Omicron Threat: 1 ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ

By Kannadaprabha NewsFirst Published Jan 8, 2022, 9:24 AM IST
Highlights

*   ಕೊರೋನಾ ಹಿನ್ನೆಲೆಯಲ್ಲಿ ತರಗತಿಗಳು ಸ್ಥಗಿತ
*   ಮಕ್ಕಳ ಪಠ್ಯ ಬೋಧನೆಗೆ ಪರ್ಯಾಯ ಮಾರ್ಗ ಮರು ಜಾರಿ
*   ಶಾಲೆಯಲ್ಲಿ ಬಿಸಿಯೂಟ
 

ಬೆಂಗಳೂರು(ಜ.08): ಕೋವಿಡ್‌ 3ನೇ ಅಲೆ(Covid 3rd Wave) ಹಿನ್ನೆಲೆಯಲ್ಲಿ ಬೆಂಗಳೂರು(Bengaluru)ನಗರದಲ್ಲಿ ಈಗಾಗಲೇ ಸ್ಥಗಿತಗೊಳಿಸಿರುವ 1 ರಿಂದ 9ನೇ ತರಗತಿ ಶಾಲಾ ಮಕ್ಕಳಿಗೆ(Children) ಪರ್ಯಾಯ ಮಾರ್ಗದ ಮೂಲಕ ಪಠ್ಯ ಬೋಧನೆಗೆ ಸರ್ಕಾರ ‘ವಿದ್ಯಾಗಮ’(Vidyagama) ಕಾರ್ಯಕ್ರಮವನ್ನು ಮರು ಜಾರಿಗೊಳಿಸಿದೆ. ಅಗತ್ಯ ಸಿದ್ಧತೆ ಮಾಡಿಕೊಂಡು ಕೂಡಲೇ ವಿದ್ಯಾಗಮ ಜಾರಿಗೆ ಕ್ರಮ ವಹಿಸಲು ಸೂಚಿಸಿದೆ.

ಪ್ರಸಕ್ತ ಅನಿಶ್ಚಿತತೆಯ ಸನ್ನಿವೇಶದಲ್ಲಿ ರಾಜ್ಯಾದ್ಯಂತ(Karnataka) ಶಾಲೆಗಳನ್ನು(Schools) ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಂದರ್ಭ ಬರಬಹುದಾದ ಹಿನ್ನೆಲೆಯಲ್ಲಿ ಇತರೆ ಎಲ್ಲ ಜಿಲ್ಲೆಗಳಲ್ಲೂ ವಿದ್ಯಾಗಮ ಪುನಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಆಯಾ ಜಿಲ್ಲಾ ಉಪ ನಿರ್ದೇಶಕರು, ಬಿಇಒಗಳಿಗೆ ಸೂಚನೆ ನೀಡಿದೆ. ಈ ಸಂಬಂಧ ವಿದ್ಯಾರ್ಥಿಗಳ ತಂಡಗಳನು ರಚಿಸಿಕೊಂಡು ಪಾಳಿ ಪದ್ಧತಿಯಲ್ಲಿ ಪ್ರತಿ ತರಗತಿ ಮಕ್ಕಳಿಗೆ ವಾರದ ನಿಗದಿತ ದಿನಗಳಲ್ಲಿ ಪ್ರತಿ ದಿನ ಗರಿಷ್ಠ 4 ತರಗತಿಗಳನ್ನು ನಡೆಸಲು ವೇಳಾಪಟ್ಟಿಯನ್ನೂ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಆನ್‌ಲೈನ್‌ ವಿದ್ಯಾಗಮ ಮತ್ತು ಆಫ್‌ಲೈನ್‌ ವಿದ್ಯಾಗಮಕ್ಕೆ ಪ್ರತ್ಯೇಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಇಲಾಖೆಯ ವೆಬ್‌ಸೈಟ್‌ನಲ್ಲಿ www.schooleducation.kar.nic.in ನಲ್ಲಿ ವೀಕ್ಷಿಸಬಹುದು.

Guest Lecturers ಅತಿಥಿ ಉಪನ್ಯಾಸಕರಿಗೆ ಭರವಸೆ ನೀಡಿದ ಸಚಿವ ಅಶ್ವತ್ಥನಾರಾಯಣ

25 ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರ:

