ಸ್ಮಾರ್ಟ್‌ಫೋನ್ ವಲಯದಲ್ಲಿ ಕ್ರಾಂತಿಯನ್ನು ಸೃಷ್ಟಿಸಿರುವ ಆಪಲ್ ಇದೀಗ, ವಿದ್ಯಾರ್ಥಿಗಳಿಗೆ ವಿನೂತನವಾದ ಕಾಲೇಜು ಮಾರ್ಗದರ್ಶನ ಲಾಂಚ್ @ ಆಪಲ್ ಎಂಬ ಕಾರ್ಯಕ್ರಮವನ್ನು ಆರಂಭಿಸಿದೆ. ಅಕೌಂಟ್ಸ್, ಎಕಾನಾಮಿಕ್ಸ್, ಬ್ಯುಸಿನೆಸ್ ಹಾಗೂ ಮ್ಯಾಥಮೆಟಿಕ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ನೆರವಾಗಲಿದೆ,
ಆಪಲ್ ಕಂಪನಿ ಯಾರಿಗೆ ಗೊತ್ತಿಲ್ಲ ಹೇಳಿ. ಅಮೆರಿಕಾದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿರೋ ಇದು ವರ್ಲ್ಡ್ ಫೇಮಸ್. ಈ ಕಂಪನಿಯ ಪ್ರಾಡಕ್ಟ್‌ಗಳು ಅಷ್ಟರ ಮಟ್ಟಿಗೆ ಜನಪ್ರಿಯವಾಗಿವೆ. ಐಫೋನ್, ಐಪಾಡ್, ಆಪಲ್ ಕಂಪ್ಯೂಟರ್, ಆಪಲ್ ಲ್ಯಾಪ್‌ಟಾಪ್, ಆಪಲ್ ವಾಚ್- ಹೀಗೆ ಈ ಕಂಪನಿಯ ಪ್ರಾಡಕ್ಟ್‌ಗಳ ಬಗ್ಗೆ ಕೇಳದವರಿಲ್ಲ. ಆಪಲ್ ಕಂಪನಿ ಗ್ರಾಹಕರಿಗೆ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸಾಫ್ಟ್‌ವೇರ್ ಹಾಗೂ ಆನ್‌ಲೈನ್ ಸೇವೆಗಳನ್ನು ಒದಗಿಸುತ್ತದೆ. ಇದೀಗ ವಿದ್ಯಾರ್ಥಿಗಳಿಗಾಗಿ ವಿನೂತನ ಸೇವೆಯೊಂದನ್ನ ನೀಡಲು ಮುಂದಾಗಿದೆ.
ಆಪಲ್ ಕಂಪನಿ ಇದೀಗ ವಿದ್ಯಾರ್ಥಿಗಳಿಗಾಗಿ ಕಾಲೇಜು ಮಾರ್ಗದರ್ಶನ ಕಾರ್ಯಕಮವನ್ನು ಪ್ರಾರಂಭಿಸಿದೆ.ಮೊದಲ ತಲೆಮಾರಿನ ಕಾಲೇಜು ವಿದ್ಯಾರ್ಥಿಗಳಿಗಾಗಿ ಲಾಂಚ್@ಆಪಲ್ ಎಂಬ ವಿಭಿನ್ನ ಕಾರ್ಯಕ್ರಮವನ್ನು ಶುರು ಮಾಡಿದೆ. ಅಕೌಂಟ್ಸ್, ಎಕಾನಾಮಿಕ್ಸ್, ಬ್ಯುಸಿನೆಸ್ ಹಾಗೂ ಮ್ಯಾಥಮೆಟಿಕ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ನೆರವಾಗಲಿದೆ, ಈ ಕೋರ್ಸ್ ಅನ್ನು ಫ್ರೆಶರ್ಸ್‌ಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಮಾರ್ಗದರ್ಶನದ ಸಮಯದಲ್ಲಿ ಆಪಲ್, ಕಾಲೇಜು ವಿದ್ಯಾರ್ಥಿಗಳು ಹಾಗೂ ಆಪಲ್ ಉದ್ಯೋಗಿಗಳಿಗೆ ಹೊಂದಾಣಿಕೆ ಮಾಡುತ್ತದೆ, ಕಂಪನಿಯ ಉದ್ಯೋಗಿಗಳು ವಿದ್ಯಾರ್ಥಿಗಳ ಅಧ್ಯಯನಕ್ಕೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಾರೆ.
