UPSC Shivangi Goyal; ಅತ್ತೆಯ ಕಿರುಕುಳವೇ UPSC ಟಾಪರ್ ಆಗಲು ಸ್ಪೂರ್ತಿ

By Suvarna NewsFirst Published Jun 1, 2022, 12:26 PM IST
Highlights

ಯುಪಿಎಸ್‌ಸಿಯಲ್ಲಿ 177 ನೇ ರ‍್ಯಾಂಕ್‌ ಪಡೆದಿರುವ ಶಿವಂಗಿ ಗೋಯಲ್ ಗಂಡನ ಮನೆಯಲ್ಲಿ ಕಿರುಕುಳ ಅನುಭವಿಸಿ ಅದರ ವಿರುದ್ಧ ಹೋರಾಡಿ ತನ್ನ ಯುಪಿಎಸ್‌ ಕನಸು ನನಸು ಮಾಡಿಕೊಂಡಾಕೆ. ಈಕೆಯ  ರೋಚಕ ಸ್ಟೋರಿ ಇಲ್ಲಿದೆ.

ನವದೆಹಲಿ (ಜೂನ್.1): 2021ರ ನಾಗರಿಕ ಸೇವಾ ಪರೀಕ್ಷೆಯಲ್ಲಿ (Civil Services Exam) ಈ ಬಾರಿ ಹೆಣ್ಣುಮಕ್ಕಳೇ ಟಾಪ್ 3 ಸ್ಥಾನ ಬಾಚಿಕೊಂಡಿದ್ದಾರೆ.  ಕೇಂದ್ರ ಲೋಕಸೇವಾ ಆಯೋಗದ (Union Public Service Commission - UPSC) ಪ್ರಕಟಿಸಿದ ಅಂತಿಮ ಫಲಿತಾಂಶಗಳ ಪ್ರಕಾರ ಶ್ರುತಿ ಶರ್ಮಾ (Shruti Sharma), ಅಂಕಿತಾ ಅಗರ್ವಾಲ್ ಮತ್ತು ಗಾಮಿನಿ ಸಿಂಗ್ಲಾ ಕ್ರಮವಾಗಿ ಮೊದಲ, ಎರಡನೇ ಮತ್ತು ಮೂರನೇ ರ‍್ಯಾಂಕ್‌ ಗಳಿಸಿದ್ದಾರೆ.

ವಿಶೇಷವೆಂದರೆ ಯುಪಿಎಸ್‌ಸಿಯಲ್ಲಿ ಟಾಪರ್ ಆಗಿರುವ  ಒಬ್ಬೊಬ್ಬರದ್ದು ಒದೊಂದು ಕಥೆ   ಉತ್ತರ ಪ್ರದೇಶದ (Uttar Pradesh) ಹಾಪುರ್‌ನ ಶಿವಂಗಿ ಗೋಯಲ್ (Shivangi Goyal)  ಅವರ ಕಥೆಯೇ ಒಂದು ರೋಚಕ ಮತ್ತು ಅನೇಕ ಹೆಣ್ಣು ಮಕ್ಕಳಿಗೆ ಸ್ಫೂರ್ತಿ.  ಯುಪಿಎಸ್‌ಸಿಯಲ್ಲಿ 177 ನೇ ರ‍್ಯಾಂಕ್‌ ಪಡೆದಿರುವ ಶಿವಂಗಿ ಗೋಯಲ್ ಯಶಸ್ಸಿನ ಪ್ರಯಾಣವು ಬಹಳ ಕಷ್ಟ ಮತ್ತು ಸವಾಲುಗಳಿಂದ ತುಂಬಿತ್ತು. ಮದುವೆಯಾಗಿರುವ ಇವರಿಗೆ 7 ವರ್ಷದ ಮಗಳಿದ್ದಾಳೆ.

Textbooks Row; ಸಚಿವರ ವರದಿ ಆಧರಿಸಿ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಎಂದ ಸಿಎಂ

ಶಿವಾಂಗಿ ಗೋಯಲ್ ಅವರ ಯಶಸ್ಸಿನ ಪ್ರಯಾಣವು ಪ್ರಪಂಚದಾದ್ಯಂತದ ಅನೇಕ ಮಹಿಳೆಯರು ಎದುರಿಸುತ್ತಿರುವ ಪರಿಸ್ಥಿತಿಯನ್ನು ಹೋಲುತ್ತದೆ,  ಈಕೆಯ ಜೀವನ ಕೌಟುಂಬಿಕ ದೌರ್ಜನ್ಯ ಮತ್ತು ಕಿರುಕುಳದ (domestic violence and harassment ) ನಿದರ್ಶನಗಳಿಂದ ತುಂಬಿದೆ. ಗಂಡನಿಂದ ಶಿವಾಂಗಿ  ವಿಚ್ಛೇದನ ಪಡೆಯುವ  ಪ್ರಕ್ರಿಯೆ ನಡೆಯುತ್ತಿರುವಾಗಲೇ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಶ್ಲಾಘನೀಯ.

