Online Education Apps: ಕೋವಿಡ್ ಕಾಲದಲ್ಲಿ ನೆರವಾದ ಆನ್ಲೈನ್ ಎಜುಕೇಷನ್ ಆಪ್ಸ್

By Suvarna NewsFirst Published Feb 3, 2022, 12:36 PM IST
Highlights

* ಕೋವಿಡ್‌ನಿಂದಾಗಿ ಭೌತಿಕ ಶಾಲೆಗಳು ಇರಲಿಲ್ಲ, ಹಾಗಾಗಿ ಆನ್ಲೈನ್ ಶಿಕ್ಷಣ ಅನಿವಾರ್ಯ
* ಆನ್‌ಲೈನ್ ಶಿಕ್ಷಣಕ್ಕೆ ಬಹಳಷ್ಟು ಇ ಲರ್ನಿಂಗ್ ಆಪ್ಸ್ ನೆರವು ನೀಡಿದವು
* ಈ ಆನ್‌ಲೈನ್ ಎಜುಕೇಷನ್ ಆಪ್‌ಗಳಿಂದ ವಿದ್ಯಾರ್ಥಿಗಳು ಸಾಕಷ್ಟು ಕಲಿತಿದ್ದಾರೆ

ಕೋವಿಡ್ ಸಂಕೋಲೆಯಿಂದ ಶುರುವಾದ ಆನ್ ಲೈನ್ ಶಿಕ್ಷಣ, ಸಾಕಷ್ಟು ಹೊಸತನಗಳಿಗೆ ಮುನ್ನುಡಿ ಬರೆದಿದೆ. ಆಫ್‌ಲೈನ್ ತರಗತಿಗಳಿಂದ ದೂರವಿದ್ದ ಮಕ್ಕಳನ್ನ ಆನ್ ಲೈನ್ ಎಜ್ಯುಕೇಷನ್ ಕೈಹಿಡಿದು ನಡೆಸಿದೆ.. ಶಾಲೆಗೆ ಹೋಗಿ ಕಲಿಯುವ ಅದ್ಭುತ ಅನುಭವ ಮಿಸ್ ಆದ್ರೂ, ನೇರವಾಗಿ ಶಿಕ್ಷಕರ ಜೊತೆ ಸಂವಾದ ನಡೆಸಲಾಗದಿದ್ರೂ, ಫಿಸಿಕಲ್ ಕ್ಲಾಸ್ ಮಿಸ್ ಆಯ್ತು ಅನ್ನೋದು ಬಿಟ್ರೆ, ಕೊಂಚಮಟ್ಟಿಗೆ ವರ್ಷದ ಸಿಲಬಸ್ ಪೂರ್ಣಗೊಳಿಸಿಕೊಡುವಲ್ಲಿ ಆನ್ ಲೈನ್ ಶಿಕ್ಷಣ ಸಹಕಾರಿಯಾಗಿದೆ. ಒಂದೆಡೆ ಶಿಕ್ಷಕರು.. ಇನ್ನೊಂದೆಡೆ ಪೋಷಕರಿಗೂ ನೆಮ್ಮದಿ ತಂದುಕೊಟ್ಟಿದ್ದು ಇದೇ ಆನ್ ಲೈನ್ ಶಿಕ್ಷಣ. ಇದೀಗ ಕೇಂದ್ರ ಸರ್ಕಾರ ಶಿಕ್ಷಣವನ್ನು ಇನ್ನಷ್ಟು ಡಿಜಿಟಲೈಸ್ ಮಾಡೋಕೆ ಮುಂದಾಗಿದೆ. ಈ ವರ್ಷದ ಬಜೆಟ್ ನಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

