ಪಠ್ಯ ಪುಸ್ತಕ ಕಾಂಗ್ರೆಸ್- ಕಮ್ಯುನಿಸ್ಟ್ ಪುಸ್ತಕವಾಗಿತ್ತು: ಬರಗೂರು ವಿರುದ್ಧ ಚಕ್ರತೀರ್ಥ ಆರೋಪ

By Girish Goudar  |  First Published Apr 11, 2022, 11:00 AM IST

*   ಬೈಬಲ್ ಮತ್ತು ಕುರಾನ್ ಕಾಲ ಅಂದ್ರೆ ಏನು? 
*  ಹತ್ತನೇ ತರಗತಿಯ ಪಠ್ಯದಲ್ಲಿ ಅನೇಕ ತಪ್ಪುಗಳನ್ನು ಮಾಡಿದ್ದಾರೆ
*  ಸಿಂಧೂ ನದಿಯ ನಾಗರಿಕತೆಯ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ 


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು(ಏ.11): ಬರಗೂರು ರಾಮಚಂದ್ರಪ್ಪನವರು(Baraguru Ramachandrappa) ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ಪಠ್ಯ ಪುಸ್ತಕಗಳು ಕಾಂಗ್ರೆಸ್(Congress) ಪಕ್ಷದ ಪುಸ್ತಕವಾಗಿತ್ತು. ಕಾಂಗ್ರೆಸ್ ಜೊತೆಗೆ ಇಲ್ಲಿ ಕಮ್ಯುನಿಸ್ಟ್(Communist) ಚಿಂತನೆಗಳು ತುಂಬಿಕೊಂಡಿತ್ತು ಎಂದು ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ(Rohit Chakrathirtha) ಅವರು ಗಂಭೀರವಾಗಿ ಆರೋಪ ಮಾಡಿದ್ದಾರೆ.

Tap to resize

Latest Videos

ಇಂದು(ಸೋಮವಾರ) ನಗರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಪಠ್ಯಪುಸ್ತಕ ಪರಿಶೀಲನಾ ಸಮಿತಿ(Textbook Review Committee) ಅಧ್ಯಕ್ಷ ರೋಹಿತ್ ಚಕ್ರ ತೀರ್ಥ ಅವರು, ಪಠ್ಯಪುಸ್ತಕಗಳು ಪಕ್ಷದ ಪುಸ್ತಕಗಳಾಗಿತ್ತು, ನಾವು ಅದನ್ನ ಪಕ್ಷಾತೀತ ಪುಸ್ತಕ ಮಾಡ್ತೇವೆ.‌ ಇದು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ ಪಠ್ಯ ಪುಸ್ತಕವಾಗಿತ್ತು. ಇದಕ್ಕೆ ‌ಉದಾಹರಣೆ ಕೊಡ್ತೇನೆ. ಯಾವುದೇ ಪಕ್ಷದ ಸಿದ್ದಾಂತ ಕೊಡಬಾರದು ಅಂತ ನಾವು ಪರಿಷ್ಕರಣೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಅನ್ನೋದಕ್ಕಿಂದ ಇಲ್ಲಿ ಕಮ್ಯುನಿಸ್ಟ್ ಚಿಂತನೆಗಳು ತುಂಬಿಕೊಂಡಿತ್ತು. ಬರಗೂರು ರಾಮಚಂದ್ರಪ್ಪನವರ ಸಿದ್ಧಾಂತ ಏನು‌ ಅನ್ನೋದು ಎಲ್ಲರಿಗೂ ಗೊತ್ತಿದೆ. ಅದನ್ನೇ ಅವರು ಪಠ್ಯದಲ್ಲಿ ಹೇರುವ ಕೆಲಸ ಮಾಡಿದ್ದಾರೆ ಅಂತ ಹೇಳಿದ್ದಾರೆ. 

ಪರ ಧರ್ಮ ಸಹಿಷ್ಣುತೆ ಅವಶ್ಯ: ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ!

