2nd PUC Practical Exam: ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳಿಗೆ ಕೊನೆ ಅವಕಾಶ

By Gowthami K  |  First Published Feb 20, 2023, 5:32 PM IST

ಫೆಬ್ರವರಿ 2023ರ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗೆ ಅರ್ಹರಿದ್ದು, ನೈಜ ಕಾರಣಗಳಿಂದ ಗೈರು ಹಾಜರಾದ ವಿಧ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿ ಪರೀಕ್ಷೆ  ಬರೆಯಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಣೆ ಹೊರಡಿಸಿದೆ.


ಬೆಂಗಳೂರು (ಫೆ.20): ಫೆಬ್ರವರಿ 2023ರ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗೆ ಅರ್ಹರಿದ್ದು, ನೈಜ ಕಾರಣಗಳಿಂದ ಗೈರು ಹಾಜರಾದ ವಿಧ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿ ಪರೀಕ್ಷೆ  ಬರೆಯಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಣೆ ಹೊರಡಿಸಿದೆ. ಫೆ.20 ಅಂದರೆ ಇಂದಿನಿಂದ ಫೆ 28 ರವರೆಗೆ ಪೂರಕ ಪರೀಕ್ಷೆ ಬರೆಯಲು ಅವಕಾಶವಿದೆ. 2022 -23ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು  ಫೆ.6 ರಿಂದ ಫೆ.28 2023ರ ವರೆಗೆ ನಡೆಸಲಾಗುತ್ತಿದೆ. 

ಈ ಪ್ರಾಯೋಗಿಕ ಪರೀಕ್ಷೆಗೆ ಪ್ರವೇಶ ಪತ್ರವನ್ನು ಪಡೆದು ಅರ್ಹ ವಿದ್ಯಾರ್ಥಿಯು ನೈಜ ಕಾರಣಗಳಿಂದ ಪ್ರಾಯೋಗಿಕ ಪರೀಕ್ಷೆ ಬರೆಯಲು ಸಾಧ್ಯವಾಗದೆ ಗೈರು ಹಾಜರಾಗಿದ್ದಲ್ಲಿ ಮಾತ್ರ, ಜಿಲ್ಲಾ ಉಪನಿರ್ದೇಶಕರುಗಳು, ತಮ್ಮ ಹಂತದಲ್ಲಿ ಈಗಾಗಲೇ ನಿಗಧಿಪಡಿಸಲಾಗಿದ್ದು ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಕರುಗಳನ್ನು ನೇಮಿಸಿ ದಿನಾಂಕ ಫೆ.20 ರಿಂದ ಫೆ. 28 ರೊಳಗೆ ಪೂರಕ ಪ್ರಾಯೋಗಿಕ ಪರೀಕ್ಷೆಗಳನ್ನು ತನ್ನ ಸುತ್ತೋಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.

Tap to resize

Latest Videos

ದ್ವಿತೀಯ ಪಿಯು ಪ್ರವೇಶ ಪತ್ರದಲ್ಲಿ ತಪ್ಪಾಗಿದೆಯೇ.?: ತಿದ್ದುಪಡಿಗೆ ಈ ನಂಬರ್‌ಗೆ ಕರೆ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಇಂತಿದೆ:
2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ಮಾರ್ಚ್ 9ರಿಂದ 29ರವರೆಗೆ ಪರೀಕ್ಷೆಗಳು ನಡೆಯಲಿವೆ. ಎಲ್ಲ ಪರೀಕ್ಷೆಗಳೂ ನಿತ್ಯ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ. ಹೆಚ್ಚಿನ ಮಾಹಿತಿಗೆ https://kseab.karnataka.gov.in ಗೆ ಭೇಟಿ ನೀಡಿ.

ಮಾ.9- ಕನ್ನಡ, ಅರೇಬಿಕ್‌

ಮಾ.11- ಗಣಿತ, ಶಿಕ್ಷಣಶಾಸ್ತ್ರ

ಮಾ.13- ಅರ್ಥಶಾಸ್ತ್ರ

ಮಾ.14- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ

ಮಾ.15- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌

ಮಾ.16- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

ಮಾ.17- ಮಾಹಿತಿ ತಂತ್ರಜ್ಞಾನ, ರಿಟೈಲ್‌, ಅಟೋಮೊಬೈಲ್‌, ಹೆಲ್ತ್‌ಕೇರ್‌, ಬ್ಯೂಟಿ ಆಂಡ್‌ ವೆಲ್‌ನೆಸ್‌

ಮಾ.18- ಭೂಗೋಳಶಾಸ್ತ್ರ, ಜೀವಶಾಸ್ತ್ರ

ಮಾ.20- ಇತಿಹಾಸ, ಭೌತಶಾಸ್ತ್ರ

ಮಾ.21- ಹಿಂದಿ

ಮಾ.23- ಇಂಗ್ಲಿಷ್‌

ಮಾ.25- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ಮಾ.27- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ

ಮಾ.29- ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ

ಕೊನೆಗೂ‌ ಖಾಸಗಿ ಶಾಲೆಗಳ ಬೇಡಿಕೆಗೆ ಮಣಿದ ಸರ್ಕಾರ, ಡಿಡಿಪಿಐಗೆ ಸಂಪೂರ್ಣ ಅಧಿಕಾರ

click me!