ಉತ್ತರ ಪ್ರದೇಶದಲ್ಲಿ ಕೇವಲ 1 ರೂ.ನಲ್ಲಿ SC ST ಹೆಣ್ಮಕ್ಕಳಿಗೆ ತಾಂತ್ರಿಕ ಶಿಕ್ಷಣ?

By Suvarna NewsFirst Published Apr 25, 2022, 11:49 AM IST
Highlights


*ಯೋಗಿ ಆದಿತ್ಯನಾಥ ಸರ್ಕಾರದಿಂದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಸಾಧ್ಯತೆ
*ಎಸ್‌ಸಿ ಎಸ್‌ಟಿ ವರ್ಗದ ಹೆಣ್ಣು ಮಕ್ಕಳಿಗೆ ಕೇವಲ ಒಂದು ರೂಪಾಯಿನಲ್ಲಿ ತಾಂತ್ರಿಕ ಶಿಕ್ಷಣ
*ಈ ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಸರ್ಕಾರದಿಂದ ಒಪ್ಪಿಗೆ ಸಿಗಬೇಕಿದೆ.

ಉತ್ತರ ಪ್ರದೇಶ (Uttar Pradesh)ದಲ್ಲಿ ಎರಡನೇ ಅವಧಿಗೆ ಸಿಎಂ ಅಧಿಕಾರ ವಹಿಸಿಕೊಂಡಿರುವ ಯೋಗಿ ಆದಿತ್ಯನಾಥ್ (Yogi Adityanath), ಸಾಕಷ್ಟು ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮದರಸಾಗಳಿಗೆ ಡಿಜಿಟಲ್ ಶಿಕ್ಷಣ (Digital Education) ಒದಗಿಸುವ ಬಗ್ಗೆ ಯೋಗಿ ಸರ್ಕಾರ ಯೋಜನೆ ರೂಪಿಸಿತ್ತು. ಇದರ ಬೆನ್ನಲ್ಲೇ ಈಗ ಬಡ ಹೆಣ್ಣು ಮಕ್ಕಳ ಶಿಕ್ಷಣ ಕ್ಕಾಗಿ ಮತ್ತೊಂದು ಯೋಜನೆ ತರಲು ಮುಂದಾಗಿದೆ. ಇಂಜಿನಿಯರಿಂಗ್, ಟೆಕ್ನಿಕಲ್ ಕೋರ್ಸ್ ಮಾಡಬೇಕು ಅಂದ್ರೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಅದರಲ್ಲೂ ಖಾಸಗಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ‌ಬೇಕಂದ್ರೆ ಎಷ್ಟು ದುಡ್ಡು ತೆತ್ತರೂ ಸಾಕಾಗಲ್ಲ. ಇನ್ನು ಸರ್ಕಾರಗಳು, ಹಿಂದುಳಿದ ವರ್ಗಗಳ, ಎಸ್ ಸಿ (SC) ಎಸ್ ಟಿ (ST) ವರ್ಗದ ಮಕ್ಕಳ ಏಳ್ಗೆಗಾಗಿ ಸಾಕಷ್ಟು ಅನುದಾನ, ವಿದ್ಯಾರ್ಥಿವೇತನ ನೀಡೋದು ಸಾಮಾನ್ಯ. ಆದ್ರೆ ಈ ವಿಚಾರದಲ್ಲಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಯೋಗಿ ಸರ್ಕಾರ, ಎಸ್ ಸಿ ಎಸ್ ಟಿ ವರ್ಗದ ಮಕ್ಕಳಿಗೆ ಜಸ್ಟ್ 1 ರೂ.ಗೆ ಉನ್ನತ ಶಿಕ್ಷಣ (Higher Education) ನೀಡಲಿದೆ!

ಪ.ಬಂಗಾಳದ ಬಳಿಕ ಈಗ ಜಾರ್ಖಂಡ್‌ನಲ್ಲಿ Student Credit Card ಯೋಜನೆ!

