ಸ್ಥಿತಿಯಲ್ಲಿ ನಮ್ಮ ಮಕ್ಕಳಿದ್ದಾರೆ. ಇದರ ಮಧ್ಯೆ ಸುಂದರ ಹ್ಯಾಂಡ್​ರೈಟಿಂಗ್​ ಎನ್ನುವ ಕಲ್ಪನೆಯೇ ದೂರವಾಗಿದೆ. ಕೈಯಲ್ಲಿ ಬರೆಯಲು ಬಂದರೆ ಸಾಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆಯೇ 18ರ ಯುವತಿಯೊಬ್ಬಳು ತನ್ನ ಕೈಬರದಿಂದಲೇ ವಿಶ್ವಖ್ಯಾತಿ ಗಳಿಸಿದ್ದಾಳೆ. ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾಳೆ. ಕಳೆದ ವರ್ಷವಷ್ಟೇ ಈಕೆಗೆ ಪ್ರಪಂಚದ ಅತಿ ಸುಂದರ ಕೈಬರಹಗಾರ್ತಿ ಎನ್ನುವ ಬಿರುದನ್ನು ಕೂಡ ಸಿಕ್ಕಿತ್ತು. ಅದಾದ ಬಳಿಕ ಅವಳಷ್ಟು ಸುಂದರ ಕೈಬರಹ ಎಲ್ಲಿಯೂ ಕಾಣದ ಹಿನ್ನೆಲೆಯಲ್ಲಿ ದಾಖಲೆ ಪಟ್ಟಿಯನ್ನು ಹೆಚ್ಚಿಕೊಳ್ಳುತ್ತಲೇ ಸಾಗಿದ್ದಾಳೆ.

ಯಾರೀ ಯುವತಿ?

ಈ ಯುವತಿಯ ಹೆಸರು ಪ್ರಕೃತಿ ಮಲ್ಲಾ. ನೇಪಾಳ ಮೂಲದ ಈ ಯುವತಿ ಈಗ ಕೈಬರದಿಂದಾಗಿ ಫೇಮಸ್​ ಆಗಿದ್ದಾರೆ. ಇವರ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜಗತ್ತಿನ ಅತ್ಯಂತ ಸುಂದರ ಹ್ಯಾಂಡ್​ರೈಟರ್​ ಎನ್ನುವ ಕೀರ್ತಿ ಇವರ ಪಾಲಿಗೆ ಬಂದಿದೆ. ಅಂದಹಾಗೆ ಪ್ರಕೃತಿ ಅವರು, ಹೈಸ್ಕೂಲ್​ನಲ್ಲಿ ಇದ್ದಾಗಲೇ ಅಂದರೆ, 8ನೇ ತರಗತಿಯಲ್ಲಿದ್ದಾಗ ಅವರ ಕೈಬರಹ ಸದ್ದು ಮಾಡಿತ್ತು. ಅವರು ಬರೆದ ಒಂದು ಲೇಖನ ಕೈಬರಹದಿಂದಾಗಿ ಖ್ಯಾತಿ ಪಡೆದಿತ್ತು. ಆಗಲೇ ಅವರು ದೊಡ್ಡಮಟ್ಟದಲ್ಲಿ ಹೆಸರು ಕೂಡ ಮಾಡಿದ್ದರು. ಇದೀಗ ಅವರನ್ನು ಮೀರಿಸುವವರು ಯಾರೂ ಇಲ್ಲವಾಗಿದೆ.

ದಾಖಲೆ ಮೇಲೆ ದಾಖಲೆ

ಯುನೈಟೆಡ್​ ಅರಬ್ ಎಮಿರೆಟ್ಸ್​ನ 51ನೇ ಸ್ಪಿರಿಟ್ ಆಫ್​ ಯುನಿಯನ್​ ವಿಶೇಷ ಸಂದರ್ಭಕ್ಕೆ ಶುಭಾಶಯಗಳನ್ನು ತನ್ನ ಕೈ ಬರಹದ ಪ್ರಕೃತಿ ಬರೆದ ಪತ್ರವನ್ನು ಯುಎಇ ರಾಯಭಾರಿ ಕಚೇರಿಗೆ ನೀಡಲಾಗಿತ್ತು. ಆ ಫೋಟೋಗಳು ಈಗ ಪುನಃ ವೈರಲ್​ ಆಗುತ್ತಿವೆ. ಪ್ರಕೃತಿ ಅವರಿಗೆ ನೇಪಾಳದ ಸಶಸ್ತ್ರ ಪಡೆಯಿಂದ ಸನ್ಮಾನ ಕೂಡ ಸಿಕ್ಕಿದೆ. ಇದಾದ ಬಳಿಕ ಇತ್ತೀಚೆಗೆ ಈಕೆಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಅದರ ಫೋಟೋಗಳು ಕೂಡ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಯುವತಿಯ ಹ್ಯಾಂಡ್​ರೈಟ್​ ಮೋಡಿಗೆ ಎಲ್ಲರೂ ಬೆರಗಾಗಿದ್ದಾರೆ.

PREV
Read more Articles on
click me!

Recommended Stories

​‘ಕೆನಡಾ ಡ್ರೀಮ್’ ತಂದಿಟ್ಟ ದುರಂತ: ಹೆತ್ತವರ 15 ವರ್ಷಗಳ ಶ್ರಮ ನೀರಪಾಲು... ಕಾರಣವೇನು?
ಅಪ್ರಾಪ್ತ ಗರ್ಭಧಾರಣೆ ತಡೆಗೆ ಶಾಲೆಗಳಲ್ಲಿನ್ನು ಬಾಲಕಿಯರ ಮುಟ್ಟಿನ ಮಾಹಿತಿ ಸಂಗ್ರಹ!