ಉಕ್ರೇನ್‌ನಿಂದ ವಾಪಸ್ ಆದ ಮೆಡಿಕಲ್ ವಿದ್ಯಾರ್ಥಿಗಳಿಗೆ ವಿಜಯಪುರದಲ್ಲಿ ಪಾಠ.!

By Suvarna NewsFirst Published Apr 25, 2022, 10:19 PM IST
Highlights

• ಉಕ್ರೇನ್‌ನಿಂದ ವಾಪಸ್ ಆದ ಮೆಡಿಕಲ್ ವಿದ್ಯಾರ್ಥಿಗಳಿಗೆ ಶುರುವಾಯ್ತು ಪಾಠ.!
• ವಿಜಯಪುರ ಬಿಎಲ್‌ಡಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಭೋದನೆ..!
• ಉಕ್ರೇನ್ ಸಿಲೆಬಸ್‌ನಂತೆಯೇ ಪಾಠ..!
• ಉಕ್ರೇನ್ ಜೊತೆಗೆ ಚೀನಾದಿಂದ ವಾಪಾಸ್ ಆದ ವಿದ್ಯಾರ್ಥಿಗಳಿಗೂ ಸಹಾಯ..!

ವರದಿ-ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್..

ವಿಜಯಪುರ (ಏ.25):  
ಕಳೆದ ಫೆಬ್ರುವರಿ ತಿಂಗಳ ಕೊನೆಯ ವಾರ ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಯುದ್ದ ನಡೆದಿತ್ತು. ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ಮಾಡಿತ್ತು.  ಭಾರತವಷ್ಟೇ ಅಲ್ಲಾ ಇತರೆ ದೇಶಗಳ ಜನರು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದರು. ಆ ಪೈಕಿ ವೈದ್ಯಕೀಯ ವಿದ್ಯಾಭ್ಯಾಸ ಮಾಡಲು ಹೋದ ವಿದ್ಯಾರ್ಥಿಗಳೇ ಹೆಚ್ಚಿದ್ದರು. ಮೆಡಿಕಲ್ ಸ್ಟಡೀಸ್ ಗೆ ಹೋಗಿ ಸಿಲುಕಿದ್ದ ಭಾರತದ ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರ ಸುರಕ್ಷಿತವಾಗಿ ಕರೆ ತಂದಿತ್ತು. ಪ್ರಾಣಾಪಾಯದಿಂದ ಪಾರಾಗಿ ಬಂದೆವಲ್ಲಾ ಎಂಬ ಖುಷಿಯ ಜೊತೆಗೆ ನಮ್ಮ ಮೆಡಿಕಲ್ ಸ್ಟಡೀಸ್ ಮೊಟಕಾಯಿತಲ್ಲಾ ಎಂದು ವಿದ್ಯಾರ್ಥಿಗಳು ಬೇಸರದಿಂದಲೇ ಇಲ್ಲಿಯವರೆಗೆ ಕಾಲ ಕಳೆದಿದ್ದರು. ಆದರೆ ಬೇಸರಗೊಂಡ ಮೆಡಿಕಲ್ ವಿದ್ಯಾರ್ಥಿಗಳ ಮುಖದಲ್ಲಿಗ ಮಂದಹಾಸ ಮೂಡಿದೆ.. ಮಾಜಿ ಸಚಿವ ಎಂ ಬಿ ಪಾಟೀಲ್ ಅವರ  ಬಿಎಲ್‌ಡಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ವ್ಯವಸ್ಥೆಯು ಆಗಿದೆ.
 
