ಶಿಕ್ಷಕರು ಮಕ್ಕಳಲ್ಲಿ ಶಿಸ್ತು ಬೆಳೆಸಲಿ: ವಿಶ್ವೇಶ್ವರ ಹೆಗಡೆ ಕಾಗೇರಿ

By Kannadaprabha News  |  First Published Nov 19, 2022, 12:22 PM IST

ಶಿಕ್ಷಣದ ಮೂಲಕ ಯುವ ಪೀಳಿಗೆಯಲ್ಲಿ ಆಂತರಿಕ ಸ್ವಯಂಶಿಸ್ತು ತರಬೇಕಾಗಿದೆ. ಸ್ವಯಂ ಶಿಸ್ತು ತರುವಲ್ಲಿ ಶಿಕ್ಷಣ ಸಂಸ್ಥೆಗಳು ನಂಬಿಕೆ, ಶ್ರದ್ಧೆಯನ್ನು ಮೂಡಿಸಬೇಕಿದೆ. ಶಿಕ್ಷಕರು ಪಠ್ಯದ ಭಾಗವೆಂಬಂತೆ ಮಕ್ಕಳಲ್ಲಿ ಸ್ವಯಂ ಶಿಸ್ತು ಬೆಳೆಸಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.


ಕುಮಟಾ (ನ.19) : ಶಿಕ್ಷಣದ ಮೂಲಕ ಯುವ ಪೀಳಿಗೆಯಲ್ಲಿ ಆಂತರಿಕ ಸ್ವಯಂಶಿಸ್ತು ತರಬೇಕಾಗಿದೆ. ಸ್ವಯಂ ಶಿಸ್ತು ತರುವಲ್ಲಿ ಶಿಕ್ಷಣ ಸಂಸ್ಥೆಗಳು ನಂಬಿಕೆ, ಶ್ರದ್ಧೆಯನ್ನು ಮೂಡಿಸಬೇಕಿದೆ. ಶಿಕ್ಷಕರು ಪಠ್ಯದ ಭಾಗವೆಂಬಂತೆ ಮಕ್ಕಳಲ್ಲಿ ಸ್ವಯಂ ಶಿಸ್ತು ಬೆಳೆಸಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಉತ್ತರ ಕನ್ನಡ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸೆಲ್ಕೋ ಸೋಲಾರ್‌ ¶ೌಂಡೇಶನ್‌ ಸಹಯೋಗದಲ್ಲಿ ತಾಲೂಕಿನ ಗೋರೆಯಲ್ಲಿರುವ ಕೆನರಾ ಎಕ್ಸಲೆನ್ಸ್‌ ಪಿಯು ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಮಟ್ಟದಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ವಿಜ್ಞಾನ ಮೇಳ, ಎನ್‌ಇಪಿ ಕಾರ್ಯಾಗಾರ, ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕೆ ಮತ್ತು ಪ್ರಬಂಧ ಸ್ಪರ್ಧೆ, ಜಿಲ್ಲಾ ಯುವ ವಿಜ್ಞಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

 

ಸಮಾಜದಲ್ಲಿ ಸೌಹಾರ್ದತೆ ನಿರ್ಮಾಣ ಆಗಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ

ನಮಗೆ ದೇಶ ಮೊದಲು ಎಂಬುದು ಆದ್ಯತೆ ಆಗಬೇಕು. ಗುರಿಗಳು ದೊಡ್ಡದಾಗಬೇಕು. ಕೌಶಲ್ಯ ಇಲ್ಲದಿರುವ ಯಾವ ಯುವ ಶಕ್ತಿ ಬೆಳೆಯಲು ಸಾಧ್ಯವಿಲ್ಲ. ವಿಜ್ಞಾನದ ದೃಷ್ಟಿಕೋನದ ಆಧಾರದ ಮೇಲೆ ಕೌಶಲ್ಯಗಳನ್ನು ಬೆಳೆಸಿಕೊಂಡಲ್ಲಿ ಅದ್ಭುತ ವ್ಯಕ್ತಿತ್ವ ಪಡೆಯಬಹುದು ಎಂದು ಅವರು ಹೇಳಿದರು.

