ನಮ್ಮೂರಿಗೆ ರಾಧಿಕಾ ಟೀಚರ್ ಬೇಡ: ಶಾಲೆಗೆ ಬೀಗ ಜಡಿದ ಗ್ರಾಮಸ್ಥರು!

By Sathish Kumar KHFirst Published Sep 17, 2024, 1:40 PM IST
Highlights

ತುಮಕೂರು ಜಿಲ್ಲೆಯಲ್ಲಿ ಗ್ರಾಮಸ್ಥರು ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರ ವಿರುದ್ಧ ಪ್ರತಿಭಟನೆ ನಡೆಸಿ, ಶಾಲೆಗೆ ಬೀಗ ಹಾಕಿದ್ದಾರೆ. ಶಿಕ್ಷಕಿ ಮತ್ತು ಗ್ರಾಮಸ್ಥರ ನಡುವೆ ಹಿಂದೆ ನಡೆದಿರುವ ಗಲಾಟೆಯೇ ಈ ಪ್ರತಿಭಟನೆಗೆ ಕಾರಣ ಎನ್ನಲಾಗಿದೆ.

ತುಮಕೂರು (ಸೆ.17): ರಾಜ್ಯಾದ್ಯಂತ ಪ್ರತಿವರ್ಷ ನೂರಾರು ಸರ್ಕಾರಿ ಶಾಲೆಗಳು ಮಕ್ಕಳ ಪ್ರವೇಶಾತಿ ಕೊರತೆಯಿಂದ ಹಾಗೂ ಮೂಲ ಸೌಕರ್ಯಗಳ ಕೊರತೆಯಿಂದ ಮುಚ್ಚುತ್ತಿವೆ. ಆದರೆ, ಇಲ್ಲೊಂದು ಸರ್ಕಾರಿ ಶಾಲೆಯಲ್ಲಿ ಮಕ್ಕಳಿದ್ದರೂ, ಗ್ರಾಮಸ್ಥರ ವಿರುದ್ಧವೇ ದೂರು ಕೊಟ್ಟ ಶಿಕ್ಷಕಿ ನಮ್ಮೂರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವುದು ಬೇಡವೆಂದು ಪ್ರತಿಭಟನೆ ಆರಂಭಿಸಿದ್ದಾರೆ.

ಹೌದು, ಈ ರಾಧಿಕಾ ಟೀಚರ್ ನಮ್ಮೂರಿನ ಸರ್ಕಾರಿ ಶಾಲೆಗೆ ಶಿಕ್ಷಕಿಯಾಗಿ ಬರುವುದು ಬೇಡವೆಂದು ಪ್ರತಿಭಟನೆ ಆರಂಭಿಸಿದ್ದಾರೆ. ಶಾಲಾ ಶಿಕ್ಷಕಿ ವಿರುದ್ದ ಗ್ರಾಮಸ್ಥರು ಶಾಲೆಯ ಆವರಣದಲ್ಲಿ ಮಕ್ಕಳ ಸಮೇತವಾಗಿ ಪ್ರತಿಭಟನೆ ಆರಂಭಿಸಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಸೋಮವಾರ ಶಿಕ್ಷಕಿ ಶಾಲೆಗೆ ಬಂದರೂ, ಎಲ್ಲ ಶಾಲಾ ಕೋಣೆಗಳಿಗೆ ಗ್ರಾಮಸ್ಥರೇ ಬೀಗ ಜಡಿದು, ನೀವು ನಮ್ಮೂರಿನ ಶಾಲೆಗೆ ಬಂದು ಕಾರ್ಯ ನಿರ್ವಹಿಸುವುದು ಬೇಡವೆಂದು ಪಟ್ಟು ಹಿಡಿದಿದ್ದಾರೆ. ಇದರಿಂದ ದಿಕ್ಕು ತೋಚದ ಶಿಕ್ಷಕಿ ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿ (ಬಿಇಒ) ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

Latest Videos

ಇದೇನ್ ಕರ್ನಾಟಕವೋ ಇಲ್ಲ ಪಾಕಿಸ್ತಾನವೋ? ಸ್ವಿಗ್ಗಿ ಡೆಲಿವರಿಗಾಗಿ ಕನ್ನಡಿಗರು ಹಿಂದಿ ಕಲಿಬೇಕಾ?

ಈ ಘಟನೆ ತುಮಕೂರು‌ ತಾಲ್ಲೂಕಿನ ಹಿರೇಗುಂಡಗಲ್ಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕಿ ರಾಧಿಕ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕಳೆದ ಎರಡು ತಿಂಗಳ ಹಿಂದೆ ಶಿಕ್ಷಕಿ ರಾಧಿಕ ಗ್ರಾಮಸ್ಥರೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಿಕ್ಷಕಿಯ ಬಗ್ಗೆ ದೂರು ನೀಡಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಿಸಿದ್ದರು. ಆದರೆ, ಇದೀಗ ಪುನಃ ಅಮಾನತ್ತಿನ ಅವಧಿ ಮುಕ್ತಾಯವಾಗುತ್ತಿದ್ದಂತೆ ಶಿಕ್ಷಕಿಯನ್ನು ಮತ್ತೆ ಅದೇ ಶಾಲೆಗೆ ನಿಯೋಜನೆ ಮಾಡಲಾಗಿದೆ. ಇದರಿಂದ ಶಿಕ್ಷಣ ಇಲಾಖೆ ವಿರುದ್ಧ ಹಾಗೂ ಶಿಕ್ಷಕಿ ವಿರುದ್ಧ ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ.

ನಮ್ಮ ಗ್ರಾಮದ ಸರ್ಕಾರಿ ಶಾಲೆಗೆ ಶಿಕ್ಷಕಿ ರಾಧಿಕಾ ಬೇಡ. ನಮ್ಮೂರ ಶಾಲೆಗೆ ಬೇರೆ ಶಿಕ್ಷಕರನ್ನ ನೇಮಿಸುವಂತೆ ಪಟ್ಟು ಹಿಡಿದಿದ್ದಾರೆ. ನೀವು ಬೇರೆ ಶಿಕ್ಷಕರನ್ನು ನಮ್ಮೂರಿಗೆ ನಿಯೋಜನೆ ಮಾಡುವವರೆಗೂ ಶಾಲೆಗಳಿಗೆ ಹಾಕಿರುವ ಬೀಗವನ್ನು ತೆರೆಯುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!