ಬೆಂಗಳೂರು (ಡಿ.27): ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಭಾನುವಾರ ಯುಜಿಸಿ (UGC) ನಡೆಸಿದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್ - NET)ಯಲ್ಲಿ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ (Students) ಕನ್ನಡ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಶೇ.90ರಷ್ಟು ಹಿಂದಿ ಭಾಷಾ ಪ್ರಶ್ನೆಗಳನ್ನು ಕೇಳಲಾಗಿದ್ದು, ವಿದ್ಯಾರ್ಥಿಗಳನ್ನು ತೀವ್ರ ಗೊಂದಲಕ್ಕೀಡಾಗಿದ್ದಾರೆ. ಬೆಂಗಳೂರು (Bengaluru), ಧಾರವಾಡ, ಕೊಪ್ಪಳ ಸೇರಿದಂತೆ ವಿವಿಧೆಡೆ ವಿದ್ಯಾರ್ಥಿಗಳ ಪ್ರತಿಭಟನೆ, ಆಕ್ರೋಶದ ಬಳಿಕ ‘ತಾಂತ್ರಿಕ ದೋಷದ’ ಸಮರ್ಥನೆ ನೀಡಿರುವ ಯುಜಿಸಿ ‘ಮರು ಪರೀಕ್ಷೆ ನಡೆಸುವ’ ಭರವಸೆ ನೀಡಿದೆ.
ಪ್ರಮಾದಗಳೇನು?: ಕನ್ನಡ ಭಾಷಾ ಪರೀಕ್ಷೆಯಲ್ಲಿ ಭಾಗ 1ರಲ್ಲಿ ಪ್ರಶ್ನೆ ಪತ್ರಿಕೆ ಸರಿಯಾಗಿತ್ತು. ಭಾಗ 2ರಲ್ಲಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ 10 ಅಂಕಗಳಿಗೆ ಮಾತ್ರ ಕನ್ನಡ (Kannada) ಭಾಷೆಯ ಪ್ರಶ್ನೆಗಳು ಇದ್ದು, ಉಳಿದ ಶೇ.90ರಷ್ಟುಅಂಕಗಳಿಗೆ ಹಿಂದಿ ಭಾಷೆಯ ಪ್ರಶ್ನೆಗಳನ್ನು ಕೇಳಲಾಗಿದೆ.
undefined
ಇದನ್ನು ನೋಡಿ ವಿದ್ಯಾರ್ಥಿಗಳು (Students) ಆತಂಕಕ್ಕೀಡಾಗಿ ಕೂಡಲೇ ಪರೀಕ್ಷಾ ಕೇಂದ್ರದಿಂದ ಹೊರಬಂದು ಪ್ರತಿಭಟನೆ ನಡೆಸಿದ್ದಾರೆ. ಈ ಎಡವಟ್ಟು ಪರೀಕ್ಷಾ ಕೇಂದ್ರದ ಮುಖ್ಯಸ್ಥರ ಗಮನಕ್ಕೆ ತಂದಾಗ ‘ತಾಂತ್ರಿಕ ದೋಷದಿಂದ ಹೀಗೆ ಆಗಿದೆ. ಕೆಲವು ಸಮಯದ ನಂತರ ಸರಿಯಾಗುತ್ತೆ’ ಎಂದು ಹೇಳಿದರು. ನಂತರ ಕೆಲವು ಪರೀಕ್ಷಾರ್ಥಿಗಳಿಗೆ ಸಂಪೂರ್ಣ ಕನ್ನಡ (Kannada) ಪ್ರಶ್ನೆ ಪತ್ರಿಕೆ ಬಂದರೂ ಕೊನೆಯಲ್ಲಿ ತಾಂತ್ರಿಕ ದೋಷದಿಂದ ಸಬ್‌ಮಿಟ್ ಆಗಲಿಲ್ಲ.
‘ಕೆಲ ನಿಮಿಷದಲ್ಲಿ ಗೊಂದಲ ಸರಿಹೋಗಲಿದೆ’ ಎಂದ ಅಧಿಕಾರಿಗಳು 3 ಗಂಟೆ ಕಾದು ಕುಳಿತರೂ ಪ್ರಶ್ನೆ ಪತ್ರಿಕೆ ಪೂರೈಕೆ ಮಾಡಲಾಗಿಲ್ಲ ಎಂದು ಪರೀಕ್ಷಾರ್ಥಿಗಳು ಆರೋಪಿಸಿದ್ದಾರೆ. ಯುಜಿಸಿಯಿಂದಲೇ (UGC) ಈ ಸಮಸ್ಯೆ ಆಗಿರುವುದರಿಂದ ಮರು ಪರೀಕ್ಷೆಗೆ (Exam) ವಿದ್ಯಾರ್ಥಿಗಳು ಪಟ್ಟು ಹಿಡಿದರು. ಇದಕ್ಕೆ ಮಣಿದ ಯುಜಿಸಿ, ‘ಮುಂದಿನ ದಿನಗಳಲ್ಲಿ ಮರು ಪರೀಕ್ಷೆ ಮಾಡುವುದಾಗಿ ತಮ್ಮ ವೆಬ್‌ಸೈಟ್ ನಲ್ಲಿ ಪ್ರಕಟಿಸಿದೆ’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಪರೀಕ್ಷಾರ್ಥಿ ಅರ್ಚನಾ, ‘ಇದು ಕನ್ನಡಕ್ಕೆ ಮಾಡಿರುವ ಅವಮಾನ. ನಾವು ಇಂದು ಕನ್ನಡ ಸಾಹಿತ್ಯ ಪರೀಕ್ಷೆ ಬರೆಯಲು ಬಂದಿದ್ದು, ಅದರಲ್ಲಿ ಕನ್ನಡದ 10 ಪ್ರಶ್ನೆಗಳಿದ್ದು ಉಳಿದ ಎಲ್ಲಾ ಪ್ರಶ್ನೆಗಳು ಹಿಂದಿ ಭಾಷೆಯಲ್ಲಿ ಪ್ರಕಟವಾಗಿದ್ದವು. ಕರ್ನಾಟಕದಲ್ಲಿ ಯಾವುದೇ ಪರೀಕ್ಷೆ ನಡೆದರೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಡೆಯಬೇಕು’ ಎಂದು ಒತ್ತಾಯಿಸಿದರು.
