ವಾಣಿಜ್ಯ ವಿಭಾಗದಲ್ಲಿ ನಾಲ್ವರು, ವಿಜ್ಞಾನ ವಿಭಾಗದಲ್ಲಿ ಒಬ್ಬ ಟಾಪರ್!

By Santosh Naik  |  First Published Jun 18, 2022, 8:14 PM IST

 ಒಟ್ಟಿನಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಸದಾ ಶೇಕಡಾವಾರು ಫಲಿತಾಂಶದಲ್ಲಿ ಮುಂದಿರುತ್ತಿದ್ದ ಶಿವಮೊಗ್ಗ ಜಿಲ್ಲೆ ನಿಧಾನವಾಗಿ ಹಿಮ್ಮುಖ ಫಲಿತಾಂಶದತ್ತ ಸಾಗುತ್ತಿದೆ. ಶಿವಮೊಗ್ಗದ ದೇಶಿಯ ವಿದ್ಯಾಶಾಲಾ ಸಮಿತಿಯ ಶಿಕ್ಷಣ ಸಂಸ್ಥೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ನಾಲ್ವರು ವಿದ್ಯಾರ್ಥಿಗಳು ರಾಜ್ಯದಲ್ಲಿ ಕ್ರಮವಾಗಿ 7,8,9,10 ನೇ ಸ್ಥಾನ ಪಡೆದು ಟಾಪರ್ ಗಳಾಗಿದ್ದಾರೆ. 


ವರದಿ : ರಾಜೇಶ್ ಕಾಮತ್ , ಶಿವಮೊಗ್ಗ

ಶಿವಮೊಗ್ಗ (ಜೂನ್ 18): ದ್ವಿತೀಯ ಪಿಯುಸಿ ಫಲಿತಾಂಶ (second puc result 2022) ಪ್ರಕಟವಾಗಿದ್ದು  ಶಿವಮೊಗ್ಗದ (shivamogga) ದೇಶಿಯ ವಿದ್ಯಾಶಾಲಾ ಸಮಿತಿಯ ಶಿಕ್ಷಣ ಸಂಸ್ಥೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ನಾಲ್ವರು ವಿದ್ಯಾರ್ಥಿಗಳು ರಾಜ್ಯದಲ್ಲಿ ಕ್ರಮವಾಗಿ 7,8,9,10 ನೇ ಸ್ಥಾನ ಪಡೆದು ಟಾಪರ್ ಗಳಾಗಿದ್ದಾರೆ. ಇನ್ನೂ ಸೈನ್ಸ್‌ ವಿಭಾಗದಲ್ಲಿ ಇಡಿ ಕಾಲೇಜಿಗೆ ಹಳ್ಳಿಗಾಡಿನ ಯುವಕನೊಬ್ಬ ಟಾಪರ್ ಆಗುವ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. 

Tap to resize

Latest Videos

ಡಿವಿಎಸ್ ಶಿಕ್ಷಣ ಸಂಸ್ಥೆಯ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ ಕೃತಿಕಾ   590  ಅಂಕಗಳು, ಸಂಜಯ್ .ಪಿ.  589 ಅಂಕಗಳು,  ಚೈತ್ರಾ 588 ಅಂಕಗಳು ಐಶ್ವರ್ಯ ಎ ಕೇರ್ಕರ್ 587 ಅಂಕ ಪಡೆಯುವ ಮೂಲಕ 7 ರಿಂದ 10 ವರೆಗಿನ ಟಾಪರ್ ಆಗಿ ಹೊರಹೊಮ್ಮುವ ಮೂಲಕ ಶಿಕ್ಷಣ ಸಂಸ್ಥೆಗೆ ಉತ್ತಮ ಹೆಸರು ತಂದಿದ್ದಾರೆ. ಇನ್ನೂ  ಸೈನ್ಸ್ ವಿಭಾಗದಲ್ಲಿ ಶಿಕಾರಿಪುರ ಮೂಲದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಮನೋಜ್ ಎಂ ವಿ ಕಾಲೇಜಿಗೆ ಟಾಪರ್ ಆಗಿದ್ದಾನೆ

ಶಿವಮೊಗ್ಗ ಜಿಲ್ಲೆಯಲ್ಲಿ ಶೇ.  66.15% ಫಲಿತಾಂಶ ಬಂದಿದ್ದು ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಲ್ಲಿ ಒಟ್ಟು 19033 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇದರಲ್ಲಿ 12590 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇದರಲ್ಲಿ 17389 ವಿದ್ಯಾರ್ಥಿಗಳು ನೂತನವಾಗಿ ಪರೀಕ್ಷೆ ಬರೆದಿದ್ದು 12196 ಹೊಸ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

30 ವರ್ಷದ ನಂತರ ಪಿಯುಸಿ ಪರೀಕ್ಷೆ ಬರೆದು ಪಾಸ್ ಆದ ಸಾರಾ ಮಹೇಶ್ ಪತ್ನಿ!

ಕಲಾ ವಿಭಾಗದಲ್ಲಿ 6046 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3376 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಶೇ. 55.84 ಫಲಿತಾಂಶ ಪ್ರಕಟವಾಗಿದೆ. ವಾಣಿಜ್ಯ ವಿಭಾಗದಲ್ಲಿ 6744 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು4552 ಜನ ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. ಇದರಲ್ಲಿ ಶೇ.67.5 ರಷ್ಟು ಫಲಿತಾಂಶ ಪ್ರಕಟವಾಗಿದೆ.

Vijyanagara; ಫಲಿತಾಂಶದಲ್ಲಿ ದಾಖಲೆ ಬರೆದ ಕೊಟ್ಟೂರಿನ‌ ಇಂದೂ ಪಿಯು ಕಾಲೇಜು

ವಿಜ್ಞಾನ ವಿಭಾಗದಲ್ಲಿ 6243 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು 4662 ಜನ ಪಾಸ್ ಆಗಿದ್ದಾರೆ. ಶೇ.74.68 ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ನಗರ ಭಾಗದಲ್ಲಿ 14023 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ. ಗ್ರಾಮೀಣ ಭಾಗದಲ್ಲಿ 5 ಸಾವಿರ ಜನ ಪರೀಕ್ಷೆ ಬರೆದಿದ್ದರು. ನಗರ ಪ್ರದೇಶದಲ್ಲಿ ಮೂರು ವಿಭಾಗದಿಂದ ಶೇ. 66.21 ರಷ್ಟು ಫಲಿತಾಂಶ ಹೊರಬಿದ್ದಿದೆ. ಅದೇ ಗ್ರಾಮೀಣ ಭಾಗದಲ್ಲಿ 65.98% ಫಲಿತಾಂಶ ಹೊರಬಿದ್ದಿದೆ. ಒಟ್ಟಿನಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಸದಾ ಶೇಕಡಾವಾರು ಫಲಿತಾಂಶದಲ್ಲಿ ಮುಂದಿರುತ್ತಿದ್ದ ಶಿವಮೊಗ್ಗ ಜಿಲ್ಲೆ ನಿಧಾನವಾಗಿ ಹಿಮ್ಮುಖ ಫಲಿತಾಂಶದತ್ತ ಸಾಗುತ್ತಿದೆ.

click me!