ಬೆಳ್ತಂಗಡಿಯಲ್ಲಿ ಮರೈನ್‌ ಡಿಪ್ಲೋಮಾ ಕೋರ್ಸ್‌ ಜೂನ್‌ನಲ್ಲಿ ಆರಂಭ, ವಿಟಿಯು ಒಪ್ಪಿಗೆ

By Kannadaprabha News  |  First Published Jan 1, 2023, 4:34 PM IST

ಮುಂದಿನ ಜೂನ್‌ನಲ್ಲಿ ಬೆಳ್ತಂಗಡಿಯಲ್ಲಿ ಮರೈನ್‌ ಡಿಪ್ಲೋಮಾ ಕೋರ್ಸ್‌ ಆರಂಭವಾಗಲಿದೆ. ಅದಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಅನುಮೋದನೆ ದೊರೆತಿದ್ದು, 5 ಕೋಟಿ ರು. ಅನುದಾನ ಕೂಡ ಮೀಸಲಿರಿಸಲಾಗಿದೆ ಎಂದು ಶಾಸಕ ಹರೀಶ್‌ ಪೂಂಜ ಮಾಹಿತಿ ನೀಡಿದ್ದಾರೆ.


ಬೆಳ್ತಂಗಡಿ (ಜ.1): ಮುಂದಿನ ಜೂನ್‌ನಲ್ಲಿ ಬೆಳ್ತಂಗಡಿಯಲ್ಲಿ ಮರೈನ್‌ ಡಿಪ್ಲೋಮಾ ಕೋರ್ಸ್‌ ಆರಂಭವಾಗಲಿದೆ. ಅದಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಅನುಮೋದನೆ ದೊರೆತಿದ್ದು, 5 ಕೋಟಿ ರು. ಅನುದಾನ ಕೂಡ ಮೀಸಲಿರಿಸಲಾಗಿದೆ ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು. ಅವರು ಮುಂಡಾಜೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಉತ್ತಮ ಚಿಂತನೆಗಳೊಂದಿಗೆ ಮಹತ್ವಾಕಾಂಕ್ಷೆ, ಇಚ್ಛಾ ಶಕ್ತಿ ಇರುವ ಹಿರಿಯರ ಸಹಕಾರ ಅಭಿವೃದ್ಧಿಗೆ ಪೂರಕ. ಮುಂಡಾಜೆಯ ಹಿರಿಯರು ಇಲ್ಲಿನ ಕಿರಿಯರಿಗೆ ಸ್ಫೂರ್ತಿಯಾಗಿದ್ದಾರೆ. ಇಲ್ಲಿನ ಶಾಲೆಗೆ ಸುಮಾರು ಒಂದು ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿರುವುದು ಶ್ಲಾಘನೀಯ. ಈ ಶಾಲೆಗೆ ಎರಡು ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡುವ ಬಗ್ಗೆ ಶಿಕ್ಷಣ ಸಚಿವರಲ್ಲಿ ಮಾತುಕತೆ ನಡೆಸಲಾಗುವುದು ಎಂದರು. ಮುಂಡಾಜೆ ಗ್ರಾಪಂ ಅಧ್ಯಕ್ಷೆ ರಂಜಿನಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ರೋಟರಿ ಕ್ಲಬ್‌ ಅಧ್ಯಕ್ಷೆ ಮನೋರಮಾ ಭಟ್‌ ಮಾತನಾಡಿದರು.

Tap to resize

Latest Videos

ಬೆಸ್ವ್‌ ಫೌಂಡೇಶನ್‌ ಅಧ್ಯಕ್ಷ ರಕ್ಷಿತ್‌ ಶಿವರಾಂ, ಜಿ.ಪಂ. ಮಾಜಿ ಸದಸ್ಯೆ ನಮಿತಾ ಕೆ.ಪೂಜಾರಿ, ತಾ.ಪಂ. ಮಾಜಿ ಸದಸ್ಯೆ ಲೀಲಾವತಿ, ಜಿ.ಪಂ. ಎಇಇ ನಿತಿನ್‌ ಕುರ್ಮಾ ನಾಯ್ಕ, ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎ. ರಾಮಣ್ಣ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್‌ ಬಂಗೇರ, ಮುಖ್ಯಶಿಕ್ಷಕಿ ಮಂಜುಳಾ, ವಿದ್ಯಾರ್ಥಿ ನಾಯಕಿ ಹರ್ಷಿತಾ ಉಪಸ್ಥಿತರಿದ್ದರು.ಕೃಷಿಕ ಅಡೂರು ವೆಂಕಟ್ರಾಯ ಸ್ವಸ್ತಿ ವಾಚನ ನಡೆಸಿದರು. ಮುಖ್ಯಶಿಕ್ಷಕಿ ಮಂಜುಳಾ ಶಾಲಾ ವರದಿ ವಾಚಿಸಿದರು.

