ಟ್ವಿಟರ್‌ ಮೂಲಕ ಯುಜಿಸಿ ಎನ್ಇಟಿ ಎಕ್ಸಾಮ್ ಡೇಟ್ ಪ್ರಕಟಿಸಿದ ಕೇಂದ್ರ ಸಚಿವ

By Suvarna News  |  First Published Feb 3, 2021, 12:37 PM IST

ಯುಜಿಸಿ ಎನ್ಇಟಿ ಪರೀಕ್ಷೆಗಳು ಯಾವಾಗ ನಡೆಯಲಿವೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಈ ಪರೀಕ್ಷೆಯ ಬಗ್ಗೆ ಅಭ್ಯರ್ಥಿಗಳಲ್ಲಿ ತುಸು ಆತಂಕವಿತ್ತು. ಅದೀಗ ನಿರಾಳವಾಗಿದೆ. ಮೇ 2ರಿಂದ ಯುಜಿಸಿ ಎನ್ಇಟಿ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರ ಶಿಕ್ಷಣ ಸಚಿವರು ಟ್ವಿಟರ್‌ ಮೂಲಕ ಪ್ರಕಟಿಸಿದ್ದಾರೆ.


ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಸಹಾಯಕ ಪ್ರಾಧ್ಯಾಪಕರ ಆಯ್ಕೆಗೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಮೇ 2ನೇ ತಾರೀಖಿನಿಂದ ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ಪರೀಕ್ಷೆಗಳು ಶುರುವಾಗಲಿವೆ ಎಂದು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.

ಕೋವಿಡ್ ಕಾರಣದಿಂದ ಪರೀಕ್ಷೆಗಳು ನಡೆಯುವ ಬಗ್ಗೆ ಅನೇಕ ಅನುಮಾನಗಳಿದ್ದವು. ಆದರೆ, ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಇದೀಗ ಎಲ್ಲ ಅನುಮಾನಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದು, ಎನ್‌ಇಟಿ  ಪರೀಕ್ಷೆ ನಡೆಸುವ ದಿನಾಂಕವನ್ನು ಘೋಷಿಸಿದ್ದಾರೆ. ಇದರಿಂದ ಮೊದಲೇ ನಿಖರವಾಗಿ ದಿನಾಂಕ ಘೋಷಿಸಿದ ಪರಿಣಾಮ ಅಭ್ಯರ್ಥಿಗಳು ಇದೀಗ ನಿರಾಳವಾಗಿ ತಮ್ಮ ಪರೀಕ್ಷಾ ತಯಾರಿಯಲ್ಲಿ ತೊಡಗಬಹುದಾಗಿದೆ. ಇಲ್ಲದಿದ್ದರೆ ಅಭ್ಯರ್ಥಿಗಳು ಅನುಮಾನದಲ್ಲಿ ದಿನಗಳನ್ನುದೂಡಬೇಕಾಯಿತು. ಈಗ ಇದಕ್ಕೆಲ್ಲ ಅವಕಾಶವಿಲ್ಲ. ಅಭ್ಯರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆಗೆ ಸಜ್ಜಾಗಬಹುದು.

Tap to resize

Latest Videos

undefined

ಸಿಎಜಿಯಲ್ಲಿ 10811 ಹುದ್ದೆ ಖಾಲಿ; ಆಡಿಟರ್, ಅಕೌಂಟೆಂಟ್‌ ಹುದ್ದೆಗೆ ಅರ್ಜಿ ಸಲ್ಲಿಸಿ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಜೂನಿಯರ್ ರಿಸರ್ಚ್ ಫೆಲೋಶಿಪ್ ಹಾಗೂ ಸಹಾಯಕ ಪ್ರಾಧ್ಯಾಪಕ ಅರ್ಹತೆಯ ಯುಜಿಸಿ-ಎನ್ಇಟಿ ಪರೀಕ್ಷೆಗಳನ್ನು 2021 ರ ಮೇ ತಿಂಗಳ 2, 3, 4, 5, 6, 7, 10, 11, 12, 14 & 17 ರಂದು ನಡೆಸಲಾಗುವುದು ಎಂದು ರಮೇಶ್ ಪೊಖ್ರಿಯಾಲ್ ಟ್ವೀಟ್ ಮಾಡಿದ್ದಾರೆ. ಎನ್ ಟಿಎ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾಗಿದ್ದು, ಫೆ.2 ರಂದು ಪರೀಕ್ಷೆ ನಡೆಸುವುದಕ್ಕೆ ಅಧಿಸೂಚನೆ ಹೊರಡಿಸಿದೆ.

ಎನ್‌ಇಟಿ ಪರೀಕ್ಷೆಯು 2 ಪತ್ರಿಕೆಗಳನ್ನು ಒಳಗೊಂಡಿದ್ದು, ಕಂಪ್ಯೂಟರ್ ಆಧಾರಿತ ಟೆಸ್ಟ್ (ಸಿಬಿಟಿ) ಮೋಡ್ ನಲ್ಲೇ ಇರಲಿದೆ. ಪೇಪರ್-1 100 ಅಂಕಗಳದ್ದಾಗಿದ್ದು, 50 ಪ್ರಶ್ನೆಗಳನ್ನ ಒಳಗೊಂಡಿರಲಿದೆ. ಪೇಪರ್-2 200 ಅಂಕಗಳದ್ದಾಗಿದ್ದು, 100 ಎಂಸಿಕ್ಯೂ ಮಾದರಿಯ ಪ್ರಶ್ನೆಗಳಿರುತ್ತವೆ. ಎರಡು ಪಾಳಿಯಲ್ಲಿ ಪರೀಕ್ಷೆಯನ್ನು ನಡೆಸಲಿದ್ದು, ಪ್ರತಿಯೊಂದಕ್ಕೂ 3 ಗಂಟೆಯ ಕಾಲಾವಧಿ ಇರಲಿದೆ.  ಪರೀಕ್ಷೆ ಎದುರಿಸುವ ಅಭ್ಯರ್ಥಿಗಳು, ಇಂದಿನಿಂದಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಎಲ್ಲ ಮಾಹಿತಿಗಳನ್ನ ಚೆಕ್ ಮಾಡಿಕೊಳ್ಳಬಹುದು.

