ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಭಾರತೀಯ ವಿದ್ಯಾರ್ಥಿಗಳು ಮುಂಚೂಣಿ: ಓಪನ್ ಡೋರ್ಸ್ ವರದಿ

By Gowthami KFirst Published Nov 14, 2022, 4:46 PM IST
Highlights

ಓಪನ್ ಡೋರ್ಸ್ ರಿಪೋರ್ಟ್ ಪ್ರಕಾರ 2021-22ರ ಶೈಕ್ಷಣಿಕ ವರ್ಷದಲ್ಲಿ ಸರಿಸುಮಾರು 200,000 ಭಾರತೀಯ ವಿದ್ಯಾರ್ಥಿಗಳು ಯುನೈಟೆಡ್ ಸ್ಟೇಟ್ಸ್ ಅನ್ನು ತಮ್ಮಉನ್ನತ ಶಿಕ್ಷಣದ ತಾಣವಾಗಿ ಆಯ್ಕೆ ಮಾಡಿಕೊಂಡಿದ್ದು ಹಿಂದಿನ ವರ್ಷಕ್ಕಿಂತ ಶೇ.19ರಷ್ಟು ಹೆಚ್ಚಳವಾಗಿದೆ.  

ನವದೆಹಲಿ (ನ.14): ಸತತವಾಗಿ ಎರಡನೆಯ ವರ್ಷ ದಾಖಲೆ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅಮೇರಿಕಕ್ಕೆ ಬಂದಿದ್ದಾರೆ.   ಇಂದು ಬಿಡುಗಡೆಯಾದ ಓಪನ್ ಡೋರ್ಸ್ ರಿಪೋರ್ಟ್ ಪ್ರಕಾರ 2021-22ರ ಶೈಕ್ಷಣಿಕ ವರ್ಷದಲ್ಲಿ ಸರಿಸುಮಾರು 200,000 ಭಾರತೀಯ ವಿದ್ಯಾರ್ಥಿಗಳು ಯುನೈಟೆಡ್ ಸ್ಟೇಟ್ಸ್ ಅನ್ನು ತಮ್ಮಉನ್ನತ ಶಿಕ್ಷಣದ ತಾಣವಾಗಿ ಆಯ್ಕೆ ಮಾಡಿಕೊಂಡಿದ್ದು ಹಿಂದಿನ ವರ್ಷಕ್ಕಿಂತ ಶೇ.19ರಷ್ಟು ಹೆಚ್ಚಳವಾಗಿದೆ. ಅಮೇರಿಕದಲ್ಲಿ ಕಲಿಯುತ್ತಿರುವ ದಶಲಕ್ಷಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಲ್ಲಿ ಸುಮಾರು ಶೇ.21ರಷ್ಟು ಮಂದಿ ಭಾರತೀಯ ವಿದ್ಯಾರ್ಥಿಗಳಾಗಿದ್ದಾರೆ. ಮಿನಿಸ್ಟರ್ ಕೌನ್ಸೆಲರ್ ಫಾರ್ ಪಬ್ಲಿಕ್ ಡಿಪ್ಲೊಮಸಿ ಗ್ಲೋರಿಯಾ ಬರ್ಬೆನಾ, “ಅಮೇರಿಕವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಭಾರತಕ್ಕೆ ಅಭಿನಂದನೆಗಳು.  ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಯು.ಎಸ್.ಶಿಕ್ಷಣದ ಮೌಲ್ಯವನ್ನು ಗುರುತಿಸಿರುವುದು ಇದರಿಂದ ಸ್ಪಷ್ಟವಾಗಿದೆ. ಇಲ್ಲಿನ ಶಿಕ್ಷಣವು ವಿದ್ಯಾರ್ಥಿಗಳನ್ನು  ಅವರು ಹೊಸದಾಗಿ ಗಳಿಸಿದ ಜ್ಞಾನದಿಂದ ವಿಶ್ವದ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿಸುತ್ತದೆ ಮತ್ತು  ಅವರನ್ನು ಕೃತಕ ಬುದ್ಧಿಮತ್ತೆ, ಉದಯೋನ್ಮುಖ ತಂತ್ರಜ್ಞಾನಗಳು ಅಥವಾ ಉದ್ಯಮಶೀಲತೆ ಹಾಗೂ ಆವಿಷ್ಕಾರದಂತಹ ಭವಿಷ್ಯದ ಅವಕಾಶಗಳಿಗೆ ಸನ್ನದ್ಧವಾಗಿಸುತ್ತದೆ,”ಎಂದರು.

