ಕರ್ನಾಟಕ CET, NEET 2ನೇ ಸುತ್ತಿನ ಆಯ್ಕೆ ಬದಲಾವಣೆಗೆ ಅವಕಾಶ, ಎಚ್ಚರಿಕೆ ನೀಡಿದ ಕೆಇಎ

By Gowthami KFirst Published Sep 11, 2024, 8:54 PM IST
Highlights

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿ‌ನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಆಯ್ಕೆಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಿದೆ. ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಚರ್ಚಿಸಿ ಆಯ್ಕೆಗಳನ್ನು ಬದಲಿಸಿಕೊಳ್ಳಬಹುದು.

ಬೆಂಗಳೂರು (ಸೆ.11): ಕರ್ನಾಟಕ ಪರೀಕ್ಷಾ ಪ್ರಾಧಿಕಾರವು  ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿ‌ನ ಸೀಟು ಹಂಚಿಕೆ ಪ್ರಕ್ರಿಯೆ ಸೆ.8ರಿಂದ ಆರಂಭವಾಗಿದೆ. ಇದೀಗ ಆಯ್ಕೆಗಳನ್ನು ಬದಲಿಸಿಕೊಳ್ಳಲು ಅವಕಾಶ ಇದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ರಾಷ್ಟ್ರೀಯ ಮಟ್ಟದ ನೀಟ್ ಫಲಿತಾಂಶ ನೋಡಿಕೊಂಡು 2ನೇ ಸುತ್ತಿನ ಫಲಿತಾಂಶ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ಕೆಇಎ ತಿಳಿಸಿದೆ.

ದುಬೈನಲ್ಲಿರುವ ಇಬ್ಬರು ಭಾರತೀಯರಿಗೆ ಲಕ್ಕಿ ಡ್ರಾದಲ್ಲಿ ಒಲಿದ 16 ಕೋಟಿ ರೂ!

Latest Videos

ಸಿಇಟಿ, ನೀಟ್ ಆಪ್ಷನ್ ಎಂಟ್ರಿ ಬದಲಾವಣೆ ಕಾಲೇಜು ಕ್ರಮಾಂಕ ಬದಲಿಸಿಕೊಳ್ಳಲು ಸಮಯಾವಕಾಶ ಕೊಟ್ಟಿದ್ದು, ಎಂಟ್ರಿ‌ ಮಾಡಲು ಕೆಇಎ ಪೋರ್ಟಲ್ ನಲ್ಲಿ ಅವಕಾಶವಿದೆ. ವಿದ್ಯಾರ್ಥಿಗಳು ತಮ್ಮ ಪೋಷಕರ ಜತೆ ಕುಳಿತು, ಆಯ್ಕೆಗಳನ್ನು ಬದಲಿಸಿಕೊಳ್ಳುವ ಅಥವಾ ತೆಗೆದು ಹಾಕುವ ಅವಕಾಶ ನೀಡಲಾಗಿದ್ದು, ಎಚ್ಚರಿಕೆಯಿಂದಲೇ ಈ ಕೆಲಸ ಮಾಡಿ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ‌‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ರಾಜಸ್ಥಾನದ ನಿಗೂಢ ಭೂತದ ಕೋಟೆ ಹೊಕ್ಕ ಸಹೋದರರು ಕಣ್ಮರೆ, 10 ದಿನದಿಂದ ಹುಡುಕಾಟ, ಓರ್ವನ ಶವ ಪತ್ತೆ!

ವಿದ್ಯಾರ್ಥಿಗಳು ತಮಗೆ ಇಚ್ಛೆ ಇರುವ ಕಾಲೇಜು ಲಿಸ್ಟ್‌ಗಳನ್ನು ಮಾಡಲು ಮತ್ತು ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕೆಇಎ ಸಿಇಟಿ, ನೀಟ್ ಮೂಲಕ ಇಂಜಿನಿಯರಿಂಗ್ ಮತ್ತು ಇತರೆ ವೃತ್ತಿಪರ ಕೋರ್ಸ್‌ಗಳು, ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧ ಎರಡನೇ ಸುತ್ತಿ‌ನ ಸೀಟು ಹಂಚಿಕೆ ಫಲಿತಾಂಶವನ್ನು ಶೀಘ್ರವೇ ಬಿಡುಗಡೆ ಮಾಡಲಿದೆ.

click me!