ಯುಜಿಸಿ ಎನ್‌ಇಟಿ 2021 ಅರ್ಜಿ ಸಲ್ಲಿಕೆ ದಿನಾಂಕ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಇಂದು ಯುಜಿಸಿ ಎನ್‌ಇಟಿ- 2021 ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಿದೆ. ವಿವರವಾದ ವೇಳಾಪಟ್ಟಿ ಮತ್ತು ಪರೀಕ್ಷೆಯ ನೋಂದಣಿ ದಿನಾಂಕಗಳನ್ನು ಒಳಗೊಂಡಿರುವ ಸುತ್ತೋಲೆಯನ್ನು ಎನ್‌ಟಿಎ ಬಿಡುಗಡೆ ಮಾಡಿದೆ.

ವೆಸ್ಟರ್ನ್ ಸೆಂಟ್ರಲ್ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆ ಖಾಲಿ, ಅರ್ಜಿ ಹಾಕಿ

ಪರೀಕ್ಷೆಗೆ ಹಾಜರಾಗಬೇಕಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ugcnet.nta.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು. ಅಭ್ಯರ್ಥಿಗಳು ಫೆಬ್ರವರಿ 2, 2021 ರಿಂದ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಫೆಬ್ರವರಿ 2, 2021 ರಿಂದ ಮಾರ್ಚ್ 2, 2021 ರವರೆಗೆ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಲು ಅವಕಾಶವಿದೆ. ಜೊತೆಗೆ ಮಾರ್ಚ್ 3, 2021ರೊಳಗೆ ಅರ್ಜಿ ಶುಲ್ಕವನ್ನು ಪಾವತಿಸಬಹುದು.

ಜ್ಯೂನಿಯರ್ ರಿಸರ್ಚ್ ಫೆಲೋಶಿಪ್(ಜೆಆರ್‌ಎಫ್) ಅಥವಾ ಅಸಿಸ್ಟೆಂಟ್ ಪ್ರೊಫೆಸರ್‌ಶಿಪ್ ಅರ್ಹತೆಯು, ಯುಜಿಸಿ ಎನ್‌ಇಟಿ ಪೇಪರ್- I ಮತ್ತು ಪೇಪರ್- II ರಲ್ಲಿ ಅಭ್ಯರ್ಥಿಯ ಒಟ್ಟು ಕಾರ್ಯಕ್ಷಮತೆ ಆಧಾರದ ಮೇಲೆ ಅವಲಂಬಿಸಿರುತ್ತದೆ.

ಅಸಿಸ್ಟೆಂಟ್ ಪ್ರೊಫೆಸರ್‌ಶಿಪ್ ಅರ್ಹತೆ ಪಡೆಯುವ ಅಭ್ಯರ್ಥಿಗಳನ್ನ ಜೆಆರ್‌ಎಫ್‌ಗೆ ಪರಿಗಣಿಸಲಾಗುವುದಿಲ್ಲ. ಅಸಿಸ್ಟೆಂಟ್ ಪ್ರೊಫೆಸರ್‌ಶಿಪ್‌ಗೆ ಅರ್ಹತೆ ಹೊಂದಿದ ಅಭ್ಯರ್ಥಿಗಳು, ಸಂಬಂಧಿತ ಯೂನಿವರ್ಸಿಟಿಸ್/ಕಾಲೇಜುಗಳು/ರಾಜ್ಯ ಸರ್ಕಾರಗಳು ನೇಮಕಾತಿ ಮಾಡಿಕೊಳ್ಳುವ ಹುದ್ದೆಗಳಲ್ಲಿ ಸರ್ಕಾರದ ಎಲ್ಲ ನಿಯಮಗಳನ್ನು ಪಾಲನೆ ಮಾಡಬೇಕು.  ರಮೇಶ್ ಪೋಖ್ರಿಯಾಲ್ ಅವರು ಸಿಬಿಎಸ್ಇ ಎಕ್ಸಾಮ್ 2021 ಡೇಟ್ ಶೀಟ್  ಘೋಷಣೆ ಮಾಡಿದ್ದು, ಬೋರ್ಡ್ ಪರೀಕ್ಷೆಗಳು ಮೇ 4ರಿಂದ ಆರಂಭವಾಗಿ ಜೂನ್ 10ಕ್ಕೆ ಮುಕ್ತಾಯಗೊಳ್ಳಲಿವೆ ಎಂದು ಹೇಳಿದ್ದಾರೆ.

ನೌಕಾಪಡೆಯಲ್ಲಿ ಕೆಲಸ ಮಾಡಬೇಕೆ? ಇಲ್ಲಿವೆ ನೋಡಿ ಖಾಲಿ ಹುದ್ದೆಗಳು

 

click me!