ದ್ವಿತೀಯ ಪಿಯು ಪ್ರವೇಶ ಪತ್ರದಲ್ಲಿ ತಪ್ಪಾಗಿದೆಯೇ.?: ತಿದ್ದುಪಡಿಗೆ ಈ ನಂಬರ್‌ಗೆ ಕರೆ ಮಾಡಿ

By Sathish Kumar KHFirst Published Feb 16, 2023, 5:56 PM IST
Highlights

ದ್ವಿತೀಯ ಪಿಯು ಅಂತಿಮ ಪರೀಕ್ಷೆಯ ಪ್ರವೇಶಪತ್ರ ಪ್ರಕಟ
ಪ್ರವೇಶ ಪತ್ರದಲ್ಲಿ ಹೆಸರು, ಇತ್ಯಾದಿ ತಪ್ಪುಗಳಿದ್ದರೆ ತಿದ್ದುಪಡಿ ಮಾಡಿಸಿ
ಅಡ್ಮಿಷನ್‌ ಟಿಕೆಟ್‌ನಲ್ಲಿರುವ ತಪ್ಪುಗಳ ತಿದ್ದುಪಡಿಗೆ ಫೆ.20 ಕೊನೆಯ ದಿನ

ಬೆಂಗಳೂರು (ಫೆ.16): ಮಾರ್ಚ್‌ ತಿಂಗಳಲ್ಲಿ ನಡೆಯಲಿರುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಕಟಿಸಿದೆ. ಈ ಎಲ್ಲ ಪ್ರವೇಶ ಪರೀಕ್ಷೆಗಳನ್ನು ಪಡೆದುಕೊಂಡು ತಪ್ಪಿದ್ದರೆ ತಿದ್ದುಪಡಿಗಾಗಿ, ಶಾಖಾಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಯಲ್ಲಿ ಮಾಹಿತಿ ನೀಡಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕರು, ಮಾರ್ಚ್ 2023ರಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣ https://kseab.karnataka.gov.in ನಲ್ಲಿ ಬಿಡುಗಡೆ ಮಾಡಲಾಗಿದೆ. ಆಯಾ ಕಾಲೇಜುಗಳ ಮುಖ್ಯಸ್ಥರು, ಆಡಳಿತ ವಿಭಾಗ ಮತ್ತು ಪ್ರಾಂಶುಪಾಲರು ಪಿಯು ಪರೀಕ್ಷೆ ಪೋರ್ಟಲ್ ಲಾಗಿನ್ ಆಗಿ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲು ಸೂಚಿಸಲಾಗಿದೆ.

ದ್ವಿತೀಯ ಪಿಯು ಪರೀಕ್ಷೆ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನದಲ್ಲಿ ಬದಲಾವಣೆ: ‘1 ಅಂಕ’ ಹೆಚ್ಚು ಬಂದರೂ ಪರಿಗಣನೆ

ಪ್ರವೇಶ ಪತ್ರ ತಿದ್ದುಪಡಿಗೆ ಫೆ.20 ಕೊನೆಯ ದಿನ: ರಾಜ್ಯದ ಎಲ್ಲ ಕಾಲೇಜುಗಳಲ್ಲಿ ನೀಡಲಾಗುವ ಪ್ರವೇಶ ಪತ್ರಗಳನ್ನು ದಿನಾಂಕ 24-02-2023ರೊಳಗೆ ವಿದ್ಯಾರ್ಥಿಗಳಿಗೆ ವಿತರಿಸುವಂತೆ ಸೂಚನೆ ನೀಡಲಾಗಿದೆ. ಇಂದಿನಿಂದಲೇ ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಂಡು ವಿತರಣೆ ಮಾಡಲು ಅನುಮತಿಯನ್ನೂ ನೀಡಿದೆ. ಹೀಗೆ ವಿತರಣೆ ಮಾಡಲಾದ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಹೆಸರು, ತಂದೆಯ ಹೆಸರು ಇತ್ಯಾದಿ ಯಾವುದಾದರೂ ತಪ್ಪುಗಳಿದ್ದರೆ ಈ ಬಗ್ಗೆ ಕೂಡಲೇ ಜಿಲ್ಲಾವಾರು ಜೀಡಲಾಗಿರುವ ಶಾಖಾಧಿಕಾರಿಗಳಿಗೆ ಕರೆ ಮಾಡಿ ತಿದ್ದುಪಡಿ ಮಾಡಿಸಿಕೊಳ್ಳಬೇಕು. ಇನ್ನು ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರದಲ್ಲಿ ತಪ್ಪಿದ್ದರೆ ದಿನಾಂಕ 20-02-2023ರೊಳಗಾಗಿ ಜಿಲ್ಲಾವಾರು ಸೂಚಿಸಲಾದ ಶಾಖಾಧಿಕಾರಿಗಳನ್ನು ಸಂಪರ್ಕಿಸುಬೇಕು ಎಂದು ನಿರ್ದೇಶನ ನೀಡಲಾಗಿದೆ.

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ
09-03-2023, ಗುರುವಾರ – ಕನ್ನಡ, ಅರೇಬಿಕ್
11-03-2023, ಶನಿವಾರ – ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ
13-03-2023, ಸೋಮವಾರ – ಅರ್ಥಶಾಸ್ತ್ರ
14-03-2023, ಮಂಗಳವಾರ – ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
15-03-2023, ಬುಧವಾರ – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
16-03-2023, ಗುರುವಾರ – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
17-03-2023, ಶುಕ್ರವಾರ – ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್
18-03-2023, ಶನಿವಾರ – ಭೂಗೋಶಶಾಸ್ತ್ರ, ಜೀವಶಾಸ್ತ್ರ
20-03-2023, ಸೋಮವಾರ – ಇತಿಹಾಸ, ಭೌತಶಾಸ್ತ್ರ
21-03-2023, ಮಂಗಳವಾರ – ಹಿಂದಿ
23-03-2023, ಗುರುವಾರ – ಇಂಗ್ಲೀಷ್
25-03-2023 ಶನಿವಾರ – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
27-03-2023, ಸೋಮವಾರ – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
29-03-2023, ಬುಧವಾರ – ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಎಲ್‌ಕೆಜಿಯಿಂದ ಪಿಯುಸಿವರೆಗೆ ಫ್ರೀ ಶಿಕ್ಷಣ: ಎಚ್‌ಡಿಕೆ ಭರವಸೆ

click me!