ಮೂವರು ಶಿಕ್ಷಕಿಯರು, ನಾಲ್ವರು ಶಿಕ್ಷಕರು ಸೇರಿದಂತೆ ಒಟ್ಟು ಏಳು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಪ್ರೌಢಶಾಲೆಯ ಶಿಕ್ಷಕರಾದ ಎಸ್.ಎಸ್.ಕರವಿನಕೊಪ್ಪ, ವಿ.ಎಸ್.ಬಿಳಗಿ, ಎಲ್.ಆರ್.ಮಹಾಜನಶೆಟ್ಟಿ, ಎಂ.ಎಸ್.ಅಕ್ಕಿ, ಎ.ಎಚ್.ಪಾಟೀಲ, ಇದ್ದಿಲಹೊಂಡ ಪ್ರೌಢಶಾಲೆಯ ಎನ್.ಎಂ.ನಂದಿಹಳ್ಳಿ, ಸೂಳೆಭಾವಿ ಪ್ರೌಢಶಾಲೆಯ ಎಸ್.ಸಿ.ದೂಳಪ್ಪನವರ ಅಮಾನತುಗೊಂಡ ಶಿಕ್ಷಕರು.
ಬೆಳಗಾವಿ(ಏ.07): ಎಸ್‌ಎಸ್‌ಎಲ್‌ಸಿ ಪರೀಕ್ಷಾ ಅಕ್ರಮ ಮತ್ತು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಪ್ರೌಢಶಾಲೆಯ ಏಳು ಶಿಕ್ಷಕರನ್ನು ಅಮಾನತುಗೊಳಿಸಿ ಡಿಡಿಪಿಐ ಗುರುವಾರ ಆದೇಶ ಹೊರಡಿಸಿದ್ದಾರೆ.
ಮೂವರು ಶಿಕ್ಷಕಿಯರು, ನಾಲ್ವರು ಶಿಕ್ಷಕರು ಸೇರಿದಂತೆ ಒಟ್ಟು ಏಳು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಬೆಳಗಾವಿ ತಾಲೂಕಿನ ಕೆ.ಕೆ.ಕೊಪ್ಪ ಪ್ರೌಢಶಾಲೆಯ ಶಿಕ್ಷಕರಾದ ಎಸ್.ಎಸ್.ಕರವಿನಕೊಪ್ಪ, ವಿ.ಎಸ್.ಬಿಳಗಿ, ಎಲ್.ಆರ್.ಮಹಾಜನಶೆಟ್ಟಿ, ಎಂ.ಎಸ್.ಅಕ್ಕಿ, ಎ.ಎಚ್.ಪಾಟೀಲ, ಇದ್ದಿಲಹೊಂಡ ಪ್ರೌಢಶಾಲೆಯ ಎನ್.ಎಂ.ನಂದಿಹಳ್ಳಿ, ಸೂಳೆಭಾವಿ ಪ್ರೌಢಶಾಲೆಯ ಎಸ್.ಸಿ.ದೂಳಪ್ಪನವರ ಅಮಾನತುಗೊಂಡ ಶಿಕ್ಷಕರು.
ರಾತ್ರಿ ಹೃದಯಾಘಾತಕ್ಕೆ ತಂದೆ ಸಾವು: 700 ಕಿಮೀ ಕ್ರಮಿಸಿ ಅಂತಿಮ ದರ್ಶನ ಪಡೆದ ಮಗಳು ಬೆಳಗ್ಗೆ ಪರೀಕ್ಷೆಗೆ ಹಾಜರು!
ಏ.3ರಂದು ನಡೆದ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ವೇಳೆ ಹಿರೇಬಾಗೇವಾಡಿ ಪರೀಕ್ಷಾ ಕೇಂದ್ರಕ್ಕೆ ಅಪರ ಆಯುಕ್ತರು ಭೇಟಿ ನೀಡಿದ್ದರು. ಆದರೆ, ಈ ವೇಳೆ ಮೇಲ್ವಿಚಾರಕರು ವಿದ್ಯಾರ್ಥಿಗಳನ್ನು ಸರಿಯಾಗಿ ತಪಾಸಣೆ ಮಾಡಿರಲಿಲ್ಲ. ನಕಲು ಚೀಟಿಗಳು ಕೊಠಡಿಯೊಳಗೆ ಎಸೆಯುತ್ತಿರುವುದು ಕೂಡ ಕಂಡುಬಂದಿತ್ತು. ಜತೆಗೆ ಪರೀಕ್ಷಾ ಕೇಂದ್ರದ ಸುತ್ತ ಬಿಗಿ ಭದ್ರತೆ ಕೈಗೊಳ್ಳದಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷಾ ವ್ಯವಸ್ಥೆಯ ಲೋಪ ಮತ್ತು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಬೆಳಗಾವಿ ಡಿಡಿಪಿಐ ಬಸವರಾಜ ನಾಲತವಾಡ ಅವರು ಏಳು ಜನ ಶಿಕ್ಷಕರನ್ನು ಅಮಾನತುಗೊಳಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ.