ಕೊನೆಗೂ‌ ಖಾಸಗಿ ಶಾಲೆಗಳ ಬೇಡಿಕೆಗೆ ಮಣಿದ ಸರ್ಕಾರ, ಡಿಡಿಪಿಐಗೆ ಸಂಪೂರ್ಣ ಅಧಿಕಾರ

By Suvarna News  |  First Published Feb 19, 2023, 8:01 PM IST

ಕೊನೆಗೂ ಖಾಸಗಿ ಶಾಲೆಗಳ ಸಮಸ್ಯೆ ಬಗೆ ಹರಿಸಲು ಸರ್ಕಾರ ಮುಂದಾಗಿದೆ.  ಶಿಕ್ಷಣ ಇಲಾಖೆ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಬೇಡಿಕೆ ಈಡೇರಿಸಲು ಮುಂದಾಗಿದೆ.


ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಬೆಂಗಳೂರು (ಫೆ.19): ಕೊನೆಗೂ ಖಾಸಗಿ ಶಾಲೆಗಳ ಸಮಸ್ಯೆ ಬಗೆ ಹರಿಸಲು ಸರ್ಕಾರ ಮುಂದಾಗಿದೆ. ಕೆಲ ತಿಂಗಳ ಹಿಂದೆ ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳ ಭ್ರಷ್ಟಾಚಾರ ಕುರಿತು ದಾಖಲೆ ಸಮೇತ ಬಿಡುಗಡೆ ಮಾಡಿದ್ದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರಧಾನಿ ನರೇಂದ್ರ ಮೋದಿಗೂ ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತು ಪತ್ರ ಬರೆದಿದ್ರು. ಇದೀಗ ಶಿಕ್ಷಣ ಇಲಾಖೆ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಬೇಡಿಕೆ ಈಡೇರಿಸಲು ಮುಂದಾಗಿದೆ. ಈ‌ ಹಿಂದೆ 1 ರಿಂದ 10 ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಶಾಲೆ  ಪ್ರಾರಂಭಿಸಲು ಆಯುಕ್ತರ ಅನುಮತಿ ಬೇಕಾಗಿತ್ತು. ಆಲ್ಲದೆ ಮಧ್ಯ ವರ್ತಿಗಳ ಭ್ರಷ್ಟಾಚಾರಕ್ಕೂ ಇದು ಕಾರಣವಾಗಿತ್ತು ಅಂತ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.

Tap to resize

Latest Videos

ಶಾಲೆ ಮಾನ್ಯತೆ, ಶಾಲೆ ಸ್ಥಳ ಬದಲಾವಣೆ, ಹೊಸ ಶಾಲೆ ಅನುಮತಿ ಸೇರಿದಂತೆ ಹಲವು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನ ಇದೀಗ ಡಿಡಿಪಿಐಗೆ‌ ಹಸ್ತಾಂತರ ಮಾಡಲಾಗಿದೆ ಅಂತ ತಿಳಿದು ಬಂದಿದೆ. ಆಲ್ಲದೆ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸ್ವಾಗತಿಸಿದ್ದಾರೆ.

ಈ ಹಿಂದೆ ಶಾಲೆಗಳ ಮಾನ್ಯತೆ, ಹೊಸ ಶಾಲೆಗೆ ಅನುಮತಿ ಹಾಗೂ ಶಾಲೆ ಸ್ಥಳ ಬದಲಾವಣೆ ಮಾಡಿಕೊಳ್ಳಲು ಆಯುಕ್ತರ ಅನುಮತಿ ಕಡ್ಡಾಯ ಮಾಡಲಾಗಿತ್ತು. ಇದರಿಂದ ಸಾಕಷ್ಟು ಶಾಲೆಗಳಿಗೆ ತೊಂದರೆ ಆಗಿದೆ.

UDUPI: ಕಾಪು ಕಳತೂರಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ

ಮಧ್ಯವರ್ತಿಗಳ ಭ್ರಷ್ಟಾಚಾರ ಮೀತಿ ಮೀರಿತ್ತು. ಹೀಗಾಗಿ ಶಿಕ್ಷಣ ಇಲಾಖೆಯ ಕಾಯಿದೆಯನ್ನ, ಸರಳೀಕೃತಗೊಳಿಸುವಂತೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ವಿ, ಆಲ್ಲದೆ ಇಲಾಖೆಯಲ್ಲಿ ‌ನಡೆಯುತ್ತಿದ್ದ ಅಧಿಕಾರಿಗಳ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಲಾಗಿತ್ತು.

ದ್ವಿತೀಯ ಪಿಯು ಪ್ರವೇಶ ಪತ್ರದಲ್ಲಿ ತಪ್ಪಾಗಿದೆಯೇ.?: ತಿದ್ದುಪಡಿಗೆ ಈ ನಂಬರ್‌ಗೆ ಕರೆ

ಪ್ರಧಾನಿ ನರೇಂದ್ರ ಮೋದಿಗೂ ಈ ಬಗ್ಗೆ ಪತ್ರ ಬರೆಯಲಾಗಿತ್ತು. ಇದೀಗ ‌ನಮ್ಮ ಹೋರಾಟಕ್ಕೆ ಸರ್ಕಾರ ‌ಮನ್ನಣೆ ಕೊಟ್ಟಿದೆ. ಆಯುಕ್ತರ ಪರಧಿಯಲ್ಲಿದ್ದ ಅಧಿಕಾರವನ್ನ ಡಿಡಿಪಿಐಗೆ ಕೊಡಲಾಗಿದೆ. ಇದರಿಂದ ದೂರದ ಊರುಗಳಿಂದ ಆಯುಕ್ತರ ಕಚೇರಿಗೆ ಅಲೆಯೋದು ತಪ್ಪುತ್ತೆ. ಆಯಾ ಜಿಲ್ಲೆಯ ಶಾಲೆಯ ಮುಖ್ಯಸ್ಥರು ಡಿಡಿಪಿಐ ಬಳಿ ಸಮಸ್ಯೆಗಳನ್ನು  ಬಗೆಹರಿಸಿಕೊಳ್ಳಬಹುದಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ  ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.

click me!