undefined
ಹಳ್ಳಿಯ ಒಂದೇ ಕುಟುಂಬದ ಮೂವರು ಸೋದರಿಯರಿಂದ ಇತಿಹಾಸ ಸೃಷ್ಟಿ, ಏನದು?
ಈ ಮಾರ್ಗದರ್ಶಕರು ಸ್ಟೂಡೆಂಟ್ಸ್ ಕಲಿಕೆಗೆ ಸಂಪನ್ಮೂಲಗಳನ್ನು ಒದಗಿಸುತ್ತಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ವೃತ್ತಿಪರ ಬೆಳವಣಿಗೆಗೆ ಅವಕಾಶಗಳನ್ನು ಕಲ್ಪಿಸುತ್ತಾರೆ. ಇಂಥ ಮಾರ್ಗದರ್ಶನವು ಪಾವತಿಸಿದ ಎಕ್ಸ್‌ಟರ್ನ್‌ಶಿಪ್, ಇಂಟರ್ನ್‌ಶಿಪ್ ಮತ್ತು ಉದ್ಯೋಗ ಒದಗಿಸುವ ಸಾಧ್ಯತೆ ಇದೆ.
ಈ ಕೋರ್ಸ್, ವಿದ್ಯಾರ್ಥಿಗಳ ಕಲಿಕೆಯ ಅಗತ್ಯತೆಗಳ ಮೇಲೆ ಕೇಂದ್ರೀಕರಿಸೋದ್ರಿಂದ ನಂತರ ಶಾಲೆ ಮತ್ತು ಕೆಲಸದಲ್ಲಿ ಉತ್ತಮಗೊಳ್ಳಲು ಸಹಕಾರಿಯಾಗಲಿದೆ. ಪಾವತಿಸಿದ ಎಕ್ಸ್‌ಟರ್ನ್‌ಶಿಪ್ ಹಾಗೂ ಇಂಟರ್ನ್‌ಶಿಪ್‌ನಂತಹ ಉದ್ಯೋಗಗಳು ಕೂಡ ಇದರ ಮೂಲಕ ಪಡೆಯಬಹುದು.
ಆಪಲ್, ಈ ಲಾಂಚ್ @ ಆಪಲ್ ಪ್ರೋಗ್ರಾಂ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಆದಾಗ್ಯೂ, ಕಳೆದ ವಾರ ಲಿಂಕ್ಡ್ ಇನ್ ಪೋಸ್ಟ್ ಈ ಕಾರ್ಯಕ್ರಮವನ್ನು ಉಲ್ಲೇಖಿಸಿದೆ. ಅಷ್ಟೆ ಅಲ್ಲ, ಮೈಹೆಲ್ತ್ ಆಪಲ್‌ನಲ್ಲೂ ಈ ಕುರಿತು ಬರೆಯಲಾಗಿತ್ತು. ಆಪಲ್ ಎಂಜಿನಿಯರ್ ಲೋಗನ್ ಕಿಲ್ಪ್ಯಾಟ್ರಿಕ್ ಕೂಡ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಿಂದ ಈ ಮಾರ್ಗದರ್ಶಕ ಕಾರ್ಯಕ್ರಮದ ಬಗ್ಗೆ ಟ್ವೀಟ್ ಮಾಡಿದ್ದರು.
2021ರ ಆರಂಭದಲ್ಲಿ ಈ ಆಪಲ್ ಮಾರ್ಗದರ್ಶನ ಕೋರ್ಸ್ ಅಧಿಕೃತವಾಗಿ ಪ್ರವೇಶ ಪಡೆಯಬಹುದು. ಆಸಕ್ತ ವಿದ್ಯಾರ್ಥಿಗಳು 2021 ಜನವರಿ 8 ರ ಶುಕ್ರವಾರದೊಳಗೆ launch@apple.com ಗೆ ಇಮೇಲ್ ಕಳುಹಿಸಬಹುದು.
