ಆರ್ಥಿಕ ಬಿಕ್ಕಟ್ಟು ಇದೆಯಾ? ಈ ಸ್ಕಾಲರ್‌ಶಿಪ್‌ಗಳಿಗೆ ಅಪ್ಲೈ ಮಾಡಿ

By Suvarna News  |  First Published May 19, 2021, 4:24 PM IST

ಕೋವಿಡ್‌ನಿಂದಾಗಿ ಆರ್ಥಿಕವಾಗಿಯೂ ಸಾಕಷ್ಟು ಕುಟುಂಬಗಳು ಬಿಕ್ಕಟ್ಟು ಎದುರಿಸುತ್ತಿವೆ. ಸುಮಾರು ಮಕ್ಕಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವುದು ಹೇಗೆಂಬ ಚಿಂತೆ. ಆದರೆ, ಶಿಕ್ಷಣದಲ್ಲಿ ಮುಂದುವರಿಯಲು ಆಸಕ್ತಿ ಇರುವರಿಗೆ ಹಲವಾರು ಸ್ಕಾಲರ್‌ಶಿಪ್‌ಗಳಿವೆ. ಅಂಥವುಗಳ ಬಗ್ಗೆ ತಿಳಿದುಕೊಂಡು ಅಪ್ಲೈ ಮಾಡಬೇಕು. ಇದರಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿದೆ.


ಸ್ಕಾಲರ್‌ಶಿಪ್ ಅನ್ನೋದು ವಿದ್ಯಾರ್ಥಿಗಳ ಬದುಕಿಗೆ ಅತ್ಯವಶ್ಯಕ. ಅದರಲ್ಲೂ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ವಿದ್ಯಾರ್ಥಿಗಳಿಗಂತೂ ವಿದ್ಯಾರ್ಥಿವೇತನ ಅನ್ನೋದು ಬರಡು ಭೂಮಿಯಲ್ಲಿ ನೀರು ಸಿಕ್ಕಂತೆ. ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶೈಕ್ಷಣಿಕ ಭವಿಷ್ಯ ರೂಪಿಸಿಕೊಳ್ಳಲು ಸ್ಕಾಲರ್‌ಶಿಪ್ ವರದಾನವಾಗಲಿದೆ..

ಉತ್ತಮ ವಿದ್ಯಾರ್ಥಿವೇತನ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು, ವಿದ್ಯಾರ್ಥಿಗಳು ಕೆಲವು ಕೋರ್ಸ್‌ಗಳಲ್ಲಿ ಉತ್ತೀರ್ಣರಾದ ನಂತರ ಉದ್ಯೋಗದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬ ಕಲ್ಪನೆಯನ್ನು ನೀಡಬಹುದು. ಅದರಲ್ಲೂ ಲಾಕ್ಡೌನ್ ನಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಅನೇಕರು ಉದ್ಯೋಗ ಕಳೆದುಕೊಂಡಿರುವ ಕಾರಣ ಆರ್ಥಿಕ ನೆರವು ಬಹಳ ಸಹಾಯವಾಗಲಿದೆ

Tap to resize

Latest Videos

undefined

ಕೋವಿಡ್‌ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ

ಕೋವಿಡ್ ಕ್ರೈಸಿಸ್ ಸಪೋರ್ಟ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2021
ಕುಟುಂಬದಲ್ಲಿ ಕೋವಿಡ್ ಬಿಕ್ಕಟ್ಟಿನಿಂದಾಗಿ ದುರ್ಬಲರಾಗಿರುವ ಮತ್ತು ಅವರ ಮುಂದಿನ ಶಿಕ್ಷಣಕ್ಕೆ ಕಡಿಮೆ ಅಥವಾ ಹಣಕಾಸಿನ ನೆರವು ಇಲ್ಲದ ಮಕ್ಕಳನ್ನು ಬೆಂಬಲಿಸುವ ಉದ್ದೇಶವನ್ನು ಈ ವಿದ್ಯಾರ್ಥಿವೇನತವು ಹೊಂದಿದೆ.