 ಉಕ್ರೇನ್ ಮೆಡಿಕಲ್ ವಿದ್ಯಾರ್ಥಿಗಳ ಸಹಾಯಕ್ಕೆ ನಿಂತ BLD ಸಂಸ್ಥೆ..!
ಉಕ್ರೇನ್‌ನಿಂದ ವಾಪಾಸ್ ಆಗಿದ್ದ ವಿಜಯಪುರ ಜಿಲ್ಲೆಯ 17 ವಿದ್ಯಾರ್ಥಿಗಳು ಬಿಎಲ್ಡಿಇ ಸಂಸ್ಥೆಯ ಆಧ್ಯಕ್ಷ ಎಂ ಬಿ ಪಾಟೀಲ್ ಅವರಿಗೆ ಭೇಟಿಯಾಗಿ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ತಮ್ಮ ಸಂಸ್ಥೆಯ ಬಿ ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಆ್ಯಂಡ್  ಹಾಸ್ಪಿಟಲ್ ಪ್ರಾಂಶುಪಾಲರಿಗೆ ಉಕ್ರೇನ್ ನಲ್ಲಿ ಸಿಲುಕಿ ಬಂದ ವಿದ್ಯಾರ್ಥಿಗಳಿಗೆ ಸರ್ಕಾರದ ನಿಯಮದ ಚೌಕಟ್ಟಿನೊಳಗೆ ಸಹಾಯ ಮಾಡಲು ಸೂಚನೆ ನೀಡಿದ್ದರು. ಅದರ ಫಲವಾಗಿ ಇಂದು ಉಕ್ರೇನ್ ನಿಂದ ಬಂದ ಜಿಲ್ಲೆಯ, ವಿವಿಧ ಜಿಲ್ಲೆಯ ವಿದ್ಯಾರ್ಥಿಗಳಿಗೆ  ಮೆಡಿಕಲ್ ಥಿಯರಿ,  ಪ್ರ್ಯಾಕ್ಟಿಕಲ್ ಮಾಡಲು, ಲೈಬ್ರರಿ ಫೆಸಿಲಿಟಿ ವ್ಯವಸ್ಥೆ ಮಾಡಿದ್ದಾರೆ. 

ಉಕ್ರೇನ್ ನಿಂದ ಮರಳಿದ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಸಿಹಿಸುದ್ದಿ.

ಉಕ್ರೇನ್ ಸಿಲೆಬಸ್ ನಂತೆಯೇ ಪಾಠ..!
ಬಿಎಲ್ಡಿ ಮೆಡಿಕಲ್ ಕಾಲೇಜಿನಲ್ಲಿ ಉಕ್ರೇನ್ ನಲ್ಲಿ ಇದ್ದಂಥ ಸಿಲೆಬಸ್ ಪ್ರಕಾರ ಇಲ್ಲಿ ಕ್ಲಾಸಿಸ್ ತೆಗೆದುಕೊಳ್ಳಲಾಗುತ್ತಿದೆ. ಉಕ್ರೇನ್ ನಲ್ಲಿ ಎಷ್ಟೆಲ್ಲಾ ಪೋರ್ಷನ್ ಮಾಡಿದ್ದರು ಅದರ ಪ್ರಕಾರ ಉಳಿದ ಸಿಲೆಬಸ್ ಪೋರ್ಷನ್ ಕಂಪ್ಲೀಟ್ ಮಾಡಲಾಗುತ್ತಿದೆ. ಜೊತೆಗೆ ಆಸ್ಪತ್ರೆಯಲ್ಲಿ ಕೇವಲ ಆಬ್ಸರ್ವೇಷನ್ಸ್ ಅವಕಾಶ ನೀಡಲಾಗುತ್ತಿದೆ. ಮೆಡಿಕಲ್ ವಿದ್ಯಾರ್ಥಿಗಳ ಎಂ ಬಿ ಬಿ ಎಸ್ ಸ್ಟಡೀಸ್ ಗೆ ತೊಂದರೆಯಾಗಬಾರದೆಂದು ಉಚಿತವಾಗಿ ಮಾಡಲಾಗುತ್ತಿದೆ. ಊಟ ಹಾಗೂ ವಸತಿಗೆ ಮಾತ್ರ ಕನಿಷ್ಟ ಶುಲ್ಕ ಪಡೆಯಲಾಗಿದೆ. ನಮ್ಮಲ್ಲಿ ಆಧಿಕೃತ ಅಡ್ಮಿಷನ್ ಹಾಗೂ ಸರ್ಟಿಫಿಕೇಟ್ ಮಾತ್ರ ನೀಡಲ್ಲಾ ಎಂದಿದ್ದಾರೆ ಕಾಲೇಜಿನ ಪ್ರಾಂಶುಪಾಲರು

