ಲಸಿಕೆ ಹಾಕಿಸಿದ್ರೆ ಮಕ್ಕಳನ್ನು ಶಾಲೆಗೆ ಕಳಿಸಲು ಶೇ.48ರಷ್ಟು ಪೋಷಕರು ರೆಡಿ

By Suvarna NewsFirst Published Jul 30, 2021, 3:30 PM IST
Highlights

ಕೋರೋನಾ ಸಾಂಕ್ರಾಮಿಕದಿಂದಾಗಿ ಮಕ್ಕಳ ಶಿಕ್ಷಣವೇ ಸ್ಥಗಿತಗೊಂಡಿದೆ. ಆನ್‌ಲೈನ್ ಶಿಕ್ಷಣವೂ ಎಲ್ಲ ಮಕ್ಕಳಿಗೆ ಸಿಗುತ್ತಿಲ್ಲ. ಹಾಗಾಗಿ, ಶಾಲೆಗಳನ್ನು ಆರಂಭಿಸುವುದು ಉಳಿದಿರುವ ದಾರಿ. ಆದರೆ, ಲಸಿಕೆಗಳಿಲ್ಲದೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಸಿದ್ಧರಿಲ್ಲ. ಸಮೀಕ್ಷೆಯೊಂದರ ಪ್ರಕಾರ, ಮಕ್ಕಳಿಗೆ ಲಸಿಕೆ ನೀಡಿದರೆ ಶಾಲೆಗೆ ಕಳುಹಿಸಲು ಸಿದ್ಧ ಎಂದು ಶೇ.48 ಪೋಷಕರು ಹೇಳಿದ್ದಾರೆ.

ಕೋವಿಡ್ ಎರಡನೇ ಅಲೆಯ ಆರ್ಭಟ ತಣ್ಞಗಾಗುತ್ತಿರೋ ಸಂತೋಷ ಒಂದೆಡೆಯಾದ್ರೆ, ಇನ್ನೊಂದೆಡೆ ಮೂರನೇ ಅಲೆಯ ಆತಂಕ ಇದ್ದೇ ಇದೆ. ಇದರ ನಡುವೆ ಶಾಲೆಗಳನ್ನು ತೆರೆಯಬೇಕೆಂಬ ಆಗ್ರಹವೂ ಜೋರಾಗಿದೆ. ಆದ್ರೆ ಮಕ್ಕಳಿಗೆ ಇನ್ನು ವ್ಯಾಕ್ಸಿನ್ ಹಾಕಿಸಿಲ್ಲ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆಂಬ ಚಿಂತೆ ಪೋಷಕರದ್ದು. ಕೋವಿಡ್ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಪೋಷಕರ ಅಭಿಪ್ರಾಯ ಏನು ಎಂಬ ಬಗ್ಗೆ ಲೋಕಲ್ ಸೈಕಲ್ಸ್ ಎಂಬ ಸಂಸ್ಥೆ ಸಮೀಕ್ಷೆ ನಡೆಸಿದೆ. ಅದರಲ್ಲಿ ಕೋವಿಡ್ -19 ಸಾಂಕ್ರಾಮಿಕ ಮಧ್ಯೆ ಮಕ್ಕಳನ್ನುಶಾಲೆಗೆ ಕಳುಹಿಸಬೇಕಿದ್ದರೆ, ಕೋವಿಡ್ ಲಸಿಕೆ ಹಾಕಿಸಿ ಕಳುಹಿಸುವ ಇಚ್ಛೆಯನ್ನು ಶೇ.48ರಷ್ಟು ಪೋಷಕರು ಹೊಂದಿದ್ದಾರೆ.

