* ಗದಗ ನಗರದ ಪ್ರತಿಷ್ಠಿತ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟನೆ
* ಮ್ಯಾನೇಜ್ಮೆಂಟ್ ಜಟಾಪಟಿಯಲ್ಲಿ ಸಂಕಷ್ಟ ಎದುರಿಸುತ್ತಿರುವ ವಿದ್ಯಾರ್ಥಿಗಳು
* ನ್ಯಾಯ ಕೊಡಿಸುವಂತೆ ವಿದ್ಯಾರ್ಥಿಗಳ ಆಗ್ರಹ
ಗದಗ(ಮಾ.25): ಗದಗ ನಗರದ ಪ್ರತಿಷ್ಠಿತ ಪ್ಯಾರಾ ಮೆಡಿಕಲ್ ಕಾಲೇಜಿನ(Para Medical College) ಮ್ಯಾನೇಜ್ಮೆಂಟ್ ಕಿತ್ತಾಟದಲ್ಲಿ 60 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿ ತಲುಪಿದೆ. ಈ ಹಿನ್ನೆಲೆಯಲ್ಲಿ ಕಳಸಾಪುರ ರೋಡ್‌ನಲ್ಲಿರೋ ಕಾಲೇಜು ಕಚೇರಿಗೆ ನುಗ್ಗಿದ ವಿದ್ಯಾರ್ಥಿಗಳು(Students) ಹಾಗೂ ಪಾಲಕರು ನ್ಯಾಯ ಕೊಡಿಸುವಂತೆ ಆಡಳಿತಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಆಡಳಿತ ಮಂಡಳಿ ಕಿತ್ತಾಟ ಏನು..?
ನಗರದ ಹಿರಿಯ ವಕೀಲ ವಿಬಿ ಹುಬ್ಬಳ್ಳಿ ಹಾಗೂ ಡಿಬಿ ಪಾಟೀಲ ಅವರ ಪಾಲುದಾರಿಕೆಯಲ್ಲಿ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜು ನಡೆಸಲಾಗ್ತಿದೆ. ಕಳೆದ 10/12 ವರ್ಷದಿಂದ ಸಂಸ್ಥೆ ಸರಾಗವಾಗಿ ನಡೀತಾ ಬಂದಿದೆ. ಇತ್ತೀಚೆಗೆ ಕಾಲೇಜಿನ ಪ್ರಾಚಾರ್ಯ ಡಿಬಿ ಪಾಟೀಲ ಅವರು ಶ್ರೀಮತಿ ಶಕುಂತಲಾ ಪಾಟೀಲ ನರ್ಸಿಂಗ್ ಸೈನ್ಸ್ ಅನ್ನೋ ಕಾಲೇಜು ಆರಂಭಿಸಿದ್ರು. ಅಲ್ದೆ, ದಾಖಲಾತಿಯಲ್ಲಿ ಕಳಸಾಪುರ ರೋಡ್ ನಲ್ಲಿರುವ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜು ವಿಳಾಸ ನೀಡಿದ್ರು ಅನ್ನೋ ಆರೋಪವಿದೆ.ಅಲ್ದೆ, ಫೀ ರಸಿದಿಯಲ್ಲಿ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜು ಅಂತಾ ನಮೂದಾಗಿತ್ತಂತೆ. (Karnataka Nursing Board) ಅಧಿಕಾರಿಗಳ ಎದುರು ಬಸವೇಶ್ವರ ಕಾಲೇಜು ಬಿಲ್ಡಿಂಗ್, ಪರಿಕರ ತೋರಿಸಿ ಅನುಮತಿ ಪಡೆದಿದ್ದಾರೆ. ಈ ಮೂಲಕ ಫ್ರಾಡ್ ಮಾಡಲಾಗಿದೆ ಅನ್ನೋ ಗಂಭೀರ ಆರೋಪವೂ ಇದೆ. ಈ ಎಲ್ಲ ಸಂಗತಿಗಳು ಸಂಸ್ಥಾಪಕ ವಿಬಿ ಹುಬ್ಬಳ್ಳಿಯವರಿಗೆ ತಿಳಿದಿರಲಿಲ್ವಂತೆ.. ಒಂದೇ ಬಿಲ್ಡಿಂಗ್ ನಲ್ಲಿ ಎರಡು ಕಾಲೇಜು ನಡೆಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾದಾಗ ನಮ್ಮ ಗಮನಕ್ಕೆ ಬಂದಿದೆ. ಆಗ ಡಿಬಿ ಪಾಟೀಲ ವಿರುದ್ಧ ಚೀಟಿಂಗ್ ಕೇಸ್ ದಾಖಲಿಸಿದ್ದೇವೆ ಅಂತಾ ವಿಬಿ ಹುಬ್ಬಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.
