ಘೋಷಣೆಯಾಗದ ಹೊಸ ಆಯ್ಕೆಪಟ್ಟಿ: ವಿದ್ಯಾರ್ಥಿಗಳು ಹೈರಾಣು!

By Ravi Nayak  |  First Published Aug 8, 2022, 12:06 PM IST

 ರಾಜ್ಯಾದ್ಯಂತ ಶಾಲೆಗಳು ಮೇ.16ರಿಂದ ಆರಂಭವಾಗಿದ್ದು, ಮಕ್ಕಳ ಕಲಿಕೆಗೆ ಯೋಗ್ಯವಾಗಿದ್ದ ವಸತಿ ನಿಲಯಗಳಲ್ಲಿ ಇನ್ನು ಹೊಸ ಆಯ್ಕೆಪಟ್ಟಿಘೋಷಣೆ ಮಾಡದಿರುವುದಕ್ಕೆ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ


ಗುರುಮಠಕಲ್‌ (ಆ.8) : ರಾಜ್ಯಾದ್ಯಂತ ಶಾಲೆಗಳು ಮೇ.16ರಿಂದ ಆರಂಭವಾಗಿದ್ದು, ಮಕ್ಕಳ ಕಲಿಕೆಗೆ ಯೋಗ್ಯವಾಗಿದ್ದ ವಸತಿ ನಿಲಯಗಳಲ್ಲಿ ಇನ್ನು ಹೊಸ ಆಯ್ಕೆಪಟ್ಟಿಘೋಷಣೆ ಮಾಡದಿರುವುದಕ್ಕೆ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಒಟ್ಟು 15 ಸರಕಾರಿ ಮೆಟ್ರಿಕ್‌ ಪೂರ್ವ ವಸತಿ ನಿಲಯಗಳಿವೆ. 6ರಿಂದ 10ನೇ ತರಗತಿವರೆಗೆ ಓದುತ್ತಿರುವ ಒಟ್ಟು 750ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳು ಆಶ್ರಯವಾಗಿವೆ. ಆದರೆ, ಪ್ರಸ್ತುತ ಸಾಲಿನಲ್ಲಿ ಆಯ್ಕೆಪಟ್ಟಿಬಿಡುಗಡೆ ಮಾಡಲು ವಸತಿ ನಿಲಯ ಮೇಲ್ವಿಚಾರಕರು ತಡ ಮಾಡುತ್ತಿರುವುದರಿಂದ ಪಾಲಕರು ಆತಂಕದಲ್ಲಿದ್ದಾರೆ. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಇದರಿಂದ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತಿವೆ.

ಮೊರಾರ್ಜಿ ವಸತಿ ಶಾಲೆ ಪಿಯುವರೆಗೆ ವಿಸ್ತರಣೆಗೆ ತೀರ್ಮಾನ: ಸಚಿವ ಕೋಟ

Tap to resize

Latest Videos

ತಾಲೂಕಿನ ಗುರುಮಠಕಲ್‌, ಚಂಡರಕಿ, ಗಾಜರಕೋಟ್‌, ಪುಟಪಾಕ್‌, ಅನಪೂರ, ಕೊಂಕಲ್‌, ಎಲ್ಹೇರಿ, ಯಲ್ಲಸತ್ತಿ ಸೇರಿದಂತೆ ಒಟ್ಟು 15 ವಸತಿ ನಿಲಯಗಳಲ್ಲಿ ಕೆಲವು ಹಳ್ಳಿಗಳಲ್ಲಿ ಆಯ್ಕೆಪಟ್ಟಿಬಿಡುಗಡೆ ಮಾಡಿದೆ. ಆದರೆ, ಇನ್ನು ಕೆಲ ಕಡೆ ಆಯ್ಕೆಪಟ್ಟಿಘೋಷಿಸಿರುವುದಿಲ್ಲ ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಆಯ್ಕೆಪಟ್ಟಿವಿಳಂಬ:

