
ನವದೆಹಲಿ(ಮಾ.15): ಯುದ್ಧ ಪೀಡಿತ ಉಕ್ರೇನ್ ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ನಂತರ ಅತಂತ್ರ ಭವಿಷ್ಯದ ಭಯದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಹಲವಾರು ಉಕ್ರೇನಿಯನ್ ವೈದ್ಯಕೀಯ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದು ಕೊಂಚ ನಿರಾಳ ತಂದಿದೆ. ಆದಾಗ್ಯೂ, ಪ್ರಾಯೋಗಿಕ ತರಗತಿಗಳಿಗೆ ಹಾಜರಾಗಲು ಸಾಧ್ಯವಿಲ್ಲದಿರುವುದಕ್ಕೆ ಕೆಲವು ವಿದ್ಯಾರ್ಥಿಗಳು ಚಿಂತಿತರಾಗಿದ್ದಾರೆ.
ರಷ್ಯಾದ ಪಡೆಗಳ ನಿರಂತರ ಶೆಲ್ ದಾಳಿಯ ನಡುವೆ ಉಕ್ರೇನ್‌ನಲ್ಲಿ ದೈಹಿಕ ತರಗತಿಗಳನ್ನು ನಡೆಸುವುದು ಅಸಾಧ್ಯವಾದ ಕಾರಣ, ಪಶ್ಚಿಮ ಉಕ್ರೇನ್‌ನಲ್ಲಿರುವ ಹಲವಾರು ವೈದ್ಯಕೀಯ ವಿಶ್ವವಿದ್ಯಾಲಯಗಳು ಸೋಮವಾರದಿಂದ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿವೆ.
ಭಾರತೀಯ ವಿದ್ಯಾರ್ಥಿಗಳ ಪ್ರಕಾರ ಮುಂಬರುವ ದಿನಗಳಲ್ಲಿ ಇತರ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ಪುನರಾರಂಭಿಸಲು ಯೋಜಿಸಿವೆ. ಇನ್ನು ಮುಂದುವರಿದ ಶೆಲ್ ದಾಳಿಯ ನಡುವೆ ತಮ್ಮ ಶಿಕ್ಷಕರು ತಮ್ಮ ಮನೆ ಅಥವಾ ಸುರಕ್ಷಿತ ಸ್ಥಳಗಳಿಂದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಭಾರತೀಯ ವಿದ್ಯಾರ್ಥಿಗಳು ಹೇಳಿದ್ದಾರೆ.
ಸಮವಸ್ತ್ರ ಕುರಿತ ಗೊಂದಲಗಳಿಗೆ ಹಿಜಾಬ್ ತೀರ್ಪಿನಿಂದ ತಿದ್ದುಪಡಿ: ಬಿ ಸಿ ನಾಗೇಶ್
ಡ್ಯಾನಿಲೊ ಹ್ಯಾಲಿಟ್ಸ್ಕಿ ಎಲ್ವಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ, ಇವಾನೊ-ಫ್ರಾಂಕಿವ್ಸ್ಕ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ, ವಿನ್ನಿಟ್ಸಿಯಾ ನ್ಯಾಷನಲ್ ಪಿರೊಗೊವ್ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಬೊಗೊಮೊಲೆಟ್ಸ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ ಸೋಮವಾರದಿಂದ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿವೆ.
ಡ್ಯಾನಿಲೋ ಹ್ಯಾಲಿಟ್ಸ್ಕಿ ಎಲ್ವಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ಪ್ರಥಮ ವರ್ಷದ ವಿದ್ಯಾರ್ಥಿ ಕನಿಷ್ಕ್ ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆಗಳಿರುವುದರಿಂದ ತರಗತಿಗಳು ಪುನರಾರಂಭಗೊಂಡಿರುವುದಕ್ಕೆ ಸಮಾಧಾನಗೊಂಡಿದ್ದಾರೆ.
