ಸರ್ಕಾರಿ ಸ್ಕೂಲ್‌ಗೆ ಹೊಸ ರೂಪ ನೀಡಿದ ಗ್ರಾಮಸ್ಥರು: ಮಾದರಿ ಶಾಲೆನ್ನಾಗಿ ಮಾಡಿದ ಹಳೆ ವಿದ್ಯಾರ್ಥಿಗಳು..!

By Girish Goudar  |  First Published Apr 12, 2022, 12:26 PM IST

*  ತಾವು ಓದಿದ ಶಾಲೆಗೆ ಕೊಡುಗೆ 
*  ಚೆಂಡಗೋಡು ಸರ್ಕಾರಿ ಶಾಲೆಗೆ ಹೊಸರೂಪ 
* ಶಾಲೆಗೆ ಹೊಸ ಬಣ್ಣ, ಕಾಂಪೌಂಡ್, ಗೇಟ್ ದುರಸ್ಥಿ
 


ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಏ.12):  ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು(Government School) ಎಂದರೆ ಮೂಗು ಮುರಿಯುವವರೇ ಜಾಸ್ತಿ. ರಾಜ್ಯದ(Karnataka) ಅದೆಷ್ಟೋ ಶಾಲೆಗಳು ಇಂದಿಗೂ ಸರಿಯಾದ ಕಟ್ಟಡ, ಶೌಚಾಲಯವಿಲ್ಲದೇ ಮೂಲಭೂತ ಸೌಕರ್ಯಗಳು(Infrastructure) ಕೊರತೆಯಿಂದ ಸೊರಗಿ ಹೋಗಿವೆ. ಇದೇ ನೆಪವೊಡ್ಡಿ ಅದೆಷ್ಟೋ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.ಆದ್ರೆ ಕಾಫಿನಾಡಿನ ಆ ಸರ್ಕಾರಿ ಶಾಲೆಗೆ ಸರ್ಕಾರದ ಅನುದಾನದ ಜೊತೆಗೆ ಗ್ರಾಮಸ್ಥರು ಕೈ ಜೋಡಿಸಿ ಮಾದರಿ ಶಾಲೆನ್ನಾಗಿ ಮಾಡಿದ್ದಾರೆ. 

Tap to resize

Latest Videos

ಶಾಲೆಗೆ ಹೊಸ ಬಣ್ಣ, ಕಾಂಪೌಂಡ್, ಗೇಟ್ ದುರಸ್ಥಿ

ಚಿಕ್ಕಮಗಳೂರು(Chikkamagaluru) ತಾಲ್ಲೂಕಿನ ಚೆಂಡಗೋಡು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೀಗ ಮಾದರಿ ಶಾಲೆ ಆಗಿ ಪರಿವರ್ತನೆ ಆಗಿದೆ. ಶಾಲೆಗೆ ಗ್ರಾಮಸ್ಥರು(Villagers) ಉದಾರ ಮನಸ್ಸಿನಿಂದ ಶಾಲೆಯ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದು ಶಾಲೆಗೆ ಹೊಸ ರೂಪ ನೀಡಿದ್ದಾರೆ. ತಾಲ್ಲೂಕಿನ ಚೆಂಡಗೋಡು ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 26 ಮಕ್ಕಳಿದ್ದು ಮೂಲಭೂತ ಸೌಕರ್ಯಗಳಿದ್ದರೂ ಅನೇಕ ಕೊರತೆಯಿಂದ ಶಾಲೆ ಅಂದಗೆಟ್ಟಿತ್ತು, ಗ್ರಾಮಸ್ಥರಾದ ಚಂದ್ರಶೇಖರ್, ಸತೀಶ್, ಹಾಗೂ ಭರತ್‌ ಕುಮಾರ್ ಶಾಲೆಯಲ್ಲಿ ಅನೇಕ ದಿನಗಳಿದ್ದು ಹಾಳಾಗಿದ್ದ ಶಾಲಾ ಕಾಂಪೌಂಡ್ ಗೇಟ್‌ನ ದುರಸ್ಥಿಗೊಳಿಸಿ ಶಾಲೆಗೆ ಸುಣ್ಣ ಬಣ್ಣ ಬಳಿದು ಹೊಸ ರೂಪ ನೀಡಿದ್ದಾರೆ. ಹೆಚ್ಚು ಮಕ್ಕಳು ಶಾಲೆಯನ್ನು ಆಕರ್ಷಿಸುವಂತೆ ವಿವಿಧ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಶಾಲೆಗೆ ನೀಡಿದ್ದಾರೆ. ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಗಳಿಗೂ(Students) ಪುಸ್ತಕ, ಸಮವಸ್ತ್ರ, ಲೇಖನ ಸಾಮಗ್ರಿಗಳನ್ನು ನೀಡಿ ಮಕ್ಕಳ ಮುಂದಿನ ವಿದ್ಯಾಭಾಸ್ಯಕ್ಕೆ(Study) ನೆರವಾಗಿದ್ದಾರೆ. 