ಭಾರತೀಯ ವಿದ್ಯಾರ್ಥಿಗಳಿಗೆ ನೆರವಾಗಲು ಯು.ಎಸ್. ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಅಫೇರ್ಸ್ ಭಾರತದಾದ್ಯಂತ ನವದೆಹಲಿ, ಚೆನ್ನೈ, ಕೊಲ್ಕತಾ, ಬೆಂಗಳೂರು, ಅಹಮದಾಬಾದ್, ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಎರಡು ಕಡೆಗಳಲ್ಲಿ ವರ್ಚುಯಲ್ ರೂಪದಲ್ಲಿ ಮತ್ತು ವೈಯಕ್ತಿಕವಾಗಿ ಎಜುಕೇಷನ್ ಯುಎಸ್‌ಎ ಅಡ್ವೈಸಿಂಗ್ ಸೆಂಟರ್‌ಗಳಲ್ಲಿ ಉಚಿತ ಸಲಹಾ ಸೇವೆಗಳನ್ನು ಸಂಭವನೀಯ ವಿದ್ಯಾರ್ಥಿಗಳಿಗೆ ನೀಡುತ್ತದೆ. ಎಲ್ಲ ಎಂಟು ಕೇಂದ್ರಗಳು ಎಜುಕೇಷನ್ ಯುಎಸ್‌ಎ ಸಲಹೆಗಾರರನ್ನು ಹೊಂದಿದ್ದು, ಅವರು ಅಮೇರಿಕದಲ್ಲಿ ಅಧ್ಯಯನ ಮಾಡುವ ಅವಕಾಶಗಳನ್ನು ಕುರಿತು

ನಿಖರ, ಸಮಗ್ರ ಮತ್ತು ಅಪ್-ಟು-ಡೇಟ್ ಮಾಹಿತಿಯನ್ನು ನೀಡುವ ಮೂಲಕ ಭಾರತೀಯ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕಾರ್ಯಕ್ರಮ ಕಂಡುಕೊಳ್ಳಲು ಮತ್ತು 4,000 ಮಾನ್ಯತೆ ಪಡೆದ ಯು.ಎಸ್. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿಕೊಳ್ಳಲು ನೆರವಾಗುತ್ತಾರೆ.

ಅಮೇರಿಕದಲ್ಲಿ ಅಧ್ಯಯನ ಮಾಡುವ ಕುರಿತು ಹೆಚ್ಚಿನ ಮಾಹಿತಿ ಬಯಸುವ ವಿದ್ಯಾರ್ಥಿಗಳು ಮತ್ತು ಕುಟುಂಬಗಳು ಎಜುಕೇಷನ್‌ಯುಎಸ್‌ಎ ಇಂಡಿಯಾ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು, ಅದು ಐಒಎಸ್ ಮತ್ತು ಆಂಡ್ರಾಯಿಡ್ ಡಿವೈಸ್‌ಗಳಿಗೆ ಉಚಿತವಾಗಿ ದೊರೆಯುತ್ತದೆ. ಈ ಆ್ಯಪ್ ಕಾಲೇಜು ಅರ್ಜಿ ಪ್ರಕ್ರಿಯೆ ಕುರಿತು ಅತ್ಯಾಧುನಿಕ ಮಾಹಿತಿ ನೀಡುತ್ತದೆ ಮತ್ತು ಅಮೇರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಯೋಜಿಸಿದವರಿಗೆ ತ್ವರಿತ ಮತ್ತು ಸುಲಭ ಮೊದಲ ಹೆಜ್ಜೆಯಾಗಿದೆ. ಅಥವಾ ಭೇಟಿ ಕೊಡಿ:  https://educationusa.state.gov/country/in

