ಇಂದು CBSE ಫಲಿತಾಂಶ ಪ್ರಕಟ ಸಾಧ್ಯತೆ, ಈ ವೆಬ್‌ಸೈಟ್‌ಗಳಲ್ಲಿ ರಿಸಲ್ಟ್‌ ಲಭ್ಯ

By Suvarna News  |  First Published Jul 4, 2022, 8:02 AM IST

* ಸಿಬಿಎಸ್‌ಇ ಫಲಿತಾಂಶ ಪ್ರಕಟವಾಗುವ ಸಾಧ್ಯತೆ

* ಫಲಿತಾಂಶಕ್ಕೂ ಮುನ್ನ ಪರೀಕ್ಷಾ ಸಂಗಮ್ ಡಿಜಿಟಲ್ ಪೋರ್ಟಲ್ ಪ್ರಾರಂಭ

* ಈ ವೆಬ್‌ಸೈಟ್‌ಗಳಲ್ಲಿ ರಿಸಲ್ಟ್‌ ಲಭ್ಯ


ನವದೆಹಲಿ(ಜು.04) ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಫಲಿತಾಂಶಕ್ಕೂ ಮುನ್ನ ಪರೀಕ್ಷಾ ಸಂಗಮ್ ಡಿಜಿಟಲ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಇದರಿಂದ ಫಲಿತಾಂಶ ಬಿಡುಗಡೆಗೆ ಮಂಡಳಿ ಮುಂದಾಗಿರುವುದು ಸ್ಪಷ್ಟವಾಗಿದೆ. 10 ನೇ ತರಗತಿಯ ಫಲಿತಾಂಶಗಳನ್ನು ಇಂದು ಜುಲೈ 4ಕ್ಕೆ ಪ್ರಕಟಿಸಬಹುದು. ಆದರೆ 12 ನೇ ತರಗತಿಯ ಫಲಿತಾಂಶಗಳನ್ನು ಜುಲೈ 10 ರೊಳಗೆ ಘೋಷಿಸಬಹುದು. ಆದಾಗ್ಯೂ, ಫಲಿತಾಂಶದ ಬಿಡುಗಡೆ, ಪರೀಕ್ಷಾ ಮೌಲ್ಯಮಾಪನದ ಬಗ್ಗೆ ಮಂಡಳಿಯು ಇನ್ನೂ ಯಾವುದೇ ಅಧಿಕೇತ ಮಾಹಿತಿ ನೀಡಿಲ್ಲ. 

CBSE 10 ನೇ ಪರೀಕ್ಷೆಯನ್ನು 26 ಏಪ್ರಿಲ್ 2022 ರಿಂದ 24 ಮೇ 2022 ರವರೆಗೆ ನಡೆಸಲಾಯಿತು. ಈ ವರ್ಷ ಸುಮಾರು 21 ಲಕ್ಷ ವಿದ್ಯಾರ್ಥಿಗಳು CBSE 10 ನೇ ಪರೀಕ್ಷೆ 2022 ಗೆ ನೋಂದಾಯಿಸಿಕೊಂಡಿದ್ದಾರೆ. ಇದೇ ವೇಳೆ 10 ಮತ್ತು 12ನೇ ಎರಡೂ ಪರೀಕ್ಷೆಗಳಿಗೆ ಸುಮಾರು 35 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.

Tap to resize

Latest Videos

ಈ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯ

10 ನೇ ತರಗತಿಯ CBSE ಫಲಿತಾಂಶ 2022 ಗಾಗಿ ಕುತೂಹಲದಿಂದ ಕಾಯುತ್ತಿರುವ ವಿದ್ಯಾರ್ಥಿಗಳು ಈ ಕೆಳಗಿನ ವೆಬ್‌ಸೈಟ್‌ಗಳಲ್ಲಿ ತಮ್ಮ ಫಲಿತಾಂಶವನ್ನು ಪಡೆಯಬಹುದಾಗಿದೆ.

cbseresults.nic.in

results.gov.in

digilocker.gov.in

CBSE cbse.gov.in ಮತ್ತು cbseresults.nic.in ನ ಅಧಿಕೃತ ವೆಬ್‌ಸೈಟ್‌ಗಳಲ್ಲದೆ, CBSE 10 ನೇ ತರಗತಿ ಫಲಿತಾಂಶಗಳನ್ನು UMANG ಅಪ್ಲಿಕೇಶನ್, ಡಿಜಿಲಾಕರ್ ಮತ್ತು SMS ಮೂಲಕ ಪಡೆಯಬಹುದಾಗಿದೆ.

10 ನೇ ತರಗತಿಯ ಫಲಿತಾಂಶ ಪರಿಶೀಲನೆ ಹೇಗೆ?

* CBSE ಬೋರ್ಡ್ ವೆಬ್‌ಸೈಟ್ cbseresults.nic.in ಗೆ ಭೇಟಿ ನೀಡಿ.

* ಮುಖಪುಟದಲ್ಲಿ CBSE X ತರಗತಿಯ ಪರೀಕ್ಷೆ 2022 ಫಲಿತಾಂಶ ಲಿಂಕ್‌ಗೆ ಹೋಗಿ.

* ರೋಲ್ ಸಂಖ್ಯೆ ಇತ್ಯಾದಿ ಮಾಹಿತಿಯೊಂದಿಗೆ ಲಾಗಿನ್ ಆಗುವ ಹೊಸ ಪುಟ ತೆರೆಯುತ್ತದೆ.

* ಈಗ ಫಲಿತಾಂಶವು ನಿಮ್ಮ ಮುಂದೆ ಇರುತ್ತದೆ, ಭವಿಷ್ಯದ ಅಗತ್ಯಕ್ಕಾಗಿ ಅದನ್ನು ಮುದ್ರಿಸಬಹುದು.

click me!