ಶೇಕಡಾ 48ರಷ್ಟು ಪೋಷಕರು ತಮ್ಮ ಮಕ್ಕಳು, ಕೋವಿಡ್ -19 ಲಸಿಕೆ ನೀಡಿದ ನಂತರ ಮಾತ್ರ ಶಾಲೆಗೆ ಹೋಗಬೇಕೆಂದು ಬಯಸುತ್ತಾರೆ. ಶೇ.21ರಷ್ಟು ಪೋಷಕರು ಇದ್ಯಾವುದನ್ನು ಲೆಕ್ಕಿಸದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧರಾಗಿದ್ದರೆ, ಇನ್ನುಳಿದ ಶೇ. 3೦ ರಷ್ಟು ಮಂದಿ ತಮ್ಮ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಶೂನ್ಯವಾದ ಬಳಿಕ ಶಾಲೆಗಳಿಗೆ ಇಚ್ಚಿಸುತ್ತಾರೆ ಎಂದು ಲೋಕಲ್ ಸರ್ಕಲ್ ಸಮೀಕ್ಷೆಯನ್ನು ಉಲ್ಲೇಖಿಸಿ ಅನೇಕ ಸುದ್ದಿಮಾಧ್ಯಮಗಳು ಮತ್ತು ಜಾಲತಾಣಗಳು ವರದಿ ಮಾಡಿವೆ.

ರಾಜ್ಯದ 1.66 ಲಕ್ಷ ಮಕ್ಕಳು ಶಾಲೆಯಿಂದ ಹೊರಕ್ಕೆ

ಆಗಸ್ಟ್ ವೇಳೆಗೆ ಮಕ್ಕಳಿಗೆ ಲಸಿಕೆಗಳು ಲಭ್ಯವಾಗುತ್ತವೆ ಎಂದು ಸರ್ಕಾರ ಹೇಳಿದೆ. ಹೀಗಾಗಿ ಶಾಲೆಗಳ ಮೂಲಕವೇ ವ್ಯಾಕ್ಸಿನೇಷನ್ ಕಾರ್ಯಕ್ರಮ ಶುರುವಾಗಬೇಕು ಅನ್ನೋದು ಕೆಲ ಪೋಷಕರ ಒತ್ತಾಯವಾಗಿದೆ. ಕಡಿಮೆ ಕೋವಿಡ್ ಕೇಸ್ ಹೊಂದಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಸ್ವಯಂಪ್ರೇರಣೆಯಿಂದ ತೆರೆಯುವುದನ್ನು ಪರಿಗಣಿಸಬಹುದು. ಈ ಬಗ್ಗೆ ನಿರತಧಾರ ಕೈಗೊಳ್ಳಲು ಜಿಲ್ಲಾ ಮ್ಯಾಜಿಸ್ಟೇಟರ್‌ಗೆ ಅಧಿಕಾರ ನೀಡಬಹುದು ಎಂಬ ಅಭಿಪ್ರಾಯ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ದೇಶದ 361 ಜಿಲ್ಲೆಗಳಲ್ಲಿ 32,000 ಕ್ಕೂ ಹೆಚ್ಚು ಪೋಷಕರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಭಾಗವಹಿಸಿದವರಲ್ಲಿ 68% ಪುರುಷರು ಮತ್ತು 32% ಮಹಿಳೆಯರು. 47% ಜನರು 1 ನೇ ಶ್ರೇಣಿಯ ಜಿಲ್ಲೆಗಳಿಂದ ಬಂದವರಾಗಿದ್ರೆ, 27% ಜನರು 2ನೇ ಹಂತದಿಂದ ಮತ್ತು 26% ಮಂದಿ 3, 4ನೇ ಶ್ರೇಣಿ ಮತ್ತು ಗ್ರಾಮೀಣ ಜಿಲ್ಲೆಗಳಿಂದ ಬಂದವರಾಗಿದ್ದರು.

ಸದ್ಯ ಕೋವಿಡ್ ಪ್ರಕರಣಗಳು ಕಡಿಮೆಯಾಗಿರುವುದರಿಂದ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಹರಿಯಾಣ ಮತ್ತು ಮಹಾರಾಷ್ಟ್ರದಂತಹ ಅನೇಕ ರಾಜ್ಯಗಳಲ್ಲಿ ಶಾಲೆಗಳು ಪ್ರಾರಂಭವಾಗಿದ್ದರೂ ಇನ್ನು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ ಎನ್ನಬಹುದು. ಮುಂಬರುವ ವಾರಗಳಲ್ಲಿ, ಆಂಧ್ರಪ್ರದೇಶ, ಹಿಮಾಚಲ ಪ್ರದೇಶದಂತಹ ರಾಜ್ಯಗಳು ತಮ್ಮ ಶಾಲೆಗಳನ್ನು ಮತ್ತೆ ತೆರೆಯುವ ಸಾಧ್ಯತೆಗಳು ಹೆಚ್ಚಾಗಿವೆ.