ಓಪನ್ ಡೋರ್ಸ್ ಕುರಿತು: ದಿ ಇನ್ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ಎಜುಕೇಷನ್(ಐಐಇ) ಓಪನ್ ಡೋರ್ಸ್ ರಿಪೋರ್ಟ್ ಪ್ರಕಟಿಸುತ್ತದೆ. ಐಐಇ 1919ರಲ್ಲಿ ತನ್ನ ಸ್ಥಾಪನೆಯಾದ ದಿನದಿಂದಲೂ ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವಾರ್ಷಿಕ ಅಂಕಿ ಅಂಶಗಳ ಸಮೀಕ್ಷೆ ನಡೆಸುತ್ತದೆ ಮತ್ತು 1972ರಿಂದ ಯು.ಎಸ್. ಡಿಪಾರ್ಟ್ಮೆಂಟ್ ಆಫ್ ಸ್ಟೇಟ್‌ನ ಬ್ಯೂರೋ ಆಫ್ ಎಜುಕೇಷನಲ್ ಅಂಡ್ ಕಲ್ಚರಲ್ ಅಫೇರ್ಸ್ ಜೊತೆ ಸಹಯೋಗ ಹೊಂದಿದೆ.

ಓಪನ್ ಡೋರ್ಸ್ ಯು.ಎಸ್. ವಿಶ್ವವಿದ್ಯಾಲಯಗಳಲ್ಲಿರುವ ಅಂತಾರಾಷ್ಟ್ರೀಯ ವಿದ್ವಾಂಸರ ಸಂಖ್ಯೆಯನ್ನು ಹಾಗೂ ಪ್ರಿ-ಅಕಾಡೆಮಿಕ್ ಇಂಟೆನ್ಸಿವ್ ಇಂಗ್ಲಿಷ್ ಪ್ರೋಗ್ರಾಮ್ ನಲ್ಲಿ ನೋಂದಣಿಯಾದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ವರದಿ ಮಾಡುತ್ತದೆ. ಓಪನ್ ಡೋರ್ಸ್ 2022 ವರದಿಯಲ್ಲಿ ಫಾಲ್ 2021ರಿಂದ ಸ್ಪ್ರಿಂಗ್ 2022ರ ನಡುವೆ ಯುನೈಟೆಡ್ ಸ್ಟೇಟ್ಸ್ ನಲ್ಲಿರುವ ಯು.ಎಸ್. ಉನ್ನತ ಶಿಕ್ಷಣ ಸಂಸ್ಥೆಗಳ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಆನ್‌ಲೈನ್ ಹಾಗೂ ವಿದೇಶದಲ್ಲಿರುವ ವಿದ್ಯಾರ್ಥಿಗಳು ಮತ್ತು ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್‌ನಲ್ಲಿರುವವರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳೂ ಒಳಗೊಂಡಿದ್ದಾರೆ. ಹೆಚ್ಚಿನ ಮಾಹಿತಿ, ಇನ್ಫೋಗ್ರಾಫಿಕ್ಸ್ ಮತ್ತು ಸಂಪನ್ಮೂಲಗಳಿಗೆ ಭೇಟಿ ಕೊಡಿ: www.iie.org/OpenDoors

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿರುವ ಕಾರ್ಯ ಶ್ಲಾಘನೀಯ: ಬಿ.ಸಿ.ನಾಗೇಶ್