ಗೋಯಲ್ ಅವರು ಮದುವೆಗೆ ಮುಂಚೆಯೇ ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು, ಹೀಗಾಗಿ ಎರಡು ಬಾರಿ ಯುಪಿಎಸ್‌ ಸಿ ಬರೆದಿದ್ದರು ಆದರೆ  ವಿಫಲರಾಗಿದ್ದರು. ಬಳಿಕ ಮದುವೆಯಾಯಿತು. ಮದುವೆಯಾದ ನಂತರ,   ಗಂಡನ ಮನೆಯಲ್ಲಿ ಶಿವಾಂಗಿ  ಕೌಟುಂಬಿಕ ಹಿಂಸಾಚಾರ ಮತ್ತು ಅತ್ತೆಯ ಕಿರುಕುಳದಿಂದ ಬೇಸತ್ತು ಹೋಗಿದ್ದರು. ಹೀಗಾಗಿ ತನ್ನ ಮಗಳೊಂದಿಗೆ ತನ್ನ ತವರು ಮನೆಗೆ ಮರಳಿ ತಂದೆ ತಾಯಿ ಜೊತೆ ಜೀವನ ಮಾಡುತ್ತಾರೆ.

ಪೋಷಕರು ಶಿವಾನಿಗೆ ಬೆಂಬಲ ನೀಡಿ ಏನು ಮಾಡಬೇಕೆಂದು ಬಯಸುತ್ತಿಯೋ ಅದನ್ನು ಮಾಡು ಎಂದು ಪ್ರೋತ್ಸಾಹ ನೀಡಿದರು. "ಯುಪಿಎಸ್‌ಸಿಗೆ ಮತ್ತೆ ಏಕೆ ತಯಾರಿ ನಡೆಸಬಾರದು ಎಂದು ನಾನು ಯೋಚಿಸಿದೆ"  ಹೀಗಾಗಿ ಈ ಸಾಧನೆ ಮಾಡಲು ಸಾಧ್ಯವಾಯ್ತು. ನನ್ನ ಯಶಸ್ಸನ್ನು ತಮ್ಮ ಮಗಳು ರೈನಾ ಮತ್ತು  ತಂದೆ ತಾಯಿಗೆ ಅರ್ಪಿಸುತ್ತೇನೆ ಎಂದು ಶಿವಾಂಗಿ ಹೇಳಿದ್ದಾರೆ.

Bagalkoteಯಲ್ಲಿ ಥಳಿತ ಪ್ರಕರಣ, ವಿದ್ಯಾರ್ಥಿ ತನಿಖೆಗೆ ಸಹಕರಿಸುತ್ತಿಲ್ಲವೆಂದ ಪೊಲೀಸರು

ಇದರ ಜೊತೆಗೆ ಶಿವಂಗಿ ಗೋಯಲ್ ಅವರು ಎಲ್ಲಾ ವಿವಾಹಿತ ಮಹಿಳೆಯರಿಗೆ ಸಂದೇಶವನ್ನು ನೀಡಿದ್ದಾರೆ.  ಮಹಿಳೆಯರಿಗೆ ತಮ್ಮ ಅತ್ತೆಯ ಮನೆಯಲ್ಲಿ ಏನಾದರೂ ಕಿರುಕುಳ ನೀಡಿದರೆ. ಅಥವಾ ಅನಾಹುತ ಸಂಭವಿಸಿದರೆ ಭಯಪಡಬೇಡಿ, ನಿಮ್ಮ ಕಾಲಿನ ಮೇಲೆ ನೀವು ನಿಲ್ಲಬಲ್ಲಿರಿ ಎಂಬುದನ್ನು ಅವರಿಗೆ ತೋರಿಸಿ, ಮಹಿಳೆಯರು ಏನು ಬೇಕಾದರೂ ಸಾಧನೆ ಮಾಡಬಹುದು ಎಂಬ ಸಂದೇಶವನ್ನು ನಾನು ನೀಡಲು ಬಯಸುತ್ತೇನೆ. ಚೆನ್ನಾಗಿ ಓದಿ ಕಷ್ಟಪಟ್ಟು ಕೆಲಸ ಮಾಡಿದರೆ ಐಎಎಸ್‌ ಆಗಬಹುದು ಎಂದು ಧೈರ್ಯ ಹೇಳಿದ್ದಾರೆ.

UPSC ಸಿವಿಲ್ ಸರ್ವೀಸಸ್ ಪರೀಕ್ಷೆ 2021 ರಲ್ಲಿ 177 ನೇ ರ‍್ಯಾಂಕ್‌ ಗಳಿಸಿದ ಗೋಯಲ್, ಸ್ವಯಂ-ಅಧ್ಯಯನ ಮತ್ತು ಕಟ್ಟುನಿಟ್ಟಾದ ದಿನಚರಿಯಿಂದ ತನ್ನ ಗುರಿಯನ್ನು ಸಾಧಿಸಿದ್ದಾರೆ. ಎಲ್ಲಾ ಸಮಯದಲ್ಲೂ ತನ್ನ ಕುಟುಂಬದತ್ತ ಕೂಡ ಗಮನ ಹರಿಸಿದ್ದಾರೆ. ಇವರ ಜೀವನಗಾಥೆಯು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಅದೆಷ್ಟೋ ಮಹಿಳೆಯರು ತಮ್ಮ ನೆಲೆಯಲ್ಲಿ ನಿಲ್ಲಬೇಕು ಮತ್ತು ಕಿರುಕುಳದಿಂದ ಮುಕ್ತರಾಗಬೇಕು ಎಂಬುದನ್ನು ತೋರಿಸುತ್ತದೆ.

click me!