ಖಾಸಗಿ ಶಾಲೆಗಳ ಶುಲ್ಕ 15-20% ಹೆಚ್ಚಳ: ದರ ಏರಿಕೆಯಿಂದ ಪೋಷಕರಿಗೆ ಹೊರೆ

Published : Apr 11, 2025, 11:11 AM IST
ಖಾಸಗಿ ಶಾಲೆಗಳ ಶುಲ್ಕ 15-20% ಹೆಚ್ಚಳ: ದರ ಏರಿಕೆಯಿಂದ ಪೋಷಕರಿಗೆ ಹೊರೆ

ಸಾರಾಂಶ

ಖಾಸಗಿ ಶಾಲೆಗಳು 2025-26ನೇ ಶೈಕ್ಷಣಿಕ ಸಾಲಿಗೆ ಈಗಾಗಲೇ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭಿಸಿದ್ದು, ಬಹಳಷ್ಟು ಅನುದಾನರಹಿತ ಶಾಲೆಗಳು ಶೇಕಡ 15ರಿಂದ 20ರಷ್ಟು ಪ್ರವೇಶ ಶುಲ್ಕ ಹೆಚ್ಚಿಸಿವೆ. ಇದರಿಂದ ಪೋಷಕರಿಗೆ ಕಳೆದ ಬಾರಿಗಿಂತ ಹೆಚ್ಚಿನ ಶುಲ್ಕದ ಹೊರೆಬಿದ್ದಿದೆ. 

ಬೆಂಗಳೂರು (ಏ.11): ಖಾಸಗಿ ಶಾಲೆಗಳು 2025-26ನೇ ಶೈಕ್ಷಣಿಕ ಸಾಲಿಗೆ ಈಗಾಗಲೇ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭಿಸಿದ್ದು, ಬಹಳಷ್ಟು ಅನುದಾನರಹಿತ ಶಾಲೆಗಳು ಶೇಕಡ 15ರಿಂದ 20ರಷ್ಟು ಪ್ರವೇಶ ಶುಲ್ಕ ಹೆಚ್ಚಿಸಿವೆ. ಇದರಿಂದ ಪೋಷಕರಿಗೆ ಕಳೆದ ಬಾರಿಗಿಂತ ಹೆಚ್ಚಿನ ಶುಲ್ಕದ ಹೊರೆಬಿದ್ದಿದೆ. ಪ್ರತಿ ವರ್ಷ ಶಾಲಾ ನಿರ್ವಹಣಾ ವೆಚ್ಚ, ಸಿಬ್ಬಂದಿ ವೇತನ ಹೆಚ್ಚಳ, ಡೀಸೆಲ್‌ ಬೆಲೆ ಏರಿಕೆ ಮತ್ತಿತರ ಕಾರಣಗಳಿಂದಾಗಿ ಪ್ರವೇಶ ಶುಲ್ಕದಲ್ಲಿ ಶೇ.15ರಿಂದ 20ರಷ್ಟು ಹೆಚ್ಚಳ ಮಾಡಿರುವುದಾಗಿ ಖಾಸಗಿ ಶಾಲೆಗಳು ಹೇಳುತ್ತಿವೆ.

ಒಂದೆಡೆ ರಾಜ್ಯ ಸರ್ಕಾರ ಡೀಸೆಲ್‌ ದರ ಹೆಚ್ಚಿಸಿದೆ, ವಾಹನಗಳ ವಿಮಾ ಮೊತ್ತ ಹೆಚ್ಚಾಗಿದೆ. ಇದೀಗ ಶಿಕ್ಷಣ ಸಂಸ್ಥೆಗಳಿಗೂ ಕಸದ ತೆರಿಗೆ ಹಾಕಲಾಗುತ್ತಿದೆ. ನೀರಿನ ದರ ಹೆಚ್ಚಿಸಲಾಗುತ್ತಿದೆ. ಇದೆಲ್ಲವೂ ಶಿಕ್ಷಣ ಸಂಸ್ಥೆಗಳಿಗೆ ವಾಣಿಜ್ಯ ಉದ್ಯಮಗಳಿಗೆ ಇರುವ ದರದಲ್ಲೇ ವಸೂಲಿ ಮಾಡಲಾಗುತ್ತದೆ. ಇದರ ಜೊತೆಗೆ ವಾರ್ಷಿಕ ಶಾಲಾ ನಿರ್ವಹಣೆ, ಶಿಕ್ಷಕರು, ಸಿಬ್ಬಂದಿ ವೇತನ, ಚಾಲಕರ ವೇತನ ಹೆಚ್ಚಳ ಈ ಎಲ್ಲಾ ಕಾರಣಗಳಿಂದ ಶುಲ್ಕ ಹೆಚ್ಚಳ ಅನಿವಾರ್ಯ ಎನ್ನುತ್ತಾರೆ ವಿವಿಧ ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳು.