ಕಲಿಕೆಗಾಗಿ ವಿದೇಶಕ್ಕೆ ಹೋಗುವ ಅಗತ್ಯವಿಲ್ಲ, ಭಾರತದಲ್ಲೇ ಅತ್ಯುತ್ತಮ ಶಿಕ್ಷಣ ಲಭ್ಯ; ಪ್ರಧಾನಿ ಮೋದಿ

ಈಗಾಗಲೇ ಶೂನ್ಯ ಅಥವಾ ಕಡಿಮೆ ಕೋವಿಡ್ ಕೇಸ್ ಇರುವ ಜಿಲ್ಲೆಗಳಲ್ಲಿ ಶಾಲೆಗಳು ನಡೆಯುತ್ತಿದ್ದರೆ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ಕೆಲವು ಪೋಷಕರ ಸಲಹೆಯು ಪರಿಗಣನೆಗೆ ಅರ್ಹವಾಗಿದೆ ಎಂದು ಲೋಕಲ್ ಸರ್ಕಲ್ಸ್ ತಿಳಿಸಿದೆ.

ಇದು ಸಮೀಕ್ಷೆಯ ವಿವರಣೆಗಳನ್ನು ಕೇಂದ್ರ ಸರ್ಕಾರದ ಪ್ರಮುಖ ಪಾಲುದಾರರೊಂದಿಗೆ ಮತ್ತು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದರಿಂದಾಗಿ ಶಾಲೆಯ ಪುನರಾರಂಭ, ಸುಸ್ಥಿರತೆ ಮತ್ತು ಮಕ್ಕಳ ವ್ಯಾಕ್ಸಿನೇಷನ್ ಬಗ್ಗೆ ಪೋಷಕರು ನಿರ್ಧರಿಸಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಡಲಾಗಿದೆ.

ಕರ್ನಾಟಕದಲ್ಲಿ ಶಾಲೆಗಳನ್ನು ಆರಂಭಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರವು ಈಗಾಗಲೇ ಪದವಿ ತರಗತಿಗಳನ್ನು ಆರಂಭಿಸಿದೆ. ಇದಕ್ಕಾಗಿ ರಾಜ್ಯಾದ್ಯಂತ ಪದವಿ ವಿದ್ಯಾರ್ಥಿಗಳಿಗೆ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆಗಳನ್ನು ನೀಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ. 

ರಾಜ್ಯದಲ್ಲಿ ಶಾಲೆ ಆರಂಭ ವಿಚಾರ: ನೂತನ ಸಿಎಂಗೆ ಈಗ ಎದುರಾಗಿದೆ ಹೊಸ ಸವಾಲು

ಅದೇ ರೀತಿ, ಶಾಲೆಗಳನ್ನು ಆರಂಭಿಸಬೇಕೆಂಬ ಆಗ್ರಹವೂ ಇದೆ. ಇದರ ಮಧ್ಯೆಯೇ ಮೂರನೇ ಅಲೆಯ ಆತಂಕವೂ ಜೋರಾಗಿದೆ. ನಿಧಾನವಾಗಿ ಕೋವಿಡ್ ಹೊಸ ಪ್ರಕರಣಗಳು ಹೆಚ್ಚಾಗುತ್ತಿವೆ. ನೆರೆಯ ಕೇರಳದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಆತಂಕಕ್ಕೆ ಕಾರಣಾಗಿದೆ. ಹಾಗಾಗಿ ಶಾಲೆಗಳ ಆರಂಭವೂ ಮತ್ತೆ ತ್ರಿಶಂಕು ಸ್ಥಿತಿಯಲ್ಲಿ ಉಳಿದರೂ ಉಳಿಯಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

click me!