SSLC ರಾಜ್ಯಕ್ಕೆ ಟಾಪರ್ ಸರ್ದಾರ್ ವಲ್ಲಭಭಾಯಿ ಪಟೇಲ್ ಶಾಲೆಯ ಎ.ಎಸ್.ಆದಿತ್ಯ!

By Govindaraj S  |  First Published May 20, 2022, 1:18 AM IST

ಸರ್ಜಾಪುರದ ಸರ್ದಾರ್ ವಲ್ಲಭಬಾಯಿ ಪಟೇಲ್ ಶಾಲೆಯ ವಿದ್ಯಾರ್ಥಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲಿಗನಾದ ಎ.ಎಸ್.ಆದಿತ್ಯ, ಆನೇಕಲ್ ತಾಲೂಕಿಗೂ ಗೌರವ ಸ್ಥಾನ ತಂದುಕೊಟ್ಟಿದ್ದಾನೆ.


ವರದಿ: ಟಿ.ಮಂಜುನಾಥ, ಹೆಬ್ಬಗೋಡಿ, ಬೆಂಗಳೂರು

ಆನೇಕಲ್ (ಮೇ.20): ಸರ್ಜಾಪುರದ ಸರ್ದಾರ್ ವಲ್ಲಭಬಾಯಿ ಪಟೇಲ್ ಶಾಲೆಯ (Sardar Vallabhbhai Patel School) ವಿದ್ಯಾರ್ಥಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲಿಗನಾದ ಎ.ಎಸ್.ಆದಿತ್ಯ (AS Aditya), ಆನೇಕಲ್ ತಾಲೂಕಿಗೂ ಗೌರವ ಸ್ಥಾನ ತಂದುಕೊಟ್ಟಿದ್ದಾನೆ. ಈ ಮೂಲಕ ಆನೇಕಲ್ ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಸಾಧನೆ ಸಾಲಿಗೆ ಸೇರ್ಪಡೆಯಾದ. ಪ್ರತಿನಿತ್ಯ ಹೆಚ್ಚು ಕಾಲ ಅಚ್ಚುಕಟ್ಟಾಗಿ ಓದುತ್ತಿದ್ದ ವಿದ್ಯಾರ್ಥಿ ಶಾಲೆಯಲ್ಲಿ  ಅಂದಿನ ಪಾಠಗಳನ್ನ ಅಂದೇ ಓದಿಕೊಳ್ಳುತ್ತಿದ್ದನಂತೆ . ಶಾಲೆಯಲ್ಲಿ ಶಿಕ್ಷಕರು ಮತ್ತು ಆಡಳಿತ ಮಂಡಳಿಯಿಂದ ನೀಡುತ್ತಿದ್ದ ಸಹಕಾರವನ್ನು ಪಡೆದುಕೊಂಡು ಉತ್ತಮ ಸಾಧನೆ ಮಾಡುವ ಮೂಲಕ ಆನೇಕಲ್ ತಾಲೂಕಿನ ಕೀರ್ತಿ ತಂದಿದ್ದಲ್ಲದೇ ಶಾಲೆಗೆ ಹೆಸರು ತಂದು ಕೊಟ್ಟಿದ್ದಾನೆ.

Tap to resize

Latest Videos

ಗ್ರಾಮೀಣ ಭಾಗದ ವಿದ್ಯಾರ್ಥಿಯ ಸಾಧನೆಗೆ ಶ್ಲಾಘನೆ- ಗ್ರಾಮೀಣ ಭಾಗದಿಂದ ಬಂದು ಪ್ರತಿದಿನ ಸರ್ಜಾಪುರದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಉತ್ತಮ ಸಾಧನೆ ಮಾಡುವ ಮೂಲಕ ಆನೇಕಲ್ ತಾಲೂಕಿಗೆ ಕೀರ್ತಿ ತಂದಿದ್ದಾನೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಪಾರವಾದ ಜ್ಞಾನ ಅಡಗಿರುತ್ತದೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಚಲನಚಿತ್ರ ನಿರ್ಮಾಪಕ ಸಿ ಆರ್ ಮನೋಹರ್ ತಿಳಿಸಿದ್ದಾರೆ.

