ಗುಲ್ಬರ್ಗ ವಿವಿ: ಹಳಿ ತಪ್ಪಿದ ಜ್ಞಾನಗಂಗೆ ಶೈಕ್ಷಣಿಕ ಶಿಸ್ತು ಪದವಿ ವಿದ್ಯಾರ್ಥಿಗಳಿಗೆ ಸುಸ್ತೋ ಸುಸ್ತು..!

By Kannadaprabha News  |  First Published Jan 6, 2023, 10:30 PM IST

ಪರೀಕ್ಷೆ ನಡೆದು 60 ದಿನಗಳಾದರೂ ಪದವಿ ಅಂತಿಮ (6ನೇ) ಸೆಮಿಸ್ಟರ್‌ ಫಲಿತಾಂಶ ವಿಪರೀತ ವಿಳಂಬ. ಪರೀಕ್ಷೆ ಮುಗಿದು 2 ತಿಂಗಳಾದರೂ ಇನ್ನೂ ಶುರುವಾಗಿಲ್ಲ 3 ನೇ ಸೆಮಿಸ್ಟರ್‌ ಪರೀಕ್ಷೆ ಮೌಲ್ಯ ಮಾಪನ. ಪದವಿ 5 ನೇ ಸೆಮಿಸ್ಟರ್‌ ಫಲಿತಾಂಶ ಹೊರಬಿದ್ದರೂ ಅಂಕಪಟ್ಟಿಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ. 


ಶೇಷಮೂರ್ತಿ ಅವಧಾನಿ

ಕಲಬುರಗಿ(ಜ.06):  ’ಪದವಿ ತರಗತಿ ಅಂತಿಮ 6 ನೇ ಸೆಮಿಸ್ಟರ್‌ ಹಾಗೂ ಮಧ್ಯಮ 3 ನೇ ಸೆಮಿಸ್ಟರ್‌ ಪರೀಕ್ಷೆಗಳು ಮುಗಿದು 2 ತಿಂಗಳುರುಳಿದರೂ ಫಲಿತಾಂಶದ ವಿಚಾರ ಒತ್ತಟ್ಟಿಗಿರಲಿ, ಇನ್ನೂ ಉತ್ತರ ಪತ್ರಿಕೆಗಳ ಬಂಡಲ್‌ ಗಂಟು ಬಿಚ್ಚಿ ಮೌಲ್ಯ ಮಾಪನವೇ ಶುರುವಾಗಿಲ್ಲ, ಪದವಿ 5 ನೇ ಸೆಮಿಸ್ಟರ್‌ ಫಲಿತಾಂಶ ಹೊರಬಿದ್ದರೂ ಅಂಕಪಟ್ಟಿಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ, ರಾಜ್ಯದ ಬೇರೆಲ್ಲಾ ವಿವಿಗಳು ಪದವಿ ಫಲಿತಾಂಶ ಪ್ರಕಟಿಸಿ ಸ್ನಾತಕ ಪ್ರವೇಶಕ್ಕೆ ಸಜ್ಜಾಗಿದ್ದರೂ ಗುವಿವಿ ಪದವಿ ಹಂತದಲ್ಲೇ ಮುಗ್ಗರಿಸಿಬಿಟ್ಟಿದೆ’

Latest Videos

undefined

ಗುಲ್ಬರ್ಗ ವಿವಿ ’ಜ್ಞಾನಗಂಗೆ’ ಯ ಶೈಕ್ಷಣಿಕ ವೇಳಾಪಟ್ಟಿಸಂಪೂರ್ಣ ಹಳಿತಪ್ಪಿ ದೆ ಎನ್ನಲು ಇನ್ನೇನು ಸಾಕ್ಷಿ- ಪುರಾವೆ ಬೇಕು ಹೇಳಿ? ನಿಯಮದಂತೆ ಪರೀಕ್ಷೆ ಮುಗಿದು 40 ದಿನದೊಳಗೇ ಮೌಲ್ಯಮಾಪನ ಮುಗಿಸಿ ಮಕ್ಕಳ ಕೈಗೆ ಫಲಿತಾಂಶ, ಪ್ರಮಾಣ ಪತ್ರ ಇಡಬೇಕೆಂಬ ನಿಯಮವಿದ್ದರೂ ಇದ್ಯಾವ ನಿಯಮವೂ ಇಲ್ಲಿನ ಪೀರಕ್ಷಾಂಗ, ಮೌನ್ಯಮಾಪನ ವಿಭಾಗಕ್ಕೆ ಅನ್ವಯವಾಗಿಲ್ಲ. ಹೀಗಾಗಿ ಪರೀಕ್ಷೆ ಮುಗಿದು 60 ದಿನಗಳಾದರೂ ಮೌಲ್ಯಮಾಪನ ಚಾಲು ಮಾಡುವ, ಫಲಿತಾಂಶ ನೀಡೋ ಪ್ರಕ್ರಿಯೆ ಮಾಡಿ ಮುಗಿಸಬೇಕೆಂಬ ಲವಲವಿಕೆ, ಹುಮ್ಮಸ್ಸೇ ಇಲ್ಲಿನ ಮೌಲ್ಯಮಾಪನ ವಿಭಾಗದಲ್ಲಿ ಕಾಣದಂತಾಗಿರೋದು ವಿವಿ ಶಾಕ್ಷಣಿಕ ಶಿಸ್ತನ್ನೇ ಪ್ರಶ್ನಿಸುವಂತಾಗಿದೆ.

