ಕೊರೋನಾ ನಡುವೆ ಚುನಾವಣೆ; ಕರ್ತವ್ಯ ನಿರ್ವಹಿಸಿದ 1,621 ಶಿಕ್ಷಕರು ವೈರಸ್‌ಗೆ ಬಲಿ!

Published : May 17, 2021, 05:13 PM ISTUpdated : May 17, 2021, 05:17 PM IST
ಕೊರೋನಾ ನಡುವೆ ಚುನಾವಣೆ; ಕರ್ತವ್ಯ ನಿರ್ವಹಿಸಿದ 1,621 ಶಿಕ್ಷಕರು ವೈರಸ್‌ಗೆ ಬಲಿ!

ಸಾರಾಂಶ

ಕೊರೋನಾ ನಡುವೆ ಚುನಾವಣೆ ಆಯೋಜಿಸಿದ ಆಯೋಗ ಚುನಾವಣಾ ಕರ್ತವ್ಯ ನಿರ್ಹಿಸಿದ ಶಿಕ್ಷಕರು ಕೊರೋನಾಗೆ ಬಲಿ ಪ್ರಾಥಮಿಕ ಶಿಕ್ಷಕರ ಸಾವಿಗೆ ಯಾರು ಹೊಣೆ?

ಉತ್ತರ ಪ್ರದೇಶ(ಮೇ.17):  ಕೊರೋನಾದಿಂದ ದೂರ ಇರಲಿ ಮನಯಲ್ಲೇ ಇರುವುದು ಅತೀ ಅಗತ್ಯವಾಗಿದೆ. ಇನ್ನು ಸಾಮಾಜಿಕ ಅಂತರ ಪಾಲಿಸುವುದು, ಮಾಸ್ಕ್ ಧರಿಸವುದು, ಶುಚಿತ್ವ ಕಾಪಾಡಿಕೊಂಡೆ ಕೊರೋನಾದಿಂದ ಬಹುತೇಕ ದೂರವಿರಬಹುದು. ಆದರೆ ಇದರ ನಡುವೆ ಚುನಾವಣೆ ಘೋಷಿಸಿದಾಗ ಎಂದಿನಂತೆ ಶಿಕ್ಷಕರು ಚುನಾವಣಾ ಕರ್ತವ್ಯಕ್ಕೆ ಆತಂಕದಿಂದಲೇ ಹಾಜರಾಗಿದ್ದಾರೆ. ಹೀಗಿ ಉತ್ತರ ಪ್ರದೇಶದ ಪಂಚಾಯತ್ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ 1,621 ಶಿಕ್ಷಕರು ಕೊರೋನಾಗೆ ಬಲಿಯಾಗಿದ್ದಾರೆ. 

ಕೊರೋನಾದಿಂದ ಮೃತಪಟ್ಟ ಶಿಕ್ಷಕರ ವಿವರ ಕೇಳಿದ ಶಿಕ್ಷಣ ಇಲಾಖೆ

ಉತ್ತರ ಪ್ರದೇಶ ಪಾರ್ಥಮಿಕ ಶಿಕ್ಷಕರ ಸಂಘ ಈ ಕುರಿತು ಅಂಕಿ ಅಂಶ ಬಹಿರಂಗ ಪಡಿಸಿದೆ. ಅನಾರೋಗ್ಯವಿರುವ, ಕೊರೋನಾಗೆ ತುತ್ತಾಗಿರುವ ಹಾಗೂ ಚೇತರಿಸಿಕೊಂಡಿರುವ ಶಿಕ್ಷಕರನ್ನು ಕಡ್ಡಾಯವಾಗಿ ಮತದಾನ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಬಾರದು ಎಂದು  ಪಂಚಾಯತ್ ಚುನಾವಣೆಗೂ ಮೊದಲು  ಶಿಕ್ಷಕರ ಸಂಘ ಉತ್ತರ ಪ್ರದೇಶ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿತ್ತು. ಮನವಿಗೆ ಸ್ಪಂದಿಸಿದ್ದ ಕಾರ್ಯದರ್ಶಿ,ಯಾವ ಕ್ರಮ ಕೈಗೊಂಡಿಲ್ಲ. ಬದಲಾಗಿ, ಗೈರುಹಾಜರಾದವರಿಗೆ ಅಮಾನತು ಶಿಕ್ಷೆ ಹಾಗೂ ಸಂಬಳ ಕಡಿತ ಮಾಡಿತ್ತು ಎಂದು ಶಿಕ್ಷಕರ ಸಂಘ ಆರೋಪಿಸಿದೆ.

ಮತದಾನ ಹಾಗೂ ಮತ ಏಣಿಕೆ ಪ್ರಕ್ರಿಯೆಗಳಿಂದ  ಕೊರೋನಾಗೆ ಬಲಿಯಾದ ಶಿಕ್ಷಕರು ಮತ್ತು ಸಿಬ್ಬಂದಿಗಳ ಸಂಖ್ಯೆ 1,621 ಕ್ಕೆ ಏರಿದೆ ಎಂದು  ಉತ್ತರ ಪ್ರದೇಶ ಪ್ರಥಮಿಕ್ ಶಿಕ್ಷಣ ಸಂಘದ ಅಧ್ಯಕ್ಷ ದಿನೇಶ್ ಚಂದ್ರ ಶರ್ಮಾ ಹೇಳಿದ್ದಾರೆ.  ಈ ಪಟ್ಟಿಯನ್ನು ಶಿಕ್ಷಕರ ಯೂನಿಯನ್ ಬಿಡುಗಡೆ ಮಾಡಿದೆ. 

ಪರೀಕ್ಷೆ ಇಲ್ಲದೆ ಪಾಸ್‌ : ಗೊಂದಲ ನಿವಾರಿಸಲು ಮನವಿ

ಕೊರೋನಾ ಹೊರತಾಗಿ, ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಚುನಾವಣಾ ಕರ್ತವ್ಯಕ್ಕೆ ಸೂಚಿಸಿದ ಕಾರಣ ಆತಂಕ ಹಾಗೂ ಒತ್ತಡದ ಕಾರಣದಿಂದ ಹಲವು ಶಿಕ್ಷಕರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ದಿನೇಶ್ ಚಂದ್ರ ಶರ್ಮಾ ಹೇಳಿದ್ದಾರೆ.

ಕೌಂಟಿಂಗ್ ವೇಳೆ ಕೊರೋನಾ ಮಾರ್ಗಸೂಚಿ ಪಾಲನೆ ಮಾಡಿಲ್ಲ. ಪ್ರತಿನಿಧಿಗಳ ಎಜೆಂಟ್ ಸೇರಿದಂತೆ ಹಲವರು ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ. ಆದರೆ ಈ ಅಸೆಡ್ಡೆಗಳಿಗೆ ಬಲಿಯಾಗಿರುವುದು ಅಮಾಯಕ ಶಿಕ್ಷಕರು ಎಂದು ಶರ್ಮಾ ಆರೋಪಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ

#ANCares #IndiaFightsCorona

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