ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಶ್ರದ್ಧಾಂಜಲಿ ಬರೆಯಲು ಸೂಚನೆ, ಶಾಲಾ ಶಿಕ್ಷಕಿ ಅಮಾನತು!

By Suvarna News  |  First Published Apr 9, 2023, 5:16 PM IST

ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಅಧ್ಯಯನ, ಗ್ರಹಿಕೆ, ಪರಾಮರ್ಶೆಗಳನ್ನು ಅಭಿವೃದ್ಧಿಪಡಿಸಲು ಶಾಲೆಗಳಲ್ಲಿ ಹಲವು ಅಸೈನ್‌ಮೆಂಟ್ ನೀಡಲಾಗುತ್ತಿದೆ. ಆದರೆ ಇಲ್ಲೊಬ್ಬರು ಟೀಚರ್, ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಶ್ರದ್ಧಾಂಜಲಿ ಬರೆಯಲು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಸೈಕಾಲಜಿ ಟೀಚರ್ ಅಮಾನತುಗೊಂಡಿದ್ದಾರೆ.


ಫ್ಲೋರಿಡಾ(ಏ.09): ಶಾಲಾ ಕಾಲೇಜುಗಳಲ್ಲಿ ಪ್ರಬಂಧ, ಪಠ್ಯದ ಕುರಿತ ವಿಷಯಗಳ ಚರ್ಚೆಗಳು ನಡೆಯುತ್ತವೆ. ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಸಲು ಕೆಲ ವಿಷಗಳ ಕುರಿತು ಮಾತನಾಡಲು, ಪ್ರಬಂಧ ಬರೆಯಲು ಸೂಚಿಸುತ್ತಾರೆ. ಹೀಗೆ ಸೈಕಾಲಜಿ ಟೀಚರ್, ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಶ್ರದ್ಧಾಂಜಲಿ ಬರೆಯಲು ಹೇಳಿದ್ದಾರೆ. ಇತ್ತ ಮಕ್ಕಳು ಹರಸಹಾಸ ಮಾಡಿ ಶ್ರದ್ಧಾಂಜಲಿ ಬರೆದಿದ್ದಾರೆ. ಆದರೆ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸೈಕಲಾಜಿ ಟೀಚರ್ ಅಮಾನತ್ತಾಗಿದ್ದಾರೆ. ಈ ಘಟನೆ ನಡೆದಿರುವುದು ಅಮೆರಿಕದ ಫ್ಲೋರಿಡಾದಲ್ಲಿ. ಡಾ. ಫಿಲಿಪ್ಸ್ ಹೈಸ್ಕೋಲ್‌ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಬರೆಯಲು ಹೇಳಿ ಸೈಕಾಲಜಿ ಶಿಕ್ಷಕಿ ಜೆಫ್ರಿ ಕೀನ್ ವಜಾಗೊಂಡಿದ್ದಾರೆ.

ಫಿಲಿಪ್ಸ್ ಶಾಲೆಯಲ್ಲಿ ಮಕ್ಕಳಿಗೆ ಶೂಟಿಂಗ್ ಡ್ರಿಲ್ ನಡೆಸಲು ಎಲ್ಲಾ ತಯಾರಿ ನಡೆಸಲಾಗಿತ್ತು. ಈ ವಿಚಾರ ತಿಳಿದ ಸೈಕಾಲಜಿ ಟೀಚರ್ ಈ ಶೂಟಿಂಗ್ ಡ್ರಿಲ್ ಮೊದಲು ಮಕ್ಕಳನ್ನು ಧೈರ್ಯವಂತರನ್ನಾಗಿ ಮಾಡಲು ಮುಂದಾಗಿದ್ದಾರೆ. ಶೂಟಿಂಗ್ ಅಭ್ಯಾಸ ನಡೆಸುವಾಗ ಮಕ್ಕಳು ಹೆಚ್ಚು ಧೈರ್ಯವಂತರಾಗಿರಬೇಕು. ಅಳುಕು ಇರಬಾರದು. ಹೀಗಾಗಿ ಟೀಚರ್ ಮಕ್ಕಳಲ್ಲಿ ತಮ್ಮ ತಮ್ಮ ಶ್ರದ್ಧಾಂಜಲಿ ಬರೆಯುವಂತೆ ಸೂಚಿಸಿದ್ದಾರೆ.

Tap to resize

Latest Videos

ತನ್ನ ಶ್ರದ್ಧಾಂಜಲಿ ಪತ್ರ ತಾನೇ ಬರೆದ ಮಹೇಶ್: ಕಣ್ಣೀರು ತರಿಸಿದ ಪತ್ರ!

