Udupi: ಮಂಗಳೂರು ವಿಶ್ವವಿದ್ಯಾನಿಲಯ ವಿರುದ್ದ ಸಿಡಿದೆದ್ದ ವಿದ್ಯಾರ್ಥಿ ಸಮೂಹ

By Suvarna NewsFirst Published Dec 17, 2022, 8:51 PM IST
Highlights

ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಎಂ.ಜಿ.ಎಂ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಗರಿಷ್ಟ ಅಂಕ 50 ಇರುವ ವಿಷಯದಲ್ಲಿ 53 ಅಂಕ ನೀಡಿ ಆನ್ ಲೈನ್ ನಲ್ಲಿ ಫಲಿತಾಂಶ ಪ್ರಕಟಗೊಂಡಿತ್ತು. ಈ ಬಗ್ಗೆ ವಿವಿಯ ಗಮನಕ್ಕೆ ತಂದರೂ, ಅಂಕಪಟ್ಟಿಯಲ್ಲಿಯೂ ಈ ತಪ್ಪು ಪುನರಾವರ್ತನೆ ಆಗಿದೆ ಎಂದು ಎಬಿವಿಪಿ ಉಡುಪಿ ಘಟಕ ಆರೋಪಿಸಿದೆ.

ಉಡುಪಿ (ಡಿ.17): ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಎಂ.ಜಿ.ಎಂ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಗರಿಷ್ಟ ಅಂಕ 50 ಇರುವ ವಿಷಯದಲ್ಲಿ 53 ಅಂಕ ನೀಡಿ ಆನ್ ಲೈನ್ ನಲ್ಲಿ ಫಲಿತಾಂಶ ಪ್ರಕಟಗೊಂಡಿತ್ತು. ಈ ಬಗ್ಗೆ ವಿವಿಯ ಗಮನಕ್ಕೆ ತಂದರೂ, ಅಂಕಪಟ್ಟಿಯಲ್ಲಿಯೂ ಈ ತಪ್ಪು ಪುನರಾವರ್ತನೆ ಆಗಿದೆ ಎಂದು ಎಬಿವಿಪಿ ಉಡುಪಿ ಘಟಕ ಆರೋಪಿಸಿ, ಶನಿವಾರ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಿದರು. ಎಂ.ಜಿ.ಎಂ ಕಾಲೇಜಿನ ಬಿ.ಎಸ್ಸಿ ಮತ್ತು ಬಿಝ್ರ್ ಸಿ( bzc) ವಿಭಾಗದ 46 ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ತಮಗೆ ಇಲ್ಲದೇ ಇರುವ ಬೈಯೋ ಟೆಕ್ನಾಲಜಿ ಪ್ರಾಯೋಗಿಕ ವಿಷಯಕ್ಕೆ ಅಂಕವನ್ನು ನೀಡಿ, ಫಲಿತಾಂಶ ಪ್ರಕಟಿಸಿದ್ದಾರೆ. ಅಂಕಪಟ್ಟಿಯಲ್ಲಿಯೂ ಇದೇ ತಪ್ಪು ಮಾಡಿದ್ದಾರೆ.

ಈ ಎಲ್ಲಾ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಯ ಶೈಕ್ಷಣಿಕ ಜೀವನಕ್ಕೆ ತೊಂದರೆಯಾಗುತ್ತಿದೆ. ಜೊತೆಗೆ ವಿದ್ಯಾರ್ಥಿ ವೇತನವನ್ನು ನಂಬಿಕೊಂಡು ಪದವಿ, ಸ್ನಾತಕೋತ್ತರ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ಕಲಿಯುವಿಕೆಗೆ ಅಡಚಣೆ ಉಂಟಾಗುತ್ತಿದೆ. 

ಕೆಲವು ಕೋರ್ಸ್ ಗಳಿಗೆ ಸೇರ್ಪಡೆಗೊಳ್ಳುವ ಅಂತಿಮ ದಿನಾಂಕದ ಒಳಗೆ ವಿವಿ ಅಂಕಪಟ್ಟಿ ನೀಡದೇ, ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ಎಬಿವಿಪಿ ಮನವಿಯಲ್ಲಿ ಉಲ್ಲೇಖಿಸಿದೆ.

ಈ ಸಂದರ್ಭದಲ್ಲಿ ಎಬಿವಿಪಿ ಉಡುಪಿ ನಗರ ಸಹ ಕಾರ್ಯದರ್ಶಿ ಶ್ರೀವಸ್ಸ, ಮುಖಂಡರಾದ ಕಾರ್ತಿಕ್, ಶಶಾಂಕ್, ಲ್ಯಾರಿ ಎನ್.ಎಮ್, ಧನುಷ್, ಅನುರೂಪ್, ನೀರಜ್, ಸನತ್, ರವೀಶ್, ವಿಜೇತಾ, ಯತೀಶ್, ಪ್ರತೀಕ್, ಪ್ರಣವ್, ದಿಶಾಯಿಣಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಂಕಪಟ್ಟಿ ನೀಡದೆ ಸತಾಯಿಸುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಎಬಿವಿಪಿಯಿಂದ ಮುತ್ತಿಗೆ ಎಚ್ಚರಿಕೆ

ಎಂ.ಜಿ.ಎಮ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳಿಂದ ಸಹಿಯನ್ನು ಸಂಗ್ರಹಿಸಿ ಅಭಿಯಾನ ನಡೆಸಿದರು. ನಂತರ ಇದರ ಪ್ರತಿ ಹಾಗು ಮನವಿಯನ್ನು ಮಣಿಪಾಲದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಯವರ ಪರವಾಗಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಮನವಿಯನ್ನು ಸ್ವೀಕರಿಸಿದರು.