ವಿದ್ಯಾರ್ಥಿಗಳ ನೋಂದಣಿ ಶುಲ್ಕವೇ ವಿಟಿಯುಗೆ ಆಧಾರ: ಸಂಶೋಧನೆಗಳಿಗೆ ತೀವ್ರ ಹಿನ್ನಡೆ

ಮತ್ತೊಂದೆಡೆ ರಾಜ್ಯದಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಸರ್ಕಾರ ಮನಸೋ ಇಚ್ಛೆ ಅನುಮತಿ ನೀಡುತ್ತಿದೆ. ಇದರಿಂದ ಮಕ್ಕಳು ಹಂಚಿಹೋಗುತ್ತಿದ್ದು, ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಶಾಲೆಗಳಿಗೆ ಪ್ರತಿ ಮಗುವಿನ ತಲಾವಾರು ವೆಚ್ಚ ಹೆಚ್ಚಾಗುತ್ತಿದೆ. ಇದರಿಂದ ಶುಲ್ಕ ಹೆಚ್ಚಳ ಮಾಡದೆ ಬೇರೆ ದಾರಿ ಇಲ್ಲ ಎನ್ನುವುದು ಅನೇಕ ಶಾಲಾ ಆಡಳಿತ ಮಂಡಳಿ ಪ್ರತಿನಿಧಿಗಳ ಸಮರ್ಥನೆ ಮಾಡಿಕೊಳ್ಳುತ್ತಿವೆ.

ಇನ್ನು, ಕೆಲ ಶಾಲೆಗಳಲ್ಲಿ ವಾಹನ ಶುಲ್ಕವನ್ನೂ ಹೆಚ್ಚಿಸಿರುವ ಆರೋಪಗಳು ಪೊಷಕರಿಂದ ಕೇಳಿಬರುತ್ತಿವೆ. ಆದರೆ, ಶಾಲೆಗಳು ಇದನ್ನು ಒಪ್ಪುತ್ತಿಲ್ಲ. ನಾವು ಶುಲ್ಕ ಹೆಚ್ಚಿಸಿಲ್ಲ, ನಮ್ಮ ಶಾಲೆಗಳಿಗೆ ನಮ್ಮದೇ ಆದ ವಾಹನಗಳಿಲ್ಲ. ಖಾಸಗಿ ಏಜೆನ್ಸಿಗಳಿಂದ ವಾಹನ ಪಡೆದಿದ್ದೇವೆ. ಅವರು ಶುಲ್ಕ ಹೆಚ್ಚಿಸುವ ಪ್ರಸ್ತಾವ ಇಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಇದನ್ನು ಖಾಸಗಿ ಶಾಲಾ ವಾಹನ ಚಾಲಕ, ಮಾಲೀಕರ ಸಂಘದ ಪ್ರತಿನಿಧಿಗಳು ಅಲ್ಲಗಳೆದಿದ್ದಾರೆ. ನಾವು ಯಾವುದೇ ಶುಲ್ಕ ಹೆಚ್ಚಿಸಿಲ್ಲ. ನಮ್ಮ ಅನೇಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಿದಾಗ ಪೋಷಕರು ನಮಗೆ ಸಹಕಾರ ನೀಡಿದ್ದಾರೆ. ಹಾಗಾಗಿ ಡೀಸೆಲ್‌ ದರ ಹೆಚ್ಚಳವಾದರೂ ನಾವು ದರ ಹೆಚ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಯಸ್ಸು ನೋಡಿ ಗಾಳ ಹಾಕ್ತಾರೆ ಸೈಬರ್‌ ಖದೀಮರು: ಸಿಐಡಿ ವರದಿಯಲ್ಲಿ ಬಹಿರಂಗ

ಖಾಸಗಿ ಶಾಲೆಗಳು ಪ್ರತಿ ವರ್ಷ ಹೆಚ್ಚಾಗುವ ಶಾಲಾ ನಿರ್ವಹಣಾ ವೆಚ್ಚ, ವೇತನ, ಮೂಲಸೌಲಭ್ಯಗಳಿಗೆ ಅನುಗುಣವಾಗಿ ಶೇ.10ರಿಂದ 15ರಷ್ಟು ಶುಲ್ಕ ಹೆಚ್ಚಿಸಬಹುದು. ಅದು ಆಯಾ ಶಾಲೆಗಳ ನಿರ್ಧಾರಕ್ಕೆ ಬಿಟ್ಟಿದ್ದು. ನಮ್ಮ ಶಾಲೆಯಲ್ಲಿ ಶೇ.15ರಷ್ಟು ಶುಲ್ಕ ಹೆಚ್ಚಿಸಲಾಗಿದೆ. ಯಾವುದೇ ಶಾಲೆಯಲ್ಲಿ ಪೋಷಕರಿಗೆ ತೀವ್ರ ಹೊರೆಯಾಗುವಂತೆ ಶುಲ್ಕ ಹೆಚ್ಚಳ ಮಾಡಿದರೆ ಶಿಕ್ಷಣ ಇಲಾಖೆ ಮಧ್ಯಪ್ರವೇಶಿಸಿ ಕಾನೂನು ರೀತಿ ಪರಿಶೀಲನೆ ನಡೆಸಿ ಕ್ರಮ ವಹಿಸಬಹುದು.
-ಡಿ.ಶಶಿಕುಮಾರ್‌, ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