GATE Examination 2022: GATE ಪರೀಕ್ಷೆ ಮುಂದೂಡಲು ನಿರಾಕರಿಸಿದ ಸುಪ್ರೀಂ

By Suvarna News  |  First Published Feb 3, 2022, 1:30 PM IST

ಎಂಜಿನಿಯರಿಂಗ್ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್  ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.  ಮೊದಲೇ ನಿರ್ಧಾರ ಮಾಡಿದಂತೆ ಫೆ. 5ರಂದು  ನಡೆಸಲು ಹೇಳಿದೆ.


ನವದೆಹಲಿ(ಫೆ.03): ಎಂಜಿನಿಯರಿಂಗ್ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ( Graduate Aptitude Test in Engineering - GATE) ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೋವಿಡ್ ನಿರ್ಬಂಧನೆ ನಡುವೆ ಫೆಬ್ರವರಿ 5ರಂದು ಪರೀಕ್ಷೆ ನಡೆಸಲು ದಿನಾಂಕ ನಿಗದಿಯಾಗಿತ್ತು. ಅದನ್ನೀಗ ಮುಂದೂಡದೆ ಅದೇ ದಿನ ನಡೆಸಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯ ಕಾಂತ್ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ನ್ಯಾಯಪೀಠ, ಗೇಟ್ ಪರೀಕ್ಷೆ ನಿಗದಿಯಾಗಿರುವ ಕೇವಲ 48 ಗಂಟೆ ಮೊದಲು ಮುಂದೂಡುವುದು ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂಟುಮಾಡುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಔದ್ಯೋಗಿಕ ಭವಿಷ್ಯದ ಮೇಲೆ ಚೆಲ್ಲಾಟವಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಯಾವಾಗ ಪರೀಕ್ಷೆ ನಡೆಸಬೇಕೆಂಬುದು ಶೈಕ್ಷಣಿಕ ನೀತಿಯಾಗಿದ್ದು ಅದರಂತೆ ಪರೀಕ್ಷೆ ನಡೆಸಬೇಕು, ಈ ವಿಷಯದಲ್ಲಿ ನ್ಯಾಯಾಲಯ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಕೂಡ ನ್ಯಾಯಪೀಠ ಹೇಳಿದೆ. 

Latest Videos

undefined

ಈ ಬಾರಿಯ ಗೇಟ್ ಪರೀಕ್ಷೆಯಲ್ಲಿ 9 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದು, ಸುಮಾರು 20 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಆನ್ ಲೈನ್ ನಲ್ಲಿ ಸಹಿ ಹಾಕಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. 

Online Education Apps: ಕೋವಿಡ್ ಕಾಲದಲ್ಲಿ ನೆರವಾದ ಆನ್ಲೈನ್ ಎಜುಕೇಷನ್ ಆಪ್ಸ್

ದೇಶದ ಸುಮಾರು 200 ಕೇಂದ್ರಗಳಲ್ಲಿ 9 ಲಕ್ಷ ವಿದ್ಯಾರ್ಥಿಗಳು ಭೌತಿಕವಾಗಿ ಪರೀಕ್ಷೆಗೆ ಹಾಜರಾಗಬೇಕಿದ್ದು ಸಂಬಂಧಪಟ್ಟ ಆಡಳಿತ ಅಧಿಕಾರಿ ವರ್ಗ ಸೂಕ್ತ ಕೋವಿಡ್ ನಿಬಂಧನೆಗಳು, ಮಾರ್ಗಸೂಚಿಗಳನ್ನು ಹೊರಡಿಸಿಲ್ಲ, ಈ ಸನ್ನಿವೇಶದೊಳಗೆ ಪರೀಕ್ಷೆ ಬರೆಯುವುದು ಕಷ್ಟವಾಗುತ್ತದೆ ಎಂದು ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಕೋರಿದ್ದರು. 

 ಎಂಜಿನಿಯರಿಂಗ್ ಪದವಿ ತರಗತಿಗಳಲ್ಲಿನ ವಿಷಯಗಳು ಮತ್ತು ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳನ್ನು ಅಧ್ಯಯನ ಮಾಡಿ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ತರಗತಿಗಳ ಪ್ರವೇಶಕ್ಕೆ ಮತ್ತು ಕೆಲವು ಸಾರ್ವಜನಿಕ ವಲಯ ಘಟಕಗಳಲ್ಲಿ ನೇಮಕಾತಿಗೆ ಗೇಟ್ ಪರೀಕ್ಷೆ ನಡೆಸಲಾಗುತ್ತದೆ.

