ಹುಡುಗನ ಜಾದೂಗೆ ನೆಟ್ಟಿಗರು ಫಿದಾ, ಇವನ ಮ್ಯಾಜಿಕ್‌ ನೋಡಲೇಬೇಕು!

By Suvarna News  |  First Published Jul 4, 2022, 11:51 AM IST

*ಶಾಲೆಯಲ್ಲಿ ಮ್ಯಾಜಿಕ್ ಟ್ರಿಕ್ ಪ್ರದರ್ಶಿಸುವ ಹುಡುಗನ ವಿಡಿಯೋ ಸಿಕ್ಕಾಪಟ್ಟೆ ವೈರಲ್
*ದಿಲ್ಲಿ ಶಾಲೆ ಹುಡುಗನ ಮ್ಯಾಜಿಕ್‌ಗೆ ಮಾರು ಹೋದ ಸೋಷಿಯಲ್ ಮೀಡಿಯಾ ಬಳಕೆದಾರರು
* ವಿಡಿಯೋವನ್ನು ಜೂನ್ 9 ರಂದು ‘ಸಾಹಿಲ್ ಆಜಂ’ (Sahil aazam) ಅನ್ನೋರು ಶೇರ್ ಮಾಡಿದ್ದಾರೆ.


ಮ್ಯಾಜಿಕ್ (Magic)  ಮಾಡೋದು ಒಂದು ಕಲೆ. ಈ ಕಲೆ ಎಲ್ಲರಿಗೂ ಕರಗತವಾಗಲ್ಲ. ಜಾದೂ ಮಾಡೋದು ಅಂದ್ರೆ ಅಷ್ಟು ಸುಲಭವೇನಲ್ಲ. ಕೊಂಚ ಟೆಕ್ನಿಕ್, ಟ್ರಿಕ್ ಉಪಯೋಗಿಸಿ ಮ್ಯಾಜಿಕ್ ಮಾಡಬೇಕಾಗುತ್ತೆ. ಕೆಲವರಿಗೆ ಜಾದೂತನ ತನ್ನಂತಾನೇ ಒಲಿದು ಬಂದಿರುತ್ತೆ. ಇನ್ನು ಕೆಲವರಿಗೆ ವಂಶಪಾರ್ಯಪಾರಿಕವಾಗಿ ರೂಢಿಗತವಾಗಿರುತ್ತದೆ. ಜಾದೂ ಮಾಡಿ ಪ್ರೇಕ್ಷಕರನ್ನ ಮೋಡಿ ಮಾಡೋದು..ನಕ್ಕು ನಗಿಸೋದು..ಅದರಲ್ಲೂ ಮಕ್ಕಳು ಹುಬ್ಬೇರಿಸಿ ನಗುವಂತೆ ಮಾಡುವುದು ಜಾದುಗಾರನ ತಂತ್ರಗಾರಿಕೆ. ವಿದೇಶಗಳಲ್ಲಿ ಮ್ಯಾಜಿಕ್ ಮೋಡಿಗಾರರಿಗೆ ಭಾರೀ ವ್ಯಾಲ್ಯೂ ಇದೆ. ಅದಕ್ಕಂತಲೇ ದೊಡ್ಡ ದೊಡ್ಡ ಶೋಗಳನ್ನ ಆಯೋಜಿಸುತ್ತಾರೆ. ರಜಾ ದಿನಗಳಲ್ಲಿ ಪೋಷಕರು ಮಕ್ಕಳ (Children) ನ್ನು ಮ್ಯಾಜಿಕ್ ಶೋ (Magic Show)ಗೆ ಕರೆದುಕೊಂಡು ಹೋಗ್ತಾರೆ. ಜಾದುಗಾರನ ಮೋಡಿಗೆ ಮಕ್ಕಳು ಬೆರಗಾಗಿ ನಕ್ಕು ನಲಿಯುತ್ತಾರೆ. ಮ್ಯಾಜಿಷಿಯನ್ (Magician) ತಂತ್ರಕ್ಕೆ ಮಾರು ಹೋಗದವರಿಲ್ಲ.. ಶೋಗಳಲ್ಲಿ ಅವರು ಮಾಡಿ ತೋರಿಸುವ ಟ್ರಿಕ್ಗೆ ಓಹ್ ಎಂದು ಹುಬ್ಬೇರಿಸುತ್ತಾರೆ. ಪುಟ್ಟ ಮಕ್ಕಳಿಗೆ ಮ್ಯಾಜಿಕ್ ಅಂದ್ರೆ ಏನೋ ಒಂಥರಾ ಕನೆಕ್ಷನ್... ಅಟ್ರಾಕ್ಷನ್. ಮ್ಯಾಜಿಕ್ ಶೋಗಳು ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತವೆ. ಭಾರತ (India) ದಲ್ಲೂ ಮ್ಯಾಜಿಕ್ ಶೋಗಳು ನಡೆಯುತ್ತವೆ. ಆದ್ರೆ ವಿರಳ.. ಕೆಲವೊಂದು ಶಾಲಾ ಕಾರ್ಯಕ್ರಮ (School Programe) ಗಳಲ್ಲಿ, ಮಕ್ಕಳ ಬರ್ತ್ಡೇ (Birth day parties) ಕಾರ್ಯಕ್ರಮಗಳಲ್ಲಿ ಮ್ಯಾಜಿಕ್ ಶೋ (Magic Show) ಏರ್ಪಡಿಸಲಾಗುತ್ತದೆ. ಪ್ರೋಗ್ರಾಂಗಳಿಗೆ ಬರುವ ಮಕ್ಕಳು ಮ್ಯಾಜಿಕ್ ನೋಡಿ ಖುಷಿ ಪಡುತ್ತಾರೆ. ಆದ್ರೆ ಇಲ್ಲೊಬ್ಬ ಪುಟ್ಟ ಬಾಲಕ ತಾನೇ ಜಾದೂಗಾರನಾಗಿಬಿಟ್ಟಿದ್ದಾನೆ.. ದೆಹಲಿಯ (Delhi) ಈ ಪುಟ್ಟ ಪೋರನ ಮ್ಯಾಜಿಕ್ ಟ್ರಿಕ್‌ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ನೆಟ್ಟಿಗರು ಈತನ ಟ್ರಿಕ್ಗೆ ಬೆರಗಾಗಿಬಿಟ್ಟಿದ್ದಾರೆ.   