Karnataka SSLC 2022 Topper ಬಡತನದಲ್ಲಿ ಅರಳಿದ ವಿಜಯಪುರದ ಪ್ರತಿಭೆ ರಾಜ್ಯಕ್ಕೆ ಟಾಪರ್!

ಸರ್ಜಾಪುರದ ಎಸ್ ವಿ ಪಿ ಶಾಲೆಯಲ್ಲಿ ಹಬ್ಬದ ವಾತಾವರಣ- ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಯನ್ನು ಸರ್ಜಾಪುರದ ಸರ್ದಾರ್ ವಲ್ಲಭಾಯಿ ಪಟೇಲ್ ಶಾಲೆಯ ಆಡಳಿತ ಮಂಡಳಿ ಸಿಹಿ ತಿನ್ನಿಸಿ ಗೌರವಿಸಿದರು, ಹಲವಾರು ವರ್ಷಗಳ ಇತಿಹಾಸ ಇರುವ ಎಸ್ವಿಪಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ದೇಶ-ವಿದೇಶ ಅಲ್ಲದೆ ರಾಜ್ಯದಲ್ಲಿ ಹಲವಾರು ಉನ್ನತ ಸ್ಥಾನಗಳನ್ನು ಗಳಿಸಿದ್ದಾರೆ ಇಂತಹ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಗೆ ಬರುವ ಕೆಲಸವನ್ನು ಶಿಕ್ಷಣಸಂಸ್ಥೆಗಳು ಮಾಡಬೇಕು, ಸರ್ಜಾಪುರ ಸಮೀಪದ ಕಾಮನಹಳ್ಳಿಯಿಂದ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿ ಶಾಲೆಯಲ್ಲಿ ಹೇಳಿಕೊಡುತ್ತಿದ್ದ ಪಾಠ ಪ್ರವಚನವನ್ನು ಅಚ್ಚುಕಟ್ಟಾಗಿ ಪಾಲನೆ ಮಾಡುತ್ತಿದ್ದ, ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಆಡಳಿತ ಮಂಡಳಿಗೆ ಕೂಡ ಹೆಸರು ಬರುವಂತಾಗಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಡಾ. ರವೀಂದ್ರ ರೆಡ್ಡಿ ಹೇಳಿದ್ದಾರೆ.

ಬಡತನ ಹಿನ್ನಲೆಯ ಕುಟುಂಬದಿಂದ ಬಂದ ವಿದ್ಯಾರ್ಥಿಯಿಂದ 625ಕ್ಕೆ 625 ಅಂಕ- ಸರ್ಜಾಪುರ ಸಮೀಪದ ಕಾಮನಹಳ್ಳಿ ವಿದ್ಯಾರ್ಥಿ ತಂದೆ ಶ್ರೀನಿವಾಸ್ ಅರ್ಚಕರಾಗಿದ್ದಿ,ತಾಯಿ ಸುಭಾಶಿನಿ ಮನೆ ನಿಭಾಯಿಸಿಕೊಂಡು ಹೋಗುತ್ತಿದ್ದರು, ಮನೆಯಲ್ಲಿ ಬಡತನ ಇದ್ದರೂ ಸಹ ಓದಿಗೆ ಬಡತನ ಇಲ್ಲ ಎನ್ನುವುದನ್ನು ವಿದ್ಯಾರ್ಥಿ ಸಾಧಿಸಿ ತೋರಿಸಿದ್ದಾನೆ.

