ಯುಪಿಎಸ್‌ಸಿ ಫಲಿತಾಂಶ: 12 ಅಂಕದಿಂದ ವಂಚಿತಳಾಗಿದ್ದ 'ಶಕ್ತಿ ದುಬೆ' ಈಗ ದೇಶಕ್ಕೆ ಟಾಪರ್!

Published : Apr 22, 2025, 09:58 PM ISTUpdated : Apr 22, 2025, 10:21 PM IST
ಯುಪಿಎಸ್‌ಸಿ ಫಲಿತಾಂಶ: 12 ಅಂಕದಿಂದ ವಂಚಿತಳಾಗಿದ್ದ 'ಶಕ್ತಿ ದುಬೆ' ಈಗ ದೇಶಕ್ಕೆ ಟಾಪರ್!

ಸಾರಾಂಶ

ಐದನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರಯಾಗ್‌ರಾಜ್‌ನ ಶಕ್ತಿ ದುಬೆ, ಲಕ್ಷಾಂತರ ಅಭ್ಯರ್ಥಿಗಳನ್ನು ಹಿಂದಿಕ್ಕಿದ್ದಾರೆ. ಕಳೆದ ಬಾರಿ ಕೇವಲ 12 ಅಂಕಗಳಿಂದ ವಂಚಿತರಾಗಿದ್ದರೂ ಛಲ ಬಿಡದೆ ಮತ್ತೆ ಪ್ರಯತ್ನಿಸಿ ಯಶಸ್ಸು ಗಳಿಸಿದ್ದಾರೆ. ತಂದೆಯ ಬೆಂಬಲ, ಶ್ರಮ ಮತ್ತು ದೃಢಸಂಕಲ್ಪದಿಂದ ಈ ಸಾಧನೆ ಸಾಧ್ಯವಾಗಿದೆ. ಇದು ಯುವಜನತೆಗೆ ಸ್ಫೂರ್ತಿ.

ಯುಪಿಎಸ್‌ಸಿ ಭಾರತೀಯ ನಾಗರೀಕ ಸೇವೆ ಪರೀಕ್ಷೆ 2024ರ ಫಲಿತಾಂಶ ಪ್ರಕಟವಾದೊಡನೆ, ಪ್ರಯಾಗ್‌ರಾಜ್‌ನ ಶಕ್ತಿ ದುಬೆ ಹೆಸರು ಎಲ್ಲೆಡೆ ಕೇಳಿಬಂದಿತು. ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಲಕ್ಷಾಂತರ ಅಭ್ಯರ್ಥಿಗಳನ್ನು ಹಿಂದಿಕ್ಕಿ ಶಕ್ತಿ ದುಬೆ ಎನ್ನುವ ಯುವತಿ ಅಗ್ರಸ್ಥಾನ ಪಡೆದಿದ್ದಾರೆ. ಆದರೆ, ಈ ಶಕ್ತಿ ದುಬೆಯ ಕೌಟುಂಬಿಕ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಿನ್ನೆಲೆಯನ್ನು ನೀವೊಮ್ಮ ನೋಡಲೇಬೇಕು. ಕಾರಣ ನಾನೂ ಐಎಎಸ್ ಅಧಿಕಾರಿ ಆಗಬೇಕೆನ್ನಿವವರಿಗೆ ಕಳೆದ ಬಾರಿ 12 ಅಂಕಗಳಿಂದ ವಂಚತಳಾಗಿದ್ದ ಶಕ್ತಿ ದುಬೆಯ ಈ ಬಾರಿ ದೇಶಕ್ಕೆ ಯುಪಿಎಸ್‌ಸಿ ಟಾಪರ್ ಆಗಿರುವ ಛಲ ನಿಮಗೆ ಪ್ರೇರಣೆಯೂ ಆಗಬಹುದು.