ಮಕ್ಕಳು ಶಾಲೆಗಳಿಂದ ಪಠ್ಯದ ಕುರಿತಾದ ತರಗತಿಗಳಷ್ಟೇ ಅಲ್ಲದೇ, ಹೆಚ್ಚುವರಿ ಅಭ್ಯಾಸಕ್ಕಾಗಿ ಆನ್ಲೈನ್ ಮೊರೆ ಹೋಗುವುದು ಹೆಚ್ಚಾಗುತ್ತಿದೆ. ಮನೆಯಿಂದಲೇ ಮಕ್ಕಳು ತಮ್ಮ ಹೆಚ್ಚುವರಿ ಅಧ್ಯಯನಕ್ಕಾಗಿ (Additional Study) ವನ್ನು  ಮುಂದುವರಿಸಲು ಪ್ರಸ್ತುತ ಹಲವಾರು ಆ್ಯಪ್‌ಗಳು ಬಂದಿವೆ. ಈ ಆನ್‌ಲೈನ್ ಆ್ಯಪ್‌ಗಳು ಮಕ್ಕಳು ಮನೆಯಲ್ಲಿಯೇ ಪ್ರತಿನಿತ್ಯ ಕಲಿಕೆ ನಡೆಸಲು ಸಹಕಾರಿಯಾಗಿವೆ. ಕೇವಲ ಮಕ್ಕಳ ಶೈಕ್ಷಣಿಕ ಜ್ಞಾನ ವೃದ್ಧಿಯಷ್ಟೇ ಅಲ್ಲ, ಸ್ಫರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಆ್ಯಪ್ ಗಳು ನೆರವಾಗುತ್ತವೆ. ಇಂತಹ ಸಂದರ್ಭದಲ್ಲಿ ಆನ್ ಲೈನ್ ಶಿಕ್ಷಣಕ್ಕೆ ಯಾವ ಆ್ಯಪ್ಗಳು ಉತ್ತಮ. ಸದ್ಯ ಸಖತ್ ಫೇಮಸ್ ಆಗಿರುವ ಒಂದಷ್ಟು ಎಜ್ಯುಕೇಷನ್ ಆ್ಯಪ್ ಗಳ ಬಗ್ಗೆ ತಿಳಿಯೋಣ.

Sonny Mehta India Scholarship: ಭಾರತೀಯ ಬರಹಗಾರರಿಗೆ ವಿದ್ಯಾರ್ಥಿವೇತನ, ಆಯ್ಕೆಯಾದವರಿಗೆ 28 ಲಕ್ಷ!

BYJU'S App:  ಈ ಆ್ಯಪ್‌ನಲ್ಲಿ ಎಲ್ ಕೆಜಿ ಯಿಂದ 12ನೇ ತರಗತಿಗಳವರೆಗೆ ಕ್ಲಾಸ್ ನಡೆಸಲಾಗುತ್ತದೆ. ಬೈಜೂಸ್ ಗ್ರೇಟ್‌ ಲರ್ನಿಂಗ್‌, ವೃತ್ತಿಪರ ಕೋರ್ಸ್‌ಗಳ ವಲಯದಲ್ಲಿ ಕೂಡ ಪರಿಣತಿ ಹೊಂದಿದೆ. JEE, NEET ಮತ್ತು IAS ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಸಾಮಾಗ್ರಿಯನ್ನು ಒದಗಿಸುತ್ತದೆ. ಬೈಜೂಸ್‌ನಲ್ಲಿ ಶುಲ್ಕ ಸಹಿತ ಕೋರ್ಸ್‌ಗಳ ಜತೆ ಕೆಲವು ಉಚಿತ ಕೋರ್ಸ್‌ಗಳು ಲಭ್ಯ ಇವೆ.

Vedanth:  1 ರಿಂದ 12ನೇ ತರಗತಿಯವರೆಗೆ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಾರೆ. ಇಷ್ಟೆ ಅಲ್ಲ ಈ ಆ್ಯಪ್ ಮೂಲಕ JEE, NEET, IIT ಸೇರಿ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 30 ದಿನದ ಕೋರ್ಸ್‌ ನಡೆಸಲಾಗುತ್ತದೆ. ಪಿಎಚ್ ಡಿ ಪೂರೈಸಿರುವವರು  ಈ ಆ್ಯಪ್ ಮೂಲಕ ಕೋಚಿಂಗ್ ನೀಡುತ್ತಾರೆ.