ಎಸ್.ವಿ.ಪಿ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ಮಾಪಕ‌ ಸಿ.ಆರ್.ಮನೋಹರ್ - ಶಾಲೆಗೆ ಕೀರ್ತಿ ತಂದುಕೊಟ್ಟ ವಿದ್ಯಾರ್ಥಿಯ ಸಾಧನೆಯನ್ನು ಇಡೀ ತಾಲೂಕಿಗೆ ಹಾಗೂ ಸರ್ಜಾಪುರ ವ್ಯಾಪ್ತಿಗೆ ಹೆಸರು ತಂದು ಕೊಟ್ಟಿದ್ದಾನೆ. ಇಂತಹ ವಿದ್ಯಾರ್ಥಿಯ ಸಾಧನೆಯನ್ನು ಇತರ ವಿದ್ಯಾರ್ಥಿಗಳು ಮಾದರಿಯನ್ನಾಗಿ ಇಟ್ಟುಕೊಂಡು ಉತ್ತಮ ಶಿಕ್ಷಣವನ್ನು ಪಡೆದು ಅಂಕಗಳಿಸಬೇಕು, ವಿದ್ಯಾರ್ಥಿ ಉತ್ತಮ ಸಾಧನೆ ಮಾಡಿರುವ ಹಿನ್ನೆಲೆ ಸಿಆರ್ ಮನೋಹರ್ ಅವರಿಂದ ಅಭಿನಂದನೆ ಸಲ್ಲಿಸಲಾಯಿತು.

50 ಸಾವಿರ ಹಣ ನೀಡಿದ ಸಿಆರ್ ಮನೋಹರ್- ವಿದ್ಯಾರ್ಥಿಯ ಸಾಧನೆಯನ್ನು ಮೆಚ್ಚಿ ಶಾಲೆಗೆ ಆಗಮಿಸಿ ಸನ್ಮಾನಿಸಿ ಗೌರವಿಸಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಶಾಲೆಯ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ಮಾಪಕ ಸಿ ಆರ್ ಮನೋಹರ್ ಅವರು 50 ಸಾವಿರ ಹಣವನ್ನು ವಿದ್ಯಾರ್ಥಿಗೆ ನೀಡುವ ಮೂಲಕ ಮುಂದಿನ ಶಿಕ್ಷಣಕ್ಕೆ ಸಹಕಾರಿಯಾಗಲು ಸಹಾಯ ಮಾಡಿದ್ದಾರೆ.

Karnataka SSLC Toppers List: ಒಟ್ಟು 145 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ!

ವಿದ್ಯಾರ್ಥಿ ತಂದೆ ಶ್ರೀನಿವಾಸ್- ಮಗನ ಸಾಧನೆಯನ್ನು ನೋಡಿ ನನಗೆ ಸಂತಸ ತಡೆಯಲು ಸಾಧ್ಯವಾಗುತ್ತಿಲ್ಲವೆಂದ ಪುರೋಹಿತರಾದ ಶ್ರೀನಿವಾಸ ಮತ್ತು ಸುಭಾಶಿನಿ, ಇಂತಹ ಸಾಧನೆಯನ್ನು ಮಾಡಲು ನನಗೆ ದೇವರ ಕೃಪೆ ಹಾಗೂ ಮಗನಿಗೆ ದೇವರ ಆಶೀರ್ವಾದ ಇದು ಮುಂದಿನ ದಿನಗಳಲ್ಲಿ ಅವನು ಇನ್ನಷ್ಟು ಸಾಧನೆ ಮಾಡಬೇಕು ಎನ್ನುವುದು ನಮ್ಮ ಆಸೆ. ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ರೆಡ್ಡಿ, ಎಸ್ವಿಪಿ ಶಾಲೆಯ ಉಪಾಧ್ಯಕ್ಷ ಎಸ್.ಎ.ಪ್ರಭು, ಖಜಾಂಚಿ ಎ.ಎನ್. ನಾಗರಾಜಶೆಟ್ಟಿ, ಕಾರ್ಯದರ್ಶಿ ಎಸ್ ವಿ ರವೀಂದ್ರ, ಶಿಕ್ಷಕರಾದ ಹರೀಶ್, ರಾಮಕೃಷ್ಣ, ಬಿ.ಎನ್. ಮಂಜುಳ, ಎಮ್.ನಾಗರಾಜ್, ಕೆ.ಶೈಲಜ,ಎ.ಪಾಪಣ್ಣ,ವಿ.ರಾಮಕೃಷ್ಣ, ಎನ್.ಸರಸ್ವತಿ, ಮಧುಮಾಲ ಎಸ್.ಎಂ, ಮತ್ತಿತರರು ಇದ್ದರು.

click me!