Singapore Scholarship:11 ಭಾರತೀಯ ವಿದ್ಯಾರ್ಥಿಗಳೆ ಸಿಕ್ಕ ವಿದ್ಯಾರ್ಥಿ ವೇತನ

By Suvarna News  |  First Published Dec 29, 2021, 7:14 PM IST

* ಗ್ಲೋಬಲ್ ಇಂಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್‌(GIIS) ಈ ಸ್ಕಾಲರ್ಶಿಪ್ ನೀಡುತ್ತದೆ.
* ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗ ವಿದ್ಯಾರ್ಥಿಗಳು ಆಯ್ಕೆ
* ಪ್ರತಿಯೊಬ್ಬ ವಿದ್ಯಾರ್ಥಿಗೂ 49 ಲಕ್ಷ ರೂಪಾಯಿ ದೊರೆಯಲಿದೆ.


ವಿದೇಶಗಳಿಗೆ ಹೋಗಿ ಉತ್ತಮ ಎಜ್ಯುಕೇಷನ್ ಪಡೆಯಬೇಕು ಅನ್ನೋ ಆಸೆ ವಿದ್ಯಾರ್ಥಿಗಳಿಗೆ ಕಾಮನ್. ಆದ್ರೆ ಆರ್ಥಿಕ ಕಾರಣದಿಂದಾಗಿ ಹೈಯರ್ ಎಜುಕೇಶನ್ (Higher Education) ಮಾಡಲು ಫಾರಿನ್ ಗೆ ಹೋಗಲು ಸಾಧ್ಯವಾಗದೆ ಸುಮ್ಮನಾಗಿಬಿಡುತ್ತಾರೆ.  ಕೆಲವರು  ಸ್ಕಾಲರ್ಶಿಪ್ (Scholarship)  ಪಡೆದು ತಮ್ಮ ಕನಸು ಕಂಪ್ಲೀಟ್ ಮಾಡಿಕೊಳ್ಳುತ್ತಾರೆ. ಸಾಕಷ್ಟು ಪ್ರತಿಷ್ಠಿತ ವಿದೇಶಿ ಸಂಸ್ಥೆಗಳು ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ ನೀಡುತ್ತವೆ. ಹೀಗೆ ಸ್ಕಾಲರ್ಶಿಪ್ (Scholarship) ಪಡೆದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಲುತ್ತಾರೆ ವಿದ್ಯಾರ್ಥಿಗಳು. ಸದ್ಯ ಭಾರತದ ೧೧ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಿಂಗಾಪುರ್ ಸ್ಕಾಲರ್ಶಿಪ್ (Scholarship)  ಪಡೆದಿದ್ದು, ತಮ್ಮ ಕನಸ್ಸನ್ನು ಪೂರ್ಣಗೊಳಿಸಲು ತುದಿಗಾಲಲ್ಲಿ ನಿಂತಿದ್ದಾರೆ. 10ನೇ ತರಗತಿಯನ್ನು ಯಶಸ್ವಿಯಾಗಿ ಪೂರೈಸಿ, ವಿದೇಶದಲ್ಲಿ 11ನೇ ತರಗತಿ ಸೇರಿ 2 ವರ್ಷ ಉಚಿತವಾಗಿ ವಿದ್ಯಾಭ್ಯಾಸ ಮಾಡಲಿದ್ದಾರೆ. ಪ್ರತಿ ವಿದ್ಯಾರ್ಥಿಗೆ ಬರೋಬ್ಬರಿ 49 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಸಿಗಲಿದೆ.

ಚಂಡೀಗಢ (Chandigarh), ಮುಂಬೈ (Mumbai), ವಿಜಯವಾಡ (Vijayawada), ಮೊಹಾಲಿ (Mohali), ಬೆಂಗಳೂರು (Bengaluru), ಗಾಂಧಿನಗರ (Gandhinagar), ಅಮೃತಸರ (Amritsar), ಕೊಚ್ಚಿ (Kochi), ಮೀರತ್ (Meerut)  ಮತ್ತು ಪುಣೆ (Pune)ಯಿಂದ ಆಯ್ದ 11 ವಿದ್ಯಾರ್ಥಿಗಳು ಅತ್ಯಾಧುನಿಕ GIIS ಸ್ಮಾರ್ಟ್ ಕ್ಯಾಂಪಸ್‌ನಲ್ಲಿ ತಮ್ಮ ಕಲಿಕೆ ಮತ್ತು ಬೆಳವಣಿಗೆಯ ಪ್ರಯಾಣವನ್ನು ಪ್ರಾರಂಭಿಸಲು ಹೊಸ ವರ್ಷದ ಮುನ್ನಾದಿನದಂದು ಸಿಂಗಾಪುರಕ್ಕೆ ತೆರಳಲಿದ್ದಾರೆ. 

Tap to resize

Latest Videos

ಹೌದು, ಸಿಂಗಾಪುರದ ಒಂದು ಪ್ರಮುಖ ಶಿಕ್ಷಣ ಸಂಸ್ಥೆಯಾದ ಗ್ಲೋಬಲ್ ಇಂಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿವೇತನಕ್ಕೆ ದೇಶದ ಹನ್ನೊಂದು ಪ್ರತಿಭಾವಂತ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಸಿಂಗಾಪುರ್ ಸ್ಮಾರ್ಟ್ ಕ್ಯಾಂಪಸ್‌ಗೆ ಎಲ್ಲಾ ವೆಚ್ಚ ಸೇರಿ 2-ವರ್ಷದ ವಿದ್ಯಾರ್ಥಿವೇತನ(Scholarship) ಅನ್ನು ಇವರಿಗೆ ನೀಡಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ ಹನ್ನೊಂದು ವಿದ್ಯಾರ್ಥಿಗಳು ಈಗ ಸಿಂಗಾಪುರ್ ಸ್ಮಾರ್ಟ್ ಕ್ಯಾಂಪಸ್‌ ಗೆ ಆಯ್ಕೆಯಾಗಿದ್ದು, ಎಲ್ಲಾ ರೀತಿಯ  ವೆಚ್ಚಗಳನ್ನು ಪಾವತಿಸಲಾಗುತ್ತದೆ. 

Reliance Foundation scholarship: ವಿದ್ಯಾರ್ಥಿ ವೇತನಕ್ಕೆ Reliance ಫೌಂಡೇಶನ್ ಅರ್ಜಿ ಆಹ್ವಾನ, UGಗೆ 4ಲಕ್ಷ, PGಗೆ 6ಲಕ್ಷ ರೂ

ಈ ವಿದ್ಯಾರ್ಥಿವೇತನ(Scholarship) ಕ್ಕೆ ಒಟ್ಟು 6,000 ಅರ್ಜಿಗಳು ಬಂದಿದ್ವು. ಇಷ್ಟು ದೊಡ್ಡ ಮಟ್ಟದ ಅರ್ಜಿಗಳ ರಾಶಿಯಲ್ಲಿ  ಸ್ಕ್ರೀನಿಂಗ್ ಮತ್ತು ಮೌಲ್ಯಮಾಪನ ಪ್ರಕ್ರಿಯೆ ಮೂಲಕ ಈ ೧೧  ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲಾ ವೆಚ್ಚಗಳನ್ನು ಭರಿಸಲು ಗ್ಲೋಬಲ್ ಇಂಡಿಯನ್ ಇಂಟರ್‌ನ್ಯಾಷನಲ್ ಸ್ಕೂಲ್‌(GIIS) ಪ್ರತಿ ವಿದ್ಯಾರ್ಥಿಗೆ 49 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡುತ್ತದೆ. ಇನ್ನು ಈ ವಿದ್ಯಾರ್ಥಿ ವೇತನದ ಕಾರ್ಯಕ್ರಮದ ಭಾಗವಾಗಿ, ವಿದ್ಯಾರ್ಥಿಗಳು ಡಿಜಿಟಲ್ ವಾತಾವರಣದಲ್ಲಿ ಕಲಿಯುತ್ತಾರೆ. 21 ನೇ ಶತಮಾನದ ಸವಾಲುಗಳಿಗೆ ತಕ್ಕಂತೆ ಅಲ್ಲಿ ಕಲಿಕೆಯ ತಂತ್ರಗಳು ಮತ್ತು ವಿಧಾನಗಳನ್ನು ಕಲಿಸಲಾಗುತ್ತದೆ.