ವೈದ್ಯಕೀಯ ಕೋರ್ಸ್ ಶುಲ್ಕ ಕಡಿತಗೊಳಿಸಲು ಚಿಂತನೆ: ಡಾ.ಕೆ.ಸುಧಾಕರ್
ಉಕ್ರೇನ್ ಕೀವ್ ಗೆ 36 ಗಂಟೆಗಳ ಕರ್ಫ್ಯೂ ವಿಧಿಸಿದ ಮೇಯರ್: ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ದಿನೇ ದಿನೇ ಬಿಗಾಡಿಯಿಸುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿ ದೇಶವನ್ನು ತೊರೆದಿದ್ದಾರೆ. ಈ ನಡುವೆ ಉಕ್ರೇನ್ ನ ರಾಜಧಾನಿ ಕೀವ್ ಗೆ ಮಂಗಳವಾರ ರಾತ್ರಿಯಿಂದ 'ಕಷ್ಟ ಮತ್ತು ಅಪಾಯಕಾರಿ ಕ್ಷಣ' ಎದುರಾಗಲಿದೆ. ಹೀಗಾಗಿ 36 ಗಂಟೆಗಳ ಕರ್ಫ್ಯೂ ವಿಧಿಸಿದ್ದೇವೆ ಎಂದು ಮೇಯರ್ ವಿಟಾಲಿ ಕ್ಲಿಟ್ಸ್ಕೊ ಹೇಳಿದ್ದಾರೆ.
'ಇಂದು ಕಷ್ಟಕರ ಮತ್ತು ಅಪಾಯಕಾರಿ ಕ್ಷಣವಾಗಿದೆ' ಎಂದು ಮಾಜಿ ಬಾಕ್ಸಿಂಗ್ ಚಾಂಪಿಯನ್ ಕ್ಲಿಟ್ಸ್ಕೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕರ್ಫ್ಯೂ ಮಂಗಳವಾರ ರಾತ್ರಿ 8 ರಿಂದ(1800 GMT) ಗುರುವಾರ ಬೆಳಿಗ್ಗೆ 7 ರವರೆಗೆ (0500 GMT) ಮುಂದುವರೆಯಲಿದೆ ಎಂದು ಹೇಳಿದರು.
ಉಕ್ರೇನ್ ಕದನ ನಿಲುಗಡೆಗೆ ವಿಶ್ವಸಂಸ್ಥೆ ನೇರ ಸಂಧಾನ: ರಷ್ಯಾ- ಉಕ್ರೇನ್ ಮಧ್ಯೆ ನೇರವಾಗಿ ಸಂಧಾನ ನಡೆಸುವಂತೆ ಕೋರಿ ವಿಶ್ವಸಂಸ್ಥೆ ಭಾರತ, ಚೀನಾ ಮತ್ತು ಫ್ರಾನ್ಸ್ ದೇಶಗಳೊಂದಿಗೆ ಚರ್ಚೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ, ತಾನು ಉಕ್ರೇನ್ ಮತ್ತು ರಷ್ಯಾ ಎರಡೂ ದೇಶಗಳ ಜೊತೆ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿದೆ.
ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧ ಈ ಕೂಡಲೆ ನಿಲ್ಲಬೇಕು. ಕದನವಿರಾಮ ಏರ್ಪಡಬೇಕು ಎಂದು ಭಾರತದ ಪ್ರಧಾನಿ ಮೋದಿ ಈ ಹಿಂದೆ ಹಲವು ಬಾರಿ ಹೇಳಿದುದನ್ನು ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ತಿಳಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಭಾರತ ಪ್ರತಿನಿಧಿ ರವೀಂದ್ರ ಅವರು ಉಕ್ರೇನಿನಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಸ್ಥಳಾಂತರಿಸಲು ನಡೆಸಿದ ಆಪರೇಷನ್ ಗಂಗಾ ಕುರಿತು ಮಾಹಿತಿ ಹಂಚಿಕೊಂಡರು. ಇದುವರೆಗೂ ಒಟ್ಟು 22,500 ಭಾರತೀಯರನ್ನು ಉಕ್ರೇನಿನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಈ ಕಾರ್ಯಾಚರಣೆಗೆ ನೆರವು ನೀಡಿದ ದೇಶಗಳಿಗೆ ರವೀಂದ್ರ ಧನ್ಯವಾದ ಅರ್ಪಿಸಿದರು.
ಇದೇ ವೇಳೆ ರಷ್ಯಾ ಉಕ್ರೇನ್ ಯುದ್ಧದಿಂದ ಬಡ ದೇಶಗಳು ಆಹಾರ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ವಿಶ್ವಸಂಸ್ಥೆ ಮುಖ್ಯಸ್ಥ ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ. ಬಡದೇಶಗಳು ಮುಖ್ಯವಾಗಿ ಗೋದಿಗಾಗಿ ರಷ್ಯಾ- ಉಕ್ರೇನನ್ನು ಅವಲಂಬಿಸಿವೆ.