ದೇಶದ ನಿರುದ್ಯೋಗದ ಸಮಸ್ಯೆಗೆ ಕೌಶಲ್ಯದ ಕೊರತೆಯೇ ಕಾರಣವಾಗಿದೆ. ದೇಶದ ಅಭಿವೃದ್ಧಿಗೆ ಇದು ಅಡ್ಡಿಯಾಗಿದೆ. ವಿಜ್ಞಾನ ಮೇಳದ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ ಸಂಶೋಧನಾತ್ಮಕ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಅಗತ್ಯವಿದೆ ಎಂದರು.

ಯುವಕರಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲು ಪ್ರಯತ್ನ ಹೆಚ್ಚಬೇಕು. ಹೊಸ ಶಿಕ್ಷಣ ನೀತಿಯಲ್ಲಿ ಇಂಥ ಸಂಶೋಧನಾತ್ಮಕ, ಕೌಶಲ್ಯ ರೂಪಿಸುವ ಪ್ರಯತ್ನಗಳು ಅಳವಡಿಸಿರುವ ಪ್ರಧಾನಿ ನರೇಂದ್ರ ಮೋದಿ ಕ್ರಮ ಅಭಿನಂದನೀಯ ಎಂದರು.

ಪ್ರಾರಂಭವಾಗುವಾಗಲೇ ಎಲ್ಲ ಸೌಲಭ್ಯಗಳನ್ನು ಹೊಂದಿರುವುದು ಕೆನರಾ ಎಕ್ಸಲೆನ್ಸ್‌ ಪಿಯು ಕಾಲೇಜಿನ ವಿಶೇಷತೆ ಎಂದು ಶುಭ ಹಾರೈಸಿದರು.

ಸೆಲ್ಕೋ ಸಂಸ್ಥಾಪಕ ಡಾ. ಎಚ್‌.ಹರೀಶ ಹಂದೆ ದಿಕ್ಸೂಚಿ ಭಾಷಣ ಮಾಡಿ, ಜೀವನದಲ್ಲಿ ಸೋಲಿನ ಮೂಲಕ ಗೆಲುವಿನ ಅನ್ವೇಷಣೆ ಮಾಡಿದವರು ದೊಡ್ಡ ಸಾಧಕರಾಗಿದ್ದಾರೆ. ಸೋಲಿಗೆ ಹಿಂಜರಿಯದೇ ಪ್ರಯತ್ನಶೀಲರಾದವರು ಮಾತ್ರ ದೊಡ್ಡ ಗುರಿ ಮುಟ್ಟಿದ್ದಾರೆ. ತರಗತಿಯಲ್ಲಿ ಶಿಕ್ಷಕರೇ ಮೊದಲು ವಿದ್ಯಾರ್ಥಿಯಾಗಬೇಕು. ವಿದ್ಯಾರ್ಥಿಯ ಪ್ರಶ್ನೆ, ಸಂದೇಹಗಳನ್ನು ನಿರಾಕರಿಸದೇ ಪರಿಹರಿಸುವ ಕ್ಷಮತೆ ಬೆಳೆಸಿಕೊಳ್ಳಬೇಕು ಎಂದರು.

 

ದೇಶದ್ರೋಹಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಸ್ಪೀಕರ್ ಕಾಗೇರಿ

ಕೆನರಾ ಎಕ್ಸಲೆನ್ಸ್‌ ಕಾಲೇಜು ಅಧ್ಯಕ್ಷ ಡಾ. ಜಿ.ಜಿ. ಹೆಗಡೆ ಮಾತನಾಡಿ, ಶಿಕ್ಷಣದ ಗುರಿ ಕೇವಲ ಅಧಿಕಾರ ಹಣ ಗಳಿಕೆಯಾಗದೇ ಯುಜನತೆಯಲ್ಲಿ ದೇಶ ಕಟ್ಟುವ ಮನೋಭಾವ, ವೈಜ್ಞಾನಿಕ ಚಿಂತನೆ, ಮಾನವೀಯ ಮೌಲ್ಯಗಳು ಮತ್ತು ಸನಾತನ ಸಂಸ್ಕಾರದ ಸಿರಿವಂತಿಕೆ ಹೆಚ್ಚಿಸುವ ಮೂಲಕ ಶ್ರೇಷ್ಠ ಪ್ರಜೆಗಳನ್ನು ದೇಶಕ್ಕೆ ನೀಡಬೇಕು ಎಂದರು. ಶಾಸಕ ದಿನಕರ ಶೆಟ್ಟಿಅಧ್ಯಕ್ಷತೆ ವಹಿಸಿದ್ದರು.

click me!