ಅರ್ಜಿ ಸಲ್ಲಿಸಲು ಜೂನ್2 ಕೊನೆಯ ದಿನ :
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ (CSIR ) ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (University Grants Commission-UGC) ಜಂಟಿಯಾಗಿ ಪರೀಕ್ಷೆಯ ನಡೆಸಲು ತೀರ್ಮಾನಿಸಿದ್ದು, ಎನ್ಇಟಿ (NET) ಜೂನ್ 2021ರ ಅಧಿಸೂಚನೆಯನ್ನು ಪ್ರಕಟ ಮಾಡಲಾಗಿದೆ. ಜನವರಿ 2 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ https://csirnet.nta.nic.in/ ಗೆ ಭೇಟಿ ನೀಡಲು ಕೋರಲಾಗಿದೆ.
ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಮತ್ತು ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಲೆಕ್ಚರ್‌ಶಿಪ್ (LS)/ಸಹಾಯಕ ಪ್ರಾಧ್ಯಾಪಕರ (assistant professor) ಅರ್ಹತೆಯನ್ನು ನಿರ್ಧರಿಸಲು ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ವಿಜ್ಞಾನ ವಿಭಾಗದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ಬರೆಯಬಹುದು. ಪರೀಕ್ಷೆಯ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.
ಭೌತಶಾಸ್ತ್ರ, ಜೀವಶಾಸ್ತ್ರ, ಮ್ಯಾಥಮೆಟಿಕಲ್ ಸೈನ್ಸ್ ವಿಷಯ ಸೇರಿದಂತೆ ವಿವಿಧ ವಿಷಯಗಳಿಗೆ ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ಹಾಗೂ ಯುಜಿಸಿ ಜಂಟಿಯಾಗಿ ಎನ್ಇಟಿ ಪರೀಕ್ಷೆಯನ್ನು ನಡೆಸುತ್ತದೆ.
SSLC EXAMINATION 2022: SSLC ಪರೀಕ್ಷೆ ನೋಂದಣಿ ವಿಸ್ತರಣೆ, ಮೇ ನಲ್ಲಿ ಪರೀಕ್ಷೆ ನಡೆಸಲು ಚಿಂತನೆ
ವಿದ್ಯಾರ್ಹತೆ: ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ ಯುಜಿಸಿ ಎನ್ಇಟಿ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರಬೇಕು ಅಥವಾ ಬಿಇ/ಬಿ.ಟೆಕ್/ಬಿ.ಫಾರ್ಮ/ಎಂಬಿಬಿಎಸ್/ಇಂಟೆಗ್ರೇಟೆಡ್ ಬಿಎಸ್-ಎಂಎಸ್ ಪೂರ್ಣಗೊಳಿಸಿರಬೇಕು.
