ಬೆಂಗಳೂರು (ಸೆ.16) : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 5 ರಿಂದ 8ನೇ ತರಗತಿವರೆಗಿನ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಮವಸ್ತ್ರ ಸಹಿತ ವೇದಗಣಿತ ಕಲಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ವಿವಿಧೆಡೆ ನಿರ್ದಿಷ್ಟಸಂಖ್ಯೆಯ ಶಿಕ್ಷಕರಿಗೆ ಸ್ಥಳೀಯ ಸಂಘ ಸಂಸ್ಥೆಗಳ ಮೂಲಕ ತರಬೇತಿ ನೀಡುವ ಕಾರ್ಯ ನಡೆಸುತ್ತಿದೆ. ಮೂಲಗಳ ಪ್ರಕಾರ, ಪ್ರತಿ ಶಾಲೆಯಲ್ಲಿ 25 ಮಕ್ಕಳಿಗೆ ಮಾತ್ರ ಪ್ರತಿ ಶನಿವಾರ ಮತ್ತು ಭಾನುವಾರ ಶಾಲೆ ಮುಗಿದ ಬಳಿಕ ಎರಡು ಗಂಟೆ ಕಾಲ ವೇದಗಣಿತ ತರಬೇತಿ ನೀಡಲಾಗುತ್ತದೆ. ಜೊತೆಗೆ ಆ ಮಕ್ಕಳಿಗೆ ಪ್ರತ್ಯೇಕವಾಗಿ ಮತ್ತೊಂದು ಜೊತೆ ಸಮವಸ್ತ್ರ ನೀಡಲಾಗುತ್ತದೆ.
ಗುರುಕುಲ ಶಿಕ್ಷಣ, 64 ವಿದ್ಯೆಗಳನ್ನು ಕಲಿಸುತ್ತದೆ ಗೋಕರ್ಣ ವಿಷ್ಣುಗುಪ್ತ ವಿದ್ಯಾಲಯ
ಈ ಯೋಜನೆಗೆ ಎಸ್ಸಿ ಮತ್ತು ಎಸ್ಟಿಸಮುದಾಯದ ಅಭಿವೃದ್ಧಿಗೆ ಇರುವ ಎಸ್‌ಸಿಎಸ್‌ಪಿ-ಟಿಎಸ್ಪಿ ವಿಶೇಷ ಅನುದಾನ ಬಳಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದ್ದು ಈಗ ವಿವಾದಕ್ಕೀಡಾಗಿದೆ. ಮಕ್ಕಳಿಗೆ ವೇದಗಣಿತ ಕಲಿಸಲು ಶಿಕ್ಷಕರಿಗೆ ತರಬೇತಿ ನೀಡುವ ಸಂಸ್ಥೆಗಳಿಗೆ ಪ್ರತಿ ಗ್ರಾಮ ಪಂಚಾಯ್ತಿಗಳಿಂದ ತಲಾ ಒಂದು ಲಕ್ಷ ರು. ಅನುದಾನ ನೀಡಲು ಸೂಚಿಸಿದೆ. ಇದಕ್ಕಾಗಿ ಗ್ರಾಮ ಪಂಚಾಯ್ತಿಗಳಲ್ಲಿ ದಲಿತರಿಗಾಗಿ ಮೀಸಲಾದ ಅನುದಾನದಲ್ಲಿ ಶೇ.25 ರಷ್ಟನ್ನು ಬಳಸಿಕೊಳ್ಳಲು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅವಕಾಶ ನೀಡಿದೆ ಎನ್ನಲಾಗುತ್ತಿದೆ.
ಈಗಾಗಲೇ ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಹಲವು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲೆಗಳ ಎಸ್ಸಿ ಎಸ್ಟಿಮಕ್ಕಳಿಗೆ ವೇದಗಣಿತ ತರಬೇತಿ ನೀಡುವ ಜವಾಬ್ದಾರಿಯನ್ನು ಸ್ಥಳೀಯವಾದ ವಿವಿಧ ಸಂಘ ಸಂಸ್ಥೆಗಳಿಗೆ ವಹಿಸಲಾಗಿದೆ. ಕೆಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶಾನುಸಾರ ತಮ್ಮ ವ್ಯಾಪ್ತಿಯ ಶಾಲಾ ಶಿಕ್ಷಕರನ್ನು ತರಬೇತಿ ನೀಡಲು ಆಯ್ಕೆಯಾಗಿರುವ ಸಂಘ ಸಂಸ್ಥೆಗಳಿಗೆ ತೆರಳಲು ಸೂಚನೆ ನೀಡಿ ಆದೇಶ ಮಾಡಿದ್ದಾರೆ. ಉದಾಹರಣೆಗೆ ಚಿಕ್ಕಬಳ್ಳಾಪುರ ತಾಲ್ಲೂಕಲ್ಲಿ ತರಬೇತಿ ಜವಾಬ್ದಾರಿಯನ್ನು ಹಿರಿಯೂರಿನ ಎ.ವಿ.ಎಂ ಅಕಾಡೆಮಿಗೆ ವಹಿಸಲಾಗಿದೆ. ಆ ಸಂಸ್ಥೆಯು ಸರ್ಕಾರಿ ಶಿಕ್ಷಕರಿಗೆ ತರಬೇತಿ ನೀಡುತ್ತಿದೆ. ಆ ಶಿಕ್ಷಕರಿಗೆ ಸರ್ಕಾರಿ ವೇತನದ ಜೊತೆಗೆ ತಲಾ 5,000 ರು. ಹೆಚ್ಚುವರಿ ಸಾರಿಗೆ, ಆಹಾರ ಭತ್ಯೆ ನೀಡಲಾಗುತ್ತದೆ ಎಂದು ಈಗಾಗಲೇ ತರಬೇತಿ ಪಡೆದಿರುವ ತುಮಕೂರು ಜಿಲ್ಲೆಯ ಶಾಲೆಯ ಶಿಕ್ಷಕರೊಬ್ಬರು ಮಾಹಿತಿ ನೀಡಿದರು. ವಿಷ್ಣುಗುಪ್ತ ವಿದ್ಯಾಪೀಠದ ಹಾಲಕ್ಕಿ ಗುರುಕುಲಕ್ಕೆ ನಾಮಕರಣ