Education: ಗುಮ್ಮಟನಗರಿ ವಿಜಯಪುರದಲ್ಲಿ ಶಾಲಾ ಪ್ರಾರಂಭಕ್ಕೆ ಬರದ ಸಿದ್ಧತೆ...!

By Ravi Janekal  |  First Published May 30, 2023, 1:54 AM IST

ಪ್ರಸ್ತಕ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 30ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಸೋಮವಾರದಿಂದಲೇ ಶಾಲೆ ಪ್ರಾರಂಭೋತ್ಸವ ಆಗಿದ್ದು ಮೊದಲು ಎರಡು ದಿನ ಶಾಲೆ ಸ್ವಚ್ಚತೆ, ಶುಚಿಗೊಳಿಸುವುದು


- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಮೇ 29) : ಪ್ರಸ್ತಕ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 30ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಸೋಮವಾರದಿಂದಲೇ ಶಾಲೆ ಪ್ರಾರಂಭೋತ್ಸವ ಆಗಿದ್ದು ಮೊದಲು ಎರಡು ದಿನ ಶಾಲೆ ಸ್ವಚ್ಚತೆ, ಶುಚಿಗೊಳಿಸುವುದು, ಇದರ ಜತೆ ಶಾಲೆ ಶೃಂಗಾರಗೊಳಿಸಲು ಆರಂಭಿಸಲಾಗಿದೆ. ಎಲ್ಲ ಶಿಕ್ಷಕರು ತಮ್ಮ ಶಾಲೆಯಲ್ಲಿ ಹಾಜರಿದ್ದು ಮಕ್ಕಳನ್ನು ಬರ ಮಾಡಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ ಎಂದು  ಡಿಡಿಪಿಐ ಉಮೇಶ ಶಿರಹಟ್ಟಿಮಠ ತಿಳಿಸಿದ್ದಾರೆ. 

Latest Videos

undefined

ನಾಳೆ ಬಿಸಿಯೂಟದಲ್ಲಿ ಸಿಹಿ ತಿಂಡಿ..!

ಮಕ್ಕಳನ್ನು ಶಾಲೆಗೆ ಆಕರ್ಷಿಸಲು ಮೇ 30ರಂದು ಬಿಸಿಯೂಟದಲ್ಲಿ ಸಿಹಿ ತಿಂಡಿಯಾಗಿ ಶಿರಾ, ಪೊಂಗಲ್ ಜತೆ ಅನ್ನ ಸಂಬಾರ ನೀಡಲು ನಿರ್ಧರಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ. ನಂತರ ದಿನಗಳಲ್ಲಿ ಎಂದಿನಂತೆ ಬಿಸಿಯೂಟ ನೀಡಲಾಗುವುದು. ಮೊದಲು ಎರಡು ದಿನ ವೇಳಾಪಟ್ಟಿ, ವಾರ್ಷಿಕ ಕಾರ್ಯಚಟುವಟಿಕೆಗಳ ಕುರಿತು ತಯಾರಿ ನಡೆಸಲಾಗುವುದು. 30ರಂದು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಬೇಕೆಂದು ಅವರು ಮನವಿ ಮಾಡಿದರು.

 

ಕೊಡಗು ಭೂಕುಸಿತದಿಂದ ಹಾನಿಗೊಳಗಾದ ಶಾಲೆಯಲ್ಲಿ ಪಾಠ ಪ್ರವಚನ: ಮಕ್ಕಳ ಜೀವಕ್ಕೆ ಆಪತ್ತಿನ ತೂಗುಗತ್ತಿ

ಪುಠ್ಯಪುಸ್ತಕ ವಿತರಣೆ..!

ಈಗಾಗಲೇ ಏಪ್ರಿಲ್ 10 ರಂದು ಶಾಲೆ ಮಕ್ಕಳಿಗೆ ಪಠ್ಯಪುಸ್ತಕದ ಜತೆ ಯೂನಿಫಾರ್ಮ್ ಸಹ ವಿತರಿಸಲಾಗಿದೆ. ಶಾಲೆ ಆರಂಭ ದಿನ ನೀಡಿದರೆ ತೊಂದರೆಯಾಗಬಹುದು ಎಂದು ಮೊದಲೇ ವಿತರಿಸಲಾಗಿದೆ. ಈ ಬಾರಿ ಪಠ್ಯಪುಸ್ತಕಗಳ ಕೊರತೆ ಕಂಡು ಬಂದಿಲ್ಲ ಎಂದು ಡಿಡಿಪಿಐ ಸ್ಪಷ್ಟಪಡಿಸಿದರು. ಸಧ್ಯ ಜಿಲ್ಲೆಯಲ್ಲಿ 821 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 31 ಅನುದಾನಿತ ಶಾಲೆ,  366 ಅನುದಾನರಹಿತ ಎರಡು ಕೇಂದ್ರೀಯ ವಿದ್ಯಾಲಯ ಸೇರಿ 1220 ಕಿರಿಯ ಪ್ರಾಥಮಿಕ ಶಾಲೆಗಳಿವೆ, ಇನ್ನೂ  1489ಹಿರಿಯ ಪ್ರಾಥಮಿಕ ಶಾಲೆಗಳು ಇವೆ. ಒಟ್ಟು 636 ಪ್ರೌಢಶಾಲೆಗಳು ಸೇರಿ 3345 ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿವೆ.