ಚೀನಾದಲ್ಲಿ ಶಿಕ್ಷಣ ವಂಚಿರರಾದ ಮೆಡಿಕಲ್ ವಿದ್ಯಾರ್ಥಿಗಳಿಗೂ ಸಹಾಯ..!
ಉಕ್ರೇನ್ ನಲ್ಲಿ ಯುದ್ದದ ಕಾರಣದಿಂದ ಅಲ್ಲಿ ಮೆಡಿಕಲ್ ಸ್ಟಡೀಸ್ ನಿಂದ ವಂಚಿತರಾದವರಿಗೆ ಮಾತ್ರವಲ್ಲಾ ನೆರೆಯ ಚೀನಾದಲ್ಲಿ ಎಂ ಬಿ ಬಿ ಎಸ್ ಓದುತ್ತಿರೋ ವಿದ್ಯಾರ್ಥಿಗಳಿಗೂ ಇಲ್ಲಿ ಉಚಿತವಾಗಿ ಕ್ಲಾಸಸ್ ತೆಗೆದುಕೊಳ್ಳಲಾಗುತ್ತಿದೆ. ಚೀನಾದಲ್ಲಿ ಕೊರೊನಾದ ಕಾರಣ ಲಾಕ್ ಡೌನ್ ಘೋಷನೆಯಾಗಿದ್ದು ಅಲ್ಲಿ ತೆರಳಲು ಆಗದೇ ಇರೋ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಇಲ್ಲಿ ವ್ಯವಸ್ಥೆ ಮಾಡಲಾಗಿದೆ. ಉಕ್ರೇನ್ ನಲ್ಲಿನ ಯುದ್ದ ಕಾರಣ ಹಾಗೂ ಚೀನಾದಲ್ಲಿ ಕೊರೊನಾ ಕಾರಣದಿಂದ ಅಲ್ಲಿ ವಿದ್ಯಾಭ್ಯಾಸ ಮಾಡಲು ತೆರಳಿದ್ದ ರಾಜ್ಯದ ಹಾಗೂ ಇತರೆ ರಾಜ್ಯಗಳ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಇದೀಗಾ ಅಡೆತಡೆ ಇಲ್ಲದಂತಾಗಿದೆ. ನಮ್ಮ ಮೆಡಿಕಲ್ ಸ್ಟಡೀಸ್ ಕೊನೆಯಾಯ್ತು ಎಂದುಕೊಂಡು ಚಿಂಚಿತರಾಗಿದ್ದ ವಿದ್ಯಾರ್ಥಿಗಳು ಇದೀಗಾ ಖುಷಿಪಡುವಂತಾಗಿದೆ. 

ವಿದ್ಯಾರ್ಥಿಗಳಲ್ಲಿ ಮನದಲ್ಲಿ ಮನೆಮಾಡಿದ ಸಂತಸ..!
ಉಕ್ರೇನ್ ಹಾಗೂ ಚೀನಾದ ವಿದ್ಯಾರ್ಥಿಗಳಗೆ ಬೇರೆಡೆ ಎಲ್ಲಿಯೂ ಮಾಡದ ಸಹಾಯವನ್ನು ಬಿಎಲ್ಡಿಇ ಸಂಸ್ಥೆಯ ಹಾಗೂ ಎಂ ಬಿ ಪಾಟೀಲ್ ಮಾಡುತ್ತಿದ್ದಾರೆ. ಮಧ್ಯದಲ್ಲಿಯೇ ನಮ್ಮ ಮೆಡಿಕಲ್ ಸ್ಟಡೀಸ್ ಮುಗಿದು ಹೋಯ್ತು ಎಂದುಕೊಂಡಿದ್ದೇವು. ಆದರೆ ಇದೀಗಾ ನಮ್ಮ ವಿದ್ಯಾಭ್ಯಾಸಕ್ಕೆ ಅನಕೂಲವಾಗಿದ್ದಕ್ಕೆ ಖುಷಿಯಾಗಿದೆ ಎಂದಿದ್ದಾರೆ ವಿದ್ಯಾರ್ಥಿಗಳು.