ಶಕ್ತಿ ದುಬೆ ರಾಜಕೀಯ ವಿಜ್ಞಾನ ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದ ಶಕ್ತಿ ತಮ್ಮ 5ನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಬಾರಿ ಒಟ್ಟು 1009 ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶಕ್ತಿಯ ಯಶಸ್ಸಿನ ಹಿಂದೆ ಒಂದು ದೀರ್ಘ ಹೋರಾಟದ ಕಥೆಯಿದೆ.

ಫಲಿತಾಂಶ ನೋಡಿ ಇದು ಕನಸು ಎಂಬಂತಾಗಿತ್ತು: ದೇಶದ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ವಂದಾಗ, ಶಕ್ತಿ ದುಬೆ ಮೊದಲು ತಮ್ಮ ತಂದೆಗೆ ಕರೆ ಮಾಡಿದರು. ನಂತರ ತಾಯಿಗೆ ತಿಳಿಸಿದರು. ಆದರೆ ಅವರಿಗೆ ಸ್ವಲ್ಪ ಸಮಯದವರೆಗೆ ನಂಬಲಾಗಲಿಲ್ಲ. ಈ 'ಪಟ್ಟಿ ನೋಡಿ ನನಗೆ ಭಯವಾಯಿತು, ಎಲ್ಲೋ ಏನಾದರೂ ತಪ್ಪಾಗಿದೆಯೇ ಎಂದುಕೊಂಡರು. ನಂತರ ಸಂಸ್ಥೆಯಿಂದ ಕರೆ ಬಂದು ರೋಲ್ ಸಂಖ್ಯೆಯನ್ನು ಪರಿಶೀಲಿಸಿ ನಾನೇ ಅಗ್ರಸ್ಥಾನ ಪಡೆದಿರುವುದನ್ನು ದೃಢಪಡಿಸಿದರು' ಎಂದು ಹೇಳಿದರು.

ಇದನ್ನೂ ಓದಿ: ಯುಪಿಎಸ್‌ಸಿ ಪಾಸಾದ 20 ಕನ್ನಡಿಗರು! ಟಾಪರ್‌ಗಳ ಶೈಕ್ಷಣಿಕ ಹಿನ್ನೆಲೆ ಇಲ್ಲಿದೆ ನೋಡಿ!

ಕಳೆದ ಬಾರಿ 12 ಅಂಕಗಳಿಂದ ವಂಚಿತ: ಶಕ್ತಿಯ ಯಶಸ್ಸಿನ ಹಾದಿ ಸುಲಭವಾಗಿರಲಿಲ್ಲ. ಕಳೆದ ವರ್ಷ ಅವರು ಸಂದರ್ಶನಕ್ಕೆ ತಲುಪಿದ್ದರು. ಆದರೆ ಅಂತಿಮ ಕಟ್-ಆಫ್‌ಗಿಂತ ಕೇವಲ 12 ಅಂಕಗಳು ಕಡಿಮೆ ಬಂದಿದ್ದವು. ಸೋಲೊಪ್ಪಿಕೊಳ್ಳುವ ಬದಲು, ತಮ್ಮ ತಯಾರಿಯನ್ನು ಇನ್ನಷ್ಟು ಬಲಪಡಿಸಿಕೊಂಡರು. 'ನಾನು ಒಂದು ದಿನ ಅಗ್ರಸ್ಥಾನ ಪಡೆಯುತ್ತೇನೆ ಎಂದು ನನ್ನ ಸಹೋದರ ಹೇಳಿದ್ದರು. ಅವರ ಮಾತು ನಿಜವಾಯಿತು' ಎಂದು ಶಕ್ತಿ ದುಬೆ ಹೇಳಿಕೊಂಡಿದ್ದಾರೆ.

