ಬಾಲ್ಯದಲ್ಲಿ ಭಿಕ್ಷುಕನಾಗಿದ್ದ Uttar Pradeshದ ಹುಡುಗನಿಗೆ ಅಗ್ನಿವೀರನಾಗುವ ಕನಸು

By Suvarna News  |  First Published Jun 20, 2022, 4:46 PM IST

  ಉತ್ತರ ಪ್ರದೇಶದ ಆಗ್ರಾ ನಗರದ 17 ವರ್ಷದ ಶೇರ್ ಅಲಿ ಎಂಬಾತ ಹಿಂದೆ ಮಗುವಾಗಿದ್ದಾಗ ಭಿಕ್ಷುಕನಾಗಿದ್ದ, ಇದೀಗ    'ಅಗ್ನಿವೀರ್' ಆಗುವ ಹಾದಿಯಲ್ಲಿ  ಅಡೆತಡೆಗಳನ್ನು ಮೆಟ್ಟಿ ನಿಂತು ಇತರರಿಗೆ ಮಾದರಿಯಾಗಿದ್ದಾನೆ.   


ಆಗ್ರಾ (ಜೂನ್ 20): ಉತ್ತರ ಪ್ರದೇಶದ ಆಗ್ರಾ ನಗರದ 17 ವರ್ಷದ ಶೇರ್ ಅಲಿ ಎಂಬಾತ ಹಿಂದೆ ಮಗುವಾಗಿದ್ದಾಗ ಭಿಕ್ಷುಕನಾಗಿದ್ದ, ಇದೀಗ    'ಅಗ್ನಿವೀರ್' ಆಗುವ ಹಾದಿಯಲ್ಲಿ  ಅಡೆತಡೆಗಳನ್ನು ಮೆಟ್ಟಿ ನಿಂತು ಇತರರಿಗೆ ಮಾದರಿಯಾಗಿದ್ದಾನೆ.  ಇತ್ತೀಚೆಗಷ್ಟೇ ತನ್ನ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 63% ಅಂಕಗಳನ್ನು ಗಳಿಸಿದ ಅಲಿ, ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾನೆ. 

ಶೇರ್ ಅಲಿ ತುಂಬಾ ಹಿಂದುಳಿದ ಕುಟುಂಬದಿಂದ ಬಂದಿದ್ದು, ಆತನ ಹೆತ್ತವರು ಚಿಂದಿ ಆಯುವ ಕೆಲಸ ಮಾಡುತ್ತಾರೆ.   ತಮ್ಮ ಎಂಟು ಒಡಹುಟ್ಟಿದವರ ಜೊತೆ ಆಗ್ರಾ ಜಿಲ್ಲೆಯ ಸದರ್ ಉಪವಿಭಾಗದ ಮಾಧ್ಯಮಿಕ ಶಿಕ್ಷಣ ಇಲಾಖೆ ಕಚೇರಿ ಬಳಿಯ 'ಜುಗ್ಗಿ' ಕ್ಲಸ್ಟರ್‌ನಲ್ಲಿ ಶೇರ್ ಅಲಿ ಮತ್ತು ಕುಟುಂಬದವರು  ವಾಸಿಸುತ್ತಿದ್ದಾರೆ.

Latest Videos

undefined

Agnipath Scheme; ಅಗ್ನಿವೀರರಿಗೆ ಜಾಬ್ ಆಫರ್ ನೀಡಿದ ಆನಂದ್ ಮಹೀಂದ್ರಾ

ಪರೀಕ್ಷಾ ಫಲಿತಾಂಶವು  ನನ್ನ ಗುರಿ ಮುಟ್ಟಲು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ನಾನು ಈಗ ಅಗ್ನಿಪಥ್ ಯೋಜನೆಯ ಮೂಲಕ ಭಾರತೀಯ ಸೇನೆಗೆ ಸೇರಿ ದೇಶ ಸೇವೆ ಮಾಡುವ ಗುರಿ ಹೊಂದಿದ್ದೇನೆ ಎಂದು ಹೇಳಿದ್ದಾನೆ.

ಮಕ್ಕಳ ಹೋರಾಟಗಾರ ನರೇಶ್ ಪರಸ್ ಎಂಬುವವರು ಅಲಿಯನ್ನು ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು, ಅದು ಅವರಿಗೆ ಕಷ್ಟದ ಕೆಲಸವಾಗಿತ್ತು. ಇದರ ಜೊತೆಗೆ, ನರೇಶ್ ಪರಸ್ ಅಲಿಯನ್ನು ನೃತ್ಯ ಮತ್ತು ರಂಗಭೂಮಿಗೆ ಪರಿಚಯಿಸಿದರು. ಹೀಗಾಗಿ ಅಲಿ ನಾಲ್ಕು ನಾಟಕಗಳಲ್ಲಿ ನಟಿಸಿದ್ದರು.

ನನ್ನ ಮಗು ಶಿಕ್ಷಣದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದಾನೆ ಮತ್ತು ಪ್ರೌಢಶಾಲಾ ಪರೀಕ್ಷೆಗೆ ಅರ್ಹತೆ ಪಡೆಯಲು ಎಲ್ಲಾ ಆಡ್ಸ್ ವಿರುದ್ಧ ಹೋರಾಡಿದ್ದಾನೆ. ನನ್ನ ನೆರೆಹೊರೆಯಲ್ಲಿರುವ ಎಲ್ಲಾ ಮಕ್ಕಳು ಈಗ ಅವನನ್ನು ಗುರುತಿಸುತ್ತಾರೆ ಎಂದು ಅಲಿ ತಂದೆ ಖುಷಿ ಹಂಚಿಕೊಂಡಿದ್ದಾರೆ.