ಹಳೆ ಕಟ್ಟಡಕ್ಕೆ ಹೊಸ ರೂಪ..!

ಇನ್ನೂ ಜಿಲ್ಲೆಯಲ್ಲಿರುವ ಶಿಥಿಲಾವಸ್ಥೆ ಶಾಲೆಗಳನ್ನು ಕೆಡವಿ ಅವುಗಳಿಗೆ ಮರುನಿರ್ಮಾಣ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ. ಸಾಕಷ್ಟು ಶಾಲೆಗಳ ಕಟ್ಟಡಗಳು ಶಿಥಿಲಾವ್ಯಸ್ಥೆಯಲ್ಲಿವೆ, ಅವುಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುವ ಕೆಲಸವನ್ನು ಈ ಶೈಕ್ಷಣಿಕ ವರ್ಷದಲ್ಲಿ ಮಾಡಲಾಗುವುದು, ಅಂಥ ಕಟ್ಟಡದಲ್ಲಿ ಪಾಠ ಕಲಿಯುವ ಮಕ್ಕಳಿಗೆ ಪರ್ಯಾಯ ಕಟ್ಟಡ ನೋಡಿ ತಾತ್ಕಾಲಿಕವಾಗಿ ಅವರನ್ನು ಸ್ಥಳಾಂತರಿಸಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ.

ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ವಿತರಣೆ : ಅರ್ಜಿ ಆಹ್ವಾನ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ 09 ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಅವಶ್ಯಕತಾ ಕಿಟ್‍ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ದಿನಾಂಕ:29-05-2023 ರಿಂದ 02-06-2023ರವರೆಗೆ ಅರ್ಜಿಗಳನ್ನು ಆಯಾ ತಾಲ್ಲೂಕಿನ ಕಾರ್ಮಿಕರ ನಿರೀಕ್ಷಕರ ಕಚೇರಿಯಲ್ಲಿ ಚಾಲ್ತಿಯಲ್ಲಿರುವ ನೋಂದಾಯಿತ ಕಾರ್ಮಿಕರ ಗುರುತಿನ ಚೀಟಿಯ ಪ್ರತಿ, ಕಾರ್ಮಿಕರ ಹಾಗೂ ಮಗುವಿನ ಆಧಾರ ಕಾರ್ಡ್ ಪ್ರತಿ, ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಭಾವಚಿತ್ರವಿರುವ ಮೂಲ ವ್ಯಾಸಂಗ ಪ್ರಮಾಣ ಪತ್ರ, ಉದ್ಯೋಗ ಪ್ರಮಾಣ ಪತ್ರ ಹಾಗೂ 9 ರಿಂದ 12ನೇ ತರಗತಿಯಲ್ಲಿ ವ್ಯಾಸಂಗದ ಪ್ರಮಾಣ ಪತ್ರ ದಾಖಲೆ ಸಹಿತ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.   

Bhagyalakshmi serial : ಭಾಗ್ಯ ಗಂಡನನ್ನು ಮೀರಿಸೋ ಬುದ್ಧಿವಂತೆ ಆಗ್ತಾಳ? ಅತ್ತೆ ಸೊಸೆ ಬಗ್ಗೆ ವೀಕ್ಷಕರು ಏನಂತಾರೆ?

ಅರ್ಜಿಗಳನ್ನು ಕಾರ್ಮಿಕ ನಿರೀಕ್ಷಕರ ಕಚೇರಿ, 1ನೇ ಮತ್ತು 2ನೇ ವೃತ್ತ ಕಲ್ಯಾಣ ಸಮುದಾಯ ಭವನ, ಸಿಂದಗಿ ನಾಕಾ, ವಿಜಯಪುರ, ಕಾರ್ಮಿಕ ನಿರೀಕ್ಷಕರ ಕಚೇರಿ, ಟಿಪ್ಪು ಸುಲ್ತಾನ ಸರ್ಕಲ್,ವಿಜಯಪುರ ರಸ್ತೆ ಇಂಡಿ, ಕಾರ್ಮಿಕ ನಿರೀಕ್ಷಕರ ಕಚೇರಿ, ಬಂದಾಳ ರಸ್ತೆ, ಪದ್ಮಾ ಗ್ಯಾಸ್ ಎದುರಗಡೆ, ಸಿಂದಗಿ, ಕಾರ್ಮಿಕ ನಿರೀಕ್ಷಕರ ಕಚೇರಿ, ವಿಮೋಚನಾ ಹೊಟೇಲ್ ಹಿಂಭಾಗ, ವೀರಭದ್ರೇಶ್ವರ ನಗರ ಎಪಿಎಂಸಿ ಎದುರುಗಡೆ ಬಸವನ ಬಾಗೇವಾಡಿ, ಕಾರ್ಮಿಕ ನಿರೀಕ್ಷಕರ ಕಚೇರಿ, ಮೋಟಗಿ ಪೆಟ್ರೋಲ್ ಬಂಕ್ ಹಿಂಭಾಗ,ಮುದ್ದೇಬಿಹಾಳ ಇಲ್ಲಿ ಸಲ್ಲಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

click me!