Girls Education: ಹಳ್ಳಿ ಪ್ರೌಢಶಾಲೆ ಹೆಣ್ಮಕ್ಳಿಗೂ ವಿದ್ಯಾನಿಧಿ ವಿಸ್ತರಣೆ: ಸಿಎಂ ಬೊಮ್ಮಾಯಿ

Kannadaprabha News   | Asianet News
Published : Dec 27, 2021, 06:21 AM IST
Girls Education: ಹಳ್ಳಿ ಪ್ರೌಢಶಾಲೆ ಹೆಣ್ಮಕ್ಳಿಗೂ ವಿದ್ಯಾನಿಧಿ ವಿಸ್ತರಣೆ: ಸಿಎಂ ಬೊಮ್ಮಾಯಿ

ಸಾರಾಂಶ

*   ಹೆಣ್ಮಕ್ಕಳು ಶಾಲೆ ಬಿಡುವುದನ್ನು ತಡೆಯಲು ಕ್ರಮ *   ವಿಶ್ವ ರೈತ ದಿನಾಚರಣೆಯಲ್ಲಿ ಘೋಷಣೆ *   ರೈತರ ಆದಾಯ ಹೆಚ್ಚಿಸಲು ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ  

ಮೈಸೂರು(ಡಿ.27): ಹಳ್ಳಿಗಳಲ್ಲಿ ಶಾಲೆ ಬಿಡುವ ಹೆಣ್ಣು ಮಕ್ಕಳ(Female) ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಸರ್ಕಾರ ಜಾರಿಗೊಳಿಸಿರುವ ರೈತ ವಿದ್ಯಾನಿಧಿ(Raitha Vidyanidhi) ಯೋಜನೆಯನ್ನು ಗ್ರಾಮೀಣ ಪ್ರೌಢಶಾಲೆ ಹೆಣ್ಣು ಮಕ್ಕಳಿಗೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಘೋಷಿಸಿದರು. ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಮೈಸೂರಿನ(Mysuru) ಕಲಾಮಂದಿರದಲ್ಲಿ ಭಾನವಾರ ಏರ್ಪಡಿಸಿದ್ದ ವಿಶ್ವ ರೈತ ದಿನಾಚರಣೆ(World  Farmers' Day) ಉದ್ಘಾಟಿಸಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಅವರಿಗೆ ರೈತ ರತ್ನ ಪ್ರಶಸ್ತಿ ಪ್ರದಾನ ಮಾಡಿ ಈ ಘೋಷಣೆ ಮಾಡಿದರು.

ರೈತರ ಮಕ್ಕಳು ವಿದ್ಯಾವಂತರಾಗಲಿ ಎಂಬ ಉದ್ದೇಶದಿಂದ ಇಡೀ ಭಾರತದಲ್ಲಿ(India) ಪ್ರಥಮವಾಗಿ ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣ(Education) ಪಡೆಯುವ ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಸ್ಕಾಲರ್‌ಶಿಪ್‌ ಯೋಜನೆ ಜಾರಿಗೆ ತಂದಿದ್ದೇನೆ. ಈಗಾಗಲೇ ಈ ಯೋಜನೆಯಡಿ ರಾಜ್ಯದ 2.40 ಲಕ್ಷ ಮಕ್ಕಳಿಗೆ ಸೌಲಭ್ಯ ನೀಡಲಾಗಿದೆ. ಮಾರ್ಚ್‌ ವೇಳೆಗೆ ಈ ಸಂಖ್ಯೆ 5 ಲಕ್ಷ ತಲುಪಲಿದೆ. ಗ್ರಾಮೀಣ ಭಾಗದ ಪ್ರೌಢಶಾಲೆಯ ಹೆಣ್ಣು ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸುವ ಆಲೋಚನೆ ಇದ್ದು, ಇದರಿಂದ ಹೆಣ್ಣು ಮಕ್ಕಳು ಶಾಲೆ ಬಿಡುವುದನ್ನು ತಪ್ಪಿಸಬಹುದಾಗಿದೆ ಎಂದರು.

SSLC Examination 2022: SSLC ಪರೀಕ್ಷೆ ನೋಂದಣಿ ವಿಸ್ತರಣೆ, ಮೇ ನಲ್ಲಿ ಪರೀಕ್ಷೆ ನಡೆಸಲು ಚಿಂತನೆ

ಗ್ರಾಮೀಣ ಪ್ರದೇಶದಲ್ಲಿ ನಾಡಹೆಂಚಿನ ಮನೆಗಳು ಹೆಚ್ಚಾಗಿ ಕಾಣಸಿಗುತ್ತವೆ. ಅಲ್ಲಲ್ಲಿ ಆರ್‌ಸಿಸಿ ಮನೆಗಳು ಇರುತ್ತವೆ. ಈ ಬಗ್ಗೆ ಕೇಳಿದಾಗ ನೌಕರಿಗೆ ಹೋಗುವವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದರಿಂದ ಆರ್‌ಸಿಸಿ ಮನೆ ನಿರ್ಮಿಸಿಕೊಳ್ಳುತ್ತಾರೆ. ನೌಕರಿ(Job) ಇಲ್ಲದವರು ನಾಡಹೆಂಚಿನ ಮನೆಯಲ್ಲೇ ಇರುತ್ತಾರೆ ಎಂದು ತಿಳಿದು ಬಂತು. ಆದ್ದರಿಂದ ಬಡವರ ಮಕ್ಕಳಿಗೂ ವಿದ್ಯೆ ನೀಡಿದಲ್ಲಿ ಮುಂದೆ ಉದ್ಯೋಗ ದೊರೆತು ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದರು ಬೊಮ್ಮಾಯಿ.

