SSLC ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ, ರಾಮನಗರದಲ್ಲಿ ಓರ್ವ ಅರೆಸ್ಟ್

By Suvarna News  |  First Published May 25, 2022, 1:15 PM IST

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಖಾಸಗಿ ಪ್ರೌಢಶಾಲೆಯ ಕ್ಲರ್ಕ್‌ ಒಬ್ಬರನ್ನು ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದಡಿ ಬಂಧಿಸಲಾಗಿದೆ. 


ರಾಮನಗರ (ಮೇ.25): ಎಸ್ಸೆಸ್ಸೆಲ್ಸಿ (SSLC) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದಡಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಖಾಸಗಿ ಪ್ರೌಢಶಾಲೆಯ ( private high school) ಕ್ಲರ್ಕ್‌ನನ್ನು ಮಾಗಡಿ  (Magadi) ಪೋಲಿಸರು (Police) ಬಂಧಿಸಿದ್ದಾರೆ. ಮಾಗಡಿಯ  ಕೆಂಪೇಗೌಡ ಪ್ರೌಢಶಾಲೆಯ (Magadi Kempegowda ) ಕ್ಲರ್ಕ್‌ ರಂಗೇಗೌಡ ಬಂಧಿತ ಆರೋಪಿಯಾಗಿದ್ದಾನೆ. ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ (SSLC Exam) ವಿಜ್ಞಾನ (Science ) ಪತ್ರಿಕೆಯು ವಾಟ್ಸಾಪ್ ಮೂಲಕ ಸೋರಿಕೆಯಾಗಿತ್ತು. ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭವಾಗಿತ್ತು. ಅದೇ ಸಮಯದಲ್ಲಿ ಪ್ರಶ್ನೆ ಪತ್ರಿಕೆಯನ್ನು ಹೆಡ್ ಮಾಸ್ಟರ್ ಹಾಗೂ ಶಿಕ್ಷಕರಿರುವ ಗ್ರೂಪ್‌ನಲ್ಲೇ ಶೇರ್ ಆಗಿತ್ತು. 

ರಂಗೇಗೌಡ ವಾಟ್ಸಪ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವ ವಿಚಾರ ಬಹಿರಂಗವಾಗುತ್ತಿದ್ದಂತೆಯೇ  ರಾಮನಗರ ಡಿಡಿಪಿಐ ಗಂಗಣ್ಣ ಸ್ವಾಮಿ ನೀಡಿದ ದೂರಿನ ಮೇರೆಗೆ ಮಾಗಡಿ  ಪೋಲಿಸರು   ಎಫ್ಐಆರ್ ದಾಖಲಿಸಿ ರಂಗೇಗೌಡ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೆಂಪೇಗೌಡ ಶಾಲೆ ಎಸ್ಸೆಸ್ಸೆಲ್ಸಿ ಫಲಿತಾಂಶ (SSLC Result)  ಪ್ರಕಟವಾದ ವೇಳೆ ಉತ್ತಮ ಸಾಧನೆ ಮಾಡಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದ ನಂತರ ಚರ್ಚೆ ಆರಂಭವಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿದ್ದಾರೆಂದು ಅನುಮಾನ ವ್ಯಕ್ತವಾಗಿದೆ.