ಒಂದನೇ ತರಗತಿಯಿಂದ ಪದವಿವರೆಗೆ ಭಾರತೀಯ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ಲಭ್ಯವಾಗಲಿದೆ. ಕೋವಿಡ್‌ನಿಂದಾಗಿ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿರುವವರು ಅಂದ್ರೆ ಜನವರಿ 2020 ರಿಂದ ಪೋಷಕರು ಅಥವಾ ಗಳಿಸುವ ಕುಟುಂಬ ಸದಸ್ಯ ಉದ್ಯೋಗ ಕಳೆದುಕೊಂಡವರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಇದರಡಿ ವರ್ಷಕ್ಕೆ 30,000 ರೂ. ಮತ್ತು ಮಾರ್ಗದರ್ಶಕ ಸೌಲಭ್ಯಗಳು ಸಿಗಲಿವೆ. ಜೂನ್ ೩೦, ೨೦೨೧ ರೊಳಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಐಐಎಂ ಅಹಮದಾಬಾದ್ ಸೆಂಟರ್ ಫಾರ್ ಟ್ರಾನ್ಸ್‌ಪೋರ್ಟೇಶನ್ ಅಂಡ್ ಲಾಜಿಸ್ಟಿಕ್ಸ್ ಪೋಸ್ಟ್-ಡಾಕ್ಟರಲ್ ಫೆಲೋಶಿಪ್ 2021
ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಪಿಎಚ್‌ಡಿ ಪದವಿ ಪಡೆದವರಿಂದ ಐಐಎಂ ಅಹಮದಾಬಾದ್ ಸೆಂಟರ್ ಫಾರ್ ಟ್ರಾನ್ಸ್‌ಪೋರ್ಟೇಶನ್ ಅಂಡ್ ಲಾಜಿಸ್ಟಿಕ್ಸ್ ಪೋಸ್ಟ್-ಡಾಕ್ಟರಲ್ ಫೆಲೋಶಿಪ್ 2021 ಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಭಾರತ ಅಥವಾ ವಿದೇಶದಲ್ಲಿರುವ ಹೆಸರಾಂತ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದ ಟಾನ್ಸ್‌ಪೋರ್ಟ್ ಮತ್ತು / ಅಥವಾ ಲಾಜಿಸ್ಟಿಕ್ಸ್‌ನಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳು ಫೆಲೋಶಿಪ್ ಪಡೆಯಲು ಅರ್ಹರು. ಅಲ್ಲದೆ, ತಮ್ಮ ಪ್ರಬಂಧವನ್ನು ಸಮರ್ಥಿಸಿಕೊಂಡ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.

ಸಂಸ್ಥೆಯ ನಿಯಮಗಳ ಪ್ರಕಾರ ಫೆಲೋಶಿಪ್ ಹಣವನ್ನು ನೀಡಲಾಗುವುದು. ಇದೇ ಮೇ ೩೧, ಅರ್ಜಿ ಸಲ್ಲಿಕೆಗ ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಸ್ಕಾಲರ್‌ಶಿಪ್‌ಗೆ ಅಪ್ಲೈ ಮಾಡುವುದು ಸೇರಿದಂತೆ ಸಂಪೂರ್ಣವಾಗಿ ತಿಳಿದುಕೊಳ್ಳಲು

ಎನ್ಐಯುಎ ನವದೆಹಲಿ ಇಂಟರ್ನ್ - ರಿಸರ್ಚ್ ಅಸಿಸ್ಟೆಂಟ್‌ಶಿಪ್ 2021
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ ನವದೆಹಲಿ ಎನ್‌ಐಯುಎ ನವದೆಹಲಿ ಇಂಟರ್ನ್ - ರಿಸರ್ಚ್ ಅಸಿಸ್ಟೆಂಟ್‌ಶಿಪ್ 2021 ಗೆ ಸ್ನಾತಕೋತ್ತರ ಅಥವಾ ಸ್ನಾತಕೋತ್ತರ ಪದವಿ ಪಡೆದವರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಸಿಟಿಜನ್ ಸೆಂಟ್ರಿಕ್ ಸ್ಮಾರ್ಟ್ ಗವರ್ನೆನ್ಸ್-ಸಿಡಿಜಿ-ಲೀವಿಂಗ್ ಲ್ಯಾಬ್ ಪ್ರಾಜೆಕ್ಟ್‌ನ ರಿಸರ್ಚ್‌ಗಾಗಿ ಈ ಫೆಲೋಶಿಪ್‌ ನೀಡಲಾಗ್ತಿದೆ. ಎಲೆಕ್ಟ್ರಿಕಲ್ ಆಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್,  ಕಂಪ್ಯೂಟರ್ ಸೈನ್ಸ್,  ಟೆಲಿಕಮ್ಯೂನಿಕೇಷನ್ ಎಂಜಿನಿಯರಿಂಗ್, ನಗರ ಯೋಜನೆ, ವಾಸ್ತುಶಿಲ್ಪ, ಅರ್ಥಶಾಸ್ತ್ರ, ಅಭಿವೃದ್ಧಿ ಅಧ್ಯಯನ- ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಈ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಬಹುದು.

ಗಣಿತದಲ್ಲಿ ಎಕ್ಸ್‌ಪರ್ಟಾ? ಆರ್ಯಭಟ ಸ್ಪರ್ಧೆಯಲ್ಲಿ ಭಾಗವಹಿಸಿ, 1.5 ಲಕ್ಷ ರೂ. ಗೆಲ್ಲಿ
 
ಆಕಾಂಕ್ಷಿಗಳು 0-2 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು.  ಹೊಸ ಅಥವಾ ಇತ್ತೀಚಿಗೆ ಪದವಿ ಮುಗಿಸಿದವರು ಅರ್ಜಿ ಸಲ್ಲಿಸಬಹುದು.  ಮಾಸಿಕ ೧೫,೦೦೦ ರೂಪಾಯಿ ಫೆಲೋಶಿಪ್ ಸಿಗಲಿದೆ. ಮೇ ೩೧ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದು, ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಎನ್ಐಯುಎ ನವದೆಹಲಿ ರಿಸರ್ಚ್ ಅಸಿಸ್ಟೆಂಟ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

click me!