ಇಸಿಎ ವಿಭಾಗ: ಯು.ಎಸ್. ಡಿಪಾರ್ಟ್ಮೆಂಟ್ ಆಫ್ ಸ್ಟೇಟ್‌ನ ದಿ ಬ್ಯೂರೋ ಆಫ್ ಎಜುಕೇಷನಲ್ ಅಂಡ್ ಕಲ್ಚರಲ್ ಅಫೇರ್ಸ್(ಇಸಿಎ) ಅಮೇರಿಕದ ಜನರು ಮತ್ತು ಇತರೆ ದೇಶಗಳ ಜನರ ನಡುವೆ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ವೃತ್ತಿಪರ ಮತ್ತು ಖಾಸಗಿ ವಲಯದ ವಿನಿಮಯಗಳು, ಸಾರ್ವಜನಿಕ-ಖಾಸಗಿ ಸಹಯೋಗಗಳು ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳ ಮೂಲಕ ಬಾಂಧವ್ಯಗಳನ್ನು ನಿರ್ಮಿಸುತ್ತದೆ. ವಾರ್ಷಿಕ ಸುಮಾರು 50,000 ಮಂದಿ ಈ ವಿನಿಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ, ಅದರಲ್ಲಿ ಮುಂಚೂಣಿಯ ಫುಲ್ ಬ್ರೈಟ್ ಪ್ರೋಗ್ರಾಮ್ ಮತ್ತು ಇಂಟರ್‌ನ್ಯಾಷನಲ್ ವಿಸಿಟರ್ ಲೀಡರ್‌ಶಿಪ್ ಪ್ರೋಗ್ರಾಮ್ ಒಳಗೊಂಡಿವೆ.

ವಿದ್ಯಾರ್ಥಿಗಳಿಗೆ ಸಂಸ್ಕೃತ ಭೋದಿಸುತ್ತಿರುವ ಕೇರಳದ ಇಸ್ಲಾಮಿಕ್ ವಿದ್ಯಾಸಂಸ್ಥೆ

ಇಸಿಎ ಅಮೇರಿಕದ ಅತ್ಯಂತ ಆರ್ಥಿಕ ಅಗತ್ಯವಿರುವ ಪದವಿ ಶಿಕ್ಷಣದ ವಿದ್ಯಾರ್ಥಿಗಳಿಗೆ ಬೆಂಜಮಿನ್ ಎ.ಗಿಲ್ಮನ್ ಶಿಷ್ಯವೇತನ ನೀಡುತ್ತದೆ, ಯು.ಎಸ್. ಫಾರಿನ್ ಲಾಂಗ್ವೇಜ್ ಸ್ಟಡಿ ಅಬ್ರಾಡ್ ಬೆಂಬಲಕ್ಕೆ ಕ್ರಿಟಿಕಲ್ ಲಾಂಗ್ವೇಜ್ ಸ್ಕಾಲರ್‌ಶಿಪ್ ಪ್ರೋಗ್ರಾಮ್ ಮತ್ತು 400ಕ್ಕೂ ಹೆಚ್ಚು ಸಲಹಾ ಕೇಂದ್ರಗಳಿಗೆ ವಿಶ್ವದಾದ್ಯಂತ ಎಜುಕೇಷನ್‌ಯುಎಸ್‌ಎ ಜಾಲದ ಮೂಲಕ ಅಮೇರಿಕದಲ್ಲಿ ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತದೆ. ಕೋವಿಡ್-19 ಸಾಂಕ್ರಾಮಿಕ ಪ್ರಾರಂಭದಿಂದ ಇಸಿಎ ತನ್ನ ವಿನಿಮಯ ಕಾರ್ಯಕ್ರಮಗಳನ್ನು ಪುನಶ್ಚೇತನಗೊಳಿಸಿದ್ದು ಅರೆಕಾಲಿಕ ಮತ್ತು ಪೂರ್ಣಕಾಲಿಕ ವರ್ಚುಯಲ್ ಕಾಂಪೊನೆಂಟ್ಸ್ ಅಥವಾ ಯಥಾಸ್ಥಿತಿಗೆ ಮರಳುವವರೆಗೆ ಅಂತಹ ವಿನಿಮಯಗಳನ್ನು ಮುಂದೂಡಿತ್ತು. ಡಿಪಾರ್ಟ್ಮೆಂಟ್ ಆಫ್ ಸ್ಟೇಟ್‌ ನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯ ಚಟುವಟಿಕೆಗಳ ಕುರಿತು ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ: eca.state.gov

click me!