ಕರುನಾಡಲ್ಲಿ ಧರ್ಮ ದಂಗಲ್ ಮಧ್ಯೆ ಪಠ್ಯ ಪರಿಷ್ಕರಣೆ ಪಾಲಿಟಿಕ್ಸ್‌ ಜೋರು..!

ತಾವು ಓದಿದ ಶಾಲೆಗೆ ಕೊಡುಗೆ 

ಗ್ರಾಮದ ಗಿರಿಜಾ, ಮುದ್ದಣ್ಣ  ತಾವು ಓದಿದ ಶಾಲೆಗೆ ಹೊಸ ರೂಪ ನೀಡಿ ಶ್ರಮಿಸಿದ್ದಾರೆ. ಬೇಸಿಗೆ ರಜೆ ಆರಂಭವಾದ ಹಿನ್ನಲೆಯಲ್ಲಿ ಶಾಲೆಯಲ್ಲಿ ವಿಶೇಷವಾಗಿ ಹಮ್ಮಿಕೊಳ್ಳಲಾಗಿದ್ದ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ನೂತನ ಶಾಲಾ ಕಾಂಪೌಂಡ್ ಗೇಟ್‌ಅನ್ನು ಉದ್ಘಾಟನೆಗೊಳಿಸಿದರು. ಶಾಲಾ ಮಕ್ಕಳು(Children) ಕಾರ್ಯಕ್ರಮದ ವಿಶೇಷವಾಗಿ ಶುಭ್ರವಾದ ಬಣ್ಣ ಬಣ್ಣದ ಬಟ್ಟೆ ತೊಟ್ಟು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸಿ.ಬಿ ರವಿ.ಮುಖ್ಯಶಿಕ್ಷಕರಾದ ಎಂ.ಎಂ. ವನಜಾಕ್ಷಿ, ಸಹಶಿಕ್ಷಕ ಬಿ.ಎಸ್.ಕುಮಾರ್, ರಾಜು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಮ್ಮನನ್ನು ಮಡಿಲಲ್ಲಿಟ್ಟುಕೊಂಡು ಪಾಠ ಕೇಳುತ್ತಿದ್ದ ಮಣಿಪುರ ಬಾಲೆಗೆ ನೆರವಾದ ಸಚಿವ

ಪಠ್ಯ ಪುಸ್ತಕ ಕಾಂಗ್ರೆಸ್- ಕಮ್ಯುನಿಸ್ಟ್ ಪುಸ್ತಕವಾಗಿತ್ತು: ಬರಗೂರು ವಿರುದ್ಧ ಚಕ್ರತೀರ್ಥ ಆರೋಪ

ಮಂಗಳೂರು: ಬರಗೂರು ರಾಮಚಂದ್ರಪ್ಪನವರು(Baraguru Ramachandrappa) ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ಪಠ್ಯ ಪುಸ್ತಕಗಳು ಕಾಂಗ್ರೆಸ್(Congress) ಪಕ್ಷದ ಪುಸ್ತಕವಾಗಿತ್ತು. ಕಾಂಗ್ರೆಸ್ ಜೊತೆಗೆ ಇಲ್ಲಿ ಕಮ್ಯುನಿಸ್ಟ್(Communist) ಚಿಂತನೆಗಳು ತುಂಬಿಕೊಂಡಿತ್ತು ಎಂದು ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ(Rohit Chakrathirtha) ಅವರು ಗಂಭೀರವಾಗಿ ಆರೋಪ ಮಾಡಿದ್ದರು. 

