UGC: ಬಿಕಾಂ, ಬಿಎಸ್‌ಸಿ ಒಟ್ಟೊಟ್ಟಿಗೆ..... ಏಕ ಕಾಲಕ್ಕೆ ಡಬಲ್ ಡಿಗ್ರಿ ಪಡೆಯಬಹದು!

By Kannadaprabha News  |  First Published Apr 13, 2022, 4:37 AM IST

* ಏಕಕಾಲಕ್ಕೆ ಎರಡು ಡಿಗ್ರಿ: ಯುಜಿಸಿ ಅಸ್ತು
* ಬೇರೆ ವಿವಿ ಅಥವಾ ಕೇಲೇಜಿನಿಂದಲೂ ಡಿಗ್ರಿ ಪಡೆಯಬಹುದು
* ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕವೂ ಪಡೆಯಬಹುದು
* ಮಹತ್ವದ ನಿರ್ಧಾರ ಕೈಗೊಂಡ ಯುಜಿಸಿ


ನವದೆಹಲಿ ((ಏ. 13) ) ಇನ್ಮುಂದೆ ಒಂದೇ ಅಥವಾ ಪ್ರತ್ಯೇಕ ವಿಶ್ವವಿದ್ಯಾಲಯಗಳಿಂದ ಏಕಕಾಲಕ್ಕೆ ಎರಡು ಪದವಿ (ಎರಡು ಡಿಗ್ರಿ) ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ವಿಶ್ವವಿದ್ಯಾಲಯದ ಅನುದಾನ ಆಯೋಗ (University Grants Commission) ಅಧ್ಯಕ್ಷ ಜಗದೀಶ್‌ ಕುಮಾರ್‌ ಮಂಗಳವಾರ ಘೋಷಿಸಿದ್ದಾರೆ. ಯುಜಿಸಿ ಈ ಕುರಿತಂತೆ ಶೀಘ್ರದಲ್ಲೇ ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ.

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ (New Education Policy) ಮಾಡಿದಂತೆ, ವಿದ್ಯಾರ್ಥಿಗಳಿಗೆ (Students) ಹೊಸ ಹೊಸ ಕೌಶಲಗಳನ್ನು ಕಲಿಯುವ ಅವಕಾಶ ನೀಡುವ ಉದ್ದೇಶದಿಂದ ಏಕಕಾಲದಲ್ಲಿ ಎರಡು ಪದವಿಯನ್ನು ಪೂರ್ಣಗೊಳಿಸುವ ಅವಕಾಶ ನೀಡಲು ಯುಜಿಸಿ ನಿರ್ಧರಿಸಿದೆ. ಪದವಿಯನ್ನು ಒಂದೇ ವಿಶ್ವವಿದ್ಯಾಲಯದಿಂದ ಅಥವಾ ಪ್ರತ್ಯೇಕ ವಿಶ್ವವಿದ್ಯಾಲಯದಿಂದ ಪಡೆಯಬಹುದಾಗಿದೆ’ ಎಂದು ತಿಳಿಸಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳು ಆನ್‌ಲೈನ್‌ ಅಥವಾ ರೆಗ್ಯೂಲರ್ ತಮ್ಮ ಆಯ್ಕೆಯನುಸಾರ ಯಾವುದೇ ಪದವಿಯನ್ನು ಪಡೆಯಬಹುದಾಗಿದೆ.