ಶಾಲೆಗಳು ಆರಂಭವಾದ ನಂತರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸತಿ ನಿಲಯಗಾಗಿ ಅರ್ಜಿಯನ್ನು ಜೂನ್‌ 30 ಕೊನೆ ದಿನಾಂಕದÜವರೆಗೆ ಆಹ್ವಾನಿಸಲಾಗಿತ್ತು. ತದನಂತರ ಒಂದು ವಾರದಲ್ಲಿ ಅಂತಿಮ ಪಟ್ಟಿಆಯಾ ಸ್ಥಳದ ವಸತಿ ನಿಲಯ ಗೋಡೆಗಳಿಗೆ ಅಂಟಿಸಬೇಕಿತ್ತು. ಅಂತಿಮ ಪಟ್ಟಿಆದ ನಂತರ ಇನ್ನೊಂದು ವಾರದಲ್ಲಿ ಎರಡನೇ ಆಯ್ಕೆಪಟ್ಟಿಬಿಡುಗಡೆ ಮಾಡಬೇಕು. ಆದರೆ, ಇಲ್ಲಿ ಯಾವುದೇ ಆಯ್ಕೆಪಟ್ಟಿಯನ್ನು ಇನ್ನು ಬಿಡುಗಡೆ ಮಾಡಿಲ್ಲ. ಹಲವು ಅನುಮಾನಗಳಿಗೆ ಕಾರಣವಾಗಿದೆ ಎನ್ನಲಾಗಿದೆ.

ವಿದ್ಯಾರ್ಥಿಗಳಿಗೆ ತೊಂದರೆ:

ಗಾಜರಕೋಟ್‌, ಚಂಡರಕಿ, ಕೊಂಕಲ್‌, ಪುಟಪಾಕ್‌ ಬೆರಳಣಿಕೆ ವಸತಿ ನಿಲಯಗಳಲ್ಲಿ ಅಂತಿಮ ಆಯ್ಕೆಪಟ್ಟಿಬಿಡುಗಡೆ ಮಾಡಲಾಗಿದೆ. ಇನ್ನು ಹಲವು ವಸತಿ ನಿಲಯಗಳಲ್ಲಿ ಬಾಕಿ ಇವೆ. ಇದರ ಕುರಿತು ಮೇಲ್ವಿಚಾರಕರಿಗೆ ವಿಚಾರಿಸಿದರೆ ಕೆಲವು ಟೆಕ್ನಿಕಲ್‌ ತೊಂದರೆಯಿಂದ ಪಟ್ಟಿಘೋಷಿಸಿಲ್ಲ. ಆದರೆ, ಆಯ್ಕೆಪಟ್ಟಿಅಂತಿಮವಾಗಿದೆ ಎನ್ನುತ್ತಾರೆ.

Shivamogga: ವಸತಿ ಶಾಲೆಯಲ್ಲಿ ಗ್ಯಾಸ್ ಲೀಕ್: ಹಾಸ್ಟೆಲ್‌ನಿಂದ ಓಡೋಡಿ ಬಂದ ಮಕ್ಕಳು..!

ಇನ್ನು ಕೆಲವರು ಪಟ್ಟಿಘೋಷಿಸಲು ತಡವಾಗುತ್ತಿರುವುದು ಕಂಡು ಯಾವ ವಿದ್ಯಾರ್ಥಿಗಳು ಖಚಿತವಾಗಿ ಆಯ್ಕೆಯಾಗುತ್ತಾರೆ ಎಂಬುವರನ್ನು ಕರೆದು ದಾಖಲಾತಿ ಪಡೆದು ಅವರಿಗೆ ವಸತಿ ನಿಲಯಕ್ಕೆ ಇರಲು ಅವಕಾಶ ಕಲ್ಪಿಸಿದ್ದೇವೆ. ಆಯ್ಕೆಯಾಗಲಾರದವರಿಗೆ ಆಯ್ಕೆಪಟ್ಟಿಘೋಷಿಸಿಲ್ಲದಿರುವುದು ತೊಂದರೆಯಾಗಿದೆ. ಆದರೂ ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಕೊರೋನಾ ನಂತರ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ಕ್ಲಾಸ್‌ಗಳು ನಡೆಯುತ್ತಿವೆ. ಆದರೆ, ವಸತಿ ನಿಲಯವನ್ನು ಅವಲಂಬಿಸಿದ ಮಕ್ಕಳು ಶಾಲೆಗೆ ಬಾರದಿರುವುದರಿಂದ ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಮಕ್ಕಳಗಾಗಿ ನಾವು ಮೇಲ್ವಿಚಾರಕರಿಗೆ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮೌಖಿಕವಾಗಿ ವಿಚಾರಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಶಿಕ್ಷಕ ರಮೇಶ ತಿಳಿಸಿದ್ದಾರೆ.