ರಾಜ್ಯದ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳಿಗೆ ಕೇವಲ ₹ 1ಕ್ಕೆ ತಾಂತ್ರಿಕ ಶಿಕ್ಷಣ (Technical Education) ನೀಡುವ ಪ್ರಸ್ತಾವನೆ ಶೀಘ್ರದಲ್ಲೇ ಯೋಗಿ ಸರ್ಕಾರದ ಮುಂದೆ ಬರಲಿದೆ. ಇದಕ್ಕೆ ಸರಗಕಾರ ಗ್ರೀನ್ ಸಿಗ್ನಲ್ ಕೊಟ್ಟರೆ, ಎಸ್ ಸಿ, ಎಸ್ ಟಿ ಹೆಣ್ಣುಮಕ್ಕಳು ಕೇವಲ 1ರೂ.ಗೆ ಟೆಕ್ನಿಕಲ್ ಎಜ್ಯುಕೇಷನ್ ಪಡೆಯಬಹುದು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ಕೇವಲ ₹1ಕ್ಕೆ ತಾಂತ್ರಿಕ ಶಿಕ್ಷಣ ನೀಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂಬ ತಾಂತ್ರಿಕ ಶಿಕ್ಷಣ ಸಚಿವ ಆಶಿಶ್ ಪಟೇಲ್ (Ashish Patel) ಅವರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಜಾಲತಾಣಗಳು ವರದಿ ಮಾಡಿದೆ. ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸಲು ಮಹಿಳೆಯರ ಸಬಲೀಕರಣ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಬ್ಬರೂ ನಿರ್ಧರಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಎಸ್‌ಸಿ/ಎಸ್‌ಟಿ ವರ್ಗದ ವಿದ್ಯಾರ್ಥಿನಿಯರಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ (Education) ವನ್ನು ನೀಡಲು ಈ ಪ್ರಸ್ತಾವನೆಯನ್ನು ಮಾಡಲಾಗಿದ್ದು, ಅದು ಶೀಘ್ರದಲ್ಲೇ ಪ್ರಾರಂಭವಾಗಲಿದೆ .
 
ಸರ್ಕಾರಿ ಇಂಜಿನಿಯರಿಂಗ್ ಕಾಲೇಜು (Engineering Collages) ಗಳಲ್ಲಿ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಹೊಸ ಸಮಿತಿ ರಚಿಸುವಂತೆ ಪಟೇಲ್ ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯಾರ್ಥಿಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಯಲು ರಾಜ್ಯದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಜೊತೆಗೆ ಬಯೋಮೆಟ್ರಿಕ್ (Biometric) ಹಾಜರಾತಿ ಶಿಕ್ಷಕರ ಸರಿಯಾದ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು ತಾಂತ್ರಿಕ ಸಂಸ್ಥೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಜಾರಿಗೆ ತರಲು ಸಚಿವರು ನಿರ್ದೇಶನ ನೀಡಿದ್ದಾರೆ.

ಈ ಹುಡುಗನಿಗೆ ಸ್ಕಾಲರ್‌ಶಿಪ್‌ ಜತೆಗೆ 27 ವಿವಿ, ಕಾಲೇಜ್‌ಗಳಿಂದ ಆಫರ್!

ದೇಶ ಮತ್ತು ವಿದೇಶಗಳಲ್ಲಿ ತಾಂತ್ರಿಕ ಶಿಕ್ಷಣದ ಹಳೆಯ ವಿದ್ಯಾರ್ಥಿಗಳ ಜಾಲವನ್ನು ಸ್ಥಾಪಿಸಲು ಮತ್ತು ಅವರೊಂದಿಗೆ ಮಾರ್ಗದರ್ಶನ ಮತ್ತು ಬೆಂಬಲ ವ್ಯವಸ್ಥೆಯನ್ನು ಸ್ಥಾಪಿಸಲು ಅವರು ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದರು. ಅಷ್ಟೇ ಅಲ್ಲ, 'ತಾಂತ್ರಿಕ ಶಿಕ್ಷಣ ದಿನ'ವನ್ನು ಆಚರಿಸುವ ಆಲೋಚನೆಯನ್ನು ಉತ್ತರ ಪ್ರದೇಶ ಸರ್ಕಾರವು ಹೊಂದಿದೆ. ವಿಶೇಷ ಕಾರ್ಯದರ್ಶಿ ಸುನೀಲ್ ಕುಮಾರ್ ಚೌಧರಿ, ತಾಂತ್ರಿಕ ಶಿಕ್ಷಣ ಇಲಾಖೆಯ ಎಲ್ಲಾ ಮೂರು ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಉಪಕುಲಪತಿಗಳು ಮತ್ತು ನಿರ್ದೇಶಕರು, ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

click me!