ಹಳಿತಪ್ಪಿದ ಗುಲ್ಬರ್ಗ ವಿವಿ ಶೈಕ್ಷಣಿಕ ಅಶಿಸ್ತು: ವಿದ್ಯಾರ್ಥಿಗಳು ಸುಸ್ತು

2 ದಿನಕ್ಕೊಮ್ಮೆ ಕನಿಷ್ಠ 9 ಬಾರಿ ಪದವಿ ಪರೀಕ್ಷೆಗಳನ್ನು ಮುಂದೂಡಿ ಶೈಕ್ಷಣಿಕ ಕುಖ್ಯಾತಿ ಪಡೆದಿದ್ದ ಗುವಿವಿ ಹರಸಾಹಸ ಮಾಡಿ ಪರೀಕ್ಷೆಗಳನ್ನು ನಡಿಸಿದ್ದರೂ ಇದೀಗ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗದೆ, ಫಲಿತಾಂಶ ಸಮಯದೊಳಗೆ ಪ್ರಕಟಿಸಲಾಗದೆ ಕೈ ಚೆಲ್ಲಿ ಕುಳಿತಿರೋದು ಪದವಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ.

ನವ್ಹೆಂಬರ್‌ನಲ್ಲೇ ಮುಗಿದ ಪರೀಕ್ಷೆ

ಗುವಿವಿ ವ್ಯಾಪ್ತಿಯಲ್ಲಿ ಬೀದರ್‌, ಕಲಬುರಗಿ ಜಿಲ್ಲೆಗಳಲ್ಲಿ ಹರಡಿರುವ ಪದವಿ ಕಾಲೇಜುಗಳಲ್ಲಿ ಪರೀಊಕ್ಷೆಗಲು ಕಳೆದ ನವ್ಹೆಂಬರ್‌ನಲ್ಲೇ (ನ. 9 ರಿಂದ 25 ರ ವರೆಗೆ) ಮುಗಿದಿದ್ದರೂ ಮೌಲ್ಯಮಾನ ವಿಳಂಬವಾಗಿರೋದು ಯಾಕೆ? ಎಂಬುದೇ ಯಕ್ಷಪ್ರಶ್ನೆ. ನಿಯಮಾನುಸಾರ 40 ದಿನದಲ್ಲಿ ಫಲಿತಾಂಶ ಹೊರಬೀಳಬೇಉ, ಆದರಿಲ್ಲಿ 60 ದಿನಗಳಾದರೂ ಮೌಲ್ಯ ಮಾಪನವೇ ಆಂರಭಗೊಂಡಿಲ್ಲ, ಇನ್ನು ಫಲಿತಾಂಶದ ಮಾತಂತೂ ದೂರವೇ ಇಳಿಯಿತು ಎಂಬಂತಾಗಿದೆ, ಯಾಕೆಹೀಗೆಂಬ ಪ್ರಶ್ನೆಗಳಿಗೆ ಗುವಿವಿ ಆಡಳಿತ ಸೂಕ್ತ ಉತ್ತರ ನೀಡದೆ ಮಹಾಮೌನ ತಾಳಿದೆ!

ಅನ್ಯ ವಿವಿಗಳಲ್ಲಿ ಫಲಿತಾಂಶ ಮಕ್ಕಳ ಕೈ ಸೇರಿದೆ

ಪಕ್ಕದ ವಿಜಯಪೂರ ಮಹಿಳಾ ವಿವಿ, ಮೈಸೂರು, ಧಾರವಾಡ ಸೇರಿದಂತೆ ಹಲವು ವಿವಿಗಳು ಪದವಿ ಅಂತಿಮ ವರ್ಷದ 6ನೇ ಸೆಮ್‌ ಫಲಿತಾಂಶ ಪ್ರಕಟಿಸಿ ಸ್ನಾತಕೋತ್ತರ ಪ್ರವೇಶಕ್ಕೆ ವೇಳಾಪಟ್ಟಿಸಹ ಬಿಡುಗಡೆ ಮಾಡಿವೆ. ಆರೆ ಗುವಿವಿಯಲ್ಲಿ ಮೌಲ್ಯಮಾಪನ, ಫಲಿತಾಂಶ ಎಲ್ಲವೂ ವಿಳಂಬವಾಗಿ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ತಮ್ಮದೇನೂ ತಪ್ಪಿಲ್ಲದಿದ್ದರೂ ಸಹ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಇಲ್ಲಿ ವಿದ್ಯಾರ್ಥಿಗಳು ಬಕಪಕ್ಷಿಯಂತೆ ಕಾಯುವಂತಾಗಿದೆ.