IBPS Recruitment 2022; ಬರೋಬ್ಬರಿ 8106 ಹುದ್ದೆಗಳಿಗೆ ನೇಮಕಾತಿ 

ಅಗ್ನಿಪಥ್ ಯೋಜನೆಯಡಿ  ಯೋಜನೆಯಡಿ ಆಯ್ಕೆಯಾದ ಯುವಕರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಅಗ್ನಿಪಥ್ ದೇಶಭಕ್ತಿ ಮತ್ತು ಪ್ರೇರಿತ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ. ಈ ಅಗ್ನಿಪಥ್ ಯೋಜನೆಯಡಿ 4 ವರ್ಷಗಳ ಕಾಲ ಸೇನೆಗೆ ಯುವಕರನ್ನು ನೇಮಿಸಿಕೊಳ್ಳಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ರಕ್ಷಣಾ ಸಚಿವಾಲಯ ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ, 4 ವರ್ಷಗಳ ಕೆಲಸದ ಅವಧಿ ಪೂರ್ಣಗೊಂಡ ನಂತರ, 'ಅಗ್ನಿವೀರ್' ಗೆ ಒಂದು ದೊಡ್ಡ ಮೊತ್ತದ 'ನಿವೃತ್ತಿ' ಪ್ಯಾಕೇಜ್ ಅನ್ನು ಸಹ ಪಾವತಿಸಲಾಗುವುದು ಎಂದು ಹೇಳಲಾಗಿದೆ. ಇದು ಆದಾಯ ತೆರಿಗೆಯಿಂದ ಮುಕ್ತವಾಗಿರುತ್ತದೆ. ಅಗ್ನಿಪಥ್ ಯೋಜನೆಯಡಿ ಯಾರು ಅರ್ಜಿ ಸಲ್ಲಿಸಬಹುದು, ನೇಮಕಾತಿ ಪ್ರಕ್ರಿಯೆ ಏನು, ಸಂಬಳ ಏನು ಮತ್ತು ಸೌಲಭ್ಯಗಳೇನು?

ಅಗ್ನಿಪಥ್ ಯೋಜನೆ: ಯಾರು ಅರ್ಹರು?
ಅಗ್ನಿಪಥ್ ಯೋಜನೆಗೆ ಅರ್ಹರಾಗಲು ನಿಮ್ಮ ವಯಸ್ಸು 17.5 ವರ್ಷದಿಂದ 23 ವರ್ಷಗಳ ನಡುವೆ ಇರಬೇಕು. ಈ ನೇಮಕಾತಿಯಲ್ಲಿ ಸೇನೆಯಂತೆಯೇ ಅದೇ ಪ್ರಕ್ರಿಯೆಯಿಂದ ಆಯ್ಕೆ ಮಾಡಲಾಗುತ್ತದೆ. ಅಂದರೆ ಸೇನೆ ನಿಗದಿಪಡಿಸಿದ ನಿಯಮಗಳ ಪ್ರಕಾರವೇ ನೇಮಕಾತಿ ನಡೆಯಲಿದೆ. ಇದರಲ್ಲಿ ನೇಮಕಾತಿಯ ನಂತರ ತರಬೇತಿ ಅವಧಿ ಸೇರಿದಂತೆ ಒಟ್ಟು 4 ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ.

ಅಗ್ನಿವೀರನ ಸಂಭಾವನೆ ಎಷ್ಟು?
ರಕ್ಷಣಾ ಸಚಿವಾಲಯದ ಪ್ರಕಾರ, ಸೇವಾ ನಿಧಿ ಪ್ಯಾಕೇಜ್ ಅಡಿಯಲ್ಲಿ, ಸೈನಿಕರು ಮೊದಲ ವರ್ಷದಲ್ಲಿ ರೂ 4.76 ಮತ್ತು ನಾಲ್ಕನೇ ವರ್ಷದಲ್ಲಿ ರೂ 6.92 ಲಕ್ಷಗಳ ವಾರ್ಷಿಕ ಪ್ಯಾಕೇಜ್ ಪಡೆಯುತ್ತಾರೆ. ಮಾಸಿಕ ವೇತನದ ಕುರಿತು ಮಾತನಾಡಿ, ಮೊದಲ ವರ್ಷದಲ್ಲಿ ಯುವಕರಿಗೆ ಮಾಸಿಕ 30 ಸಾವಿರ ರೂ. ನಾಲ್ಕನೇ ವರ್ಷಕ್ಕೆ ಈ ಮಾಸಿಕ ವೇತನ 40 ಸಾವಿರ ರೂ. ಆಗುತ್ತದೆ. ಇಪಿಎಫ್/ಪಿಪಿಎಫ್ ಸೌಲಭ್ಯ ಲಭ್ಯವಿರುತ್ತದೆ ಆದರೆ ಪಿಂಚಣಿ ಇರುವುದಿಲ್ಲ

 

click me!