ಶತಮಾನೋತ್ಸವ ಸಮಿತಿ ಸಂಯೋಜಕ ನಾಮದೇವ ರಾವ್‌ ಸ್ವಾಗತಿಸಿದರು. ಕಾರ್ಯದರ್ಶಿ ಅಶ್ರಫ್‌ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ಅಡೂರು ಗೋಪಾಲಕೃಷ್ಣ ರಾವ್‌ ವರದಿ ವಾಚಿಸಿದರು. ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಕಾರ್ಯದರ್ಶಿ ಸೇವಂತಿ ವಂದಿಸಿದರು.

ರಾಜ್ಯದ 3800 ಸರ್ಕಾರಿ ಶಾಲೆಯಲ್ಲಿ 5ಕ್ಕಿಂತಲೂ ಕಡಿಮೆ ಮಕ್ಕಳಿಂದ ಓದು: ಸಚಿವ ಬಿಸಿ

ನೂತನ ಕೊಠಡಿಗಳು, ರಂಗ ಮಂದಿರ, ವಿಸ್ತೃತ ಕ್ರೀಡಾಂಗಣ, ನೂತನ ಕಾಂಕ್ರಿಟ್‌ ರಸ್ತೆ, ನೀರಿನ ಟ್ಯಾಂಕ್‌, ಬಿಸಿಯೂಟದ ಕೊಠಡಿ, ಕೊಳವೆ ಬಾವಿ ಉದ್ಘಾಟನೆ, ಪೀಠೋಪಕರಣ ಹಸ್ತಾಂತರವನ್ನು ಅತಿಥಿಗಳು ನೆರವೇರಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಮತ್ತು ಹಳೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀರಾಮನ ಆದರ್ಶ ತಿಳಿಸುವುದು ಅನಿವಾರ್ಯ: ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌

ತಾಲೂಕಿನಲ್ಲಿ 20 ನೂತನ ಅಂಗನವಾಡಿ ಕಟ್ಟಡ, ಹೈಸ್ಕೂಲ್‌ಗಳಿಗೆ ಹೊಸ ಕಟ್ಟಡ, ಕಾಲೇಜುಗಳಿಗೆ ಕೊಠಡಿ, ಮೆಲಂತಬೆಟ್ಟು ಸರ್ಕಾರಿ ಪದವಿ ಕಾಲೇಜನ್ನು 8 ಕೋಟಿ ರು. ವೆಚ್ಚದಲ್ಲಿ, ಪುಂಜಾಲಕಟ್ಟೆಕಾಲೇಜನ್ನು 6 ಕೋಟಿ ರು. ವೆಚ್ಚದಲ್ಲಿ ನವೀಕರಣಗೊಳಿಸಿ ಖಾಸಗಿ ಕಾಲೇಜುಗಳಂತೆ ನಿರ್ಮಿಸಲಾಗಿದೆ. ಬೆಳ್ತಂಗಡಿ ಸರ್ಕಾರಿ ಕಾಲೇಜಿನ ಪಿಯು ವಿಜ್ಞಾನ ವಿಭಾಗದಲ್ಲಿ ಪ್ರಸಕ್ತ 86 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ತಾಲೂಕಿನ ಹಲವಾರು ಹೊಸ ಕಾಮಗಾರಿಗಳಿಗೆ ಜನವರಿ-ಫೆಬ್ರವರಿಯಲ್ಲಿ ಶಿಲಾನ್ಯಾಸ ನಡೆಯಲಿದೆ.

click me!