ತಮಿಳನಾಡು ಸರ್ಕಾರಿ ಶಾಲೆಗಳಲ್ಲಿ ಪ್ರತಿ ತಿಂಗಳು ಸಿನಿಮಾ ಪ್ರದರ್ಶನ

By Suvarna News  |  First Published Jul 14, 2022, 3:42 PM IST

ವರ್ಷವೀಡಿ ನಡೆಯುವ ಚಲನಚಿತ್ರೋತ್ಸವದ ಭಾಗವಾಗಿ ಪ್ರತಿ ತಿಂಗಳು ಒಂದು ಸಿನಿಮಾ ಪ್ರದರ್ಶನ. ತಮಿಳುನಾಡಿನ 13,210 ಶಾಲೆಗಳಲ್ಲಿ, ನೋಡಲ್ ಶಿಕ್ಷಕರು ಸಿನಿಮಾ ಪ್ರದರ್ಶಿಸುವ ಪ್ರಕ್ರಿಯೆ ಪೂರ್ಣಗಳಿಸುತ್ತಾರೆ. ಮಕ್ಕಳಲ್ಲಿ ಸಕ್ರಿಯವಾಗಿ ಆಲಿಸುವಿಕೆ, ವೀಕ್ಷಣೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಸುಧಾರಿಸಲು ಈ ಕ್ರಮ.


ಕೋವಿಡ್ ಕಾಲದಲ್ಲಿ ಶಾಲೆಗಳಿಂದ ದೂರ ಉಳಿದಿದ್ದ ಮಕ್ಕಳು ಮೊಬೈಲ್, ಟಿವಿಗೆ ಫುಲ್ ಅಡಿಕ್ಟ್ ಆಗಿದ್ರು. ಅವರನ್ನು ಮೊಬೈಲ್, ಟಿವಿಯಿಂದ ದೂರವಿಡಲು ಪೋಷಕರು ಪಟ್ಟಪಾಡು ಅಷ್ಟಿಷ್ಟಲ್ಲ. ಎಲ್ಲಿ ಮೊಬೈಲ್ ಗೀಳಿಗೆ, ಸಿನಿಮಾ ಹುಚ್ಚಿಗೆ ಮಕ್ಕಳು ಬೀಳುತ್ತಾರೋ ಅಂತ ಹೆತ್ತವರು ಕಳವಳಗೊಂಡಿದ್ರು. ಈಗಷ್ಟೇ ಮಕ್ಕಳು ಆನ್ಲೈನ್ ಕ್ಲಾಸಿನಿಂದ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಇದ್ರಿಂದಾಗಿ ಪೋಷಕರು ಕೊಂಚ ನಿರಾಳರಾಗಿದ್ದಾರೆ. ಆದರೆ ತಮಿಳುನಾಡು ಸರ್ಕಾರ ಮಾತ್ರ ಮಕ್ಕಳಿಗೆ ಸಿನಿಮಾಗಳನ್ನು ತೋರಿಸಲು ಮುಂದಾಗಿದೆ. ಹೌದು..ತಮಿಳುನಾಡಿನ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಚಲನಚಿತ್ರ ತೋರಿಸುವಂತೆ ಆದೇಶಿಸಲಾಗಿದೆ. ಶಿಕ್ಷಣ ನಿರ್ದೇಶನಾಲಯದ ಪ್ರಕಾರ, ವರ್ಷವಿಡೀ ನಡೆಯುವ ಚಲನಚಿತ್ರೋತ್ಸವದ ಭಾಗವಾಗಿ ಪ್ರತಿ ತಿಂಗಳು ಒಂದು ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಪ್ರಾಥಮಿಕವಾಗಿ 6 ರಿಂದ 9ನೇ ತರಗತಿಗಳ ವಿದ್ಯಾರ್ಥಿಗಳಿಗೆ  ಪ್ರತಿ ವಾರ ನಿಗದಿಪಡಿಸಿದ ಕಲಾ ಅವಧಿಯಲ್ಲಿ ಸಿನಿಮಾ ತೋರಿಸಲಾಗುವುದು. ರಾಜ್ಯದ 13,210 ಶಾಲೆಗಳಲ್ಲಿ, ನೋಡಲ್ ಶಿಕ್ಷಕರು ಸಿನಿಮಾ ತೋರಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತಾರೆ. ಶಿಕ್ಷಕರು ಚಲನಚಿತ್ರದ ಸಾರಾಂಶವನ್ನು ಸಿದ್ಧಪಡಿಸಬೇಕು. ಜೊತೆಗೆ ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯ ಪ್ರಕಾರ ಎಲ್ಲಾ ಮಾನದಂಡಗಳನ್ನು ಅನುಸರಿಸಬೇಕು. 