ಇದನ್ನೂ ಓದಿ: ಹುಡುಗನ ಪ್ರತಿಭೆಗೆ ಗೂಗಲ್‌, FB, Amazon ಫಿದಾ: ಕೋಟಿಗಿಂತಲೂ ಹೆಚ್ಚು ಸಂಬಳದ ಆಫರ್‌

Tap to resize

Latest Videos

ಶಾಲಾ ಬಾಲಕನೊಬ್ಬ ಕೈಗಳಲ್ಲಿ ಸಣ್ಣ ಕಲ್ಲುಗಳನ್ನ ಬಳಸಿ ಮ್ಯಾಜಿಕ್ ಮಾಡುತ್ತಿರುವ ವಿಡಿಯೋ  ಅಂತರ್ಜಾಲದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಜೂನ್ 9 ರಂದು   ‘ಸಾಹಿಲ್ ಆಜಂ’ (Sahil aazam) ಅನ್ನೋರು ಶೇರ್ ಮಾಡಿದ್ದಾರೆ.  ಈವರೆಗೆ 128 ಮಿಲಿಯನ್ ವೀಕ್ಷಣೆಗಳನ್ನು ತಲುಪುವಲ್ಲಿ ಯಶಸ್ವಿಯಾಗಿದೆ.  