Tap to resize

Latest Videos

ಶಿಕ್ಷಣ ಮಾತ್ರವಲ್ಲ ಎಲ್ಲವನ್ನು ಬದಲಾವಣೆ ಮಾಡಿದ್ದೇವೆ BC Nagesh 

ಶಿಕ್ಷಣ ಮಾತ್ರವಲ್ಲ ಎಲ್ಲವನ್ನು ಬದಲಾವಣೆ ಮಾಡಿದ್ದೇವೆ: ನಾವು ಶಿಕ್ಷಣವನ್ನ‌ (Education) ಮಾತ್ರ ಬದಲಾವಣೆ ಮಾಡಿಲ್ಲ. ಎಲ್ಲವನ್ನು ಬದಲಾವಣೆ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC Nagesh)  ಮೈಸೂರಿನಲ್ಲಿ (Mysuru) ಹೇಳಿಕೆ ನೀಡಿದ್ದಾರೆ. ಈ ದೇಶದಲ್ಲಿ ವಾಜಪೇಯಿ ಸರ್ಕಾರ ಬರುವವರೆಗೂ ಅಂತರಾಜ್ಯ ರಸ್ತೆ ಇರಲಿಲ್ಲ. ನಾವು ರಸ್ತೆಯನ್ನು ಬದಲಾವಣೆ ಮಾಡಿದ್ದೇವೆ. ಅದರ ಬಗ್ಗೆಯು ಮಾತನಾಡಿ. ಪಠ್ಯ ಪುಸ್ತಕದ ಮೇಲೆ ಮಾತನಾಡುತ್ತಿರುವವರು ವಿಷಯದ ಮೇಲೆ ಮಾತನಾಡುತ್ತಿದ್ದಾರಾ?  ರಾಜಕೀಯದ ಮೇಲೆ ಮಾತನಾಡುತ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ ಪಠ್ಯ ಬದಲಾಯಿಸಿದ್ರೆ ಅದು ವಿರೋಧವಲ್ಲ. ಆಗ ಒಂದೇ ಪಂಥದ ಪಠ್ಯ ಪುಸ್ತಕ ಸೇರಿದಾಗ ಅದು ತಪ್ಪಲ್ಲ ಅಲ್ವಾ. ಈಗ ಮಾತ್ರ ನಿಮಗೆ ಪಂಥಗಳು ಕಾಣುತ್ತಿದೆ. ನಮ್ಮ ಇಚ್ಚೆ ಪಂಥದಲ್ಲ.  ನಾವು ಎಲ್ಲವನ್ನು ಒಪ್ಪಿ ಶ್ರೇಷ್ಠವಾದುದ್ದನ್ನು ಕೊಡುತ್ತಿದ್ದೇವೆ. ಬಿಜೆಪಿ ಪಠ್ಯ ಸಂಸ್ಕರಣ ಮಾಡುತ್ತಿದ್ದಂತೆ. ನಿಮಗೆ ಚಾತುರ್ ವರ್ಣ ಎಲ್ಲ ನೆನಪಾಗುತ್ತಿದೆ ಎಂದಿದ್ದಾರೆ.

ಜ್ಞಾನವ್ಯಾಪಿ ಮಂದಿರದ ಪರ ಬ್ಯಾಟ್ ಮಾಡಿದ ಬೆಂಗಳೂರು ಶಿಕ್ಷಣ ಸಂಸ್ಥೆ

ವಾಜಪೇಯಿ ಪ್ರಧಾನಿ ಆಗುವ ಮೊದಲು ಅಮೇರಿಕಾ ಹೇಳಿದಂತೆ ನಡೆಯುತ್ತಿತ್ತು. ಈ ದೇಶದಲ್ಲಿ ಯಾವಾಗ ಯುದ್ಧ ಆಗಬೇಕು ಎಂಬುದನ್ನು ಅಮೇರಿಕಾ ತೀರ್ಮಾನ ಮಾಡುತ್ತಿತ್ತು. ಆದರೆ ವಾಜಪೇಯಿ ಕಾರ್ಗೀಲ್ ಯುದ್ಧದಲ್ಲಿ ಕೊನೆ ಸೈನಿಕ ಹೋರಾಡುವ ವರೆಗೆ ಯಾರ ಜೊತೆ ಮಾತಾಡಲ್ಲ ಅಂದಿದ್ರು. ಕಾಂಗ್ರೆಸ್ ಯಾರ್ಯಾರಿಗೋ ರಾಜಿ ಮಾಡಿಕೊಂಡು ರಾಜಕೀಯ ಮಾಡಿದೆ. ಆದರೆ ನಾವು ರಾಜಕೀಯ ಮಾಡಿರೋದು ಈ ಜನರಿಗಾಗಿ ಈ ನೆಲಕ್ಕಾಗಿ, ಇಲ್ಲಿನ ಸಂಸ್ಕೃತಿಗಾಗಿ ಎಂದರು.

ಬೇರೆ ದೇಶಗಳಲ್ಲಿ ನಮಗೆ 400-500 ವರ್ಷಗಳ ಇತಿಹಾಸ ಇಲ್ಲ. ಭಾರತಕ್ಕೆ 5-6 ಸಾವಿರ ವರ್ಷಗಳ ಇತಿಹಾಸ ಇದೆ. ನಾವು ಜ್ಞಾನ ಇಟ್ಟುಕೊಂಡು ಬೇರೆ ದೇಶಕ್ಕೆ ಹೋದವರು. ಬೇರೆಯವರಂತೆ ಪಿಸ್ತೂಲ್, ಕತ್ತಿ ಹಿಡಿದುಕೊಂಡು ಬಂದವರಲ್ಲ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಬೀದಿ ಫೋಕರಿಯೊಬ್ಬ ಮಕ್ಕಳ ಶಿಕ್ಷಣ ನಿರ್ಧರಿಸುವುದು ರಾಜ್ಯದ ದೌರ್ಭಾಗ್ಯವೆಂದ ಕಾಂಗ್ರೆಸ್

 

click me!