ವಿವೇಕಾನಂದರ ಭಾಷಣದ ಬಗ್ಗೆ ತದ್ವಿರುದ್ಧ ಹೇಳಿಕೆಗಳನ್ನ ಬರೆದು ಪಠ್ಯದಲ್ಲಿ ತಂದ್ರು. ನಾವು ಪಠ್ಯ ಪುಸ್ತಕವನ್ನ ಭಾರತದ ಪುಸ್ತಕವಾಗಿ ಮಾಡ್ತೇವೆ. ಭಾರತದ(India) ಉಲ್ಲೇಖಗಳನ್ನ ಅವರು ತೆಗೆದು ಹಾಕಿದ್ದರು. ಮಾತೃಭೂಮಿ ಶಬ್ದ ತೆಗೆದಿದ್ದರು. ಮಹರ್ಷಿಗಳ ವಿಚಾರದಲ್ಲಿ ಅವರಿಗೆ ಏಕವಚನ ಪದ ಬಳಸಿದ್ದರು. ಎಲ್ಲೆಲ್ಲಿ ಹಿಂದೂ ಧರ್ಮದ ವಿಚಾರಗಳು ಬರುತ್ತೋ ಅಲ್ಲೆಲ್ಲ ಹೀಗಳಿಕೆ ಮಾಡಿದ್ದರು. ಇಡೀ ಪುಸ್ತಕಗಳು ಹಿಂದೂ(Hindu) ಧರ್ಮಕ್ಕೆ ಅವಮಾನವಾಗೋ ರೀತಿ ಇದೆ. ಪ್ರಜಾಪ್ರಭುತ್ವ ಅನ್ನೋ ಚಾಪ್ಟರ್‌ನಲ್ಲಿ ಕಮ್ಯುನಿಸ್ಟ್ ಸರ್ಕಾರಗಳನ್ನೇ ವಿಜೃಂಭಿಸಿದ್ದರು.‌ ನಾವು ಟಿಪ್ಪುವಿನ(Tipu Sultan) ವೈಭವೀಕರಣ ಅನ್ನೋದಕ್ಕಿಂತ ಅನಗತ್ಯ ವಿಚಾರ ತೆಗೀತಿವಿ. ಅವನ ಯುದ್ಧಗಳ ಬಗ್ಗೆ ಕೆಲವು ಅನಗತ್ಯ ಇವೆ, ಅದನ್ನ ತೆಗೆದಿದ್ದೇವೆ. ಯಾವುದು ಉಚಿತವೋ ಅದು ಇರುತ್ತೆ, ಅನುಚಿತ ಅನಿಸಿದ್ದು ಇರಲ್ಲ. ಇದು ಕೇವಲ ಟಿಪ್ಪು ಮಾತ್ರ ಅಲ್ಲ, ಎಲ್ಲದರಲ್ಲೂ ಇದನ್ನ ಅನ್ವಯಿಸ್ತೇವೆ ಎಂದರು.

'ಪಠ್ಯಗ ಬಗ್ಗೆ ಒಂದೇ ಒಂದು ಸಾಕ್ಷ್ಯವನ್ನ ಬರಗೂರು ರಾಮಚಂದ್ರಪ್ಪ ಕೊಟ್ಟಿಲ್ಲ'