Tap to resize

Latest Videos

UGC NET 2022 Exam ಜೂನ್ ನಲ್ಲಿ ನಡೆಯಲಿದೆ ಯುಜಿಸಿ ನೆಟ್ ಪರೀಕ್ಷೆ

ಹೊಸ ನಿಯಮ ಏನು?: ಹೊಸ ನಿಯಮದ ಪ್ರಕಾರ ಉದಾಹರಣೆಗೆ ಬಿ.ಕಾಂ ಓದುವ ವಿದ್ಯಾರ್ಥಿ ಏಕಕಾಲಕ್ಕೆ ಬಿಎಸ್ಸಿ ಅಥವಾ ಬಿ.ಎ ಪದವಿಯನ್ನೂ ಪಡೆಯಬಹುದು. ಈ ನಿಯಮ ಮುಂಬರುವ ಶೈಕ್ಷಣಿಕ ಸಾಲಿನಿಂದಲೇ ಅನ್ವಯವಾಗಲಿದ್ದು, ಈಗಾಗಲೇ ದ್ವಿತೀಯ ಅಥವಾ ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳೂ ಇನ್ನೊಂದು ಪದವಿ ಪಡೆಯಬಹುದು.

ಪಿಎಚ್‌ಡಿ ಕಡ್ಡಾಯವಲ್ಲ:  ಭಾರತದ ಅನೇಕ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಬೋಧನೆಗೆ ಪಿಎಚ್‌ಡಿ (PhD) ಕಡ್ಡಾಯ ಎನ್ನಲಾಗಿತ್ತು. ಆದರೆ ಇದೀಗ ವಿಶ್ವವಿದ್ಯಾಲಯ ಅನುದಾನ ಆಯೋಗವು (university grants commission - UGC) ತನ್ನ ಮಹತ್ತರ ನಿರ್ಧಾರವನ್ನು ಪ್ರಕಟಿಸಿದ್ದು, ವಿಶ್ವವಿದ್ಯಾನಿಲಯಗಳಲ್ಲಿ ಬೋಧಕರಾಗಿ ಹೆಚ್ಚಿನ ಉದ್ಯಮ ತಜ್ಞರನ್ನು ಹೊಂದಲು ಈ ಹಿಂದೆ ಕಡ್ಡಾಯ ಗೊಳಿಸಿದ್ದ ಪಿಹೆಚ್‌ಡಿ ಅಗತ್ಯತೆಯನ್ನು ತೆಗೆದುಹಾಕಲು ನಿರ್ಧರಿಸಿತ್ತು.

ಇದು ದೇಶದ ಶಿಕ್ಷಣ (Education) ವ್ಯವಸ್ಥೆಯಲ್ಲಿ ಹೊಸ ನಾಂದಿಗೆ ಕಾರಣವಾಗಲಿದೆ ಎನ್ನಲಾಗಿದೆ. ಮಾತ್ರವಲ್ಲ ಆಯಾಯ ಕ್ಷೇತ್ರಗಳ ಪರಿಣಿತರು, ಉದ್ಯಮದ ತಜ್ಞರು ಮತ್ತು ವೃತ್ತಿಪರರನ್ನು ಶಿಕ್ಷಣ ಕ್ಷೇತ್ರದತ್ತ ಸಳೆಯುವ ನಿಟಗ್ಟಿನಲ್ಲಿ ಯುಜಿಸಿ ಈ ನಿರ್ಧಾರ ಕೈಗೊಂಡಿದೆ ಎಂದು ಅಂದಾಜಿಸಲಾಗಿದೆ.

 ಯುಜಿಸಿ, ವಿಶೇಷ ಹುದ್ದೆಗಳನ್ನು ರಚಿಸಲು  ಯೋಜನೆ ಹಾಕಿಕೊಂಡಿದೆ. ಈ ಹೊಸ ಹುದ್ದೆಗಳು ಪ್ರಾಕ್ಟೀಸ್ ಪ್ರಾಧ್ಯಾಪಕ  ಮತ್ತು ಪ್ರಾಕ್ಟೀಸ್ ಸಹ ಪ್ರಾಧ್ಯಾಪಕ   ಆಗಿರಲಿದೆ ಈ ಮೂಲಕ ಪಿಎಚ್​ಡಿ (PhD) ಇಲ್ಲದವರಿಗೂ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ವರದಿ ತಿಳಿಸಿತ್ತು.

 

click me!