ಪ್ರತ್ಯೇಕ ನಿರ್ದೇಶನಾಲಯ: 

ರೈತರ ಆದಾಯ ಹೆಚ್ಚಿಸುವ ಕುರಿತು ಕ್ರಮ ಕೈಗೊಳ್ಳಲು ರಾಜ್ಯ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸುವುದಾಗಿ ಬೊಮ್ಮಾಯಿ ಅವರು ಇದೇ ವೇಳೆ ಹೇಳಿದರು. ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಲಾಭ ಮಾಡಬಹುದು. ಇದಕ್ಕಾಗಿ ಯಾವ ರೀತಿ ಯೋಜನೆಗಳನ್ನು ರೂಪಿಸಬೇಕೆಂಬ ಬಗ್ಗೆ ಕೇಂದ್ರ ರೈತರ ಆದಾಯ ದ್ವಿಗುಣ ಸಮಿತಿ ಮುಖ್ಯಸ್ಥ ಅಶೋಕ ದಳವಾಯಿ ಅವರೊಂದಿಗೆ ಸಮಾಲೋಚಿಸಲಾಗಿದೆ, ಕೃಷಿ ಜೊತೆಗೆ ಕೃಷಿಯೇತರ ಉದ್ಯೋಗಗಳಿಂದಲೂ ರೈತರ ಆದಾಯ ಹೆಚ್ಚಿಸಬಹುದು ಎಂದರು.

ಗ್ರಾಮೀಣ ಸಾಲ ವ್ಯವಸ್ಥೆ ಬದಲಿಸಬೇಕಾಗಿದೆ. ಜತೆಗೆ ಮಾರುಕಟ್ಟೆನಿಯಂತ್ರಣ, ಸಮಗ್ರ ಬೆಳೆ ಪದ್ಧತಿಯಿಂದ ರೈತ ಸ್ವಾಭಿಮಾನದ ಬದುಕು ಸಾಗಿಸಬಹುದಾಗಿದೆ. ಆ ದಿಸೆಯಲ್ಲಿ ರೈತ ಪರ ಕಾರ್ಯಕ್ರಮಗಳಿಗೆ ಹೊಸ ಸ್ವರೂಪ ಕೊಡುತ್ತೇನೆಂದು ಭರವಸೆ ನೀಡಿದರು.

Guest Lecturers Strike: ಅತಿಥಿ ಉಪನ್ಯಾಸಕರ ಮುಷ್ಕರ: ಪಾಠವಿಲ್ಲದೆ ವಿದ್ಯಾರ್ಥಿಗಳ ಕಷ್ಟ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಪ್ರಮುಖ ರಾಜಕೀಯ ಪಕ್ಷಗಳೂ ತಾವು ರೈತರಿಗೆ ಸೇರಿದ್ದೇವೆ ಎಂಬ ಕಟು ಸತ್ಯ ತಿಳಿದುಕೊಂಡರೆ ಯಾವುದೇ ಸವಾಲನ್ನೂ ಎದುರಿಸಲು ಸಾಧ್ಯ. ಆಗ ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ರೈತರ ಕಲ್ಯಾಣ ಸಾಧ್ಯವಾಗುತ್ತದೆ. ಆದರೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಈ ಕಟು ಸತ್ಯ ಇನ್ನೂ ಅರ್ಥವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಮಾರುಕಟ್ಟೆ ನಿಯಂತ್ರಣ ಮಾಡದ ಹೊರತು ರೈತನದು ಅನಿಶ್ಚಿತತೆಯ ಬದುಕು. ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಮಾಡಿದ ನಂತರ ಬೆಲೆ ನಿಯಂತ್ರಣ ಹಾಗೂ ನಿಗದಿ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದರು.

ಎಪಿಎಂಸಿ ಕಾಯ್ದೆ ಬಗ್ಗೆ ಪರಿಶೀಲನೆ

ಕೇಂದ್ರ ಸರ್ಕಾರ(Central Government) ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌(Farm Laws Repeal) ಪಡೆದಿರುವುದರಿಂದ ರಾಜ್ಯದಲ್ಲಿ(Karnataka) ಭೂಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ ಬಗ್ಗೆ ಪರಿಶೀಲಿಸಲಾಗುವುದು. ಅಕಾಲಿಕ ಮಳೆಯಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಬಾಕಿ ಹಣವನ್ನು ಮಾರ್ಚಿನೊಳಗೆ ಪಾವತಿಸಲಾಗುವುದು ಎಂದು ಇದೇ ವೇಳೆ ಬೊಮ್ಮಾಯಿ ತಿಳಿಸಿದರು. ರಾಜ್ಯ ಸರ್ಕಾರ(Government of Karnataka) ರೈತರ ಪರ ಗಟ್ಟಿಯಾಗಿ ನಿಲ್ಲುತ್ತದೆ. ರೈತರ ಸಮಸ್ಯೆ ಪರಿಹಾರ ಮಾಡುವ ಇಚ್ಛಾಶಕ್ತಿ ಇದೆ. ನಾವು ಸಮಯ ವ್ಯರ್ಥ ಮಾಡದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.
 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