ಮಧ್ಯಾಹ್ನ 2 ಗಂಟೆಗೆ CBSE 12ನೇ ತರಗತಿ ಫಲಿತಾಂಶ: ವೀಕ್ಷಿಸಲು ಹೀಗೆ ಮಾಡಿ!

By Suvarna News  |  First Published Jul 30, 2021, 12:20 PM IST

* ಕೋವಿಡ್‌ ಹಿನ್ನೆಲೆಯಲ್ಲಿ ರದ್ದಾದ 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆ ಫಲಿತಾಂಶ

* ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪ್ರಕಟಗೊಳ್ಳಲಿದೆ ಬಹುನಿರೀಕ್ಷಿತ ಫಲಿತಾಂಶ

* 30:30:40 ಅನುಪಾತ ಆಧರಿಸಿ ಫಲಿತಾಂಶ ಪ್ರಕಟ


ನವದೆಹಲಿ(ಜು.30): ಕೋವಿಡ್‌ ಹಿನ್ನೆಲೆಯಲ್ಲಿ ರದ್ದಾದ 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆ ಫಲಿತಾಂಶ ಇಂದು, ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪ್ರಕಟಗೊಳ್ಳಲಿದೆ. 10 ಹಾಗೂ 11ನೇ ತರಗತಿಯ ಫೈನಲ್ ರಿಸಲ್ಟ್ ಹಾಗೂ 12ನೇ ತರಗತಿಯ ಪ್ರೀ ಬೋರ್ಡ್‌ ಎಕ್ಸಾಂ ಅಂಕಗಳನ್ನಾಧರಿಸಿ ಈ ಫಲಿತಾಂಶ ನೀಡಲಾಗುತ್ತದೆ. ಸಿಬಿಎಸ್‌ಇ ಮಂಡಳಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅಧಿಕೃತ ವೆಬ್‌ಸೈಟ್ cbseresults.nic.in ಅಥವಾ cbse.gov.in ನಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.

ಈ ಸೂತ್ರದ ಆಧಾರದಲ್ಲಿ ಫಲಿತಾಂಶ

Tap to resize

Latest Videos

ಈ ಬಾರಿ ಸಿಬಿಎಸ್ಇ 12ನೇ ತರಗತಿ ಫಲಿತಾಂಶ 30:30:40 ಸೂತ್ರದಡಿ ತಯಾರಿಸಲಾಗಿದೆ.  10 ಮತ್ತು 11ನೇ ತರಗತಿ ಅಂತಿಮ ಪರೀಕ್ಷೆ ಅಂಕ ಮತ್ತು 12ನೇ ತರಗತಿಯಲ್ಲಿ ಈಗಾಗಲೇ ನಡೆಸಿರುವ ಪೂರ್ವ ಸಿದ್ಧತಾ ಪರೀಕ್ಷೆಗಳ ಅಂಕ ಆಧರಿಸಿ 30:30:40 ಅನುಪಾತ ಆಧರಿಸಿ ಫಲಿತಾಂಶ ಪ್ರಕಟಿಸಲಾಗುತ್ತದೆ.

CBSE Class XII Result to be announced today at 2 P.M.💯% pic.twitter.com/eWf3TUGoMH

— CBSE HQ (@cbseindia29)

ಫಲಿತಾಂಶ ವೀಕ್ಷಣೆ ಹೇಗೆ.?

ವಿದ್ಯಾರ್ಥಿಗಳು ಇಂದು, ಜುಲೈ 30ರಂದು ಮಧ್ಯಾಹ್ನ ಪ್ರಕಟಗೊಳ್ಳಲಿರುವ CBSE 12ನೇ ತರಗತಿ ಫಲಿತಾಂಶವನ್ನು ಬೋರ್ಡ್ ಅಧಿಕೃತ ಜಾಲತಾಣ  cbseresults.nic.in ಅಥವಾ cbse.gov.in ಗೆ ಭೇಟಿ ನೀಡಿ, ನೋಂದಣಿ ಸಂಖ್ಯೆ ನಮೂದಿಸಿ  ನೋಡಬಹುದು. ಅಲ್ಲದೇ ವಿದ್ಯಾರ್ಥಿಗಳು ಡಿಜಿಲಾಕರ್ ನಲ್ಲಿ ತಮ್ಮ ಫಲಿತಾಂಶ ಪಡೆಯಬಹುದು.

ಮೋದಿ ನೇತೃತ್ವದ ಸಭೆಯಲ್ಲಿ ಪರೀಕ್ಷೆ ರದ್ದು

ಜೂ.1ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 12ನೇ ತರಗತಿ ಸಿಬಿಎಸ್‌ಇ ಪರೀಕ್ಷೆ ರದ್ದು ಮಾಡಲಾಗಿತ್ತು. ಇದರ ಬೆನ್ನಲ್ಲೇ ಐಸಿಎಸ್‌ಇ ಪರೀಕ್ಷೆ ರದ್ದು ಮಾಡಲಾಗಿತ್ತು.

click me!