India@75: ಬ್ರಿಟನ್‌ನಿಂದ 75 ವಿದ್ಯಾರ್ಥಿ ವೇತನ!

Tap to resize

Latest Videos

ತಮಿಳುನಾಡು (Tamil Nadu) ಸರ್ಕಾರ ಇಂಥ ಯೋಜನೆ ಹಾಕಿಕೊಂಡಿರೋದಕ್ಕೆ ಒಂದಷ್ಟು ನಿರ್ದಿಷ್ಟ ಕಾರಣಗಳು ಇವೆ. ಮಕ್ಕಳಲ್ಲಿ ಸಕಾರಾತ್ಮಕ ನಡವಳಿಕೆಯನ್ನು ಪ್ರೋತ್ಸಾಹಿಸುವುದು. ಇತರ ಸಂಸ್ಕೃತಿಗಳ ಬಗ್ಗೆ ಸಹಾನುಭೂತಿ ಮತ್ತು ಗೌರವವನ್ನು ಬೆಳೆಸುವುದು.. ಸಕ್ರಿಯವಾಗಿ ಆಲಿಸುವಿಕೆ, ವೀಕ್ಷಣೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಸುಧಾರಿಸಲು ಸರ್ಕಾರಿ ಶಾಲೆಗಳಲ್ಲಿ ಸಿನಿಮಾಗಳನ್ನ ಪ್ರದರ್ಶನ ಮಾಡಲು ನಿರ್ಧಾರ ಮಾಡಿದೆ. ಜುಲೈ 6ರಂದು ಕುಂಭಕೋಣಂನ (Kumbakonam) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿನಿಮಾ ಪ್ರದರ್ಶನ ಯೋಜನೆಗೆ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಚಾಲನೆ ನೀಡಿದ್ರು. ಈ ವೇಳೆ ಪ್ರಸಿದ್ಧ ನಟ-ಚಲನಚಿತ್ರ ನಿರ್ಮಾಪಕ ಚಾರ್ಲಿ ಚಾಪ್ಲಿನ್‌ರ 1921 ರ ಚಲನಚಿತ್ರ ‘ದಿ ಕಿಡ್‌’ನ (The Kid) ಪ್ರದರ್ಶನದೊಂದಿಗೆ ಸಿನಿಮಾ ಉತ್ಸವ ಪ್ರಾರಂಭಿಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪೊಯ್ಯಮೊಳಿ, "ಕೋವಿಡ್ -19 ಸಾಂಕ್ರಾಮಿಕವು ಮಕ್ಕಳ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿದೆ. ಅವರ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸರ್ಕಾರವು ಸಮಾಲೋಚನೆ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಇದರ ಭಾಗವಾಗಿ  ಚಲನಚಿತ್ರಗಳನ್ನ ಪ್ರದರ್ಶಿಸಲಾಗುತ್ತಿದೆ.  ಸಾಮಾಜಿಕ ವಿಷಯಗಳು ಮತ್ತು ಜೀವನ ಮೌಲ್ಯಗಳ ಬಗ್ಗೆ ಪ್ರಮುಖ ಸಂದೇಶವನ್ನು ಈ ಸಿನಿಮಾಗಳು ಹೊಂದಿರುತ್ತದೆ’ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಹಲವು ಸುದ್ದಿತಾಣಗಳು ವರದಿ ಮಾಡಿವೆ.