ತಂದೆ ಪ್ರಮುಖ ಪಾತ್ರ ವಹಿಸಿದ್ದಾರೆ: ಶಕ್ತಿ ದುಬೆ ಅವರ ತಂದೆ ದೇವೇಂದ್ರ ಕುಮಾರ್ ದುಬೆ ಅವರು ತಮ್ಮ ಮಗಳ ಸಾಧನೆಯ ಬಗ್ಗೆ 'ನಾನು ಅವಳ ಅಗತ್ಯಗಳನ್ನು ಪೂರೈಸಿದೆ, ಉಳಿದದ್ದೆಲ್ಲ ಅವಳ ಶ್ರಮ ಮತ್ತು ದೇವರ ಆಶೀರ್ವಾದ. ಇಂದು ಅವಳ ಕನಸು ಮತ್ತು ನಮ್ಮ ಹೆಮ್ಮೆ ಒಟ್ಟಿಗೆ ಈಡೇರಿದೆ' ಎಂದು ಹೇಳಿದರು.

ದೇಶಾದ್ಯಂತ ಅಭಿನಂದನೆಗಳ ಮಹಾಪೂರ: ಯುಪಿಎಸ್‌ಸಿ ಅಗ್ರಸ್ಥಾನ ಪಡೆದ ತಕ್ಷಣ, ಶಕ್ತಿ ದುಬೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಲು ಪ್ರಾರಂಭಿಸಿದರು. ದೇಶಾದ್ಯಂತ ರಾಜಕಾರಣಿಗಳು, ಶಿಕ್ಷಕರು, ಮಾಜಿ ನಾಗರಿಕ ಸೇವಕರು ಮತ್ತು ಸಾರ್ವಜನಿಕರು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಪ್ರಯಾಗ್‌ರಾಜ್ ಮತ್ತೊಮ್ಮೆ ಶಿಕ್ಷಣ ಕ್ಷೇತ್ರದಲ್ಲಿ ಹೊಳೆಯಿತು. ಇದು ಕೇವಲ ಒಬ್ಬ ಅಗ್ರಸ್ಥಾನ ಪಡೆದವರ ಕಥೆಯಲ್ಲ, ಆದರೆ ಪದೇ ಪದೇ ಬಿದ್ದರೂ ಎದ್ದು ನಿಲ್ಲುವ ಛಲದ ಕಥೆ. ಶಕ್ತಿ ದುಬೆ ಈಗ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ, ಛಲ ಇದ್ದರೆ ಯಾವುದೇ ಗುರಿ ದೂರವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ: ಯುಪಿಎಸ್‌ಸಿ ರಿಸಲ್ಟ್‌ ಔಟ್‌, ಪ್ರಯಾಗ್‌ರಾಜ್‌ನ ಶಕ್ತಿ ದುಬೆ ಟಾಪರ್‌!

ಪ್ರಯಾಗ್‌ರಾಜ್‌ ಬೀದಿಗಳಲ್ಲಿ ಆಡಿಕೊಂಡು ಬೆಳೆದ ಹುಡುಗಿ ಶಕ್ತಿ ದುಬೆ ದೇಶದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ್ದಾಳೆ. ಈಕೆಯ ಯಶಸ್ಸು ಕೇವಲ ಒಂದು ಶ್ರೇಣಿಯಲ್ಲ, ಒಂದು ಸ್ಫೂರ್ತಿ. ಪ್ರಯಾಗ್‌ರಾಜ್‌ನ ಪ್ರತಿಭಾವಂತ ವಿದ್ಯಾರ್ಥಿನಿ ಶಕ್ತಿ ದುಬೆ ಅಖಿಲ ಭಾರತದಲ್ಲಿ ಪ್ರಥಮ ಸ್ಥಾನ ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ವರ್ಷ ಯುಪಿಎಸ್ಸಿ ಪರೀಕ್ಷೆಗೆ ಸುಮಾರು 5 ರಿಂದ 6 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ 2,845 ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಮತ್ತು ಸಂದರ್ಶನಕ್ಕೆ ತಲುಪಿದರು. ಕೊನೆಯದಾಗಿ 1,009 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಇವರಲ್ಲಿ ಶಕ್ತಿ ದುಬೆ ಅಗ್ರಸ್ಥಾನದಲ್ಲಿದ್ದಾರೆ. ಛಲ ಬಿಡದೇ ಓದಿ ರ‍್ಯಾಂಕ್ ಬರಬೇಕೆಂಬ ಗುರಿ ಈಡೇರಿದೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