ಗುಲ್ಬರ್ಗಾ ವಿವಿಯಲ್ಲಿ ದುಡ್ಡು ಕೊಟ್ರೆ ಸಾಕು ಫೇಲಾಗಿದ್ರೂ ಪಾಸಾಗಿರುವ ಮಾರ್ಕ್ಸ್ ಕಾರ್ಡ್ ಸಿಗುತ್ತೆ!

ಗುವಿವಿ ಪದವಿ ವಿದ್ಯಾರ್ಥಿಗಳ ತ್ರಿಶಂಕು ಸ್ಥಿತಿ!

ಒಂದು ಲೆಕ್ಕಾಚಾರದ ಪ್ರಕಾರ ಗುವಿವಿಯಲ್ಲಿ ತಕ್ಷಣಕ್ಕೆ ಮೌಲ್ಯಮಾಪನ ಆರಂಭಿಸಿದರೂ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡು ಫಲಿತಾಂಶ ಹೊರಬರಲು, ಅಂಕಪಟ್ಟಿಮಕ್ಕಳ ಕೈ ಸೇರಲು 15 ರಿಂದ 20 ದಿನಗಳಾದರೂ ಬೇಕೇಬೇಕು. ಅಷ್ಟೊತ್ತಿಗಾಗಲೇ ಕಲಬುರಗಿಯಲ್ಲಿರೋ ಏಕೈಕ ಕೇಂದ್ರೀಯ ವಿವಿ ಸೇರಿದಂತೆ ರಾಜ್ಯದ ಇತರೆಲ್ಲಾ ವಿವಿಗಳು ತಮ್ಮ ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಿ ತರಗತಿ ಆರಂಭಿಸುವ ಸಾಧ್ಯತೆಗಳು ಅಧಿಕ. ಹೀಗಾದಲ್ಲಿ ಗುವಿವಿ ಪದವಿ ವಿದ್ಯಾರ್ಥಿಗಳು ಯಾರೂ ಸಹ ಕೇಂದ್ರೀಯ ವಿವಿ ಸೇರಿದಂತೆ ರಾಜ್ಯದ ಯಾವುದೇ ವಿವಿ ಪಿಜಿ ಕೋರ್ಸ್‌ ಪ್ರವೇಶವಕಾಶ ದೊರಕದೆ ತ್ರಿಶಂಕು ಸ್ಥಿತಿ ಅನುಭವಿಸೋದು ನಿಶ್ಚಿತ ಎಂಬ ಮಾತುಗಳು ವಿದ್ಯಾರ್ಥಿಗಳ ವಲಯದಲ್ಲಿ ಕೇಳಿ ಬರುತ್ತಿವೆ.

ಗುವಿವಿ ನವೆಂಬರ್‌/ಡಿಸೆಂಬರ್‌ 2022 ರಲ್ಲಿ ನಡೆಸಿದ ಪದವಿ ಪರೀಕ್ಷೆಗಳ ಮೌಲ್ಯಮಾಪನ ಪ್ರಕ್ರಿಯೆ ಆರಂಭಗೊಂಡಿದ್ದು, 6ನೇ ಸೆಮಿಸ್ಟರ್‌ನ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ. ಹಾಗೂ ಬಿಸಿಎ ಕೋರ್ಸುಗಳ ಫಲಿತಾಂಶ ಜನವರಿ 13 ರೊಳಗಾಗಿ ಪ್ರಕಟಿಸಲು ಕ್ರಮ ಜರುಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಆಂತಕಪಡುವ ಅಗತ್ಯವಿರುವುದಿಲ್ಲ. ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರಿಗೆ ಪ್ರವೇಶಾತಿ ದಿನಾಂಕವನ್ನು ವಿಸ್ತರಿಸಬೇಕೆಂದು ಸಹ ಪತ್ರ ಬರೆಯಲಾಗಿದೆ ಅಂತ ಗುವಿವಿ ಕುಲಸಚಿವರು (ಮೌಲ್ಯಮಾಪನ) ಡಾ. ಜ್ಯೋತಿ ಧಮ್ಮಪ್ರಕಾಶ ತಿಳಿಸಿದ್ದಾರೆ.  

click me!