Unacademy App: ಇದು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪೂರಕವಾಗಿರುವ ಅತ್ಯುತ್ತಮ ಆಪ್. ನೀಟ್, ಐಐಟಿ, ಬ್ಯಾಂಕಿಂಗ್ ಎಕ್ಸಾಂ, ಐಎಎಸ್, ಕೆಎಎಸ್ ಪರೀಕ್ಷೆಗಳನ್ನು ಎದುರಿಸಲು  ಕೋಚಿಂಗ್ ನೀಡುತ್ತದೆ. ಲೈವ್ ಕ್ಲಾಸ್, ಡೆಮೋ ಟೆಸ್ಟ್ ಗಳನ್ನು ನಡೆಸಲಾಗುತ್ತದೆ. 

Khabri: ಆಡಿಯೋ ಪ್ಲಾಟ್‌ಫಾರ್ಮ್‌ ಹೊಂದಿರುವ ಕಲಿಕೆಯ ಆ್ಯಪ್‌ ಈ ಖಬ್ರಿ ಆ್ಯಪ್‌.   ಸರ್ಕಾರಿ ಉದ್ಯೋಗ ಪರೀಕ್ಷೆಗಳಿಗೆ ತಯಾರಾಗಲು ಅವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಅಪ್ಲಿಕೇಶನ್ ಉಚಿತವಾಗಿದ್ದು, ಬಳಕೆದಾರರು ಕೋರ್ಸ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಯಾವಾಗ ಬೇಕಾದರೂ ಆಫ್‌ಲೈನ್‌ನಲ್ಲಿ ಕೇಳಿಸಿಕೊಳ್ಳಬಹುದು.

Toppr:  8 ರಿಂದ 12 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಲೈವ್ ತರಗತಿಗಳೊಂದಿಗೆ ಕಲಿಯಲು ಸಹಾಯ ಮಾಡುತ್ತದೆ. ಈ ಆ್ಯಪ್ ICSE, CBSE, ಉತ್ತರ ಪ್ರದೇಶ ರಾಜ್ಯ ಬೋರ್ಡ್ ಮತ್ತು ಕೆನಡಿಯನ್ ಪಠ್ಯಕ್ರಮವಾಗಿದ್ದರೂ ಎಲ್ಲಾ ಕೋರ್ಸ್‌ಗಳನ್ನು ಒಳಗೊಂಡಿದೆ. ಮಕ್ಕಳಿಗೆ ಆನ್‌ಲೈನ್ ತರಗತಿಗಳು, ಮಾಕ್ ಟೆಸ್ಟ್ ಗಳನ್ನು ನಡೆಸುತ್ತದೆ. ಅಭ್ಯರ್ಥಿಗಳು  ₹30,000 ರೂ.ಪಾವತಿಸಿ ಈ ಆ್ಯಪ್  ಸಬ್‌ಸ್ಕ್ರಿಪ್ಶನ್ ಪಡೆಯಬೇಕಾಗುತ್ತದೆ.

Tripura Education News Bulletin: ಕೋವಿಡ್ ಮಧ್ಯೆ ಶಿಕ್ಷಣಕ್ಕೆ ಹೊಸ ದಾರಿ ಹುಡುಕಿದ ತ್ರಿಪುರಾ ಸರ್ಕಾರ

ಇಷ್ಟು ಮಾತ್ರವಲ್ಲದೇ ಇನ್ನೂ ಅನೇಕ ಆಪ್‌ಗಳು ಇ ಲರ್ನಿಂಗ್ ಸೌಲಭ್ಯವನ್ನು ಒದಗಿಸುತ್ತವೆ. ಖಾನ್ ಅಕಾಡೆಮಿ, ಕೋಡ್ ಅಕಾಡೆಮಿ, ಮೇರಿಟ್‌ನೇಷನ್, ಮೈಸಿಬಿಎಸ್ಇ ಗೈಡ್, ವಿದ್ಯಾಕುಲ, ಡೌಟ್‌ನಟ್, ಇಂಡಿಗೋ ಲರ್ನ್ ಸೇರಿದಂತೆ ಅನೇಕ ಆಪ್‌ಗಳಿವೆ.

click me!