School Holiday: ಯುಪಿಯಲ್ಲಿ 15 ದಿನ ಶಾಲೆಗಳಿಗೆ ಚಳಿಗಾಲ ರಜೆ ಘೋಷಣೆ

Published : Dec 31, 2021, 02:55 PM ISTUpdated : Dec 31, 2021, 03:01 PM IST
School Holiday: ಯುಪಿಯಲ್ಲಿ 15 ದಿನ ಶಾಲೆಗಳಿಗೆ ಚಳಿಗಾಲ ರಜೆ  ಘೋಷಣೆ

ಸಾರಾಂಶ

* ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಬೆನ್ನಲ್ಲೇ ಒಮಿಕ್ರಾನ್ ಭೀತಿ * ಶಾಲೆಗಳಿಗೆ  15 ದಿನಗಳ ಚಳಿಗಾಲದ ರಜೆ  ಘೋಷಣೆ * ಡಿ.31ರಿಂದ ಜನವರಿ 14 ರವರೆಗೆ ಶಾಲೆ ಬಂದ್

ಲಕ್ನೋ, (ಡಿ.31): ಮಹಾಮಾರಿ ಕೊರೋನಾ ಸೋಂಕಿನ(Coronavirus) ಪ್ರಮಾಣ ಹೆಚ್ಚುತ್ತಿರುವ ಬೆನ್ನಲ್ಲೇ ಒಮಿಕ್ರಾನ್(Omicron) ಭೀತಿ ಸಹ ಶುರುವಾಗಿದೆ.

ಅದರಲ್ಲೂ ಚಳಿಗಾಲದಲ್ಲಿ ಶೀತ ಹೆಚ್ಚಾಗುತ್ತಿರುವುದರಿಂದ ಮಕ್ಕಳ ಆರೋಗ್ಯ ದೃಷ್ಠಿಯಿಂದ ಉತ್ತರ ಪ್ರದೇಶ(Uttar Pradesh) ಸರ್ಕಾರ ಶಾಲೆಗಳಿಗೆ ರಜೆ(School Holiday) ಘೋಷಿಸಿದೆ. ಇಂದಿನಿಂದ ಅಂದ್ರೆ ಡಿ.31ರಿಂದ ಜನವರಿ 14 ರವರೆಗೆ ಬಂದ್ ಮಾಡಲು ಮುಂದಾಗಿದ್ದು, 15 ದಿನಗಳ ಚಳಿಗಾಲದ ರಜಾ(Winter Vacations) ಎಂದು ನೀಡಿದೆ.

Online courses: ಈ ಕೋರ್ಸ್‌ಗಳ ಕಲಿಕೆಗೆ ಕಾಲೇಜಿಗೆ ಹೋಗಬೇಕಿಲ್ಲ, ಆನ್‌ಲೈನ್‌ನಲ್ಲೇ ಲಭ್ಯ

ಸರ್ಕಾರ ಘೋಷಣೆ ಮಾಡಿದ್ದರಿಂದ  ಯುಪಿ ರಾಜ್ಯದಾದ್ಯಂತ ಡಿಸೆಂಬರ್ 31 ರಿಂದ ಜನವರಿ 14 ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, 1 ರಿಂದ 8ನೇ ತರಗತಿಗಳಿಗೆ ಮಾತ್ರ ಈ ಆದೇಶ ಅನ್ವಯಿಸುತ್ತದೆ.

ಶಿಕ್ಷಣ ಮಂಡಳಿ ಕಾರ್ಯದರ್ಶಿ ಹೊರಡಿಸಿರುವ ಸೂಚನೆಗಳಲ್ಲಿ ಡಿಸೆಂಬರ್ 31 ರಿಂದ ಜನವರಿ 14 ರವರೆಗೆ ರಜೆ ಘೋಷಿಸಲಾಗಿದೆ. ಈ ಆದೇಶವು 1ರಿಂದ 8ನೇ ತರಗತಿವರೆಗೆ ಮಾತ್ರ ಅನ್ವಯಿಸುತ್ತದೆ. ಪ್ರೌಢಶಾಲೆಗಳಿಗೆ ಚಳಿಗಾಲದ ರಜೆಯ ಆದೇಶ ಹೊರಡಿಸಿಲ್ಲ.  ಚಳಿಗಾಲದ ರಜಾದಿನಗಳು ಜನವರಿ 14ಕ್ಕೆ ಅಂತ್ಯಗೊಳ್ಳಲಿದ್ದು, ಜನವರಿ 15ಕ್ಕೆ ಶಾಲೆಗಳು ಎಂದಿನಂತೆ ಪ್ರಾರಂಭವಾಗುತ್ತವೆ ಎಂದು ಹೇಳಿದ್ದಾರೆ.