ಒತ್ತಾಯ:

ಕೂಡಲೇ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಶೀಘ್ರದಲ್ಲಿ ವಸತಿ ನಿಲಯಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆಪಟ್ಟಿಬಿಡುಗಡೆ ಮಾಡಿ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ ಹಾಗೂ ಶಾಲೆಗಳು ಆರಂಭವಾಗಿ ಎರಡು ತಿಂಗಳ ಮೇಲಾಗಿದೆ. ಬಸ್‌ ಪಾಸ್‌ ವ್ಯವಸ್ಥೆ ಕಲ್ಪಿಸಲು ನಮ್ಮ ಹತ್ತಿರ ಹಣವಿಲ್ಲ. ದಿನನಿತ್ಯ ಬಸ್‌-ಖಾಸಗಿ ವಾಹನಗಳಿಂದ ಶಾಲೆಗೆ ಹೋಗಿ ಬರಲು ನಮ್ಮ ಮಕ್ಕಳಿಗೆ ಕಷ್ಟಕರವಾಗಿದೆ. ಅದಕ್ಕಾಗಿ ವಸತಿ ನಿಲಯದಲ್ಲಿ ಆಯ್ಕೆಯಾಗುವರೆಗೆ ನಮ್ಮ ಮಕ್ಕಳನ್ನು ಶಾಲೆಗೆ ಕಳಿಹಿಸುವುದಿಲ್ಲ ಎಂದು ಹಣಮಂತು ಕೆ.ಇಡ್ಲೂರ ಪಾಲಕರು ಹೇಳಿದ್ದಾರೆ.

15 ದಿನಗಳ ಹಿಂದೆಯೇ ಆಯ್ಕೆಪಟ್ಟಿಆಯಾ ವಸತಿ ನಿಲಯದ ಮೇಲ್ವಿಚಾರಕರಿಗೆ ನೀಡಲಾಗಿದೆ. ಅವರನ್ನು ವಿಚಾರಿಸಿ ಅಷ್ಟೇಲ್ಲ ಈ ಬಾರಿ ಗುರುಮಠಕಲ್‌ನ ವಸತಿ ನಿಲಯಗಳಿಗೆ 50 ವಿದ್ಯಾರ್ಥಿಗಳ ಹೆಚ್ಚುವರಿಯಾಗಿ ಆಯ್ಕೆಮಾಡಲಾಗಿದೆ.

- ರಾಮಚಂದ್ರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯಾದಗಿರಿ

 

ಕೆಲವು ಕಾರಣಗಳಿಂದ ವಸತಿ ನಿಲಯದಲ್ಲಿ ಆಯ್ಕೆಪಟ್ಟಿಘೋಷಿಸಿಲ್ಲ. ಆದರೂ ಆಯ್ಕೆಯಾಗಿದ್ದ ವಿದ್ಯಾರ್ಥಿಗಳನ್ನು ನಾವು ಕರೆಯಿಸಿಕೊಂಡು ಅನುಕೂಲ ಕಲ್ಪಿಸಿದ್ದೇವೆ. ಆದಷ್ಟುಬೇಗ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ.

- ಶ್ರೀಹರಿ ಘಂಟಿ, ಮೇಲ್ವಿಚಾರಕರು, ಬಾಲಕರ ವಸತಿ ನಿಲಯ ಗುರುಮಠಕಲ್‌.

click me!