ನಿಟ್ಟುಸಿರು ಬಿಟ್ಟ ಪೋಷಕರು..!
ಜಿಲ್ಲೆಯ 17 ವಿದ್ಯಾರ್ಥಿಗಳ ಮನವಿ ಕಾರಣ ಆರಂಭಗೊಂಡ ಎಂ ಬಿ ಬಿ ಎಸ್ ತರಗತಿಗಳಿಗೆ ಇತರೆ ಜಿಲ್ಲೆಗಳ ವಿದ್ಯಾರ್ಥಿಗಳು ಅಷ್ಟೇಯಲ್ಲಾ ಇತರೆ ರಾಜ್ಯಗಳ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಇನ್ನು ಇಂಥ ತೊಂದರೆಗೆ ಒಳಗಾದ ಎಷ್ಟೇ ವಿದ್ಯಾರ್ಥಿಗಳಿದ್ದರೂ ಅವರೆಲ್ಲರಿಗೂ ಸಹಾಯ ಮಾಡೋದಾಗಿ ಬಿಎಲ್ಡಿಇ ಬಿ ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಆ್ಯಂಡ್ ಹಾಸ್ಪಿಟಲ್ ಪ್ರಾಂಶುಪಾಲರು ಹೇಳಿದ್ದಾರೆ. ತಮ್ಮ ಮಕ್ಕಳ ಶಿಕ್ಷಣ ಅರ್ಧಕ್ಕೆ ನಿಂತ ಕಾರಣ ಚಿಂತೆಗೀಡಾಗಿದ್ದ ಪೋಷಕರೂ ಸಹ ಸಂತಸವನ್ನು ವ್ಯಕ್ತಪಡಿಸಿದ್ದಾರೆ. 

ಹೊರ ಜಿಲ್ಲೆಗಳ ವಿದ್ಯಾರ್ಥಿಗಳಿಗೂ ಸಹಾಯ..!
ಉಕ್ರೇನಿಂದ ವಾಪಸ್ ಬಂದ ವಿಜಯಪುರ, ಬಾಗಲಕೋಟೆ, ಹಾಸನ, ಬೆಂಗಳೂರು, ಮೈಸೂರು ಸೇರಿದಂತೆ ಇತರೆ ಜಿಲ್ಲೆಗಳ ಒಟ್ಟು 62 ವಿದ್ಯಾರ್ಥಿಗಳು ಹಾಗೂ ಚೀನಾದಲ್ಲಿ ಎಂಬಿಬಿಎಸ್ ಸ್ಟಡೀ  ಮಾಡುತ್ತಿದ್ದ 15 ವಿದ್ಯಾರ್ಥಿಗಳಿಗೆ  ಸಹಾಯ ಮಾಡಲಾಗಿದೆ. ಇನ್ನು ಈ ವಿಚಾರ ತಿಳಿದ ಇತರೆವ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಹಾಗೂ ಪೋಷಕರು ಕರೆ ಮಾಡಿ ಸಹಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ನಮ್ಮ ರಾಜ್ಯವಷ್ಟೆಯಲ್ಲಾ ಉಕ್ರೇನ್ ನ ಯುದ್ದದ ಕಾರಣ ಹಾಗೂ ಚೀನಾದಲ್ಲಿನ ಕೊರೊನಾ ಕಾರಣದಿಂದ ಸಮಸ್ಯೆಗೀಡಾದ ಎಷ್ಟೇ ಮೆಡಿಕಲ್ ಸ್ಟೂಡೆಂಟ್ಸ್ ಬಂದರೂ ಎಲ್ಲರಿಗೂ ಸಹಾಯ ಮಾಡೋದಾಗಿ ಬಿಎಲ್ಡಿಇ ಸಂಸ್ಥೆಯಿಂದ ಸಹಾಯ ಮಾಡಲು ನಿರ್ಧರಿಸಲಾಗಿದೆ. ಸಂಸ್ಥೆಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

click me!