Bagalkot: ನೀಟ್‌ ಪರೀಕ್ಷೆಯಲ್ಲಿ ಮುಧೋಳದ ಕೂಲಿಕಾರನ ಮಗ ದೇಶಕ್ಕೇ ಪ್ರಥಮ..!

ಗೇಟ್ 2022 ಪರೀಕ್ಷೆಗಳು ಫೆಬ್ರವರಿ 5,2022 ರಂದು ಪ್ರಾರಂಭವಾಗಿ ಫೆಬ್ರವರಿ 13, 2022ರವರೆಗೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ವೇಳಾಪಟ್ಟಿ ಮತ್ತು ಹೆಚ್ಚಿನ  ಮಾಹಿತಿಗೆ  ಅಧಿಕೃತ ವೆಬ್‌ಸೈಟ್ https://gate.iitkgp.ac.in/ ನಲ್ಲಿ ವೀಕ್ಷಿಸಬಹುದು. ಪರೀಕ್ಷಾ ಕೇಂದ್ರ ನೈರ್ಮಲ್ಯೀಕರಣ ಸೇರಿದಂತೆ ಪರೀಕ್ಷಾ ಕೇಂದ್ರದ ತಯಾರಿ ಮತ್ತು ಇನ್ನಿತರ ಚಟುವಟಿಕೆಗಳು ಫೆಬ್ರವರಿ 4, 2022 ರಂದು ಆರಂಭವಾಗಲಿದೆ.

ಗೇಟ್‌ 2022 ಫೆಬ್ರುವರಿ 4, 5, 6, 11, 12, 13, ಒಟ್ಟು 6 ದಿನ ಪರೀಕ್ಷೆ ಇರುತ್ತದೆ. ಎರಡು ಸೆಷನ್‌ಗಳಲ್ಲಿ  ಗೇಟ್‌ 2022 ಪರೀಕ್ಷೆಯು  ನಡೆಯಲಿದ್ದು,  ಮೊದಲನೆಯದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಎರಡನೆಯದು ಮಧ್ಯಾಹ್ನ 2:30 ರಿಂದ ಸಂಜೆ 5:30 ರವರೆಗೆ ನಡೆಯಲಿದೆ. ಗೇಟ್ 2022 ಪರೀಕ್ಷೆಯನ್ನು ಈ ಬಾರಿ ಪಶ್ಚಿಮ ಬಂಗಾಳದ ಖರಗ್‌ಪುರ (Kharagpur)ದಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆ (Indian Institutes of Technology -IIT)ಆಯೋಜನೆ  ಮಾಡುತ್ತಿದೆ.

GATE 2022 ಬ್ರಾಂಚ್ ವೈಸ್ ಪರೀಕ್ಷಾ ದಿನಾಂಕದ ಪ್ರಕಾರ ಫೆಬ್ರವರಿ 5, ಫೆಬ್ರವರಿ 6, ಫೆಬ್ರವರಿ 12 ಮತ್ತು ಫೆಬ್ರವರಿ 13 ರಂದು ಆಪ್ಟಿಟ್ಯೂಡ್‌ ಪರೀಕ್ಷೆ(Aptitude Test) ನಡೆಸಲಾಗುತ್ತದೆ. ಫೆಬ್ರವರಿ 4 ಮತ್ತು ಫೆಬ್ರವರಿ 11 ರಂದು ಸ್ಕ್ರೈಬ್‌ಗಳ ಆಯ್ಕೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ  ದಿನವನ್ನು ಮೀಸಲಿಡಲಾಗಿದೆ. ನೈರ್ಮಲ್ಯೀಕರಣ ಮತ್ತು ಇತರ ಚಟುವಟಿಕೆಗಳನ್ನು ಒಳಗೊಂಡಂತೆ ಪರೀಕ್ಷಾ ಕೇಂದ್ರದ ತಯಾರಿ (ಪೋಸ್ಟರ್‌ಗಳು, ಸೈನ್‌ಬೋರ್ಡ್, ಆಸನ ವ್ಯವಸ್ಥೆಗಳು ಇತ್ಯಾದಿ) ಮತ್ತು ಪರೀಕ್ಷಾ ಕೇಂದ್ರವನ್ನು ಪರೀಕ್ಷಿಸಲು ಅಭ್ಯರ್ಥಿಗಳು ಇಚ್ಚಿಸಿದಲ್ಲಿ ಭೇಟಿ ನೀಡಲು ಅವಕಾಶವಿದೆ.

click me!