ವಿದ್ಯಾರ್ಥಿವೇತನ(Scholarship) ವು GIIS ನಲ್ಲಿನ ವೈವಿಧ್ಯಮಯ ಪಠ್ಯಕ್ರಮದಿಂದ ಆಯ್ಕೆಯನ್ನು ನೀಡುತ್ತದೆ. CBSE ಅಥವಾ IBDP ಪಠ್ಯಕ್ರಮವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.ಈ ಕಾರ್ಯಕ್ರಮದ ಭಾಗವಾಗಿ ಎರಡು ವರ್ಷಗಳ ಕಾಲ ಬೋರ್ಡಿಂಗ್, ವಸತಿ, ಸಮವಸ್ತ್ರ, ಪುಸ್ತಕಗಳು, ಪಾಕೆಟ್ ಮನಿ, ಪ್ರಯಾಣ ವೆಚ್ಚ ಸೇರಿದಂತೆ ಎಲ್ಲಾ ವೆಚ್ಚಗಳನ್ನು ಭರಿಸಲು GIIS ಪ್ರತಿ ವಿದ್ಯಾರ್ಥಿಗೆ SGD 90,000 ವರೆಗೆ ವಿದ್ಯಾರ್ಥಿವೇತನ (Scholarship) ಪಾವತಿಸುತ್ತದೆ.

ಅಂದಹಾಗೆ ಕಳೆದ ಆರು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವ ಸಿಂಗಾಪುರದ ಗ್ಲೋಬಲ್ ಇಂಡಿಯನ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಅಕಾಡೆಮಿಕ್ ಕ್ವಾಲಿಟಿ ಅಶ್ಯೂರೆನ್ಸ್‌ನ ನಿರ್ದೇಶಕ ಪ್ರಮೋದ್ ತ್ರಿಪಾಠಿ, “ಈ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ವೈಯಕ್ತಿಕ ಬೆಳವಣಿಗೆ, ಕಲಿಕೆ ಮತ್ತು ವೃತ್ತಿ ಬೆಳವಣಿಗೆಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ.  11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವು ಪರಿಪೂರ್ಣವಾಗಿದೆ ಅಂತಾರೆ.

Student Scholarships: ಈ ವಿದ್ಯಾರ್ಥಿ ವೇತನಗಳ ಬಗ್ಗೆ ನಿಮಗೆ ಮಾಹಿತಿ ಇದೆಯೇ? ತಪ್ಪದೇ ಇಂದೇ ಅರ್ಜಿ ಹಾಕಿ

ಒಟ್ನಲ್ಲಿ ದೇಶದ ವಿವಿಧ ಭಾಗಗಳ 11 ವಿದ್ಯಾರ್ಥಿಗಳು ಅತ್ಯಾಧುನಿಕ GIIS ಸ್ಮಾರ್ಟ್ ಕ್ಯಾಂಪಸ್‌ನಲ್ಲಿ ಶಿಕ್ಷಣ ಪಡೆಯಲು ಹೋಗುತ್ತಿದ್ದಾರೆ. ತಮ್ಮ ಕಲಿಕೆಗಾಗಿ ಹೊಸ ವರ್ಷದ ಮುನ್ನಾದಿನ ಸಿಂಗಾಪುರಕ್ಕೆ ಹಾರಲಿದ್ದಾರೆ. ಅವರಿಗೆಲ್ಲ ನಾವು ಆಲ್ ದಿ ಬೆಸ್ಟ್ ಹೇಳೋಣ. ಈ ವಿದ್ಯಾರ್ಥಿವೇತನ ಸುದ್ದಿ ಇನ್ನಷ್ಟು ಮಕ್ಕಳು ತಮ್ನ ಕನಸನ್ನು ಸಾಕಾರಗೊಳಿಸಿಕೊಳ್ಳಲು ಸ್ಫೂರ್ತಿ ಅಗೋದ್ರಲ್ಲಿ ಎರಡು ಮಾತಿಲ್ಲ.

click me!