ಅನನ್ಯ ಮತ್ತು ವೈವಿಧ್ಯಮಯ ಪ್ರತಿಭೆಗಳ ಪ್ರದರ್ಶನಕ್ಕೆ ಇಂಟರ್ನೆಟ್ ಅದ್ಭುತ ಸ್ಥಳ ಅನ್ನೋದಕ್ಕೆ ಈ ಬಾಲಕನೇ ಸಾಕ್ಷಿ. ಶಾಲೆಯಲ್ಲಿ ಹುಡುಗ ಮಾಡಿದ ಸಾಹಸ ಈಗ ಸೋಷಿಯಲ್ ಮೀಡಿಯಾ (Social Media) ದಲ್ಲಿ ಭಾರೀ ವೈರಲ್ (viral) ಆಗ್ತಿದೆ. ತನ್ನನ್ನು ಸುತ್ತುವರಿದ ಸಹಪಾಠಿಗಳಿಗೆ ಬಾಲಕ ಕಲ್ಲಿನ ಚಮತ್ಕಾರ ಮಾಡಿ ತೋರಿಸುತ್ತಾನೆ. ಮಕ್ಕಳು ಕೂಡ ಕುತೂಹಲದಿಂದ ಹುಡುಗನ ಇಡೀ ತಂತ್ರವನ್ನು ಲೆಕ್ಕಾಚಾರ ಮಾಡಲು ನೋಡುತ್ತಾರೆ. ಬಾಲಕ ಮ್ಯಾಜಿಕ್ ತೋರಿಸಲು ಪ್ರಾರಂಭಿಸಿದ ತಕ್ಷಣ ಅವನ ಸ್ನೇಹಿತರು "ಯೇ ಬಚ್ಚಾ ಜಾದು ದಿಖಾತಾ ಹೈ" ಎಂದು ಹಿಂದಿಯಲ್ಲಿ ಕಿರುಚುತ್ತಾರೆ. ನಂತರ ಹುಡುಗ ಯಾರ ಗಮನಕ್ಕೂ ಬಾರದೆ ಒಂದು ಕೈಯಿಂದ ಇನ್ನೊಂದು ಕೈಗೆ ಕಲ್ಲು ವರ್ಗಾಯಿಸುವ ಮೂಲಕ ತನ್ನ ಕೌಶಲ್ಯವನ್ನು ಪ್ರದರ್ಶಿಸುತ್ತಾನೆ. ಹೀಗೆ ಒಂದಲ್ಲ ಎರಡೆರಡು ಸಲ ತನ್ನ ಚಮತ್ಕಾರವನ್ನು ಮಾಡಿ ತೋರಿಸುತ್ತಾನೆ. ಬಾಲಕನ ಟ್ರಿಕ್ ನೋಡಿದ ವಿದ್ಯಾರ್ಥಿಗಳು ಆಶ್ಚರ್ಯಚಕಿತರಾಗಿ "ಅರೆ ವಾಹ್" ಎನ್ನುತ್ತಾರೆ. 

ಇದನ್ನೂ ಓದಿ: ಉದ್ಯೋಗ, ವಾಸಕ್ಕಷ್ಟೇ ಅಲ್ಲ, ವ್ಯಾಸಂಗಕ್ಕೂ ಬೆಂಗಳೂರೇ ನಂಬರ್‌ 1: ಸಮೀಕ್ಷೆ

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ನೋಡಿದ ನೆಟಿಗರು  "ಇದು ವೇಗದ ಮ್ಯಾಜಿಕ್" ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ದಿಲ್ಲಿ ಶಾಲೆಯ ಈ ಬಾಲಕ ಜಾದೂ ನೆಟ್ಟಿಗರ ಗಮನವನ್ನು ಸಿಕ್ಕಾಪಟ್ಟೆ ಸೆಳೆದಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ, ಚಿಕ್ಕ ವಯಸ್ಸಿನಲ್ಲಿ ಬಾಲಕ ತೋರಿರುವ ಜಾದೂಗೆ ಎಲ್ಲರೂ ಫೀದಾ ಆಗಿ ಬಿಟ್ಟಿದ್ದಾರೆ. ಜಾದೂ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

click me!