CSIR NET ಪರೀಕ್ಷೆಯನ್ನು ಎನ್‌ಟಿಎ ಕೆಮಿಕಲ್ ಸೈನ್ಸ್, ಅರ್ಥ್, ಅಟ್ಮೋಸ್ಫೆರಿಕ್, ಓಷಿಯನ್ ಅಂಡ್ ಪ್ಲಾನೆಟರಿ ಸೈನ್ಸ್, ಲೈಫ್ ಸೈನ್ಸ್, ಮ್ಯಾಥೆಮೆಟಿಕಲ್ ಸೈನ್ಸ್, ಫಿಸಿಕಲ್ ಸೈನ್ಸ್ ವಿಭಾಗಗಳ ಸ್ನಾತಕೋತ್ತರ ಪದವೀಧರ ಅಭ್ಯರ್ಥಿಗಳಿಗೆ ನಡೆಸಲಾಗುತ್ತದೆ. ಪರೀಕ್ಷೆಯು 2022ರ ಜನವರಿ 29 , ಫೆಬ್ರವರಿ 5 ಮತ್ತು ಫೆಬ್ರವರಿ 6ರಂದು ನಡೆಯಲಿದೆ. ಎರಡು ಶಿಫ್ಟ್ ಗಳಲ್ಲಿ ಪರೀಕ್ಷೆ ನಡೆಯಲಿದ್ದು ಬೆಳಗ್ಗೆ 9ರಿಂದ 12 ಮತ್ತು ಮದ್ಯಾಹ್ನ 3 ರಿಂದ 6 ಗಂಟೆಯವರೆಗೆ ನಡೆಯಲಿದೆ. NTA ಯುಜಿಸಿ ನೆಟ್ ಪರೀಕ್ಷೆಯ ಮಾದರಿಯನ್ನು ಬದಲಾಯಿಸಿದೆ. ಪೇಪರ್1- ಸಾಮಾನ್ಯ ಆಪ್ಟಿಟ್ಯೂಡ್ 50 ಪ್ರಶ್ನೆಗಳು, ಪ್ರತಿ ಪ್ರಶ್ನೆಯು 2 ಅಂಕಗಳನ್ನು ಹೊಂದಿದೆ. ಪೇಪರ್ 2- ಇದು ವಿದ್ಯಾರ್ಥಿ ಆಯ್ಕೆ ಮಾಡಿದ ವಿಷಯಕ್ಕೆ ಸಂಬಂಧಿಸಿ 100 ಪ್ರಶ್ನೆಗಳನ್ನು ಹೊಂದಿರಲಿದೆ, ಪ್ರತಿ ಪ್ರಶ್ನೆಗಳಿಗೆ 2 ಅಂಕಗಳಿರುತ್ತದೆ. ಎರಡೂ ಪತ್ರಿಕೆಗಳನ್ನು 3 ಗಂಟೆಗಳ ಅವಧಿಯಲ್ಲಿ ನಡೆಸಲಾಗುತ್ತದೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ನಡೆಯಲಿದ್ದು ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 2,2022 (ರಾತ್ರಿ 11:50ರೊಳಗೆ), ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಜನವರಿ 3, 2022 (ರಾತ್ರಿ 11:50ರೊಳಗೆ)
ಈ ಪರೀಕ್ಷೆಯಲ್ಲಿ ಪಾಸ್ ಆದವರು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದಾಗ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಜೂನಿಯರ್ ರಿಸರ್ಚ್ ಫೆಲೋಶಿಪ್ ಗೆ ಆಯ್ಕೆ ಆದವರು ಸಂಶೋಧನೆಗಾಗಿ ಪ್ರವೇಶಾತಿ ಪಡೆಯಬಹುದು, ಯುನಿವರ್ಸಿಟಿಗಳ ಹುದ್ದೆಗೆ ಅರ್ಜಿ ಸಲ್ಲಿಸಬಹುದು, ನ್ಯಾಷನಲ್ ಲ್ಯಾಬೋರೇಟರಿಗಳಲ್ಲಿ ಸಹಾಯಕ ಪ್ರಾಧ್ಯಾಪಕ ಮತ್ತು ರಿಸರ್ಚ್ ಫೆಲೋಶಿಪ್‌ಗಳಿಗೆ ಪ್ರವೇಶಪಡೆಯಲು ಅರ್ಹ.
ವಯೋಮಿತಿ: ಜೂನಿಯರ್ ರಿಸರ್ಚ್ ಫೆಲೋಶಿಪ್ ಬಯಸುವವರಿಗೆ ಗರಿಷ್ಠ ವಯೋಮಿತಿ 28 ವರ್ಷ. ಸಹಾಯಕ ಪ್ರಾಧ್ಯಾಪಕ ಬಯಸುವವರಿಗೆ ಗರಿಷ್ಟ ವಯೋಮಿತಿ ಇರುವುದಿಲ್ಲ.
ಅತೀ ಶೀಘ್ರದಲ್ಲಿ ಪ್ರವೇಶ ಪತ್ರ ಅಧಿಕೃತ ವೆಬ್ ತಾಣದಲ್ಲಿ ಸಿಗಲಿದೆ. ಜನವರಿ 29 ಮತ್ತು ಫೆಬ್ರವರಿ 5 ಮತ್ತು ಫೆಬ್ರವರಿ 6 ರಂದು ಪರೀಕ್ಷೆ ಲನಡೆಯಲಿದ್ದು, ಫಲಿತಾಂಶದ ದಿನಾಂಕ ಕೂಡ ಇಲಾಖೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಶೀಘ್ರದಲ್ಲಿ ಪ್ರಕಟವಾಗಲಿದೆ.
ಅರ್ಜಿ ಶುಲ್ಕ: ಸಾಮಾನ್ಯ /ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 1000/-ರೂ ಓಬಿಸಿ ಅಭ್ಯರ್ಥಿಗಳಿಗೆ ರೂ.500/-ರೂ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ/ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳು 250/-ರೂ ಅನ್ನು ಆನ್‌ಲೈನ್ ಮೂಲಕ ಜನವರಿ 3,2022ರೊಳಗೆ ಪಾವತಿಸಬೇಕಿರುತ್ತದೆ. ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.