
ನವದೆಹಲಿ (ಏ.12): ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಅಡಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ), 7 ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ವಿ ಹೆಸರಿನ ಹೊಸ ಇಂಗ್ಲಿಷ್ ಪುಸ್ತಕ ಪರಿಚಯಿಸಿದೆ. ಅದರಲ್ಲಿ ಕರ್ನಾಟಕದ ರಾಣಿ ಅಬ್ಬಕ್ಕಳ ಗ್ರಾಫಿಕ್ ಕಥೆಗಳನ್ನು ಸೇರಿಸಲಾಗಿದೆ. ಸಮಗ್ರ ಭಾಷೆಯನ್ನು ಕಲಿಯುವ, ಆಲಿಸುವ, ಬರೆಯುವ, ಓದುವ , ಮಾತನಾಡುವ ಕೌಶಲ್ಯಗಳನ್ನು ಹೆಚ್ಚಿಸುವ ಪಠ್ಯೇತರ ಚಟುವಟಿಕೆಗಳನ್ನು ಈ ಪುಸ್ತಕ ಒಳಗೊಂಡಿದೆ.
‘ಧೈರ್ಯಶಾಲಿ ಹೃದಯಗಳಿಗೆ ನಮನ’ ಎನ್ನುವ ಯೂನಿಟ್‌ನಲ್ಲಿ ದೇಶದ ಸೈನಿಕರನ್ನು ಗೌರವಿಸುವ ‘ಮೈ ಡಿಯರ್ ಸೋಲ್ಜರ್ಸ್ ಕವಿತೆ’ ಇದೆ ಮತ್ತು ಧೈರ್ಯ ಮತ್ತು ದೇಶಭಕ್ತಿಯನ್ನು ಸಾರಿದ ಉಳ್ಳಾಲದ ರಾಣಿ ಅಬ್ಬಕ್ಕನ ಕುರಿತಾದ ಒಂದು ಗ್ರಾಫಿಕ್ ಕಥೆಯನ್ನು ಸೇರಿಸಲಾಗಿದೆ. ಇದಲ್ಲದೆ, ರವೀಂದ್ರ ನಾಥ್ ಟ್ಯಾಗೋರ್, ರಸ್ಕಿನ್ ಬಾಂಡ್, ಹಗ್ ಲಾಫ್ಟಿಂಗ್, ಎಲಿಜಾ ಕುಕ್, ಹೆಲೆನ್ ಕೆಲ್ಲರ್ ಅವರ ಬರಹಗಳು ಇವೆ. ಇದರ ಜೊತೆಗೆ ಪರಿಸರ ಜಾಗೃತಿ ಮತ್ತು ದೇಶ ಪ್ರೇಮದ ಕಥೆಗಳನ್ನು ಕೂಡ ಪಠ್ಯದಲ್ಲಿ ಸೇರಿಸಲಾಗಿದೆ.
ಬಾಬಾಸಾಹೇಬರ ನಿಪ್ಪಾಣಿ ಭೇಟಿಗೆ 100 ಸಂಭ್ರಮ: ಆರ್.ಅಶೋಕ್ ಲೇಖನ
ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ: ರಾಣಿ ಅಬ್ಬಕ್ಕ ದೇವಿ ಕರ್ನಾಟಕದ ಕರಾವಳಿಯ ಉಳ್ಳಾಲದವರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮೊದಲ ಮಹಿಳೆ. ಅಬ್ಬಕ್ಕದೇವಿ ಉಳ್ಳಾಲದಲ್ಲಿ ಆಳ್ವಿಕೆ ಮಾಡುತ್ತಿದ್ದರು. 1555-1568 ರವರೆಗೆ ತನ್ನ ರಾಜ್ಯದಲ್ಲಿ ಪೋರ್ಚುಗೀಸರ ದಾಳಿಯನ್ನು ಹಿಮ್ಮೆಟ್ಟಿಸಿದರು. ಉಳ್ಳಾಲದ ಮೇಲೆ ಆಕ್ರಮಣ ಮಾಡಿದಾಗ ಪ್ರಬಲ ಪೋರ್ಚುಗೀಸ್ ಪಡೆಯ ವಿರುದ್ಧ ಹೋರಾಡಿದರು. ಪೋರ್ಚುಗೀಸರು ಸೆರೆಮನೆಗೆ ಕಳುಹಿಸಿದಾಗಲೂ ಜೈಲಿನಲ್ಲಿಯೂ ಪೋರ್ಚುಗೀಸರ ವಿರುದ್ಧ ಬಂಡಾಯ ಎದ್ದು ಹೋರಾಡಿ ಹುತಾತ್ಮರಾದರು ಎಂದು ಇತಿಹಾಸ ಹೇಳುತ್ತದೆ.
ಪ್ರತಿಯೊಬ್ಬರಲ್ಲಿ ದೇಶಪ್ರೇಮ ಮೊಳಗಲಿ: ಭಾರತ ಜಗತ್ತಿಗೇ ಮಾರ್ಗದರ್ಶನ ಮಾಡಬಹುದಾದ ಶಕ್ತಿ ಹೊಂದಿದೆ. ಇಲ್ಲಿನ ಸಂಸ್ಕೃತಿ ಸಂಸ್ಕಾರ ವಿದೇಶಿಗರೂ ಸಹ ಗೌರವಿಸುತ್ತಾರೆ. ಡಾ. ಅಂಬೇಡ್ಕರ್ ಎಂದಿಗೂ ತಲೆ ಎತ್ತಿ ನಿಲ್ಲುವಂತಹ ಸಂವಿಧಾನ ನಮಗೆ ರಚಿಸಿಕೊಟ್ಟಿದ್ದಾರೆ. ಇದರಲ್ಲಿ ಹಕ್ಕು, ಕರ್ತವ್ಯಗಳೂ ಇವೆ. ನಮ್ಮ ಹಕ್ಕುಗಳಿಗಾಗಿ ಬಡಿದಾಡುವ ನಾವು, ಕರ್ತವ್ಯ ಮರೆಯುತ್ತಿದ್ದೇವೆ. ನಮ್ಮಲ್ಲಿ ದೇಶಭಕ್ತಿ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬರು ದೇಶಭಕ್ತಿ ಬೆಳೆಸಿಕೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷ ಮುಪ್ಪಿನ ಬಸವಲಿಂಗ ಶ್ರೀ ಹೇಳಿದರು.
ಸ್ವಿಗ್ಗಿ, ಝೊಮೆಟೋ, ಅಮೆಜಾನ್‌ಗೆ ಗಿಗ್ ತೆರಿಗೆ: ಸಚಿವ ಸಂಪುಟ ಒಪ್ಪಿಗೆ
ಸ್ಥಳೀಯ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಅಂಗ ಸಂಸ್ಥೆಗಳಿಂದ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಗತ್ತಿನಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿದ್ದು, ಆರ್ಥಿಕ, ಸಾಮಾಜಿಕ, ಸಾರ್ವಜನಿಕ ರಂಗಗಳಲ್ಲಿ ತನ್ನ ಛಾಪ ಮೂಡಿಸುತ್ತಿದೆ. ಈಗ ಭಾರತವು ಜಗತ್ತಿಗೆ ವಿಶ್ವನಾಯಕನಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಜಗತ್ತೇ ಭಾರತದೆಡೆಗೆ ಅಚ್ಚರಿಯಿಂದ ನೋಡುತ್ತಿದೆ ಎಂದರು.