ಲಿಟ್ ಫೆಸ್ಟ್‌ನಲ್ಲಿ 'ಪಠ್ಯ ವಿಮರ್ಶೆ' ವಿಚಾರದ ಸಂವಾದದಲ್ಲಿ ಪಾಲ್ಗೊಳ್ಳಲು ಬರಗೂರು ಅವರನ್ನ ನಾವು ಚರ್ಚೆಗೆ ಕರೆದಿದ್ದೇವೆ, ನಿರಂತರವಾಗಿ ಕೇಳಿದ್ದೇವೆ. ಪಠ್ಯಗಳ ಐತಿಹಾಸಿಕ ಸಾಕ್ಷ್ಯಗಳನ್ನು ನಮಗೆ ಸಲ್ಲಿಸಿ ಅಂತ ಹೇಳಿದ್ದೇವೆ. ಆದರ ನಾಲ್ಕೈದು ವರ್ಷಗಳಿಂದ ಕೇಳಿದ್ರೂ ಒಂದೇ ಒಂದು ಸಾಕ್ಷ್ಯ ನಮಗೆ ಕೊಟ್ಟಿಲ್ಲ. ಅವರು ಬರೆದ ಅಷ್ಟೂ ಬರಹ ಮತ್ತು ವಾಕ್ಯಗಳಿಗೆ ಸಾಕ್ಷ್ಯ ಕೊಟ್ಟಿಲ್ಲ. ಪಠ್ಯದಲ್ಲಿ ಬರೆದ ಯಾವುದಕ್ಕೂ ಸಾಕ್ಷಿ, ದಾಖಲೆ ಮತ್ತು ಪುರಾವೆ ಅವರು ಕೊಟ್ಟಿಲ್ಲ. ಬರಗೂರು ರಾಮಚಂದ್ರಪ್ಪನವರು 2015ರಲ್ಲಿ ಪಠ್ಯದಲ್ಲಿ ಪರಿಷ್ಕರಣೆ ಮಾಡಿದ್ದರು. ಮಧ್ಯ ಏಷ್ಯಾ ಮೂಲದ ಆರ್ಯ ಜನಾಂಗದ ಆಗಮನದೊಂದಿಗೆ‌ ಭಾರತದಲ್ಲಿ ಹೊಸ ಸಂಸ್ಕೃತಿ ಆರಂಭವಾಯಿತು. ಅದನ್ನ ವೇದಗಳ ಸಂಸ್ಕೃತಿ ಎಂದು ಕರೆಯಲಾಗುತ್ತದೆ. ವೇದಗಳ ಸಂಸ್ಕೃತಿ ಮೊದಲು ಸರಸ್ವತಿ ನದಿ ಬಯಲಿನಲ್ಲಿ, ನಂತರ ಗಂಗಾ ನದಿ ಬಯಲಿನಲ್ಲಿ ತಲೆ ಎತ್ತಿತ್ತು. ವೇದಸಾಹಿತ್ಯ ರೂಪುಗೊಂಡ ಕಾಲವನ್ನು ವೇದಕಾಲ ಎಂದು ಕರೆಯುತ್ತಾರೆ ಅಂತ ಪಠ್ಯದಲ್ಲಿ ಬರಗೂರು ಬರೆದಿದ್ದರು. ಇದರಲ್ಲಿ ನಾನು ಕನಿಷ್ಟ ಹತ್ತು ತಪ್ಪುಗಳನ್ನು ತೋರಿಸುತ್ತೇನೆ. ಆರ್ಯರು ಮಧ್ಯ ಏಷ್ಯಾದಿಂದ ಬಂದ್ರಾ? ಎಲ್ಲಿಂದ ಬಂದ್ರು ಅನ್ನೋ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ. ಹೀಗಿರುವಾಗ ಅದನ್ನ ಹೇಗೆ ಹೇಳ್ತೀರಿ, ಅದು ಆರ್ಯ ಜನಾಂಗವೇ ಎಂಬ ಬಗ್ಗೆ ಸಾಕ್ಷ್ಯ ಎಲ್ಲಿ ಸಿಕ್ಕಿತು? ವೇದಗಳ ಬಗ್ಗೆ ಹೇಳದೇ ವೇದಕಾಲ ಸಂಸ್ಕೃತಿ(Culture) ಅಂದ್ರೆ ಏನದು? ವೇದಗಳ ವಿಚಾರದಲ್ಲಿ ಸಿಂಧೂ ನದಿಯನ್ನ ಉದ್ದೇಶಪೂರ್ವಕವಾಗಿ ತಪ್ಪಿಸಿದ್ದಾರೆ. 

ಸಿಂಧೂ ನದಿ ನಾಗರಿಕತೆ ಮತ್ತು ವೇದಕಾಲಕ್ಕೆ ಸಂಬಂಧ ಇಲ್ಲ ಅನ್ನೋದನ್ನ ಸ್ಥಾಪಿಸುವ ಉದ್ದೇಶ ಇದರಲ್ಲಿದೆ. ವೇದಕಾಲ ಅಂದ್ರೆ ಏನು ಅಂತ ಇಲ್ಲಿ ವಿಶ್ಲೇಷಣೆ ಮಾಡೋದಾದ್ರೆ ಬೈಬಲ್ ಮತ್ತು ಕುರಾನ್ ಕಾಲ ಅಂದ್ರೆ ಏನು? ರಾಜಕೀಯ ಇತಿಹಾಸ ಮಾತ್ರ ಅಲ್ಲ ಜನಸಾಮಾನ್ಯರ ಇತಿಹಾಸದಲ್ಲೂ(History) ತಪ್ಪುಗಳನ್ನ ಮಾಡಿದ್ದಾರೆ. ಆರರಿಂದ ಹತ್ತನೇ ತರಗತಿಯ ಪಠ್ಯದಲ್ಲಿ ಅನೇಕ ತಪ್ಪುಗಳನ್ನು ಮಾಡಿದ್ದಾರೆ. ಸಿಂಧೂ ನದಿಯ ನಾಗರಿಕತೆಯ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಹೀಗಾದಾಗ ಪರಿಷ್ಕರಣೆ ಖಂಡಿತಾ ಮಾಡಬೇಕಾಗುತ್ತದೆ ಎಂದಿದ್ದಾರೆ.
 

click me!