ಸೋಮವಾರ ನಗರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಪಠ್ಯಪುಸ್ತಕ ಪರಿಶೀಲನಾ ಸಮಿತಿ(Textbook Review Committee) ಅಧ್ಯಕ್ಷ ರೋಹಿತ್ ಚಕ್ರ ತೀರ್ಥ ಅವರು, ಪಠ್ಯಪುಸ್ತಕಗಳು ಪಕ್ಷದ ಪುಸ್ತಕಗಳಾಗಿತ್ತು, ನಾವು ಅದನ್ನ ಪಕ್ಷಾತೀತ ಪುಸ್ತಕ ಮಾಡ್ತೇವೆ.‌ ಇದು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ ಪಠ್ಯ ಪುಸ್ತಕವಾಗಿತ್ತು. ಇದಕ್ಕೆ ‌ಉದಾಹರಣೆ ಕೊಡ್ತೇನೆ. ಯಾವುದೇ ಪಕ್ಷದ ಸಿದ್ದಾಂತ ಕೊಡಬಾರದು ಅಂತ ನಾವು ಪರಿಷ್ಕರಣೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಅನ್ನೋದಕ್ಕಿಂದ ಇಲ್ಲಿ ಕಮ್ಯುನಿಸ್ಟ್ ಚಿಂತನೆಗಳು ತುಂಬಿಕೊಂಡಿತ್ತು. ಬರಗೂರು ರಾಮಚಂದ್ರಪ್ಪನವರ ಸಿದ್ಧಾಂತ ಏನು‌ ಅನ್ನೋದು ಎಲ್ಲರಿಗೂ ಗೊತ್ತಿದೆ. ಅದನ್ನೇ ಅವರು ಪಠ್ಯದಲ್ಲಿ ಹೇರುವ ಕೆಲಸ ಮಾಡಿದ್ದಾರೆ ಅಂತ ಹೇಳಿದ್ದರು.

ವಿವೇಕಾನಂದರ ಭಾಷಣದ ಬಗ್ಗೆ ತದ್ವಿರುದ್ಧ ಹೇಳಿಕೆಗಳನ್ನ ಬರೆದು ಪಠ್ಯದಲ್ಲಿ ತಂದ್ರು. ನಾವು ಪಠ್ಯ ಪುಸ್ತಕವನ್ನ ಭಾರತದ ಪುಸ್ತಕವಾಗಿ ಮಾಡ್ತೇವೆ. ಭಾರತದ(India) ಉಲ್ಲೇಖಗಳನ್ನ ಅವರು ತೆಗೆದು ಹಾಕಿದ್ದರು. ಮಾತೃಭೂಮಿ ಶಬ್ದ ತೆಗೆದಿದ್ದರು. ಮಹರ್ಷಿಗಳ ವಿಚಾರದಲ್ಲಿ ಅವರಿಗೆ ಏಕವಚನ ಪದ ಬಳಸಿದ್ದರು. ಎಲ್ಲೆಲ್ಲಿ ಹಿಂದೂ ಧರ್ಮದ ವಿಚಾರಗಳು ಬರುತ್ತೋ ಅಲ್ಲೆಲ್ಲ ಹೀಗಳಿಕೆ ಮಾಡಿದ್ದರು. ಇಡೀ ಪುಸ್ತಕಗಳು ಹಿಂದೂ(Hindu) ಧರ್ಮಕ್ಕೆ ಅವಮಾನವಾಗೋ ರೀತಿ ಇದೆ. ಪ್ರಜಾಪ್ರಭುತ್ವ ಅನ್ನೋ ಚಾಪ್ಟರ್‌ನಲ್ಲಿ ಕಮ್ಯುನಿಸ್ಟ್ ಸರ್ಕಾರಗಳನ್ನೇ ವಿಜೃಂಭಿಸಿದ್ದರು.‌ ನಾವು ಟಿಪ್ಪುವಿನ(Tipu Sultan) ವೈಭವೀಕರಣ ಅನ್ನೋದಕ್ಕಿಂತ ಅನಗತ್ಯ ವಿಚಾರ ತೆಗೀತಿವಿ. ಅವನ ಯುದ್ಧಗಳ ಬಗ್ಗೆ ಕೆಲವು ಅನಗತ್ಯ ಇವೆ, ಅದನ್ನ ತೆಗೆದಿದ್ದೇವೆ. ಯಾವುದು ಉಚಿತವೋ ಅದು ಇರುತ್ತೆ, ಅನುಚಿತ ಅನಿಸಿದ್ದು ಇರಲ್ಲ. ಇದು ಕೇವಲ ಟಿಪ್ಪು ಮಾತ್ರ ಅಲ್ಲ, ಎಲ್ಲದರಲ್ಲೂ ಇದನ್ನ ಅನ್ವಯಿಸ್ತೇವೆ ಎಂದರು. 

click me!