ಶಾಲೆ ಅರ್ಧಕ್ಕೆ ಬಿಟ್ಟ ಮಕ್ಕಳನ್ನು ವಾಪಸ್ ಕರೆ ತರಲು ತಮಿಳುನಾಡು ಸಖತ್ ಪ್ಲ್ಯಾನ್!

ಮಹಿಳಾ ದೌರ್ಜನ್ಯ ಆರ್ಥಿಕ ಬೆಳವಣಿಗೆಗೂ ಅಪಾಯ: ಪ್ರೊ. ಯಡಪಡಿತ್ತಾಯ
ಮಂಗಳೂರು: ಮಹಿಳೆಯರ ಮೇಲಿನ ಹೆಚ್ಚಿನ ದೌರ್ಜನ್ಯವು ಸಮಾಜದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಮಹಿಳೆಯರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ತಡೆಯಾಗುತ್ತದೆ. ಇದು ಪರೋಕ್ಷವಾಗಿ ಆರ್ಥಿಕ ಅಭಿವೃದ್ಧಿಗೆ ಅಪಾಯ. ಹೀಗಾಗಿ ಮಹಿಳೆಯರ ವಿರುದ್ಧದ ಹಿಂಸೆಯನ್ನು ಜಾಗತಿಕ ಸಾಂಕ್ರಾಮಿಕ ಎಂದು ಪರಿಗಣಿಸಬೇಕು ಎಂದು ಮಂಗಳೂರು ವಿವಿ ಕುಲಪತಿ ಪೊ›.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ, ಯುಜಿಸಿ ಮಹಿಳಾ ಅಧ್ಯಯನ ಕೇಂದ್ರ, ಭಾರತಿ ದಾಸನ್‌ ವಿಶ್ವವಿದ್ಯಾನಿಲಯ, ಭಾರತೀಯ ಮಹಿಳಾ ಅಧ್ಯಯನ ಸಂಘ ಸಹಯೋಗದಲ್ಲಿ ಮಹಿಳೆಯರು ಮತ್ತು ಬಾಲಕಿಯರ ವಿರುದ್ಧದ ಹಿಂಸೆಯ ವಿರುದ್ಧ ಜಾಗೃತಿಗಾಗಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ವಿಶ್ವವಿದ್ಯಾನಿಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗ, ಜಾತಿ, ವರ್ಗ, ಪ್ರದೇಶ ಅಥವಾ ಧರ್ಮವನ್ನು ಲೆಕ್ಕಿಸದೆ ಪ್ರತಿಯೊಬ್ಬರನ್ನು ಗೌರವಿಸುವ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈ ಕುರಿತ ಸ್ಪಷ್ಟನೀತಿಯನ್ನು ಅಭಿವೃದ್ಧಿಪಡಿಸಿದ್ದು, ನಮ್ಮ ಕ್ಯಾಂಪಸ್‌ನ್ನು ಕಲಿಕೆಗೆ ಸುರಕ್ಷಿತ ಸ್ಥಳವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ ಎಂದರು.

ಮುಖ್ಯ ಭಾಷಣ ಮಾಡಿದ ಭಾರತಿದಾಸನ್‌ ವಿವಿಯ ಮಹಿಳಾ ಅಧ್ಯಯನ ವಿಭಾಗದ ಪೊ›.ಎನ್‌. ಮಣಿಮೇಕಲೈ ಮಾತನಾಡಿ, ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿಯೊಬ್ಬರೂ ಭಾಗವಹಿಸಲು ಅವಕಾಶವಿದೆ. ಇದು ಹಿಂಸೆಯ ವಿರುದ್ಧ ಧ್ವನಿ ಎತ್ತಬೇಕಾದ ಸಮಯ ಎಂದರು.

ಮಂಗಳೂರು ವಿವಿ ಯುಜಿಸಿ ಮಹಿಳಾ ಅಧ್ಯಯನ ಕೇಂದ್ರದ ಮಾಜಿ ನಿರ್ದೇಶಕಿ ಪೊ›.ಕಿಶೋರಿ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಸ್ತುತ ನಿರ್ದೇಶಕಿ ಡಾ.ಅನಿತಾ ರವಿಶಂಕರ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗುರುಗೋವಿಂದ್‌ ಸಿಂಗ್‌ ಇಂದ್ರಪ್ರಸ್ಥ ವಿವಿಯ ಸ್ಕೂಲ… ಆಫ್‌ ಕಮ್ಯುನಿಕೇಷನ್‌ನ ಹಿರಿಯ ಸಹಾಯಕ ಪ್ರಾಧ್ಯಾಪಕಿ ಡಾ.ಕುಲ್ವೀನ್‌ ಟ್ರೆಹಾನ್‌, ಡಿಇಡಿಎಸ್‌ ನಿರ್ದೇಶಕಿ ಮೆರ್ಲಿನ್‌ ಮಾರ್ಟಿಸ್‌ ಮತ್ತಿತರರಿದ್ದರು.

click me!