ಅಲ್ಲಾಹು ಅಕ್ಬರ್' ಘೋಷಣೆ ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಪರೀಕ್ಷೆಗೆ ಗೈರು
ಸದ್ಯ ಆರೋಗ್ಯದ ಸಮಸ್ಯೆ ಹೇಳಿ ಡಿಬಿ ಪಾಟೀಲ ಕೈಗೆ ಸಿಗ್ತಿಲ್ಲ. ಆದ್ರೆ ಶಕುಂತಲಾ ಕಾಲೇಜಿನಲ್ಲಿ ಜೆಎನ್‌ಎಮ್ ಅಂದ್ರೆ ಜನರಲ್ ನರ್ಸಿಂಗ್ ಮಿಡ್ಪೈಫರಿ ಕೋರ್ಸ್ (ಹೆರಿಗೆ ಸುಶ್ರೂಷೆ) ಕೋರ್ಸ್‌ಗೆ ದಾಖಲಾತಿ ಪಡೆದಿರೋ ವಿದ್ಯಾರ್ಥಿಗಳು ಕಂಗಾಲಾಗಿದಾರೆ. ಮ್ಯಾನೇಜ್ಮೆಂಟ್ ಸಮಸ್ಯೆ ಏನೇ ಇರಲಿ ನಮ್ಮ ಭವಿಷ್ಯಕ್ಕೆ ತೊಂದ್ರೆ ಮಾಡ್ಬೇಡಿ ಅಂತಾ ವಿದ್ಯಾರ್ಥಿಗಳು ಕೇಳಿಕೊಳ್ತಿದ್ದಾರೆ. ಇತ್ತ ಡಿಬಿ ಪಾಟೀಲರ ಪರವಾಗಿ ವಾದ ಮಾಡ್ತಿರೋ ಅವರ ಪತ್ನಿ ವಿನುತಾ ಪಾಟೀಲ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಅಂತಿದಾರೆ..
ಒಟ್ಟಲ್ಲಿ ಗಂಡ ಹೆಂಡಿತ ಮಧ್ಯೆ ಮಗು ಬಡವ ಆಯ್ತು ಅನ್ನೋ ಹಾಗೆ ಮ್ಯಾನೇಜ್ಮೆಂಟ್ ಜಟಾಪಟಿಯಲ್ಲಿ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಆಡಳಿತ ಮಂಡಳಿ ಸರಿಯಾದ ನಿಲುವು ಪ್ರಕಟಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕಿದೆ.
Robot Teacher ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ ರೋಬೊ!
ಕೋವಿಡ್ ಭಯವಿಲ್ಲದೇ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ..!
ಧಾರವಾಡ: ಕೋವಿಡ್-19(Covid-19) ಸೋಂಕಿನ ಭಯದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಕಾಲ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹರಸಾಹಸ ಪಟ್ಟಿದ್ದ ಶಿಕ್ಷಣ ಇಲಾಖೆ(Department of Education) ಇದೀಗ ಕೋವಿಡ್ ಸೋಂಕು ಸಂಪೂರ್ಣ ತಗ್ಗಿದ ಹಿನ್ನೆಲೆಯಲ್ಲಿ ಮಾ. 28ರಿಂದ ನಿರಾತಂಕವಾಗಿ ಪರೀಕ್ಷೆ ನಡೆಸಲು ಅಂತಿಮ ತಯಾರಿ ನಡೆಸಿದೆ.
ಕೋವಿಡ್ ಪಾಸಿಟಿವಿಟಿ ದರ ಜಿಲ್ಲೆಯಲ್ಲಿ ಶೇ. 0ರಷ್ಟಿದೆ. ಕೋವಿಡ್ ತಗ್ಗಿದೆ. ಹೀಗಾಗಿ ಸರ್ಕಾರ ಸಹ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕಿದೆ. ಇಷ್ಟಾಗಿಯೂ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಯೊಂದು ಪರೀಕ್ಷಾ ಕೇಂದ್ರ ಸ್ಯಾನಿಟೈಜ್ ಮಾಡಿದ್ದು ಶಾರೀರಿಕ ಅಂತರದಲ್ಲಿ ವಿದ್ಯಾರ್ಥಿಗಳು(Students) ಪರೀಕ್ಷೆ(Exam) ಬರೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.