ಶಾಲೆಯ 35 ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಬರೆಯಲು ಸೂಚಿಸಿದ್ದಾರೆ. ಒಂದಲ್ಲ ಒಂದು ದಿನ ಎಲ್ಲರು ಸಾಯುತ್ತಾರೆ. ಸಾವಿನ ಬಗ್ಗೆ ಅಂಜಿಕೆ ಇರಬಾರದು ಎಂದು ಸೈಕಾಲಜಿ ಟೀಚರ್ ಮಕ್ಕಳಲ್ಲಿ ಶ್ರದ್ಧಾಂಜಲಿ ಬರೆಯಿಸಿದ್ದಾರೆ. ಆದರೆ ದಿಢೀರ್ ಶ್ರದ್ಧಾಂಜಲಿ ಬರೆಯಲು ವಿದ್ಯಾರ್ಥಿಗಳು ಪರದಾಡಿದ್ದಾರೆ. ಹರಸಾಹಸ ಮಾಡಿ ತಮ್ಮ ತಮ್ಮ ಶ್ರದ್ಧಾಂಜಲಿ ಬರೆದು ಶಿಕ್ಷಕಿ ಸಲ್ಲಿಕೆ ಮಾಡಿದ್ದಾರೆ.

ಈ ವಿಚಾರ ಪೋಷಕರಿಗೆ ತಿಳಿದಿದೆ. ಪೋಷಕರು ಆತಂಕಗೊಂಡಿದ್ದಾರೆ. ಫಿಲಿಪ್ಸ್ ಹೈಸ್ಕೂಲ್ ವಿರುದ್ಧ ಗರಂ ಆಗಿದ್ದಾರೆ. ಶಾಲೆಗೆ ಆಗಮಿಸಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ಆಡಳಿತ ಮಂಡಳಿ ಸೈಕಲಾಜಿ ಶಿಕ್ಷಕಿಯನ್ನು ಅಮಾನತು ಮಾಡಿದ್ದಾರೆ. 

ಅಮಾನತುಗೊಂಡಿರುವ ಶಿಕ್ಷಕಿ ಆಕ್ರೋಶ ಹೊರಹಾಕಿದ್ದಾರೆ. ನೈಜತೆಯನ್ನು ಮಕ್ಕಳಿಗೆ ಹೇಳಬೇಕು. ಪುಸ್ತಕದ ವಿಷಯಗಳ ಜೊತೆಗೆ ಪ್ರಾಯೋಗಿಕ ಕೂಡ ಅಷ್ಟೇ ಮುಖ್ಯ. ಮಕ್ಕಳಿಗೆ ರಿಯಾಲಿಟಿ ಹೇಳಬೇಕು. ಮಕ್ಕಳಲ್ಲಿ ಧೈರ್ಯ ತುಂಬಬೇಕು. ಕೇವಲ ಪುಸ್ತಕದಲ್ಲಿರುವುದನ್ನು ಹೇಳಿದರೆ ಮಕ್ಕಳ ಬೆಳವಣಿಗೆ ಅಷ್ಟಕಷ್ಟೆ. ನಾನೇನು ತಪ್ಪು ಮಾಡಿಲ್ಲ. ಫಿಲಿಪ್ಸ್ ಶಾಲೆಗೆ ನನ್ನ ಅವಶ್ಯಕತೆ ಇಲ್ಲದಿರಬುಹುದು. ಆದರೆ ವಿದ್ಯಾರ್ಥಿಗಳಿಗೆ ನನ್ನ ಅಗತ್ಯತೆ ಇದೆ ಎಂದು ಜೆಫ್ರಿ ಕೀನ್ ಹೇಳಿದ್ದಾರೆ.

 

16 ವರ್ಷ ಕಾದು ಶಾಲೆಯಲ್ಲಿ ಲವ್ವಾಗಿದ್ದ ಶಿಕ್ಷಕಿಯನ್ನೇ ಮದುವೆಯಾದ ಮಹಿಳೆ!

ಇದೀಗ ಫ್ಲೋರಿಡಾದಲ್ಲಿ ವಿದ್ಯಾರ್ಧಿಗಳಲ್ಲಿ ಶ್ರದ್ಧಾಂಜಲಿ ಬರೆಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಪರ ವಿರೋಧಗಳು ವ್ಯಕ್ತವಾಗಿದೆ. ಹಲವರು ಸರಿ ಎಂದರೆ, ಮತ್ತೆ ಕೆಲವರು ಇದು ಶಿಕ್ಷಣವಲ್ಲ, ಸೈಕಲಾಜಿ ಅಧ್ಯಯನ ಮಾಡಿದ್ದಾರೆ ಅನ್ನೋ ದುರಂಹಕಾರ ಎಂದು ಆಕ್ರೋಶ ಹೊರಹಾಕಿದ್ದಾರೆ.

click me!