ಪ್ರತಿ 20ರಿಂದ 25 ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರನ್ನು(Teacher) ನೇಮಿಸಿ ವಿದ್ಯಾಗಮ ನಡೆಸಬೇಕು. ಮೂರು ವಿಧಾನದಲ್ಲಿ ವಿದ್ಯಾಗಮ ಶಿಕ್ಷಣ(Education) ನಡೆಸಬಹುದು. ಮೊದಲ ವಿಧಾನದಲ್ಲಿ ಸ್ಮಾರ್ಟ್‌ ಫೋನ್‌, ಲ್ಯಾಪ್‌ಟಾಪ್‌ ಸೇರಿದಂತೆ ಯಾವುದೇ ತಂತ್ರಜ್ಞಾನ ಆಧಾರಿತ ಸಾಧನಗಳಿಲ್ಲದ ಮಕ್ಕಳಿಗೆ ಶಾಲಾವರಣ, ಊರ ದೇವಸ್ಥಾನ, ವಠಾರ, ಸಮುದಾಯ ಭವನಗಳ ವ್ಯಾಪ್ತಿಯ ಕಾಲ್ಪನಿಕ ಕಲಿಕಾ ಕೋಣೆಯಲ್ಲಿ ಭೌತಿಕವಾಗಿ ಆಫ್‌ಲೈನ್‌ ತರಗತಿ ನಡೆಸಬೇಕು. ಆಫ್‌ಲೈನ್‌ ತರಗತಿಗೆ(Offline Class) ಪಾಲಕರ ಅನುಮತಿ ಪತ್ರ ಕಡ್ಡಾಯ. ಶಾಲೆಯಲ್ಲಿರುವ ಮಕ್ಕಳ ಹಾಗೂ ಶಿಕ್ಷಕ ಸಂಖ್ಯೆ ಅನುಗುಣವಾಗಿ ಮಕ್ಕಳ ಸಂಖ್ಯೆಯನ್ನು ಬದಲಿಸಲು ಅವಕಾಶ ಕಲ್ಪಿಸಿದೆ.

ಇನ್ನು ಭೌತಿಕವಾಗಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಲ್ಲಿ(Students) ಇಂಟರ್ನೆಟ್‌ ರಹಿತ ಮೊಬೈಲ್‌ ಫೋನ್‌ ಹೊಂದಿರುವವರಿಗೆ ಆ ದೂರವಾಣಿ ಮೂಲಕ, ಇಂಟರ್‌ನೆಟ್‌ ಸಹಿತ ಫೋನ್‌, ಲ್ಯಾಪ್‌ಟಾಪ್‌, ಸ್ಮಾಟ್‌ ಫೋನ್‌, ಟ್ಯಾಬ್‌ ಹೊಂದಿರುವವರಿಗೆ ಝೂಮ್‌, ವೆಬೆಕ್ಸ್‌, ಗೂಗಲ್‌ ಕ್ಲಾಸ್‌ ರೂಂ ಮತ್ತಿತರ ಆನ್‌ಲೈನ್‌ ತರಗತಿ ನಡೆಸಬೇಕು. ಈ ಮಕ್ಕಳನ್ನು ಕೂಡ ವಾರದಲ್ಲಿ ಒಂದು ದಿನ ಮಧ್ಯಾಹ್ನದ ನಂತರ ಶಾಲಾ ಆವರಣಕ್ಕೆ ಕರೆಸಿ ಕಲಿಕೆಯ ಪ್ರಗತಿ ಪರಿಶೀಲಿಸಬೇಕು. ವಿದ್ಯಾಗಮಕ್ಕೆ ಸ್ವಯಂ ಸೇವಕ ವಿದ್ಯಾವಂತ ಯುವಕ, ಯುವತಿಯರ ಸಹಕಾರ ಪಡೆಯಲು ಅವಕಾಶ ನೀಡಿದೆ.

School Code ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಹೊಸದಾಗಿ ಶಾಲಾ ಸಂಕೇತ ಪಡೆಯಲು ದಿನಾಂಕ ವಿಸ್ತರಣೆ

ಶಾಲೆಯಲ್ಲಿ ಬಿಸಿಯೂಟ:

ಶಾಲಾವರಣದಲ್ಲಿ ವಿದ್ಯಾಗಮ ನಡೆಸುವುದಾದರೆ ಹಾಜರಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬಿಸಿಯೂಟ ತಯಾರಿಸುವುದು. ಊಟಕ್ಕೆ ಇತರ ಮಕ್ಕಳು ಬರಬಹುದು ಎಂದು ಸೂಚಿಸಲಾಗಿದೆ. ಒಟ್ಟಾರೆ ವಿದ್ಯಾಗಮ ನಿರ್ವಹಣೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳಿಗೂ ಜವಾಬ್ದಾರಿಗಳನ್ನು ನೀಡಲಾಗಿದೆ.

ಕೊರೋನಾ ಏರಿಕೆ, ಜ. 31ರವರೆಗೆ ಶಾಲೆಗಳು ಬಂದ್

ಒಮಿಕ್ರಾನ್ (Omicron) ಆತಂಕದ ಮಧ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ (Coronavirus) ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲ ರಾಜ್ಯಗಳಲ್ಲಿ ಕೆಲ ಕಠಿಣ ನಿಯಮಗಳನ್ನ ಜಾರಿಗೆ ತರಲಾಗಿದೆ. ಅದರಂತೆ ಮುಂಬೈನಲ್ಲಿ (Mumbai) 1 ರಿಂದ 9ನೇ ತರಗತಿಗಳು ಜನವರಿ 31ರವರೆಗೂ ಬಂದ್​ ಇರಲಿವೆ. 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ(Students) ಎಂದಿನಂತೆ ತರಗತಿ ಮುಂದುವರಿಯಲಿದೆ ಎಂದು ಬೃಹನ್​ ಮುಂಬೈ ಮುನ್ಸಿಪಾಲ್​ ಕಾರ್ಪೋರೇಷನ್​ ಅಧಿಕೃತ ಮಾಹಿತಿ ನೀಡಿದೆ.
 

click me!