 ನಾವು ಮಧ್ಯಮ, ಪ್ರೌಢ ಮತ್ತು ಉನ್ನತ ಮಾಧ್ಯಮಿಕ ಶಾಲೆಗಳು ಸೇರಿ ಒಟ್ಟು 13,000 ಶಾಲೆಗಳನ್ನು ಗುರುತಿಸಿದ್ದೇವೆ. ಉತ್ತಮ ಪ್ರತಿಕ್ರಿಯೆ ನೀಡುವ ಮಕ್ಕಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಚಲನಚಿತ್ರೋದ್ಯಮದ (Cinema) ಪ್ರಮುಖ ಹೆಸರುಗಳೊಂದಿಗೆ ಸಂವಹನ ನಡೆಸಲು ಅವಕಾಶವನ್ನು ಒದಗಿಸಲಾಗುತ್ತದೆ. 15 ಮಕ್ಕಳನ್ನು ಅತ್ಯುತ್ತಮ ಚಿತ್ರ ವಿಮರ್ಶಕರು ಎಂದು ಗುರುತಿಸಿ ವಿದೇಶದಲ್ಲಿ ನಡೆಯುವ ಮಕ್ಕಳ ಚಲನಚಿತ್ರೋತ್ಸವ (Film Festivals) ಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. 

58ನೇ ವಯಸ್ಸಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಪಾಸಾದ ಒಡಿಶಾ ಶಾಸಕ

ಸ್ಕ್ರೀನಿಂಗ್‌ (Screening) ಗೆ ಮುಂಚಿತವಾಗಿ ಮಕ್ಕಳಿಗೆ ಚಿತ್ರದ ವಿಶಾಲವಾದ ಅವಲೋಕನವನ್ನು ಒದಗಿಸುವುದರ ಜೊತೆಗೆ, ಪ್ರದರ್ಶನದ ನಂತರ ಚರ್ಚೆಗಳು, ಪ್ರತಿಕ್ರಿಯೆ ಸೆಷನ್ ಮತ್ತು ರಸಪ್ರಶ್ನೆ ವಿಭಾಗ (ಅತ್ಯುತ್ತಮ ತಂಡಕ್ಕೆ ಬಹುಮಾನದೊಂದಿಗೆ) ಇರುತ್ತದೆ. ಇದು ವಿದ್ಯಾರ್ಥಿಗಳಿಗೆ ಕೆಲವು ರೀತಿಯ ಉತ್ತೇಜನವನ್ನು ನೀಡಲಿದೆ. ರಾತ್ರೋರಾತ್ರಿ ವಿದ್ಯಾರ್ಥಿಗಳಲ್ಲಿ ಬದಲಾವಣೆ ಆಗುತ್ತದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಆದರೆ ಉತ್ತಮ ವಿಷಯಗಳು ಬರಲು ಇದು ಆರಂಭಿಕ ಹಂತವಾಗಿದೆ. ಇದಿಷ್ಟೆ ಅಲ್ಲ, ಸ್ಕ್ರೀನಿಂಗ್ ನಂತರ ಮಕ್ಕಳ ಪ್ರತಿಕ್ರಿಯೆ ಮತ್ತು ಅವಲೋಕನಗಳನ್ನು ಸೆರೆಹಿಡಿಯಲು ಮತ್ತು ವಿದ್ಯಾರ್ಥಿಗಳ ಮೇಲೆ ಸಿನಿಮಾಗಳ ಪ್ರಭಾವವನ್ನು ದಾಖಲಿಸಲು ಶಿಕ್ಷಣ ಇಲಾಖೆ 'ಸಿಲ್ವರ್ ಸ್ಕ್ರೀನ್ ಆಪ್' (Silver Screen App) ಎಂಬ ವಿಶೇಷ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಿದೆ.

click me!