ಒಟ್ಟಾರೆ ಭಾರತದಲ್ಲಿ 961 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಹೆಚ್ಚುತ್ತಿರುವ ಕೋವಿಡ್-19 ಸೋಂಕುಗಳು ಮತ್ತು ಒಮಿಕ್ರಾನ್ ಭಯದ ನಡುವೆ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ದೆಹಲಿ, ಹರಿಯಾಣ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಜಾರ್ಖಂಡ್‌ಗೆ ಪತ್ರ ಬರೆದಿದ್ದಾರೆ, ಕೋವಿಡ್ 19 ಪರೀಕ್ಷೆಯನ್ನು ಹೆಚ್ಚಿಸಲು, ವ್ಯಾಕ್ಸಿನೇಷನ್‌ನ ವೇಗ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು ಹಾಗೂ ಆಸ್ಪತ್ರೆಗಳಲ್ಲಿ ಸೌಕರ್ಯಗಳನ್ನು ಬಲಪಡಿಸಲು ರಾಜ್ಯಗಳಿಗೆ ಸಲಹೆ ನೀಡಿದ್ದಾರೆ. ಚಳಿಗಾಲದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಉತ್ತರ ಪ್ರದೇಶದ ಶಾಲಾ ಮಕ್ಕಳಿಗೆ 15 ದಿನಗಳ ಕಾಲ ರಜೆ ಘೋಷಿಸಲಾಗಿದೆ.

ಭಾರತದಲ್ಲಿ ಚಳಿಯ ಜೊತೆಗೆ ಮಳೆಯೂ ಸುರಿಯುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD)ಯ ಇತ್ತೀಚಿನ ಹವಾಮಾನ ಮುನ್ಸೂಚನೆಯ ಪ್ರಕಾರ, ಅನೇಕ ರಾಜ್ಯಗಳಲ್ಲಿ ತೀವ್ರವಾದ ಚಳಿ ಮತ್ತು ಶೀತ ಗಾಳಿ ಆವರಿಸಲಿದೆ. ದೇಶದ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆ ಮತ್ತು ಲಘು ಮಳೆಯಾಗುವ ಸಾಧ್ಯತೆಯಿದೆ. IMDಯ ಇತ್ತೀಚಿನ ಹವಾಮಾನ ಮುನ್ಸೂಚನೆಯಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ  ಆರೆಂಜ್ ಅಲರ್ಟ್ ನೀಡಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲೂ ಕ್ಲೋಸ್
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪರಿಸ್ಥಿತಿಯ ಕುರಿತು ಉನ್ನತ ಮಟ್ಟದ ಸಭೆಯ ನಂತರ, ದೆಹಲಿ ಸರ್ಕಾರ ಆರೇಂಜ್ ಎಚ್ಚರಿಕೆಯನ್ನು ಕೂಡಾ ನೀಡಿದೆ. ತಕ್ಷಣವೇ ಜಾರಿಗೆ ಬರುವಂತೆ ಶಾಲೆಗಳನ್ನು ಮುಚ್ಚಿದೆ. ಆದಾಗ್ಯೂ, ಆನ್‌ಲೈನ್ ತರಗತಿಗಳು, ಸಿಬಿಎಸ್‌ಇ ನೋಂದಣಿ, ಪರೀಕ್ಷೆಗಳು ಮತ್ತು ಸಂಬಂಧಿತ ಚಟುವಟಿಕೆಗಳು ವೇಳಾಪಟ್ಟಿಯಂತೆ ಮುಂದುವರಿಯುತ್ತದೆ ಎಂದು ಡಿಡಿಎಂಎ ಮಾಹಿತಿ ನೀಡಿದೆ.  ದೆಹಲಿ ಸರ್ಕಾರವು ಪ್ರಾಥಮಿಕ ತರಗತಿಗಳಿಗೆ (5ನೇ ತರಗತಿಯವರೆಗೆ) ಜನವರಿ 15, 2021 ರಿಂದ ಚಳಿಗಾಲದ ರಜೆಯನ್ನು ಘೋಷಿಸಿದೆ. 
 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