ಗಾಯಾಳು ವಿದ್ಯಾರ್ಥಿನಿಗೆ 1 ಲಕ್ಷ ಪರಿಹಾರದ ಚೆಕ್‌ ನೀಡಿದ ಸಚಿವ ಸುರೇಶ್‌ ಕುಮಾರ್‌

Published : Feb 03, 2021, 09:49 AM IST
ಗಾಯಾಳು ವಿದ್ಯಾರ್ಥಿನಿಗೆ 1 ಲಕ್ಷ ಪರಿಹಾರದ ಚೆಕ್‌ ನೀಡಿದ ಸಚಿವ ಸುರೇಶ್‌ ಕುಮಾರ್‌

ಸಾರಾಂಶ

ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿಗೆ 1 ಲಕ್ಷ ಪರಿಹಾರ| ವಿದ್ಯಾರ್ಥಿನಿ ದಾಖಲಾಗಿರುವ ನಿಮ್ಹಾನ್ಸ್‌ಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಚಿವರು| ಬಾಲಕಿಗೆ ನೆರವಾಗುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ|   

ಬೆಂಗಳೂರು(ಫೆ.03): ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಗೆ ತೆರಳುವಾಗ ಅಪಘಾತಕ್ಕೊಳಗಾಗಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿ ಯಶಸ್ವಿನಿ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖಾ ಸಚಿವ ಎಸ್‌.ಸುರೇಶ್‌ ಕುಮಾರ್‌ 1 ಲಕ್ಷ ಸಹಾಯಧನದ ಚೆಕ್‌ ವಿತರಿಸಿದ್ದಾರೆ. 

ವಿದ್ಯಾರ್ಥಿನಿ ದಾಖಲಾಗಿರುವ ನಿಮ್ಹಾನ್ಸ್‌ಗೆ ಮಂಗಳವಾರ ಕೂಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಚಿವರು, ಸಹಾಯಧನದ ಚೆಕ್‌ ವಿತರಿಸಿ ಬಾಲಕಿಯ ಪೋಷಕರಿಗೆ ಸಮಾಧಾನ ಹೇಳಿದ್ದಾರೆ. 

ರಾಜ್ಯದಲ್ಲಿ ಈ ನಾಲ್ಕು ತರಗತಿಗಳು ಆರಂಭ?

ಬಾಲಕಿಯ ತಂದೆ ಸೆಕ್ಯೂರಿಟಿ ಕೆಲಸ ಮಾಡುತ್ತಿದಾರೆ. ಹೀಗಾಗಿ ಬಾಲಕಿಗೆ ನೆರವಾಗುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಈ ವೇಳೆ ಸಚಿವರು ಸೂಚಿಸಿದರು. ಸಚಿವರಿಂದ ಮಾಹಿತಿ ಪಡೆದುಕೊಂಡಿದ್ದ ನಗರ ಸಂಚಾರ ಜಂಟಿ ಪೊಲೀಸ್‌ ಆಯುಕ್ತರು ಕೂಡ ಬಾಲಕಿಯ ಚಿಕಿತ್ಸೆಗೆ ಧನ ಸಹಾಯ ಮಾಡಿದ್ದಾರೆಂದು ಬಾಲಕಿಯ ತಂದೆ ತಿಳಿಸಿದರು.
 

PREV
click me!

Recommended Stories

ಸರ್ಕಾರಿ ಶಾಲೆಯಲ್ಲೇ ಸ್ಪೋಕನ್‌ ಇಂಗ್ಲಿಷ್‌ ಕ್ರಾಂತಿ: ಕವನ್ ಮೇಷ್ಟ್ರು ಕಲಿಸಿದ ಪಾಠಕ್ಕೆ ಮಕ್ಕಳೇ ಸಾಕ್ಷಿ!
7ನೇ ತರಗತಿ ಮಕ್ಕಳಿಗೂ ಅ,ಆ,ಇ,ಈ ಬರುತ್ತಿಲ್ಲ; ಅಕ್ಷರ ಕಲಿಸದ ಶಿಕ್ಷಕರನ್ನ ಸಸ್ಪೆಂಡ್ ಮಾಡಿ-ಪ್ರದೀಪ್ ಈಶ್ವರ್!