ಮೊದಲ ಅಥವಾ ಎರಡನೇ ವರ್ಷದ ಕಾಲೇಜು ವಿದ್ಯಾರ್ಥಿಗಳು ಮಾತ್ರ ಈ ಕೋರ್ಸ್ ಪಡೆಯಬಹುದು. ವಿದ್ಯಾರ್ಥಿಗಳು ಫೈನಾನ್ಸ್, ಅರ್ಥಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್, ಗಣಿತ, ವಾಣಿಜ್ಯ ಹಾಗೂ ಸ್ಟ್ಯಾಟಿಸ್ಟಿಕ್ ವಿಷಯ ಅಧ್ಯಯನ ಮಾಡುವವರು ಮಾತ್ರ ಇದಕ್ಕೆ ಪ್ರವೇಶ ಪಡೆಯಬೇಕು. ವಿದ್ಯಾರ್ಥಿಯಾದವನು ಹೊಸ ವಾತಾವರಣದಲ್ಲಿ ಫೈನಾನ್ಸ್ ಕೆಲಸ ಮಾಡಲು ಉತ್ಸುಕರಾಗಿರಬೇಕು. ವಿದ್ಯಾರ್ಥಿಗಳು ತಮ್ಮ ಶಾಲೆಯ ವಿವರಗಳನ್ನು ಜಿಪಿಎ, ರೆಸ್ಯೂಮ್ ಹಾಗೂ ಮೇಲ್ ಮೂಲಕ ಹಂಚಿ ಕೊಳ್ಳಬೇಕಾಗುತ್ತದೆ.
ಹೊಸ ವರ್ಷದಲ್ಲಿ ಅತಿ ಹೆಚ್ಚು ಸಂಭಾವನೆ ನೀಡುವ ಉದ್ಯೋಗಗಳಿವು
ಆಪಲ್‌ನ ಈ ಕಾರ್ಯಕ್ರಮ, ವಿವಿಧ ವಿಶ್ವವಿದ್ಯಾಲಯಗಳಿಂದ ಯುವ ಪ್ರತಿಭೆಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಜೊತೆಗೆ ಪ್ರಮುಖ ಕಂಪೆನಿಗಳಲ್ಲಿ ಕೆಲಸ ಮಾಡಲು ಉತ್ಸುಕರಾಗಿರುವ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತದೆ.
ಅಂದಹಾಗೇ ಆಪಲ್ ಕಂಪನಿ ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ. ಈ ಪ್ರೊಗ್ರಾಂ ತನ್ನ ತವರು ಕಾರ್ಯಕ್ಷೇತ್ರ ಅಮೆರಿಕಾದಲ್ಲೇ ಆರಂಭವಾಗುತ್ತೋ? ಅಥವಾ ಇತರೆ ಹೊರ ದೇಶಗಳಲ್ಲೂ ಶುರುವಾಗೋ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ಇನ್ನು ಆಪಲ್ ಕಂಪನಿಯ ಈ ನೂತನ ಕಾರ್ಯಕ್ರಮ, ಗೂಗಲ್‌ನ ಇಂಟರ್ನ್‌ಶಿಪ್ ಪ್ರೊಗ್ರಾಂ ಹಾಗೂ ಅಮೇಜಾನ್‌ನ ಆರ್ಟ್ಸ್ ಹಾಗೂ ಸೈನ್ಸ್ ಮಾರ್ಗದರ್ಶಕ ಪ್ರೋಗ್ರಾಂ ಅನ್ನು ಹೋಲುತ್ತದೆ ಎಂದು ಹೇಳಲಾಗ್ತಿದೆ.
ಪೋಸ್ಟ್ ಮ್ಯಾಟ್ರಿಕ್ ಸ್ಕಾಲರ್‌ಶಿಪ್ ಯೋಜನೆಗೆ 59,000 ಕೋಟಿ ರೂ. ಹೂಡಿಕೆ