ಕೃಷಿ ವಿವಿಯ ಆವರಣದಲ್ಲಿನ ವಸತಿ ನಿಲಯದಲ್ಲಿ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ ರಾಯಚೂರು ಕೃಷಿ ವಿವಿಯ ಕುಲಸಚಿವರು
ರಾಯಚೂರು(ಫೆ.17): ವಿದ್ಯಾರ್ಥಿಗಳ ಪ್ರತಿಭಟನೆಗೆ ಬ್ರೇಕ್ ಹಾಕಲು ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಹೊಸ ಪ್ಲಾನ್‌ವೊಂದನ್ನ ಮಾಡಿದೆ. ಹೌದು, ಪ್ರತಿಭಟನೆ ಕುಳಿತ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಇಂದಿನಿಂದ ಬಿ.ಟೆಕ್ ತಾಂತ್ರಿಕ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಭೋಜನ ವ್ಯವಸ್ಥೆಯನ್ನ ಸ್ಥಗಿತ ಮಾಡಲಾಗಿದೆ. ಕೃಷಿ ವಿವಿಯ ಆವರಣದಲ್ಲಿನ ವಸತಿ ನಿಲಯದಲ್ಲಿ ಪ್ರವೇಶ ನಿಷೇಧಿಸಿ ರಾಯಚೂರು ಕೃಷಿ ವಿವಿಯ ಕುಲ ಸಚಿವರು ಆದೇಶ ಹೊರಡಿಸಿದ್ದಾರೆ.
ಕಳೆದ 30 ದಿನಗಳಿಂದ ರಾಯಚೂರು ಕೃಷಿ ವಿವಿಯ ಬಿ.ಟೆಕ್ (ತಾಂತ್ರಿಕ) ವಿಭಾಗದ ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ಕುಳಿತಿದ್ದಾರೆ. ಸರ್ಕಾರದ AO ಮತ್ತು AAO ಹುದ್ದೆಯಲ್ಲಿ ಶೇ. 15ರಷ್ಟು ಮೀಸಲಾತಿ ನೀಡಬೇಕು. ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪನೆಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
undefined
ದ್ವಿತೀಯ ಪಿಯು ಪ್ರವೇಶ ಪತ್ರದಲ್ಲಿ ತಪ್ಪಾಗಿದೆಯೇ.?: ತಿದ್ದುಪಡಿಗೆ ಈ ನಂಬರ್‌ಗೆ ಕರೆ ಮಾಡಿ
ತರಗತಿಗೆ ಬಹಿಷ್ಕಾರ ಹಾಕಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಶೈಕ್ಷಣಿಕ ಮಾಹಿತಿ ಮತ್ತು ನಿಯಮಾವಳಿ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯಕ್ಕೆ ನಿಷೇಧ ಹೇರಲಾಗಿದೆ.